ಹೆಂಡ್ತಿ ತಂಗಿ ತುಂಬಾ ಇಷ್ಟ..! ಕಿರಿಕ್‌ ಬೇಡ ಅಂತಾ ಹೆಂಡ್ತಿಯನ್ನೇ ಕೊಂದ ಕಿರಾತಕ..!!

ಸುಂದರವಾದ ಹೆಂಡ್ತಿ, ಇಬ್ಬರು ಮುದ್ದಾದ ಗಂಡು ಮಕ್ಕಳು, ಇರೋಕೆ ಒಳ್ಳೆ ಮನೆ. ಇನ್ನೇನು ಬೇಕಿತ್ತು ಸುಖ ಸಂಸಾರಕ್ಕೆ..? ಆದರೆ ಕಾಮ ಪಿಶಾಚಿಯಾಗಿದ್ದ ಆರೋಪಿ ಚೌಡೇಶ್ ಅಲಿಯಾಸ್ ಸತೀಶ್ ತನ್ನ ಸಂಸಾರ ದೋಣಿಯನ್ನು ತಾನೇ ಮುಳುಗಿಸಿದ್ದಾನೆ. ಇದಕ್ಕೆ ಕಾರಣವಾಗಿದ್ದು ಮೃತ ಶ್ವೇತಾಳ ತಂಗಿ ಎನ್ನುವುದು ವಿಶೇಷ. ಕಳೆದ ನಾಲ್ಕು ವರ್ಷಗಳಿಂದ ಭಾವನ ಜೊತೆಗೆ‌ ಕಾಮದಾಟ ಆಡುತ್ತಿದ್ದ ಶ್ವೇತಾಳ ತಂಗಿ ಇತ್ತೀಚಿಗೆ ಅಕ್ಕನ ಸಂಸಾರದಲ್ಲಿ ಬಿರುಗಾಳಿಯ ಕಿಡಿ ಹಚ್ಚಿದ್ದಳು. ಬಾರ್ ಕ್ಯಾಷಿಯರ್ ಆಗಿ‌ ಕೆಲಸ ಮಾಡ್ತಿದ್ದ ಚೌಡೇಶ್, ಕಟ್ಟಿಕೊಂಡವಳ ಬದುಕಿಗೆ ಚಟ್ಟ ಕಟ್ಟಿ ತಾನೂ ಬಯಸಿದ ಬದುಕಿಗಾಗಿ ಕಂಬಿ ಹಿಂದೆ ಸೇರಿದ್ದಾನೆ. ಜೈಲಿನಿಂದ ಬಿಡುಗಡೆ ಆಗುವ ಬಗ್ಗೆಯೂ ಚರ್ಚೆ ನಡೆಸಿದ್ದಾನೆ.

ಚಿತ್ರದುರ್ಗ ಮೂಲಕ ಶ್ವೇತಾ, ಸಂಭಾವಿತ ಹೆಣ್ಣುಮಗಳು..!!

30 ವರ್ಷದ ಶ್ವೇತಾಳನ್ನು ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ದ. ಜೊತೆಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಆಕೆಯ ತಂಗಿಯ ಜೊತೆಗೂ ಸಂಬಂಧ ಕುದುರಿಸಿದ್ದ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಆಲೂರು ಮೂಲದ ಶ್ವೇತಾಳಿಗೆ ಆಕೆಯ ತಂಗಿಯೇ ತನ್ನ ಸಂಸಾರಕ್ಕೆ ಹುಳಿ ಹಿಂಡಬಹುದು ಎನ್ನುವ ಯಾವುದೇ ಸುಳಿವು ಇರಲಿಲ್ಲ. ಆದರೆ ನಾದಿನಿ ಜೊತೆಗೆ ಬಾರ್ ಕ್ಯಾಷಿಯರ್ ಗಪ್‌ಚುಪ್ ವ್ಯವಹಾರ ಜೋರಾಗಿತ್ತು. ಆ ಬಳಿಕ ಎಲ್ಲವೂ ಬಟಾಬಯಲಾಗಿತ್ತು. ಅಷ್ಟರಲ್ಲಿ ನಾನು ನಿನ್ನ ತಂಗಿಯನ್ನು ಮದುವೆಯಾಗಿದ್ದೇನೆ ಎಂದು ಕಟ್ಟಿಕೊಂಡವಳ ಎದುರು ಹೇಳಿಕೊಂಡಿದ್ದ. ಶಾಂತವಾಗಿದ್ದ ಸಂಸಾರದಲ್ಲಿ ಬಿರುಗಾಳಿ ಬೀಸಿತ್ತು. ನಾದಿನಿಯನ್ನೇ ಕಾಮದೇವತೆ ಎಂದು ಆರಾಧಿಸುತ್ತಿದ್ದ ಚೌಡೇಶ್, ಆಕೆಗಾಗಿ ಕೊಲೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದ.

ಗಂಡ ಹೆಂಡತಿ ಹುಟ್ಟು ಹಬ್ಬ ಆಚರಿಸಿದ್ದೇ ಪ್ರಾಣಕ್ಕೆ ಕುತ್ತು..!!

35 ವರ್ಷದ ಚೌಡೇಶ್ ಅಲಿಯಾಸ್ ಸತೀಶ್ ಇತ್ತೀಚೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದನು. ತನ್ನ ಪತ್ನಿ‌ ಶ್ವೇತಾ ಹಾಗೂ ಇಬ್ಬರು ಮಕ್ಕಳ ಜೊತೆಗೆ‌ ದೇವಸ್ಥಾನ ಒಂದರಲ್ಲಿ ಕೇಕ್ ಕತ್ತರಿಸಿದ್ದನು. ಅಲ್ಲಿನ ಫೋಟೋ ಒಂದನ್ನು ಶ್ವೇತಾ ಮೊಬೈಲ್ ಸ್ಟೇಟಸ್‌ನಲ್ಲಿ ಹಾಕಿದ್ದಳು. ಈ ಫೋಟೋ ನೋಡಿದ್ದ ತಂಗಿಗೆ ಸಹಿಸಲು ಸಾಧ್ಯ ಆಗಿರಲಿಲ್ಲ. ನನ್ನ ಜೊತೆಗೆ ಹುಟ್ಟುಹಬ್ಬ ಆಚರಿಸದೆ ನಿನ್ನ ಹೆಂಡತಿ ಮಕ್ಕಳ ಜೊತೆಗೆ ಆಚರಣೆ ಮಾಡಿದ್ದೀಯಾ..? ನಿನಗೆ ನನಗಿಂತಲೂ ನಿನ್ನ ಹೆಂಡತಿ ಮೇಲೆ ಹೆಚ್ಚು ಪ್ರೀತಿ ಎಂದು ಕಿರಿಕ್ ತೆಗೆದಿದ್ದಳು. ಆ ಬಳಿಕ ಹೆಂಡತಿಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ ಆರೋಪಿ ಚೌಡೇಶ್, ನಾನು ಕೊಲೆ ಮಾಡ್ತೇನೆ, ನೀನು ನನ್ನ ಜೊತೆಗೆ ಬಂದು ಬಿಡು. ಜೈಲಿನಲ್ಲಿ ಇದ್ದು ಬರೋಣ ಎಂದು ಮೆಸೇಜ್ ಮಾಡಿರುವುದು ಪತ್ತೆಯಾಗಿದೆ. ಈ ನಡುವೆ ಬಂಧನ ಆದ ಬಳಿಕ ಬಿಡುಗಡೆ ಮಾಡಿಸಲು ಯಾರು ಬರ್ತಾರೆ ಅನ್ನೋ ಬಗ್ಗೆಯೂ ಚರ್ಚೆ ಮಾಡಿದೆ ಈ ಕಿರಾತಕ ಜೋಡಿ.

ಕೊಲೆಗೆ ಎನ್ನಲಾದ

ಅಜ್ಜನ ಮನೆಯಲ್ಲಿ ಮಕ್ಕಳು, ಸಿಟಿ ಆಸೆ ಕಂಡ ಪೋಷಕರ ಆಕ್ರಂದನ..!!

ಹಳ್ಳಿ ಭಾಗದ ಜನತೆ ಹುಡುಗ ಸಿಟಿಯಲ್ಲಿದ್ದಾನೆ ಎನ್ನುವ ಒಂದೇ ಕಾರಣಕ್ಕೆ ಮಗಳನ್ನು ಕೊಟ್ಟು‌ ಮದುವೆ ಮಾಡಿಕೊಡ್ತಾರೆ. ಆ ಹುಡುಗ ಏನು ಕೆಲಸ ಮಾಡ್ತಾನೆ..? ಆತನ ಹಿನ್ನೆಲೆ ಏನು..? ಎನ್ನುವುದನ್ನೂ ಪರಿಶೀಲನೆ ಮಾಡುವುದಿಲ್ಲ. ಬದಲಿಗೆ ನೋಡಲು ಅಂದ ಚಂದವಾಗಿದ್ರೆ ಮಗಳಿಗೆ ಮದುವೆ ಫಿಕ್ಸ್ ಮಾಡ್ತಾರೆ. ಹೀಗೆ ಮದುವೆ ಮಾಡೋದ್ರಿಂದಲೇ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುತ್ತಾರೆ ತಜ್ಞರು. ನಗರ ಪ್ರದೇಶದ ಜನರು ತಳುಕು ಬಳುಕಿನ ಜೀವನವನ್ನು ಪ್ರದರ್ಶನ ಮಾಡಿ ಮನೆಯ ಉಳಿದ ಹೆಣ್ಣುಮಕ್ಕಳನ್ನೂ ಬುಟ್ಟಿಗೆ ಹಾಕಿಕೊಳ್ತಾರೆ. ಕೆಲವು ದಿನಗಳ ನಂತರ ಮರ್ಯಾದೆಯನ್ನು ಮೀರಿ ಮದುವೆ ಸಂಸಾರ ಶುರು ಮಾಡ್ತಾರೆ. ಈ ಪ್ರಕರಣದಲ್ಲೂ ಅದೇ ರೀತಿ ಆಗಿದ್ದು, ನಾದಿನಿಯ ಬಂಧನ ಆದ ಬಳಿಕ ಎಲ್ಲವೂ ಬಯಲಾಗಬೇಕಿದೆ. ಇದೀಗ ಆರೋಪಿ ಚೌಡೇಶ್‌ನನ್ನ ಬಂಧಿಸಿರುವ ನೆಲಮಂಗಲ ಗ್ರಾಮಾಂತರ ಪೊಲೀಸರು ಕೊಲೆ ಹಿಂದಿನ ನಿಖರ ಕಾರಣ ಹುಡುಕುವ ಕೆಲಸಕ್ಕೆ ಕೈ ಹಾಕಿದ್ದಾರೆ. ಆದರೆ ಏನನ್ನೂ ತಿಳಿಯದೆ ಅಜ್ಜನ ಮನೆಯಲ್ಲಿ ಮಕ್ಕಳಿಬ್ಬರು ಅನಾಥರಾಗಿದ್ದಾರೆ.

Related Posts

Don't Miss it !