BDA ಭ್ರಷ್ಟಾಚಾರ ಸಹಿಸಲಾರದೆ ನಾನೇ ದೂರು ನೀಡಿದ್ದು..! ಅಚ್ಚರಿ ಹೇಳಿಕೆ

BDA ಕಚೇರಿ ಮೇಲೆ ACB ಅಧಿಕಾರಿಗಳು ದಾಳಿ ನಡೆಸಿದ್ರು. ಎರಡು ದಿನಗಳ ಕಾಲ ನಡೆದ ದಾಳಿಯಲ್ಲಿ ACB ಅಧಿಕಾತಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಈ ನಡುವೆ ಮಾಧ್ಯಮಗಳ ಜೊತೆಗೆ ಮಾತನಾಡಿದ BDA ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. BDA ಒಂದು ಕಾಲದಲ್ಲಿ ಜನಪರ ಸಂಸ್ಥೆ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ನಾನು ಬಿಡಿಎ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿ ಒಂದೂವರೆ ವರ್ಷ ಆಗಿದೆ. ಸ್ವಚ್ಛ ಬಿಡಿಎ ಮಾಡೋದು ನನ್ನ ಉದ್ದೇಶ. ಅದಕ್ಕಾಗಿ ಶಕ್ತಿ ಮೀರಿ ಕೆಲಸ ಮಾಡ್ತೇನೆ ಎಂದಿದ್ದಾರೆ.

ಬಿಡಿಎ ಭ್ರಷ್ಟಾಚಾರದ ಬಗ್ಗೆ ಎಸಿಬಿಗೆ ದೂರು ನೀಡಿದ್ದೇ ನಾನು..?

ಸಾರ್ವಜನಿಕರಿಂದ ದೂರುಗಳು ಬಂದಿದ್ದ ಕಾರಣಕ್ಕಾಗಿಯೇ ಎಸಿಬಿ ದಾಳಿ ನಡೆಸಿದೆ ಎನ್ನುವುದು ಗೊತ್ತಿರುವ ಸಂಗತಿ. ಆದರೆ ಬಿಡಿಎ ಕಚೇರಿಯಲ್ಲಿ ಕ್ಲಿಷ್ಟಕರ ಸಮಸ್ಯೆಗಳು ಇವೆ. ಇದನ್ನು ಸಮರ್ಥವಾಗಿ ನಿಭಾಯಿಸಬೇಕು. ಯಾರು ಯಾರು ಭ್ರಷ್ಟಾಚಾರದಲ್ಲಿ ತೊಡಗಿದ್ರು, ಆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ. ಜಮೀನು, ಹಣಕಾಸಿನ ವ್ಯವಹಾರದಲ್ಲಿ ದುರುಪಯೋಗ ಆಗಿರುವ ಬಗ್ಗೆ ನಾನೇ ಎಸಿಬಿಗೆ ದೂರು ಕೊಟ್ಟಿದ್ದೆ, ಸಾಕಷ್ಟು ದೂರುಗಳು ಬಂದ ಮೇಲೆ ಎಸಿಬಿ ಟೀ ದಾಳಿ ಮಾಡಿದೆ ಎಂದಿದ್ದಾರೆ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್. ಅಧಿಕಾರಿಗಳ ಜೊತೆಗೆ ನಾನು ಚರ್ಚೆ ಮಾಡಿದ್ದೇನೆ. ನಿಮಗೆ ಬೇಕಾದ ದಾಖಲೆಗಳನ್ನು ಕೊಡ್ತೇನೆ ಎಂದು ತಿಳಿಸಿದ್ದೇನೆ. ರೈತರ ಹೆಸರಲ್ಲಿ ನಕಲಿ ದಾಖಲಿ ಸೃಷ್ಠಿಸಿ, ನಿವೇಶನ ಪಡೆದಿರುವ ಬಗ್ಗೆ ತನಿಖೆ ಮಾಡಿದಾಗ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ರು. ನಾನು‌ ನಿಜವಾಗಿಯೂ ಎಸಿಬಿ ದಾಳಿಯನ್ನು ಸ್ವಾಗತ ಮಾಡ್ತೇನೆ ಎಂದಿದ್ದಾರೆ.

ಅಧ್ಯಕ್ಷನಾಗಿ ಭ್ರಷ್ಟಾಚಾರ ತಡೆಯಲು ಸಾಧ್ಯವಾಗಲಿಲ್ಲ..!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯುವ ಭ್ರಷ್ಟಾಚಾರ ತಡೆಯಲು ಅಧ್ಯಕ್ಷನಾಗಿ ನನ್ನಿಂದಲೇ ಸಾಧ್ಯ ಆಗಲಿಲ್ಲ. ಬಿಡಿಎ ಕಚೇರಿಯಲ್ಲಿ ದಾಖಲೆಗಳೇ ಮಾಯವಾಗುತ್ತವೆ. ಈ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡೋದಕ್ಕೆ ಭ್ರಷ್ಟಾಚಾರ ನಿಗ್ರಹ ದಳದಿಂದ ಸಾಧ್ಯವಿಲ್ಲ, ಇದರ ಬಗ್ಗೆ ದೊಡ್ಡ ಮಟ್ಟದ ತನಿಖೆಯೇ ಆಗಬೇಕು. ಈಗ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ. ಎಸಿಬಿಗೆ ನಾವು ಎಲ್ಲಾ ರೀತಿಯ ಸಹಕಾರ ಕೊಡ್ತೀವಿ. ಈ ಬಗ್ಗೆ ಸಹ ಸಿಎಂಗೆ ವಿವರಣೆ ನೀಡಿದ್ದೇನೆ. ಬಿಡಿಎ ಅಧೀನದಲ್ಲಿ ಸುಮಾರು 50 ಸಾವಿರ ಕೋಟಿ ಆಸ್ತಿ ಇದೆ. ಅದರಲ್ಲಿ ಸಾಕಷ್ಟು ಆಸ್ತಿ ದುರ್ಬಳಕೆ ಆಗಿದೆ. ಈ ಹಿಂದೆ ಅವ್ಯವಹಾರ ಮಾಡಿದವರ ವಿರುದ್ಧ ಸರಿಯಾದ ಶಿಕ್ಷೆ ಆಗಿಲ್ಲ. ವಿಶೇಷ ತನಿಖಾ ತಂಡದಿಂದ ಬಿಡಿಎ ಅಕ್ರಮಗಳ ಬಗ್ಗೆ ತನಿಖೆ ಆಗಬೇಕಿದೆ ಎಂದಿದ್ದಾರೆ.

ಅಧಿಕಾರಿಗಳ ಪರಿಶೀಲನೆ

ಬಿಡಿಎ ಕಚೇರಿಯಲ್ಲಿ ಅಕ್ರಮ ನಡೆಯೋದು ಹೇಗೆ..!?

ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ಆಗಬೇಕಿದ್ದರೆ ಎಂಜಲು ಕಾಸು ಕೊಡಬೇಕು ಎನ್ನುವುದು ಸಾರ್ವಜನಿಕ ವಲಯದಲ್ಲಿ ಜನಜನಿತ. ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಆ ರೀತಿಯ ಅವ್ಯವಸ್ಥೆ ಭಾರೀ ಕಡಿಮೆ. ಇಲ್ಲೇನಿದ್ದರೂ ಕೋಟಿ ಕೋಟಿ ವ್ಯವಹಾರ. ಅರ್ಹತೆ ಇಲ್ಲದಿದ್ದರೂ ಅರ್ಹತೆ ಪಟ್ಟಿಯಲ್ಲಿ ಹಾಕಿ ಸೈಟ್ ಮಂಜೂರು ಮಾಡುವುದು. ಒಂದೇ ಸೈಟ್‌ ಹತ್ತಾರು ಜನರಿಗೆ ಮಾಡಿಕೊಡುವುದು. ಸರ್ಕಾರಿ ಸೈಟ್ ತಮ್ಮ ಆಪ್ತರ ಹೆಸರಿಗೆ ಮಾಡಿಸಿಕೊಳ್ಳುವುದು. ಬೇನಾಮಿ ಹೆಸರಿ ಸೈಟ್ ನೋಂದಣಿ ಮಾಡಿಸಿ, ತಮ್ಮ ಹೆಸರಿಗೆ ಮಾರಾಟ ಮಾಡಿದಂತೆ ತೋರಿಸಿ, ದುಬಾರಿ ಬೆಲೆಗೆ ಮಾರಾಟ ಮಾಡುವುದು ಅವ್ಯಾಹತವಾಗಿ ನಡೆಯುತ್ತದೆ. ಎಲ್ಲರ ಕಣ್ಣೆದುರೇ ಭ್ರಷ್ಟಾಚಾರ ನಡೆಯುತ್ತಿದ್ದರೂ ಬೆಕ್ಕು ಹಾಲು ಕುಡಿಯುವ ಕಥೆಯಂತೆ ರಾಜಕಾರಣಿಗಳು ಪಾಲು ಕೇಳುತ್ತಾರೆ. 200 ಕೋಟಿಗೂ ಅಧಿಕ ಅಕ್ರಮ ಪತ್ತೆಯಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಅದೆಷ್ಟು ಜನರಿಗೆ ಶಿಕ್ಷೆಯಾಗಲಿದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಎಲ್ಲವೂ ಬಲ್ಲವರ ಪಗಡೆ.

Related Posts

Don't Miss it !