ಬಿಎಸ್​ ಯಡಿಯೂರಪ್ಪ ಆಪ್ತನಿಗೆ ಬಲೆ ಬೀಸಿದ ತೆರಿಗೆ ಇಲಾಖೆ.. ಕಾರಣ ಕಂಟ್ರೋಲ್​..

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಆಪ್ತನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ದಾಳಿ ಮಾಡಿದ್ದು ಸಾಕ್ಷಟು ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ರಾಜಾಜಿನಗರದ ರಾಮಂದಿರದ ಬಳಿಯ ಬಾಡಿಗೆ ನಿವಾಸದಲ್ಲಿ ಲೆಕ್ಕಪತ್ರಗಳನ್ನು ಕಲೆ ಹಾಕಿದ್ದಾರೆ. ಬಿಎಂಟಿಸಿ ಸಿಬ್ಬಂದಿಯಾಗಿದ್ದ ಉಮೇಶ್​​ 2008ರಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಆಪ್ತ ಸಹಾಯಕನಾಗಿ ಸೇರಿಕೊಂಡು ಕೆಲಸ ಮಾಡುತ್ತಿದ್ದರು. ಇದಕ್ಕೂ ಮೊದಲು ಆಯನೂರು ಮಂಜುನಾಥ್ ಆಪ್ತ ಸಹಾಯಕ ಹಾಗೂ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಆಪ್ತ ಸಹಾಯಕನಾಗಿಯೂ ಕೆಲಸ ಮಾಡಿದ್ದರು. ಯಡಿಯೂರಪ್ಪ ಸಿಎಂ ಆದ ಬಳಿಕ ಬಿಎಂಟಿಸಿ ಕಂಡಕ್ಟರ್ ಆಗಿದ್ದ ಉಮೇಶ್, ಎರವಲು ಸೇವೆ ಮೇಲೆ ಆಪ್ತ ಬಳಗವನ್ನು ಸೇರಿಕೊಂಡಿದ್ದರು. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಸಿಎಂ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದರು.

ಮುಖ್ಯಮಂತ್ರಿ ಆಪ್ತ ಸಲಹೆಗಾರನಾಗಿ ಕಮಾಯಿ ಗುಮಾನಿ..!

ಬಿ. ಎಸ್​​ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲೇ ಉಮೇಶ್​ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. 100 ಕೋಟಿಗೂ ಅಧಿಕ ಆಸ್ತಿಪಾಸ್ತಿ ಸಂಪಾದಿಸಿರೋ ಆರೋಪ ಕೇಳಿಬಂದಿತ್ತು. ಶಿವಮೊಗ್ಗ ಜಿಲ್ಲೆ ಅಯನೂರು ಮೂಲದ ಉಮೇಶ್, ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿ ರಾಜಾಜಿನಗರದ ರಾಮ ಮಂದಿರ ಬಳಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಬಿ.ಎಸ್ ಯಡಿಯೂರಪ್ಪ ಜೊತೆ ಸಂಪರ್ಕ ಸಾಧಿಸಿದ ಬಳಿಕ ದಿನೇ ದಿನೇ ವೇಗವಾಗಿ ಬೆಳವಣಿಗೆ ಕಂಡಿದ್ದ ಉಮೇಶ್​​ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದರು. ಇತ್ತೀಚೆಗಷ್ಟೆ ಉಮೇಶ್​ ರಾಮಯ್ಯ ಲೇಔಟ್​ನ ನಾಗಸಂದ್ರ ಮೆಟ್ರೋ ಹಿಂಭಾಗದಲ್ಲಿ ಹೊಸದಾಗಿ ಐಷಾರಾಮಿ ಬಂಗಲೆ ಕಟ್ಟಿಸಿ ಯಡಿಯೂರಪ್ಪ ಅವರ ಮನೆಯ ಹೆಸರಾದ ಧವಳಗಿರಿ ನಿವಾಸ ಎಂದು ನಾಮಕರಣ ಮಾಡಿದ್ದರು.

Read this also:

ಸಿಎಂ ಆದೇಶಕ್ಕೂ ಉಮೇಶ್​ ಹಾಕ್ತಿದ್ರಂತೆ ಕೊಕ್ಕೆ..!

ರಾಜ್ಯದ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದ ಉಮೇಶ್​ ಸಾಕಷ್ಟು ಅಧಿಕಾರಿಗಳನ್ನು ಚೇಡಿಸಿದ್ದರು ಎನ್ನಲಾಗಿದೆ. ಬಿ.ಎಸ್​ ಯಡಿಯೂರಪ್ಪ ಒಪ್ಪಿಗೆ ಕೊಟ್ಟರೂ ಉಮೇಶ್​ ತಡೆ ಹಿಡಿಯುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕರ್ನಾಟಕ ಕಾಂಟ್ರಾಕ್ಟರ್​​ಗಳ ಎಲ್ಓಸಿ (Letter of Commitment ) ತಡೆ ಹಿಡಿಯುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ರಾಜ್ಯ ಸರ್ಕಾರದ ಪ್ರಮುಖ ಕೆಲಸಗಳನ್ನು ಆಂಧ್ರ ಮೂಲದ ಕಾಂಟ್ರಾಕ್ಟರ್​​​ಗಳಿಗೆ ಗುತ್ತಿಗೆ ಕೊಡಿಸುತ್ತಿದ್ದರು ಎನ್ನಲಾಗಿದೆ. ಇದೀಗ ಆ ಎಲ್ಲಾ ಕಾಂಟ್ರಾಕ್ಟರ್​​ಗಳ ಮನೆಗಳ ಮೇಲೂ ರೇಡ್​ ಆಗಿದೆ. ದಾಳಿಗೆ ಒಳಗಾಗಿರುವ ಎಲ್ಲಾ ಕಾಂಟ್ರಾಕ್ಟರ್​​ಗಳೂ ಕೂಡ ಆಂಧ್ರ ಮೂಲದವರೇ ಆಗಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಆಪ್ತ ಕಾಂಟ್ರಾಕ್ಟರ್​ಗಳಿಗೂ ಕಂಟಕ​..!

ಬಿ.ಎಸ್​ ಯಡಿಯೂರಪ್ಪ ಆಪ್ತ ಸಹಾಯಕನ ಮೇಲೆ ಮಾತ್ರ ಐಟಿ ಅಧಿಕಾರಿಗಳು ದಾಳಿ ನಡೆಸಿಲ್ಲ. ಬಿ.ಎಸ್ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದ ಕಾಂಟ್ರ್ಯಾಕ್ಟರ್​ಗಳ ಮನೆ ಮೇಲೂ ಐಟಿ ದಾಳಿ ನಡೆದಿದೆ. 30ಕ್ಕೂ ಹೆಚ್ಚು ಕಾಂಟ್ರ್ಯಾಕ್ಟರ್​ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಜಾಲಹಳ್ಳಿಯ ಲಕ್ಷ್ಮೀಕಾಂತ್, ವಿದ್ಯಾರಣ್ಯಪುರದ ಅಮುಲ್ ರೆಸಿಡೆನ್ಸಿ, ಹೆಗ್ಗಡೆ ನಗರ ಚಾರ್ಟೆಡ್ ಅಕೌಂಟೆಡ್ ಸೇರಿದಂತೆ ಹಲವೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ರಾಹುಲ್ ಎಂಟರ್​ಪ್ರೈಸಸ್​​ ಮೂಲಕ ಕರ್ನಾಟಕದ ನೀರಾವರಿ‌ ಇಲಾಖೆಯ ಕಾಂಟ್ರಾಕ್ಟರ್​ಗಳಿಗೆ ಕಬ್ಬಿಣ ಹಾಗೂ ಸಿಮೆಂಟ್ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ. ಕಾಂಟ್ರಾಕ್ಟರ್​ಗಳ ಜೊತೆಗೆ ಅವರ ಚಾರ್ಟೆಡ್​ ಅಕೌಂಟೆಂಟ್​ಗಳು ಹಾಗೂ ಉಪಕರಣ ಪೂರೈಸಿದ್ದ ಅಂಗಡಿಗಳ ಮೇಲೂ ದಾಳಿ ಆಗಿದೆ. ನೀರಾವರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿದ್ದ ಹಗರಣ ಹಿಡಿದು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Read this also:

ರಾಜಕೀಯ ಪ್ರೇರಿತ ಅಲ್ಲ, ತಪ್ಪಾಗಿದ್ದರೆ ದಾಳಿ ಆಗಿದೆ..!

ಐಟಿ ದಾಳಿ ಆಗುತ್ತಿದ್ದ ಹಾಗೆ ಥಂಡಾ ಹೊಡೆದಿರುವ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ, ಶಿವಮೊಗ್ಗದ ಶಿಕಾರಿಪುರದಲ್ಲಿ ಮಾತನಾಡಿದ್ದಾರೆ. ಆಪ್ತನ ಮನೆ ಮೇಲೆ ಐಟಿ ರೇಡ್ ಆಗಿರುವ ವಿಚಾರ ಮಾಧ್ಯಮಗಳಿಂದ ಗೊತ್ತಾಗಿದೆ. ಐಟಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಮಾಡಲಿದ್ದು, ನಾಳೆ ಐಟಿ ದಾಳಿಯ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಆ ಮಾಹಿತಿ ಬಳಿಕ ನಾನು ಉತ್ತರ ನೀಡುತ್ತೇನೆ. ಯಾರೇ ತಪ್ಪು ಮಾಡಿದರು ಐಟಿ ಅಧಿಕಾರಿಗಳು ಬಿಡುವುದಿಲ್ಲ. ಅವರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಇದೊಂದು ರಾಜಕೀಯ ಪ್ರೇರಿತ ದಾಳಿ ಎಂಬುವುದನ್ನು ನಾನು ಒಪ್ಪುವುದಿಲ್ಲ ಎಂದು ಅಲ್ಲಗಳೆದಿದ್ದಾರೆ. ಆದರೆ ಯಡಿಯೂರಪ್ಪ ಆಪ್ತನ ಮನೆ ಶೋಧದ ಹಿಂದ 2 ನಿಖರ ಕಾರಣಗಳು ದಿ ಪಬ್ಲಿಕ್​ ಸ್ಪಾಟ್. ಕಾಂಗೆ ಲಭ್ಯವಾಗಿದೆ. ನಿರೀಕ್ಷಿಸಿ…

Related Posts

Don't Miss it !