‘ಮುಖ್ಯಮಂತ್ರಿಗೆ ಟೆಸ್ಟಿಂಗ್​ ಟೈಂ’ ಕೇವಲ ಆರೇಳು ತಿಂಗಳು ಮಾತ್ರಾನಾ..?

ಬಿಎಸ್​ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದರು. ಆ ಬಳಿಕ ಬಿಜೆಪಿ ಪಕ್ಷದೊಳಗೆ ಅಸಮಾಧಾನದ ಹೊಗೆ ಎದ್ದಿದ್ದು, ಬಹಿರಂಗ ಆಗಿಲ್ಲ ಎನ್ನುವುದು ಬಿಜೆಪಿ ಮೂಲಗಳ ಮಾಹಿತಿ. ಸಿಎಂ ರೇಸ್​ನಲ್ಲಿದ್ದ ಅರವಿಂದ್​ ಬೆಲ್ಲದ್​ ಇನ್ನೂ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಹಿಂದುತ್ವ ಹಿನ್ನೆಲೆಯಲ್ಲಿರುವ ಮಂತ್ರಿ ಮಂಡಲ ರಚನೆ ಆಗ್ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಬೇರೆ ಆಗುತ್ತದೆ ಎಂದು ಬಸನಗೌಡ ಪಾಟೀಲ್​ ಯತ್ನಾಳ್​ ಎಚ್ಚರಿಸಿದ್ದಾರೆ. ದೆಹಲಿ ಪ್ರವಾಸ ಕೈಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಅಮಿತ್​ ಷಾ ಟೆಸ್ಟಿಂಗ್​ ಟೈಂ ಎಂದಿದ್ದಾರೆ ಎಂದು ಸ್ವತಃ ಸಿಎಂ ಹೇಳಿದ್ದರು. ಈ ನಡುವೆ ಮುಖ್ಯಮಂತ್ರಿ ಆಗಿ ಆರೇಳು ತಿಂಗಳು ಮಾತ್ರ ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿ ಇರಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದ್ದಾರೆ.

ಗಡ್ಡಧಾರಿ ವ್ಯಕ್ತಿ ಮುಖ್ಯಮಂತ್ರಿ ಆಗಲಿದ್ದಾರೆ..!

ಕರ್ನಾಟಕ ರಾಜ್ಯದ ಗದ್ದುಗೆ ಏರಲಿದ್ದಾರೆ ಗಡ್ಡಧಾರಿ ವ್ಯಕ್ತಿ, ಇನ್ನೂ ಕೆಲವೇ ತಿಂಗಳುಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಆಗೋದು ಖಚಿತ ಎನ್ನುವ ಭವಿಷ್ಯ ಹೊರಬಿದ್ದಿದೆ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಬಾಕಿ ಇರುವ ಕಾಲಾವಧಿ ಪೂರ್ಣಗೊಳಿಸಲ್ಲ ಎಂದು ಪ್ರಸ್ತುತ ರಾಜ್ಯ ರಾಜಕಾರಣ ಕುರಿತು ಭವಿಷ್ಯ ನುಡಿಯಲಾಗಿದೆ. ಸುಕ್ಷೇತ್ರ ಮೈಲಾರದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಭವಿಷ್ಯ ನುಡಿದ್ದಿದ್ದು, ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಅವರು ಕೇವಲ 6 ರಿಂದ 7 ತಿಂಗಳುಗಳ ಕಾಲ ಮಾತ್ರ ರಾಜ್ಯಭಾರ ಮಾಡ್ತಾರೆ. ಮಾರ್ಚ್ ತಿಂಗಳಲ್ಲಿ ಗಡ್ಡಧಾರಿ ವ್ಯಕ್ತಿ ಸಿಎಂ ಆಗ್ತಾರೆ ಎಂದಿದ್ದಾರೆ.

ಮೈಲಾರಲಿಂಗೇಶ್ವರ ಭವಿಷ್ಯವಾಣಿ ಸುಳ್ಳಾಗಿಲ್ಲ..!

2022ರ ಮಾರ್ಚ್​ ವೇಳೆಗೆ ಗಡ್ಡಧಾರಿ ವ್ಯಕ್ತಿ ಈ ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡ್ತಾರೆ ಎಂದು ವೆಂಕಪ್ಪಯ್ಯ ಒಡೆಯರ್​ ಭವಿಷ್ಯ ನುಡಿದಿದ್ದಾರೆ. ಮೈಲಾರಲಿಂಗೇಶ್ವರನ ಭವಿಷ್ಯವಾಣಿ ಎಂದೂ ಕೂಡ ಸುಳ್ಳಾಗಿಲ್ಲ ಎಂಬ ಪ್ರತೀತಿ ಇದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರ ಕ್ಷೇತ್ರದ ಧರ್ಮಕರ್ತರು ಭವಿಷ್ಯ ನುಡಿಯುತ್ತಾರೆ. ಅವರು ನುಡಿಯುವ ಭವಿಷ್ಯವಾಣಿ ಎಂದೂ ಸುಳ್ಳಾಗುವುದಿಲ್ಲ ಎನ್ನುವುದು ಬಳ್ಳಾರಿ, ಹಾವೇರಿ, ವಿಜಯನಗರ ಸೇರಿದಂತೆ ಆಂಧ್ರಪ್ರದೇಶದಲ್ಲೂ ಜನರ ನಂಬಿಕೆಯಾಗಿದೆ.

ಶಾಪ ವಿಮೋಚನೆಗಾಗಿ ರುದ್ರಸ್ನಾನ ಮಾಡಿದ್ದ ಡಿಕೆಶಿ..!

2017ರಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದ್ದ ಕಾರ್ಣಿಕೋತ್ಸವಕ್ಕೆ ಡಿ.ಕೆ ಶಿವಕುಮಾರ್​ ಭಾಗವಹಿಸಿದ್ದರು. ಆ ಸಮಯದಲ್ಲಿ ದೇವಸ್ಥಾನದ ಬಳಿಕ ಹೆಲಿಕಾಪ್ಟರ್​ನಲ್ಲಿ ಬಂದಿದ್ದರು. ಆ ಬಳಿಕ ಡಿ.ಕೆ ಶಿವಕುಮಾರ್​ ಸಾಕಷ್ಟು ಸಂಕಷ್ಟಗಳಿಗೆ ಗುರಿಯಾಗಬೇಕಾಯ್ತು. ಮೈಲಾರಲಿಂಗೇಶ್ವರ್ ಕ್ಷೇತ್ರದಲ್ಲಿ ದೇವಸ್ಥಾನದ ಮೇಲೆ ಹೆಲಿಕಾಪ್ಟರ್​ ಹಾರಾಟ ಮಾಡುವಂತಿಲ್ಲ. ನೀವು ಹೆಲಿಕಾಪ್ಟರ್​ನಲ್ಲಿ ಬಂದಿದ್ದರಿಂದ ದೇವರ ಶಾಪ ತಟ್ಟಿದೆ ಎನ್ನುವ ಮಾತು ಕೇಳಿಬಂದಿತ್ತು. ಆ ಬಳಿಕ ಮತ್ತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್​, ರುದ್ರಸ್ನಾನ ಮಾಡಿ ಬೆಳ್ಳಿಯ ಹೆಲಿಕಾಪ್ಟರ್​ ಆಕೃತಿಯನ್ನು ದೇವಸ್ಥಾನಕ್ಕೆ ಕೊಟ್ಟು ಶಾಪವಿಮೋಚನೆ ಮಾಡಿಸಿಕೊಂಡಿದ್ದರು.

ಯಾರು ಆ ಗಡ್ಡಧಾರಿ ಮುಖ್ಯಮಂತ್ರಿ..!

ಮೈಲಾರ ಲಿಂಗೇಶ್ವರನ ಭವಿಷ್ಯವಾಣಿಯಂತೆ ಮುಂದಿನ ವರ್ಷ ಮಾರ್ಚ್​ ವೇಳೆಗೆ ಗಡ್ಡಧಾರಿ ಮುಖ್ಯಮಂತ್ರಿ ಆಗಬೇಕಿದೆ. ಆ ಗಡ್ಡಧಾರಿ ಮುಖ್ಯಮಂತ್ರಿ ಯಾರು ಎನ್ನುವುದನ್ನು ಹುಡುಕಿದರೆ ಸಿಗುವುದು ಬಹುತೇಕ ವಿರಳ ನಾಯಕರು ಮಾತ್ರ. ಈಗಾಗಲೇ ಪ್ರಮುಖ ಸ್ಥಾನದಲ್ಲಿರುವ ವಿಧಾನಸಭಾ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತ್ರ. ಇವರಿಬ್ಬರಲ್ಲಿ ಯಾರಿಗೆ ಮುಖ್ಯಮಂತ್ರಿ ಆಗುವ ಅದೃಷ್ಟ ಇದೆ ಎನ್ನುವ ಬಗ್ಗೆ ಕುತೂಹಲ ಮೂಡಿಸುತ್ತಿದೆ.

Related Posts

Don't Miss it !