ಹೆಂಡತಿ ಸ್ನೇಹಿತೆ ಜೊತೆ ಚಕ್ಕಂದ ಆಡಿ ಕೊಂದು ರೈಲು ಹತ್ತಿದ ಕಿರಾತಕ..!

ಒಂದು ರೀತಿಯಲ್ಲಿ ಅಚ್ಚರಿ ಅನ್ನಿಸಿದ್ರು ಸತ್ಯವಾದ ಘಟನೆ ಇದು. ಹೆಂಡತಿ ಸ್ನೇಹಿತೆಗೆ ಬಲೆ ಬೀಸಿ ಚಕ್ಕಂಡ ಆಡಿದ ಬಳಿಕ ತಾನೇ ಕೊಂದು ಪರಾರಿಯಾಗಿದ್ದಾನೆ. ಇದೇ ತಿಂಗಳ ಜೂನ್​ 9ರಂದು ಯಶವಂತಪು ರೈಲು ನಿಲ್ದಾಣ ಸಮೀಪದ ಲಾಡ್ಜ್​ ಒಂದರಲ್ಲಿ ಸುಮಾರು 37 ವರ್ಷದ ದೀಪಾ ಪದನ್​ ಎಂಬಾಕೆಯ ಕೊಲೆ ನಡೆದಿತ್ತು. ಉಸಿರುಗಟ್ಟಿ ಕೊಂದ ಆರೋಪಿ ರೈಲು ಹತ್ತಿ ಊರು ಕಡೆಗೆ ಹೊರಟಿದ್ದ. ಆದರೆ ರೈಲಲ್ಲಿ ಪ್ರಯಾಣ ಮಾಡ್ತಿರೋ ವಿಚಾರ ತಿಳಿದು ವೇರ್​ ಈಸ್ ಮೈ ಟ್ರೈನ್​ ( Where is my train ) ಆ್ಯಪ್​ ಮೂಲಕ ಹಿಂಬಾಲಿಸಿ ಟಾಯ್ಲೆಟ್​ನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೊಲೆಯಲ್ಲಿ ಆರೋಪಿ ಅನ್ಮೋಲ್​ ಪತ್ನಿಯ ಕೈವಾಡ ಇದೆಯಾ..? ಎನ್ನುವ ಬಗ್ಗೆ ಪೊಲೀಸರಲ್ಲಿ ಅನುಮಾನ ಕಾಡುತ್ತಿದೆ.

ದೀಪಾ ಹಾಗು ದೀಪಾ ಪದನ್​ ಇಬ್ಬರು ಸ್ನೇಹಿತರು..!

ದೀಪಾ ಅನ್ಮೋಲ್​ ಹಾಗೂ ದೀಪಾ ಪದನ್​ ಇಬ್ಬರು ಸ್ನೇಹಿತರು. ಒಡಿಶಾ ಮೂಲದ ಗೆಳತಿಯರು ಬೆಂಗಳೂರಿನಲ್ಲಿ ಆಗಾಗ ಭೇಟಿ ಆಗುತ್ತಿದ್ದರು. ಈ ವೇಳೆ ದೀಪಾ ಪದನ್​ಗೆ ದೀಪಾ ಅನ್ಮೋಲ್​ ಪತಿ ಅನ್ಮೋಲ್​ ಪರಿಚಯ ಆಗಿತ್ತು. ಕೆಲವು ದಿನಗಳ ಬಳಿಕ ಅವರಿಬ್ಬರ ನಡುವೆ ವಿಶ್ವಾಸ ಮೂಡಿ, ದೈಹಿಕ ಸಂಪರ್ಕ ನಡೆಸಲು ಶುರು ಮಾಡಿದ್ದರು. ಆ ನಂತರ ದೀಪಾ ಪದನ್​ ಬೇರೊಬ್ಬ ಹುಡುಗನ ಜೊತೆಗೆ ಸುತ್ತಾಡಲು ಶುರು ಮಾಡಿದ್ದಳು. ಅದಕ್ಕಾಗಿಯೇ ಕೊಲೆ ಮಾಡಿದೆ ಎನ್ನುವುದು ಆರೋಪಿಯ ವಾದ. ಆದರೆ ಆರೋಪಿ ಅನ್ಮೋಲ್​ ಕೊಲೆ ಮಾಡಿದ ಬಳಿಕ ಹೆಂಡತಿಗೆ ಫೋನ್​ ಮಾಡಿ ಮಾತನಾಡಿದ್ದು ಯಾಕೆ..? ಎನ್ನುವ ವಿಚಾರ ಹಿಡಿದು ತನಿಖೆ ನಡೆಸುತ್ತಿದ್ದಾರೆ ಯಶವಂತಪುರ ಪೊಲೀಸ್ರು. ಹೆಂಡತಿ ಮಾಸ್ಟರ್​ ಮೈಂಡ್​ ರೀತಿ ಕೆಲಸ ಮಾಡಿರುವ ಅನುಮಾನ ಖಾಕಿ ಪಡೆಯನ್ನು ಕಾಡುತ್ತಿದೆ.

ಇದನ್ನೂ ಓದಿ: ಬೆಂಗಳೂರಿನ 2 ಶಾಲೆಗಳಲ್ಲಿ 31 ಮಕ್ಕಳಿಗೆ ಕೋವಿಡ್​..! ಶಾಲೆಗಳಿಗೆ ಹೊಸ ರೂಲ್ಸ್​..!

‘ನಾನು ನಿನ್ನ ಸ್ನೇಹಿತೆಯನ್ನು ಕೊಲೆ ಮಾಡಿದ್ದೇನೆ’

ಬೆಂಗಳೂರು ಬಿಟ್ಟು ದೂರ ಹೊರಟು ಹೋಗೋಣ ಎಂದು ದೀಪಾ ಪದನ್​​ಳನ್ನು ನಂಬಿಸಿದ್ದ ಅನ್ಮೋಲ್​, ಯಶವಂತಪುರ ರೈಲ್ವೆ ನಿಲ್ದಾಣದ ಬಳಿಗೆ ಕರೆದುಕೊಂಡು ಬಂದಿದ್ದ. ಹೊರಡು ಮುನ್ನ ಮನಸ್ಸಾಗಿ ಲಾಡ್ಜ್​​ ಕಡೆಗೆ ಹೆಜ್ಜೆ ಹಾಕಿದ್ದರು. ರೆಸಿಡೆನ್ಸಿ ಲಾಡ್ಜ್​ನಲ್ಲಿ ರೂಮ್​ ಬುಕ್​ ಮಾಡಿದ್ದ ಅನ್ಮೋಲ್​, ಉಸಿರುಗಟ್ಟಿ ಕೊಲೆ ಮಾಡಿದ್ದ. ಆ ಬಳಿಕ ಪತ್ನಿಗೆ ಕರೆ ಮಾಡಿದ್ದ ಅನ್ಮೋಲ್​, ನಿನ್ನ ಗೆಳತಿಯನ್ನು ಕೊಂದಿದ್ದೇನೆ ಎಂದು ಹೇಳಿ ರೈಲು ಹತ್ತಿದ್ದ. ಗಂಡನ ಫೋನ್​ ಬರ್ತಿದ್ದ ಹಾಗೆ ಲಾಡ್ಜ್​ ಬಳಿ ಬಂದಿದ್ದ ದೀಪಾ ಅನ್ಮೋಲ್​, ರೂಮ್​ ನಂಬರ್​ 201ನಲ್ಲಿರುವ ದೀಪಾ ಪದನ್​ ನೋಡ್ಬೇಕು ಅಂತಾ ಕೇಳಿದ್ರು. ಆ ಬಳಿಕ ರೂಮ್​ ಬಾಗಿಲು ತೆಗೆಯದಿದ್ದಾಗ, ಲಾಡ್ಜ್​ ಸಿಬ್ಬಂದಿ ಬಾಗಿಲು ತೆಗೆದು ನೋಡಿದಾಗ ಕೊಲೆ ಬಯಲಾಗಿದೆ. ಈ ವೇಳೆ ಲಾಡ್ಜ್​ ಸಿಬ್ಬಂದಿಯೇ ಕೊಂದಿದ್ದಾರೆಂದು ಡ್ರಾಮಾ ಆಡಿದ್ದ ದೀಪಾ ಅನ್ಮೋಲ್​ ಪೊಲೀಸ್​ ವಿಚಾರಣೆ ಬಳಿಕ ಸತ್ಯ ಒಪ್ಪಿಕೊಂಡಿದ್ದಳು. ಅಷ್ಟರಲ್ಲಿ ಗಂಡನ ಮೊಬೈಲ್ ಫೋನ್​ ಕಂಟೋನ್ಮೆಂಟ್​ ಬಳಿ ​ ಸ್ವಿಚ್​ ಆಫ್​ ಆಗಿತ್ತು.

ಹೆಂಡತಿ ಟಾರ್ಚರ್​​ಗೆ ಕೊಂದು ಎಸ್ಕೇಪ್​ ಆಗುವ ಸ್ಕೆಚ್​..!?

ಕಂಟೋನ್ಮೆಂಟ್​ನಲ್ಲಿ ಮೊಬೈಲ್​ ಸ್ವಿಚ್​ ಆಗಿದ್ದನ್ನು ಪತ್ತೆ ಹಚ್ಚಿದ ಪೊಲೀಸ್ರು, ಅಲ್ಲಿಂದ ಒಡಿಶಾ ಕಡೆಗೆ ಹೊರಟ ರೈಲುಗಳ ಪಟ್ಟಿ ಮಾಡಿದ್ರು. ಆ ಬಳಿಕ ಕುರ್ಲಾ ಎಕ್ಸ್​ಪ್ರೆಸ್​ ರೈಲಿನಲ್ಲಿ ಹೊರಟಿದ್ದನ್ನು ಪತ್ತೆ ಹಚ್ಚಿ ಅನಂತಪುರಂ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಸ್ನೇಹಿತೆ ಜೊತೆಗೆ ಆರೋಪಿ ಲವ್ವಿ ಡಬ್ಬಿ ಆಡ್ತಿದ್ದ ವಿಚಾರ ತಿಳಿದ ದೀಪಾ ಅನ್ಮೋಲ್​, ಸ್ನೇಹಿತೆಯನ್ನು ಕೊಂದು ಬಂದರೆ ಸಂಸಾರ. ಇಲ್ಲದಿದ್ದರೆ ಸಂಸಾರ ಛಿದ್ರ ಆಗಲಿದೆ ಎನ್ನುವ ಹಠ ಹಿಡಿದಿರಬಹುದು ಎನ್ನುವ ಶಂಶಯ ಖಾಕಿ ಪಡೆಯನ್ನು ಕಾಡುತ್ತಿದೆ. ಇಲ್ಲಿದಿದ್ರೆ ಕೊಲೆ ಮಾಡಿದ ಬಳಿಕ ಹೆಂಡತಿಗೆ ಫೋನ್​ ಮಾಡಿ ತಿಳಿಸುವ ಅಗತ್ಯವೇ ಇರಲಿಲ್ಲ. ಇನ್ನೂ ಗಂಡನೇ ಕೊಲೆ ಮಾಡಿದ್ದಾನೆ ಅಂತಾ ಗೊತ್ತಿದ್ರೂ ಹೆಂಡತಿ ಲಾಡ್ಜ್​ ಸಿಬ್ಬಂದಿ ಮೇಲೆ ಗೂಬೆ ಕೂರಿಸುವ ಯತ್ನವಂತೂ ಮಾಡುತ್ತಿರಲಿಲ್ಲ. ಇದೆಲ್ಲವನ್ನೂ ನೋಡಿದ ಮೇಲೆ ಗಂಡ ಹೆಂಡತಿ ಇಬ್ಬರೂ ಸೇರಿ ಸ್ನೇಹಿತೆಯನ್ನು ಕೊಂದಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣ್ತಿರೋ ಸಂಗತಿ. ಪೊಲೀಸರಿಗೆ ಸಾಕ್ಷಿ ಸಿಕ್ಕರೆ ಹೆಂಡತಿ ಕೂಡ ಜೈಲುಪಾಲು.

Related Posts

Don't Miss it !