ಸ್ವಾಮೀಜಿ ಸಾವಿನ ರಹಸ್ಯ ಬಯಲು.. ಡೆತ್​ನೋಟ್​​ ಜೊತೆಗೆ ವೀಡಿಯೋ ರಿಲೀಸ್..?

3 ಪುಟಗಳ ಡೆತ್​ನೋಟ್​ನಲ್ಲಿ ಸಾವಿನ ಸೀಕ್ರೆಟ್​..!

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚ್​​ಗಲ್ಲು ಬಂಡೆ ಮಠದ ಸ್ವಾಮೀಜಿ ಸಾವಿನ ಬಗ್ಗೆ ಹಲವಾರು ಊಹಾಪೋಹಗಳು ಕೇಳಿ ಬಂದಿದ್ದವು. ಬಸವಲಿಂಗ ಸ್ವಾಮೀಜಿಗೆ ಮಹಿಳೆ ಜೊತೆಗೆ ಅಕ್ರಮ ಸಂಬಂಧವಿತ್ತು. ಆ ಮಹಿಳೆ ಕಿರುಕುಳದಿಂದಲೇ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿತ್ತು. ಇದೀಗ ಪೊಲೀಸರು ವಶಕ್ಕೆ ಪಡೆದಿದ್ದ ಡೆತ್​ನೋಟ್​​ ಮಾಧ್ಯಮಗಳ ಕೈ ಸೇರಿದ್ದು, ಊಹಾಪೋಹ ನಿಜ ಎನ್ನುವುದು ಬಯಲಾಗಿದೆ. ಪುಟ ಸಂಖ್ಯೆ 1 ರಲ್ಲಿ ಸ್ವಾಮೀಜಿ ಈ ಮಾಹಿತಿ ಬರೆದಿದ್ದಾರೆ.

ಅನಾಮಿಕರು ಯಾರು ಅನ್ನೋ ಬಗ್ಗೆ ಖಾಕಿ ತನಿಖೆ..!

ಸ್ವಾಮೀಜಿಗೆ ಯಾರೋ ಅನಾಮಿಕರು ಕರೆ ಮಾಡಿ ಮಾತನಾಡಿಸಲು ಯತ್ನಿಸುತ್ತಿದ್ದರು ಎನ್ನುವುದನ್ನು ಸ್ವಾಮೀಜಿ ಬರೆದಿದ್ದಾರೆ. ನಾನು ಕಳೆದ 25 ವರ್ಷಗಳಿಂದ ಮಠದ ಸೇವೆಯಲ್ಲಿದ್ದೇನೆ. ಯಾವುದನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ನನ್ನ ಸ್ವಂತಕ್ಕೆ ಏನನ್ನೂ ಬಳಸಿಕೊಂಡಿಲ್ಲ. ನನ್ನ ಸಂಬಂಧಿಕರಿಗೂ ಏನನ್ನೂ ಕೊಟ್ಟಿಲ್ಲ. ನನ್ನ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ನೋಡಿಕೊಂಡು ಬಂದಿದ್ದೇನೆ. ಆದರೆ ಇತ್ತೀಚಿಗೆ ಶುರುವಾದ ಕಷ್ಟಗಳಿಂದ ಹೊರಕ್ಕೆ ಬರಲು ಸಾಧ್ಯವಾಗ್ತಿಲ್ಲ. ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳು ಕೇಳಿ ಬರುತ್ತಿವೆ. ಈ ಸಂಕೋಲೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗ್ತಿಲ್ಲ ಎಂದಿದ್ದಾರೆ.

‘ಪ್ರಾಮಾಣಿಕ ನಾನು’ ಸಾವಿಗೂ ಮುನ್ನ ಅಳಲು..!

ಆತ್ಮಹತ್ಯೆಗೂ ಮುನ್ನ ಸಿದ್ದಗಂಗಾ ಶ್ರೀಗಳಿಗೆ ಅಂತಿಮ ಪ್ರಣಾಮ ತಿಳಿಸಿರುವ ಬಸವಲಿಂಗ ಸ್ವಾಮೀಜಿ, ಮಠದ ಎಲ್ಲಾ ಭಕ್ತರಿಗೂ ಕೊನೆಯ ನಮಸ್ಕಾರ ತಿಳಿಸಿದ್ದಾರೆ. ಜೊತೆಗೆ ನಾನು ಪ್ರಾಮಾಣಿಕವಾಗಿ ಬದುಕಿದ್ದೇನೆ . ಅಧರ್ಮ ಮಾಡಿಲ್ಲ. ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಬೇರೆ ಬೇರೆ ರೀತಿಯಲ್ಲಿ ಆರೋಪಗಳು ಬರುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಮಾನಿಸಿಕವಾಗಿ ಹಿಂಸೆ ಆಗುತ್ತಿದೆ ಎಂದು ಸಿದ್ದಗಂಗಾ ಶ್ರೀಗಳು ಹಾಗೂ ಮಠದ ಭಕ್ತರಲ್ಲಿ ನಿವೇದನೆ ಮಾಡಿಕೊಂಡಿದ್ದಾರೆ. ಅಂತಿಮವಾಗಿ ಸ್ವಾಮೀಜಿ ಸಾವಿಗೆ ಮಹಿಳೆಯ ಕಿರುಕುಳ ಅನ್ನೋದನ್ನು ಸ್ವಾಮೀಜಿ ಸಾವಿನ ಪತ್ರದಲ್ಲಿ ಬಹಿರಂಗ ಮಾಡಿದ್ದಾರೆ.

ಮಡಿವಾಳೇಶ್ವರ ಸ್ವಾಮೀಜಿ ಸಾವಿಗೂ ಸ್ತ್ರೀ ಸಹವಾಸ..!

ಬೆಳಗಾವಿಯ ಮಡಿವಾಳೇಶ್ವರ ಸ್ವಾಮೀಜಿ ಬಗ್ಗೆ ಒಂದು ಆಡಿಯೋ ವೈರಲ್​ ಆಗಿತ್ತು. ಆ ಬಳಿಕ ನೇಗಿನಹಾಳದ ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮುರುಘಾ ಶರಣರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಜೈಲಿನಲ್ಲಿದ್ದಾರೆ. ಕಾವಿ ತೊಟ್ಟ ವ್ಯಕ್ತಿಗಳು ಕಾಮವನ್ನು ನಿಗ್ರಹ ಮಾಡಲು ಸಾಹಸ ಮಾಡುತ್ತಿದ್ದಾರೆ. ಕಾವಿ ಒಳಗಿನ ಕಾಮ ಉದ್ರೇಕಗೊಂಡು ಮಹಿಳೆಯರ ಸಹವಾಸ ಮಾಡುತ್ತಿದ್ದಾರೆ. ಅಂತಿಮವಾಗಿ ಮಠದ ಆಸ್ತಿ ಪಾಸ್ತಿಯನ್ನು ಮಹಿಳೆಯರಿಗೆ ಕೊಟ್ಟು ಜೀವನ ಅಂತ್ಯ ಮಾಡಿಕೊಳ್ತಿದ್ದಾರೆ. ಇದೀಗ ಬಸವಲಿಂಗ ಸ್ವಾಮೀಜಿ ಅರೆಬೆತ್ತಲಾಗಿರುವ ವೀಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲಿಗೆ ಕಾವಿ ಮೇಲಿನ ಗೌರವ ಕಾಮದಲ್ಲಿ ಅಳಿಸಿ ಹೋಗುತ್ತಿದೆ.

Related Posts

Don't Miss it !