ಕೇರಳದ ಪ್ರೇಮಿಗಳಿಗೆ ಬೆಂಗಳೂರು ಡ್ರಗ್ಸ್ ಅಡ್ಡ..! ರೂಮಲ್ಲಿ ಟ್ಯಾಟೋ Kick ಗಮ್ಮತ್ತು..!!

ಬೆಂಗಳೂರು ಡ್ರಗ್ಸ್ ಅಡ್ಡ ಆಗಿ ಬದಲಾಗಿದೆ. ಅದರಲ್ಲೂ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಡ್ರಗ್ಸ್ ವ್ಯಾಪಾರಿಗಳ ಪ್ರಮುಖ ಮಾರುಕಟ್ಟೆ. ಬೆಂಗಳೂರಿನಲ್ಲಿ ಬರೋಬ್ಬರಿ 8 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದ್ದು, ಪ್ರೇಮಿಗಳನ್ನು ಬಂಧನ ಮಾಡಲಾಗಿದೆ. ಪ್ರೇಮಿಗಳಿಬ್ಬರು ಕೇರಳ ಮೂಲದವರಾಗಿದ್ದು, ಡ್ರಗ್ಸ್ ವ್ಯಾಪಾರ ಮಾಡುವ ಉದ್ದೇಶದಿಂದಲೇ ಬೆಂಗಳೂರಿನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇನ್ನು ಈ ಪ್ರೇಮಿಗಳು ವಾಸವಿದ್ದ ಕೊಠಡಿಯಲ್ಲಿ ಮಾಡಿಕೊಂಡಿದ್ದ ತಯಾರಿ ಪೊಲೀಸರನ್ನೇ ಬೆಚ್ಚಿ ಬಿಳಿಸಿದೆ.

ಕೊತ್ತನೂರು ಸುತ್ತಮುತ್ತಲ ವಿದ್ಯಾರ್ಥಿಗಳೇ ಟಾರ್ಗೆಟ್..!!

ಬೆಂಗಳೂರಿನ ಕೊತ್ತನೂರುದಿಣ್ಣೆಯ ಬಳಿಯ ಫ್ಲಾಟ್‌ನಲ್ಲಿ ವಾಸವಿದ್ದ ಪ್ರೇಮಿಗಳಾದ ವಿಷ್ಣುಪ್ರಿಯ ಹಾಗೂ ಸಿಗಿಲ್ ವರ್ಗೀಸ್ ಎಂಬುವರನ್ನು ಹುಳಿಮಾವು ಪೊಲೀಸರು ಬಂಧಿಸಿದ್ದು 8 ಕೋಟಿ ಮೌಲ್ಯದ ಹ್ಯಾಶಿಶ್ ಆಯಿಲ್, ಗಾಂಜಾ ವಶಕ್ಕೆ ಪಡೆದಿದ್ದಾರೆ. ಒಟ್ಟು  12 ಲೀಟರ್ 940 ಗ್ರಾಂ ಹ್ಯಾಶಿಶ್ ಆಯಿಲ್, 26 ಕೆಜಿ 250 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಮಾದಕ ವಸ್ತು ಸೇವನೆ ಮಾಡಿ ಕಿಕ್ ಏರಿಸಿಕೊಳ್ಳುವ ಉದ್ದೇಶದಿಂದಲೇ ಒಂದು ರೂಮ್ ಸಿದ್ದ ಮಾಡಿಕೊಂಡಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.

ಟ್ಯಾಟೂ ಆರ್ಟಿಸ್ಟ್, ಮನೆಯಲ್ಲಿ ಕಲರ್ ಫುಲ್ ಲೈಟಿಂಗ್ಸ್..?

ವಿಷ್ಣುಪ್ರಿಯ ಟ್ಯಾಟೂ ಆರ್ಟಿಸ್ಟ್ ಆಗಿದ್ದು, ಮನೆಯಲ್ಲೂ ಟ್ಯಾಟೂ ಚಿತ್ತಾರ ಮೂಡಿಸಿದ್ದಳು. ಮಾದಕ ವಸ್ತು ಸೇವನೆಗೆಂದೇ ಪ್ಲಾಟ್ ತಯಾರಿ ಮಾಡಿಕೊಂಡಿದ್ದ ವಿಷ್ಣುಪ್ರಿಯ, ಟ್ಯಾಟೂ ಜೊತೆಗೆ ಕಲರ್ ಫುಲ್ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡಿದ್ದಳು. ಡ್ರಗ್ಸ್ ತೆಗೆದುಕೊಂಡಾಗ ಬಣ್ಣ ಬಣ್ಣದ ಲೈಟಿಂಗ್ಸ್ ನೋಡಿದ್ರೆ ಕಿಕ್ ದುಪ್ಪಟ್ಟು ಆಗುತ್ತೆ ಎನ್ನುವ ಕಾರಣಕ್ಕೆ ಈ ಸಿದ್ಧತೆ ನಡೆದಿತ್ತು. ಪ್ರತಿದಿನ ಮನೆಯಲ್ಲಿಯೇ ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದ ಜೋಡಿ. ಮೊಬೈಲ್ ಮೇಲೆ ಡ್ರಗ್ಸ್ ಹಾಕಿ ಸೇವನೆ ಮಾಡೋದು, ರೂಮ್‌‌ನಲ್ಲಿ ಲೈಟಿಂಗ್ಸ್ ಹಾಕಿಕೊಂಡು ಮೋಜು ಮಸ್ತಿ ಮಾಡೋದನ್ನ ವಿಡಿಯೋ ಮಾಡಿಕೊಳ್ತಿದ್ದ ಲವರ್ಸ್. ಕೇರಳ ಮೂಲದ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ ಡ್ರಗ್ಸ್ ಸಪ್ಲೈ ಮಾಡ್ತಿದ್ದರು, ಅವರ ಮೂಲಕ ವ್ಯಾಪಾರ ಕೂಡ ಮಾಡುತ್ತಿದ್ದಳು ವಿಷ್ಣುಪ್ರಿಯ.

ಐಶಾರಾಮಿ ಬದುಕಿಗಾಗಿ ಡ್ರಗ್ಸ್ ದಂಧೆಗೆ ಎಂಟ್ರಿ ಶಂಕೆ..!!

ಬೆಂಗಳೂರಿನಲ್ಲಿ ಡ್ರಗ್ಸ್‌ಗೆ ಬೇಡಿಕೆ ಹೆಚ್ಚಾಗಿದೆ ಹಾಗೂ ಮೋಜು ಮಸ್ತಿಗೆ ಬೆಂಗಳೂರು ಹೇಳಿ ಮಾಡಿಸಿದ ಹಾಟ್ ಸ್ಪಾಟ್ ಎನ್ನುವ ಕಾರಣದಿಂದ ಈ ಜೋಡಿ ಬೆಂಗಳೂರಿಗೆ ಕಾಲಿಟ್ಟಿತ್ತು. ಬಸ್‌ನಲ್ಲಿ ಸಾಗಾಟ ಮಾಡಿದ್ರೆ ಪೊಲೀಸರಿಗೆ ಸುಲಭದಲ್ಲಿ ಸಿಗಲ್ಲ ಎಂದು ಬಲವಾಗಿ ನಂಬಿದ್ದ ಈ ಜೋಡಿ, ವಿಶಾಖಪಟ್ಟಣಂಗೆ ಬಸ್‌ನಲ್ಲೇ ಹೋಗಿ ಆಶಿಶ್ ಆಯಿಲ್ ತರುತ್ತಿದ್ದರು. ಐಷಾರಾಮಿ ಲೈಫ್ ಅಡಿಕ್ಟ್ ಆಗಿದ್ದ ಪ್ರೇಮಿಗಳು ಡ್ರಗ್ಸ್ ಪೆಡ್ಲಿಂಗ್ ವೃತ್ತಿ ಆಯ್ಕೆ ಮಾಡಿಕೊಂಡಿದ್ದರು.

ತಾಯಿ ಇಲ್ಲದ ತಬ್ಬಲಿ ವಿಷ್ಣುಪ್ರಿಯ ಡ್ರಗ್ಸ್ ಪ್ರಿಯೆ..!

ವಿಷ್ಣುಪ್ರಿಯ ಹಾಗೂ ಸಿಗೀಲ್ ವರ್ಗೀಸ್  ಇಬ್ಬರು ಕೇರಳ ಮೂಲದವರು. ಬಾಲ್ಯದಲ್ಲೇ ತಾಯಿ ಕಳೆದುಕೊಂಡಿದ್ದ ವಿಷ್ಣುಪ್ರಿಯ, ತನ್ನ ತಂದೆ ಜೊತೆ ತಮಿಳುನಾಡಿನ ಕೊಯಮತ್ತೂರಿಗೆ ಬಂದು ವಾಸವಾಗಿದ್ದಳು. ಅಲ್ಲೇ ಬಿಬಿಎಂ ವಿದ್ಯಾಭ್ಯಾಸ ಕೂಡ ಆಯ್ತು. ಅಲ್ಲಿ  ಪರಿಚಯ ಆದವನೇ ಈ ಸಿಗೀಲ್ ವರ್ಗಿಸ್.. ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ ಜೋಡಿ ಹಕ್ಕಿಗಳು ಪ್ರಣಯ ಶುರು ಮಾಡಿದ್ದವು. ಈ ವೇಳೆ ಕಾಲೇಜು ದಿನಗಳಲ್ಲೇ ಡ್ರಗ್ಸ್ ದಾಸರಾಗಿದ್ದ ಇಬ್ಬರು, ಓದು ಮುಗಿದ ಬಳಿಕ ಡ್ರಗ್ಸ್ ದಂಧೆಗೆ ನಿಂತರು. ಕಳೆದ ಮೂರ್ನಾಲ್ಕು ತಿಂಗಳಿಂದ ಬೆಂಗಳೂರಿನಲ್ಲಿ ವಾಸವಿದ್ದುಕೊಂಡು ಭಾರೀ ವ್ಯವಹಾರ ಶುರು ಮಾಡಿಕೊಂಡಿದ್ದರು. ಮನೆಗೆ ಕರೆಸಿಕೊಂಡು ವಿದ್ಯಾರ್ಥಿಗಳಿಗೆ ಕಿಕ್ ಕೊಡುತ್ತಿದ್ದರು, ಇದೀಗ ಪ್ರೇಮಿಗಳ ಜೊತೆಗೆ ವಿಕ್ರಂ ಎಂಬಾತನನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಲಾಗಿದೆ.

Related Posts

Don't Miss it !