ದೇಹದ ವಾಂಛೆಯಲ್ಲೂ ಹಣ ಮಾಡುವ ಆಸೆಗೆ ಮಗಳ ಜೊತೆಗೆ ಹೆಣವಾದಳೇ ಮಹಿಳೆ..?

ಬೆಂಗಳೂರಿನ ಬೇಗೂರು ವ್ಯಾಪ್ತಿಯ ಚೌಡೇಶ್ವರಿ ಲೇಔಟ್​ನಲ್ಲಿ ಅಕ್ಟೋಬರ್​ 6 ರಂದು ನಡೆದಿದ್ದ ತಾಯಿ ಮಗಳ ಕೊಲೆ ಬೆಚ್ಚಿ ಬೀಳುವಂತೆ ಮಾಡಿತ್ತು. ಗಂಡ ಗಾರ್ಮೆಂಟ್​ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗಿದ್ದ ವೇಳೆ ಮಹಿಳೆ ಚಂದ್ರಕಲಾ ಹಾಗೂ ಮಗಳನ್ನು ಕೊಲೆ ಮಾಡಿದ್ದ ಹಂತಕ ಪರಾರಿಯಾಗಿದ್ದ. ಮನೆಯಲ್ಲಿ ಯಾವುದೇ ವಸ್ತುಗಳು ಕಳವು ಆಗಿಲ್ಲದ ಕಾರಣ ಇದು ಕಳ್ಳತನಕ್ಕಾಗಿ ನಡೆದ ಹತ್ಯೆಯಲ್ಲ ಎಂಬುದು ಖಾತರಿಯಾಗಿತ್ತು. ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ಪರಿಶೀಲನೆ ವೇಳೆ ಮುಖಕ್ಕೆ ಮಾಸ್ಕ್​ ಹಾಕಿಕೊಂಡಿದ್ದ ಯುವಕನೊಬ್ಬ ಕೈಯ್ಯಲ್ಲಿ ಬ್ಯಾಗ್​ ಹಿಡಿದುಕೊಂಡು ಬಂದಿದ್ದ ದೃಶ್ಯ ಸೆರೆ ಸಿಕ್ಕಿತ್ತು. ಆ ಬಳಿಕ ತಾಂತ್ರಿಕ ತನಿಖೆಗೆ ಮುಂದಾಗಿದ್ದ ಪೊಲೀಸರಿಗೆ ಎಳೆ ಎಳೆಯಾಗಿ ಕಥೆಯನ್ನು ಹೇಳಿ ಆರೋಪಿಯನ್ನು ಕಂಬಿ ಹಿಂದೆ ನಿಲ್ಲಿಸಿದ್ದು ಫೇಸ್​ಬುಕ್​ ಹಾಗೂ ವಾಟ್ಸಾಪ್​​ ಚಾಟ್​.

ಗಂಡನಿಲ್ಲದ ಗಡಿಬಿಡಿಯಲ್ಲಿ ಕೊಲೆಯಾದ ಚಂದ್ರಕಲಾ..!

ಗಂಡ ದುಡಿಯಲು ಹೋದ ಬಳಿಕ ಮನೆಯಲ್ಲೇ ಮಗುವಿನೊಂದಿಗೆ ಒಬ್ಬಳೇ ಇರುತ್ತಿದ್ದ ಚಂದ್ರಕಲಾ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಳು. ಆಗ ಪರಿಚಯ ಆದವನೇ ಬಳ್ಳಾರಿಯ ಪ್ರಶಾಂತ್. ಫೇಸ್​ಬುಕ್​ ಸ್ನೇಹ ಆತ್ಮೀಯತೆಗೆ ತಿರುಗಿ ನಂಬರ್​ ಶೇರ್​ ಮಾಡಿಕೊಂಡ ಬಳಿಕ ವಾಟ್ಸಾಪ್​ನಲ್ಲೂ ಚಾಟ್​ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ. ಕೊರೊನಾ ಲಾಕ್​ಡೌನ್​ ವೇಳೆಯಲ್ಲಿ ಆಗಿದ್ದ ಸ್ನೇಹ, ಅನ್​ಲಾಕ್​ ಆದ ಬಳಿಕ ಭೇಟಿ ಮಾಡುವ ಆಸೆ ಹುಟ್ಟಿಸಿತ್ತು. ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿದ್ದ ಚಂದ್ರಕಲಾ ಎಲ್ಲದ್ದಕ್ಕೂ ಸಿದ್ಧತೆ ನಡೆಸಿದ್ದಳು. ಬೆಂಗಳೂರಿಗೆ ಬಂದಿಳಿದ ಪ್ರಶಾಂತ್​ಗೆ ಮನೆ ಅಡ್ರೆಸ್​ ಕೊಟ್ಟು ಬರುವಂತೆ ತಿಳಿಸಿದ್ಲು. ಪ್ರಯಾಣ ಮಾಡಿ ಆಯಾಸವಾಗಿದ್ದರಿಂದ ಗಂಡನ ಪಂಚೆ ಕೊಟ್ಟು ಮಲಗಿಸಿದ್ದಳು. ಆಗ ವಿಡಿಯೋ ಮಾಡಿ 10 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಈ ವೇಳೆ ಜಗಳ ಆಯ್ತು ಎನ್ನುವುದು ಆರೋಪಿಯ ಹೇಳಿಕೆ.

Read this also;

ಇಬ್ಬರ ಕೊಲೆ ಮಾಡಿದ್ದಕ್ಕೆ ಕಾರಣ ತುಂಬಾ ಸರಳ..!

ಬಳ್ಳಾರಿ ಮೂಲದ ಪ್ರಶಾಂತ್​ ಮಲಗಿದ್ದ ವಿಡಿಯೋ ಮಾಡಿ 10 ಸಾವಿರ ಹಣಕ್ಕೆ ಡಿಮ್ಯಾಂಡ್​ ಮಾಡಿದ್ದ ಚಂದ್ರಕಲಾ, ಹಣ ಕೊಡದಿದ್ರೆ ಫೇಸ್​ಬುಕ್​ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ಲಂತೆ. ಈ ವೇಳೆ ಜಗಳ ನಡೆದಿದ್ದು, ಜಗಳದಲ್ಲಿ ಮಗು ಭಯಗೊಂಡು ಜೋರಾಗಿ ಅಳುವುದಕ್ಕೆ ಶುರು ಮಾಡಿದೆ. ಮಗುವಿನ ಅಳು ನಿಲ್ಲಿಸುವಂತೆ ಪ್ರಶಾಂತ್​ ಬೆದರಿಸಿದ್ದಾನೆ. ಆಗ ಕೋಪಗೊಂಡ ಚಂದ್ರಕಲಾ ಅಡುಗೆ ಮನೆಯಿಂದ ಚಾಕು ತಂದಿದ್ದಾಳೆ. ಸಮಸ್ಯೆಯಿಂದ ಹೊರ ಬರುವುದು ಹೇಗೆ ಎಂದು ತಿಳಿಯದ ಪ್ರಶಾಂತ್, ಅದೇ ಚಾಕು ಕಿತ್ತು ತಾಯಿ ಮಗಳನ್ನು ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದಾನೆ. ಆದರೆ ಫೇಸ್​ಬುಕ್​, ವಾಟ್ಸಾಪ್​ ಚಾಟ್​ಗಳು ಆರೋಪಿಯ ಮನೆ ಬಾಗಿಲಿಗೆ ಪೊಲೀಸರನ್ನು ಕರೆದುಕೊಂಡು ಬಂದು ನಿಲ್ಲಿಸಿವೆ. ಇದೀಗ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಸರಸ ಸಲ್ಲಾಪ ನಡೆಸಿದ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಖಾಕಿಪಡೆ ತನಿಖೆ ನಡೆಸುತ್ತಿದೆ.

ದೇಹಸುಖದಲ್ಲಿ ಹಣದ ವ್ಯವಹಾರ ಎಷ್ಟು ಸರಿ..!?

ಯಾವುದೇ ಒಬ್ಬ ಪುರುಷ ಅಥವಾ ಮಹಿಳೆ ಪರಪುರುಷನ ಜೊತೆಗೆ ಅಥವಾ ಪರಸ್ತ್ರೀ ಜೊತೆಗೆ ದೇಹ ಸುಖ ಬಯಸುತ್ತಿದ್ದಾನೆ ಎಂದರೆ ಆತ ಆ ಸುಖವನ್ನು ಕಳೆದುಕೊಂಡಿದ್ದಾನೆ ಎಂದೇ ಅರ್ಥ. ಆ ಸುಖವನ್ನು ಬಯಸುವುದು ಮಾನವನ ಸಹಜ ಧರ್ಮ. ಅದು ಸಾಮಾಜಿಕ ಜಾಲತಾಣ, ಅಥವಾ ಸ್ನೇಹ, ಸಂಬಂಧಗಳಲ್ಲೂ ಈ ರೀತಿ ನಡೆಯುವುದು ಸರ್ವೇ ಸಾಮಾನ್ಯ. ಆದರೆ ಆ ದೇಹದ ವಾಂಛೆ ತೀರಿಸಿಕೊಳ್ಳುವುದು ಮಾತ್ರವೇ ಇಬ್ಬರ ಉದ್ದೇಶವಾಗಿದ್ದರೆ, ಕೊಲೆ ನಡೆಯುವ ಸಂಭವ ಇರುವುದಿಲ್ಲ. ಅದರಲ್ಲಿ ಹಣದ ವ್ಯವಹಾರ ತಳುಕು ಹಾಕಿಕೊಂಡಾಗ ಈ ರೀತಿಯ ಘಟನೆಗಳು ಸಂಭವಿಸುತ್ತವೆ ಎನ್ನುತ್ತಾರೆ ಲೈಂಗಿಕ ತಜ್ಞರು. ಇನ್ನೂ ಕೆಲವು ಸಮಯದಲ್ಲಿ ಆಕೆ ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಸಾಮಾಜಿಕ ಜಾಲತಾಣಗಳನ್ನು ಬಳಸಿ ಯುವಕರನ್ನು ಆಯ್ಕೆ ಮಾಡುತ್ತಾರೆ. ದೇಹ ಸುಖದ ಹೆಸರಲ್ಲಿ ಬೆದರಿಕೆ ಹಾಕುವ ಪ್ರವೃತ್ತಿಗಳೂ ಇತ್ತೀಚಿಗೆ ಜಾಸ್ತಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

Related Posts

Don't Miss it !