ತಂಗಿ ಮದುವೆ ಸಾಲಕ್ಕೆ ಅಣ್ಣ ಮಾಡಿದ ಸಣ್ಣ ಎಡವಟ್ಟು..! ಅರುಣ್​ ಅಂದರ್​

ಚಿನ್ನದ ವ್ಯವಹಾರ, ಕಣ್ಣು ಕುಕ್ಕಿತ್ತು ಲಕ್ಷ ಲಕ್ಷ ಹಣ..! ಹಣ ಕದಿಯುವಾಗ ಅರುಣ್​ ಮಾಡಿದ್ದ ಎಡವಟ್ಟೇನು..? ಪೊಲೀಸರಿಗೆ ಅನುಮಾನ ಬಂದಿದ್ದು ಹೇಗೆ..?

ಹಲವರ ಮನಸ್ಸು ಹಣ ಕಂಡರೆ ಹುಚ್ಚು ಕುದುರೆಯಂತೆ ಆಗುತ್ತದೆ ಎನ್ನುವ ಮಾತಿದೆ. ತನ್ನದಲ್ಲದ ಹಣ ಕಂಡಾಗಲೂ ತನ್ನ ಅನಿವಾರ್ಯತೆಗಾಗಿ ಮನಸ್ಸು ತುಡಿಯುತ್ತದೆ ಎನ್ನಲಾಗುತ್ತೆ. ಹಿಡಿತ ಇಲ್ಲದ ಮನಸ್ಸಿನ ಕೈಗೆ ಬುದ್ಧಿಯನ್ನು ಒಪ್ಪಿಸಿದ್ರೆ ಆಗಬಾರದ್ದು ಆಗಿಹೋಗುತ್ತದೆ ಎನ್ನಲಾಗುತ್ತದೆ. ಅದೇ ರೀತಿಯ ಘಟನೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ನಡೆದಿದೆ. ಆಟ್ಟಿಕಾ ಗೋಲ್ಡ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಣ್ಣನಿಗೆ ತನ್ನ ತಂಗಿ ಮದುವೆಗೆ ಮಾಡಿದ್ದ ಸಾಲ ನೆನಪಾಗಿದೆ. ಸಾಕಷ್ಟು ಹಣ ಕಂಡವನೇ ಸಾಲ ತೀರಿಸುವ ಮನಸ್ಸು ಮಾಡಿದ್ದಾನೆ. ಆದರೆ ಕೊನೆಗೆ ಮಾಡಿದ ಎಡವಟ್ಟಿನಿಂದ ಜೈಲು ಪಾಲಾಗಿದ್ದಾರೆ. ಇದಕ್ಕಾಗಿ ಈತ ಮಾಡಿದ ಎಡವಟ್ಟುಗಳು ಖಾಕಿ ತನಿಖೆಯಲ್ಲಿ ಬಯಲಾಗಿವೆ.

ಚಿನ್ನದ ವ್ಯವಹಾರ, ಕಣ್ಣು ಕುಕ್ಕಿತ್ತು ಲಕ್ಷ ಲಕ್ಷ ಹಣ..!

ಆಟ್ಟಿಕಾ ಗೋಲ್ಡ್​ ಕಂಪನಿ ಎಂದ ಮೇಲೆ ಲಕ್ಷಾಂತರ ರೂಪಾಯಿ ಹಣದ ವ್ಯವಹಾರ ನಡೆಯುವುದು ಸಾಮಾನ್ಯ. ಅದೇ ರೀತಿ ಆಟ್ಟಿಕಾ ಗೋಲ್ಡ್​ ಕಂಪನಿಯ ಕೇಂದ್ರ ಕಚೇರಿಯಿಂದ ಶಾಖೆಯೊಂದಕ್ಕೆ 8 ಲಕ್ಷ ರೂಪಾಯಿ ಹಣವನ್ನು ಕಳುಹಿಸಲಾಗಿತ್ತು. ತನ್ನ ಸಿಬ್ಬಂದಿ ಅರುಣ್​​ ಮೂಲಕ 8 ಲಕ್ಷ ರೂಪಾಯಿ ಕಳುಹಿಸಲಾಗಿತ್ತು. ಆದರೆ ಮೈಸೂರು ರಸ್ತೆಯ ನಾಯಂಡಹಳ್ಳಿ ಮೇಲ್ಸೇತುವೆ ಮೇಲೆ ಅರುಣ್​ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಹಣವನ್ನು ಕೊಳ್ಳೆ ಹೊಡೆದಿದ್ದರು. ಆದರೆ ಕಳ್ಳರು ದೋಚಿದ್ದು 4 ಲಕ್ಷ ರೂಪಾಯಿ ಮಾತ್ರ. ಇನ್ನರ್ಧ ಹಣವನ್ನು ಮಾತ್ರ ಬಿಟ್ಟು ಹೋಗಿದ್ದು, ಅಟ್ಟಿಕಾ ಗೋಲ್ಡ್​ ಕಂಪನಿ ಸಿಬ್ಬಂದಿ ಅರುಣ್​ ಬಂಧನಕ್ಕೆ ಕಾರಣವಾಗಿದೆ.

Read This;

ಹಣ ಕದಿಯುವಾಗ ಅರುಣ್​ ಮಾಡಿದ್ದ ಎಡವಟ್ಟೇನು..?

ಬೆಂಗಳೂರಿನ ಜೆ.ಪಿ ನಗರದ 7ನೇ ಹಂತದಲ್ಲಿ ತಾಯಿ ಜೊತೆಗೆ ವಾಸವಾಗಿದ್ದ ಆರೋಪಿ ಅರುಣ್ ಕುಮಾರ್​​​, ಇತ್ತೀಚಿಗಷ್ಟೇ ಸಾಲಸೋಲ ಮಾಡಿ ತಂಗಿಯ ಮದುವೆಗೆ ಮಾಡಿದ್ದ. ಸಾಲದ ಹೊರೆ ಹೆಚ್ಚಾಗಿದ್ದರಿಂದ ಸಾಲ ತೀರಿಸುವ ಸಂಚು ರೂಪಿಸಿದ್ದ. ಕಂಪನಿಯ ಹಣವನ್ನು ಕೊಂಡೊಯ್ಯುವಾಗ ದರೋಡೆ ಆಯ್ತು ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದ. ಇದಕ್ಕಾಗಿ ಮನೆಯಿಂದ ಖಾರದ ಪುಡಿಯನ್ನೂ ತಂದಿದ್ದ. ಕ್ವೀನ್ಸ್​​ ರಸ್ತೆಯಿಂದ ಹೊರಟು ನಾಯಂಡಹಳ್ಳಿ ಬ್ರಿಡ್ಜ್​ ಮೇಲೆ ಬರುತ್ತಿದ್ದಂತೆ ತನ್ನ ಮುಖಕ್ಕೆ ತಾನೇ ಖಾರದಪುಡಿ ಹಾಕಿಕೊಂಡು ಕಿರುಚಾಡಲು ಶುರು ಮಾಡಿದ್ದ. ವಾಹನ ಸವಾರರು ಸಮಸ್ಯೆ ಬಗ್ಗೆ ಕೇಳಿದಾಗ ಯಾರೋ ಇಬ್ಬರು ಹಣವನ್ನು ದರೋಡೆ ಮಾಡಿಬಿಟ್ಟರು ಎಂದಿದ್ದ. ಬಳಿಕ ಕಂಪನಿಗೆ ಕರೆ ಮಾಡಿ ತಿಳಿಸಿದ ಬಳಿಕ ಪೊಲೀಸ್​ ಠಾಣೆಗೂ ದೂರು ನೀಡಿದ್ದ. ಆದರೆ ಇದರಲ್ಲಿ ಮಾಡಿದ ಸಣ್ಣ ಎಡವಟ್ಟು ಕಂಬಿ ಹಿಂದೆ ನಿಲ್ಲಿಸಿದೆ.

Also Read;

ಪೊಲೀಸರಿಗೆ ಅನುಮಾನ ಬಂದಿದ್ದು ಹೇಗೆ..?

ಕಂಪನಿಗೆ ಕರೆ ಮಾಡಿದ್ದ ಅರುಣ್​ ಕುಮಾರ್​, ಕಳ್ಳತನ ವಿಚಾರ ತಿಳಿಸಿದ್ದ. ಕಂಪನಿಯವರ ಮಾರ್ಗದರ್ಶನದಂತೆ ಬ್ಯಾಟರಾಯನಪುರ ಪೊಲೀಸ್​ ಠಾಣೆಗೂ ದೂರು ಸಲ್ಲಿಸಿದ್ದ. ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವೇಳೆ ಆರೋಪಿ ಅರುಣ್​ ಕಣ್ಣಿಗೆ ಖಾರದ ಪುಡಿ ಬಿದ್ದಿಲ್ಲ ಎನ್ನುವುದು ತಿಳಿಯಿತು. ಕಣ್ಣಿಗೆ ಖಾರದ ಪುಡಿಯೇ ಬೀಳದಿದ್ದ ಮೇಲೆ ಖಾರದ ಪುಡಿ ಬಿದ್ದಂತೆ ನಾಟಕ ಮಾಡಿದ್ದು ಪೊಲೀಸರಿಗೆ ತಿಳಿದಿತ್ತು. ಇನ್ನು ಕೆಂಗೇರಿಯ ಶಾಖೆಗೆ ತೆರಳುವ ಮಾರ್ಗ ಮಧ್ಯೆ ನಾಯಂಡಹಳ್ಳಿ ಬ್ರಿಡ್ಜ್​ ಮೇಲೆ ಡ್ರಾಮಾ ಮಾಡಿದ್ದ ಅರುಣ್​, ಈ ಬಿಡ್ಜ್​ ಯಾವುದು ಎಂದು ಜನರನ್ನೇ ಪ್ರಶ್ನೆ ಮಾಡಿದ್ದ. ಇದೆಲ್ಲವನ್ನು ನೋಡಿದ ಪೊಲೀಸರು ತನಿಖೆಗೆ ನಿರ್ಧಾರ ಮಾಡಿದ್ದರು. ಠಾಣೆಗೆ ಕರೆದೊಯ್ದು ವಿಚಾರಣೆ ಶುರು ಮಾಡ್ತಿದ್ದ ಹಾಗೆ ಮನೆಯಲ್ಲಿ 4 ಲಕ್ಷ ಹಣವಿಟ್ಟು 4 ಲಕ್ಷವನ್ನು ಮಾತ್ರ ತಂದಿರುವ ಬಗ್ಗೆ ಬಾಯ್ಬಿಟ್ಟಿದ್ದ. ಹಣ ಕದಿಯುವಾಗ ಕಳ್ಳರು 8 ಲಕ್ಷದಲ್ಲಿ 4 ಲಕ್ಷ ಮಾತ್ರ ಕದಿಯುತ್ತಾರಾ..? ಎನ್ನುವ ಅನುಮಾನ ಕೂಡ ಸತ್ಯವಾಗಿತ್ತು.

Related Posts

Don't Miss it !