ಆಂಟಿ ಕಾಟಕ್ಕೆ ಬೇಸತ್ತ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು..! ಮದುವೆಗೂ ಮುನ್ನ ದುರಂತ..

ಚಿಕ್ಕಬಳ್ಳಾಪುರದಲ್ಲಿ ವಿವಾಹಿತ ಮಹಿಳೆಯ ಕಿರುಕುಳಕ್ಕೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 28 ವರ್ಷದ ಮುನಿಕೃಷ್ಣ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತ ಮಹಿಳೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುವ ಮುನ್ನ ಯುವಕ ಮುನಿಕೃಷ್ಣ ವೀಡಿಯೋ ಮಾಡಿ ತನಗಾದ ಎಲ್ಲಾ ನೋವುಗಳನ್ನು ವೀಡಿಯೋ ಮುಂದೆ ತೆರೆದಿಟ್ಟಿದ್ದಾನೆ. ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿ ಗ್ರಾಮದ ಯುವಕ ಮುನಿಕೃಷ್ಣ ವಿವಾಹಿತ ಮಹಿಳೆ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದನು. ಆದರೆ ಮುನಿಕೃಷ್ಣನಿಗೆ ಇತ್ತೀಚಿಗೆ ಮದುವೆ ನಿಶ್ಚಿತಾರ್ಥ ಆಗಿತ್ತು. ಮದುವೆ ನಿಶ್ಚಯ ಮಾಡಿಕೊಂಡಿದ್ದಕ್ಕೆ ಕೋಪಗೊಂಡಿದ್ದ ಮಹಿಳೆ ಮುನಿಕೃಷ್ಣಗೆ ಕಿರುಕುಳ ನೀಡಲು ಶುರು ಮಾಡಿದ್ದರು ಎನ್ನಲಾಗಿದೆ. ಇದರಿಂದ ಹೊರಕ್ಕೆ ಬಾರಲಾಗದೆ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷ ಸೇವಿಸುವ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾನೆ.

ಅಕ್ಕ ತಂಗಿಯೂ ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣು..!

ಚಿಕ್ಕಬಳ್ಳಾಪುರದಲ್ಲಿ ಅಕ್ಕ, ತಂಗಿ ಇಬ್ಬರೂ ಜೊತೆಯಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಂದವಾರ ಕೆರೆಗೆ ಬಿದ್ದು ಅಕ್ಕ, ತಂಗಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಗಲಗುರ್ಕಿ ಗ್ರಾಮದ ಅಶ್ವಿನಿ ಹಾಗೂ ನಿಶ್ಚಿತಾ ಮೃತ ಸಹೋದರಿಯರು. ಚಿಕ್ಕಬಳ್ಳಾಪುರ ನಗರದ ಕಂದವಾರ ಕರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಭಾನುವಾರ ಮಧ್ಯಾಹ್ನ ಓರ್ವ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಆ ಬಳಿಕ ಸಂಜೆ ವೇಳೆಗೆ ಮತ್ತೊಬ್ಬಳ ಶವ ಕೂಡ ಕೆರೆಯಲ್ಲಿ ಪತ್ತೆಯಾಗಿದೆ. ಅಗಲಗುರ್ಕಿ ಗ್ರಾಮದ ಯುವಕನ ಜೊತೆಗೆ ಅಕ್ಕ ಅಶ್ವಿನಿ ಪ್ರೀತಿ ಮಾಡುತ್ತಿದ್ದಳು. ಆ ವಿಚಾರ ಮನೆಯವರಿಗೆ ತಿಳಿಯುತ್ತಿದ್ದ ಹಾಗೆ ಪೋಷಕರು ಅಶ್ವಿನಿಗೆ ಬೈದು‌ ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದ ಅಶ್ವಿನಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಳು. ಅಪ್ಪ-ಅಮ್ಮ ಬೈದ ಬಳಿಕ ಶುಕ್ರವಾರ ಸಂಜೆ ಮನೆಯಿಂದ ಹೊರಕ್ಕೆ ಹೋಗಿದ್ದರು. ಅಕ್ಕನನ್ನು ಮನವೊಲಿಸಲು ಹೋಗಿದ್ದ ತಂಗಿ ಕೂಡ ಅಕ್ಕನ ಜೊತೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಅಕ್ಕನನ್ನು ಉಳಿಸಲು ಹೋಗಿ ಸಾವಿಗೆ ಶರಣಾದಳಾ ಎನ್ನುವ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.

16 ವರ್ಷಕ್ಕೆ ಪ್ರೀತಿ ಬಲೆಗೆ ಬಿದ್ದಿದ್ದು ತಪ್ಪಲ್ಲವೇ..?

ಹೌದು, 16 ವರ್ಷಕ್ಕೆ ಪ್ರೀತಿ ಪ್ರೇಮ ಎಂದು ಓಡಾಡಿದ್ದು ತಪ್ಪು, ಹದಿ ಹರೆಯದ ವಯಸ್ಸಿನಲ್ಲಿ ಮಕ್ಕಳು ತಪ್ಪು ಮಾಡಿದ್ದಾರೆ. ಅಂದ ಮಾತ್ರಕ್ಕೆ ಪೋಷಕರು ಕೋಪ ತಾಪ ತೋರಿಸಿದರೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ. ಆದರೆ ಇದೇ ಪ್ರಕರಣದಲ್ಲಿ ಪೋಷಕರು ಕೊಂಚ ಅಸಮಾಧಾನ ತಂದುಕೊಂಡು ಮಗಳನ್ನು ಕೂರಿಸಿಕೊಂಡು ಬುದ್ಧಿವಾದ ಹೇಳಬಹುದಿತ್ತು. ಒಂದು ವೇಳೆ ತಮಗೆ ಅಷ್ಟೊಂದು ತಿಳುವಳಿಕೆ ಇಲ್ಲದಿದ್ದರೆ ತಿಳಿದವರು ಅಥವಾ ಯಾರಾದರು ಉನ್ನತ ಮಟ್ಟದ ಅಧಿಕಾರಿಗಳು ಅಥವಾ ಶಿಕ್ಷಕರ ಮೂಲಕ ಮಗಳಿಗೆ ತಿಳಿ ಹೇಳಿಸಬಹುದಿತ್ತು. ಆದರೆ ಆತುರದಲ್ಲಿ ತೋರಿಸಿದ ಕೋಪ ಇಂದು ಇಬ್ಬರು ಹೆಣ್ಣು ಮಕ್ಕಳನ್ನು ಕಳೆದುಕೊಳ್ಳಯವಂತೆ ಮಾಡಿದೆ.

ಆಂಟಿ ಸಹವಾಸ ಮಾಡಿ ಕೆಟ್ಟವನೇ ಮೂರ್ಖ..!

ಇಂದಿನ ವೇಗದ ಬದುಕು, ಸಾಮಾಜಿಕ ಜಾಲತಾಣ ಎಲ್ಲರನ್ನೂ ಒಂದಲ್ಲ ಒಂದು ಬಾರಿ ಮೂರ್ಖರನ್ನಾಗಿ ಮಾಡುವುದು ಸಹಜ. ಆದರೆ ಸಾಯುವ ನಿರ್ಧಾರ ಭಾರೀ ದುಬಾರಿ. ಯಾರೂ ಮಾಡದೇ ಇರುವ ತಪ್ಪನ್ನು ಈತ ಮಾಡಿರಲಿಲ್ಲ. ಸರ್ವರೂ ಈ ರೀತಿಯ ತಪ್ಪಿನ ಅಪರಾಧಿಗಳೇ ಎನ್ನುವುದನ್ನು ಅರಿತು ಆ ಸಮಸ್ಯೆಯಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳಬೇಕಿತ್ತು. ಕುಟುಂಬಸ್ಥರಿಗೆ ಈ ಮಾಹಿತಿಯನ್ನು ಹೇಳಿಕೊಂಡಿದ್ದರೆ ಈ ಸಮಸ್ಯೆಗೆ ಖಂಡಿತ ಪರಿಹಾರ ಸಿಗುತ್ತಿತ್ತು. ಒಂದು ವೇಳೆ ಪರಿಹಾರ ಸಿಗದಿದ್ದರೆ, ಪೊಲೀಸ್ ಠಾಣೆಗೆ ದೂರು‌ ನೀಡಬಹುದಿತ್ತು. ಮುಂದಿನ ದಿನಗಳಲ್ಲಿ‌ ಸಮಸ್ಯೆ ಆಗದಂತೆ ಎಚ್ಚರಿಕೆ ನೀಡುವಂತೆ ಕೇಳಿಕೊಳ್ಳಬಹುದಿತ್ತು. ಮುಚ್ಚಳಿಕೆ ಬರೆಸಿ ಪೊಲೀಸರು ಭಯ ಹುಟ್ಟಿಸಿದ್ದರೆ ಅಕ್ರಮ ಸಂಬಂಧದ ಆಂಟಿ ಕಾಟ ಅಂತ್ಯವಾಗುತ್ತಿತ್ತು. ಆದರೆ ವಿಷ ಕುಡಿದು ಸಾವನ್ನಪ್ಪಿದ್ದು ದುರಂತ. ಮಾನವನ ಜನ್ಮ ದೊಡ್ಡದು, ತಪ್ಪು ಸರಿ ಎನ್ನುವುದೇ ಜೀವನ. ಸಾಯುವ ಬದಲು ಪರಿಹಾರದ ಮಾರ್ಗ ಹುಡುಕುವುದೇ ಬುದ್ಧಿವಂತಿಕೆ.

Related Posts

Don't Miss it !