ಹುಟ್ಟುವ ಮುಂಚೆ ತಂದೆ ಸಾವು.. ನಾಲ್ಕು ವರ್ಷದ ಬಳಿಕ ತಾಯಿ ಸಾವು.. Killed By BBMP..!!

ಬೆಂಗಳೂರಲ್ಲಿ BBMP ಕಸದ ಲಾರಿಗೆ ಮತ್ತೊಂದು ಜೀವ ಬಲಿ ಆಗಿದೆ. ಕೆಲಸ ಮುಗಿಸಿ ಜಿಟಿಜಿಟಿ ಮಳೆಯಲ್ಲಿ ಮಗನ್ನು ಕಾಣಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದ 39 ವರ್ಷದ ಮಹಿಳೆ ಡಿ ಪದ್ಮಿನಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ತೆರಳುತ್ತಿದ್ದ ಪದ್ಮಿನಿ ಅವರ ಸ್ಕೂಟರ್​ಗೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದಗದಾರೆ. BBMP ಕಸದ ಲಾರಿ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಕಳೆದ 30 ದಿನಗಳ ಅಂತರದಲ್ಲಿ ಬಿಬಿಎಂಪಿ ಕಸದ ಲಾರಿ ಬಲಿ ಪಡೆಯುತ್ತಿರುವ ಮೂರನೇ ಜೀವ ಎಸ್‌ಬಿಐ ಬ್ಯಾಂಕ್‌ ಉದ್ಯೋಗಿ ಪದ್ಮಿನಿ. ಮಾರ್ಚ್​ 21ರಂದು ಹೆಬ್ಬಾಳದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಅಕ್ಷಯಾಳಿಗೆ ಗುದ್ದಿದ್ದಕಸದ ಲಾರಿ ಪುಟ್ಟ ಬಾಲಕಿಯನ್ನು ಬಲಿ ಪಡೆದಿತ್ತು. ಆ ಬಳಿಕ ಮಾರ್ಚ್​ 30ರಂದು ಬಾಗಲೂರಿನಲ್ಲಿ ರಾಮಯ್ಯ ಎಂಬ ವೃದ್ಧನಿಗೆ ಗುದ್ದಿದ್ದ ಬಿಬಿಎಂಪಿ ಕಸದ ಲಾರಿ ಎರಡನೇ ಬಲಿ ಪಡೆದಿತ್ತು. ಇದೀಗ ಏಪ್ರಿಲ್ 18ರಂದು ನಾಯಂಡಹಳ್ಳಿ ಬಳಿ ಪದ್ಮಿನಿ ಎಂಬುವರನ್ನು ಮೂರನೇ ಬಲಿ ಪಡೆದಿದೆ.

ಹುಟ್ಟುವ ಮುಂಚೆ ತಂದೆ ಕಳೆದುಕೊಂಡಿದ್ದ ಕಂದಮ್ಮ ಅನಾಥ..!

ದೆಹಲಿ ಮೂಲದ ಡಿ ಪದ್ಮಿನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿ ಆಗಿದ್ದರು. ಚಂದ್ರಾ ಲೇಔಟ್ ಬ್ರಾಂಚ್‌ನಲ್ಲಿ‌ ಡೆಪ್ಯುಟಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 5 ವರ್ಷ ಹಿಂದೆ ಮದುವೆಯಾಗಿದ್ದ ಡಿ ಪದ್ಮಿನಿ ಮದುವೆ ಆದ ಕೆಲವೇ ದಿನಗಳಲ್ಲಿ ಗಂಡನನ್ನು ಕಳೆದುಕೊಂಡಿದ್ದರು. ಆದರೆ ಮದುವೆಗೆ ಸಾಕ್ಷಿ ಎಂಬಂತೆ ದುರಂತಕ್ಕೂ ಮೊದಲು ಗರ್ಭಿಣಿ ಆಗಿದ್ದರು. ಹೆಣ್ಣು ಮಗು ಜನಿಸಿದ ಬಳಿಕ ಪೋಷಕರ ಜೊತಗೆ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದರು. ಇಂದು ಕೆಲಸ ಮುಗಿಸಿಮನೆ ಕಡೆಗೆ ತೆರಳುವಾಗ ಈ ದುರಂತ ಸಂಭವಿಸಿದೆ. ಭೂಮಿಗೆ ಬರುವ ಮುನ್ನವೇ ತಂದೆಯನ್ನು ಕಳೆದುಕೊಂಡಿದ್ದ ಕಂದಮ್ಮ ಕೇವಲ ನಾಲ್ಕು ವರ್ಷಕ್ಕೆ ಅಮ್ಮನ ಪ್ರೀತಿ ಕಳೆದುಕೊಂಡು ಅನಾಥವಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಶವ ರವಾನೆ ಮಾಡಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಬಿಬಿಎಂಪಿ ಆಡಳಿತ ದಿಕ್ಕು ತಪ್ಪಿದೆ. ಸರ್ಕಾರದ ನಿಯಂತ್ರಣ ಇಲ್ಲವಾಗಿದೆ..!!

ಕಳೆದ 30 ದಿನಗಳ ಅಂತರದಲ್ಲಿ ಬಿಬಿಎಂಪಿ ಕಸದ ಲಾರಿ ಮೂವರನ್ನು ಬಲಿ ಪಡೆದಿದೆ ಎಂದರೆ ಎಲ್ಲೋ ಒಂದು ಕಡೆ ಸಮಸ್ಯೆ ಇದೆ ಎಂದೇ ಅರ್ಥ. ಒಮ್ಮೆ ಅಪಘಾತ ಆದರೆ ಆಕಸ್ಮಿಕ ಎನ್ನಬಹುದು. ಆದರೆ ಕಳೆದ 30 ದಿನಗಳ ಒಳಗೆ ಮೂರು ಕಡೆ ಅಪಘಾತ. ನಡೆದಿರುವುದು ಬಿಬಿಎಂಪಿ ಕಸದ ಲಾರಿ ಚಾಲಕರ ನಿರ್ಲಕ್ಷ್ಯ ಎದ್ದು ಕಾಣುವಂತೆ ಮಾಡಿದೆ. ಬಿಬಿಎಂಪಿ ಅಧಿಕಾರಿಗಳು ಕಸ ಸಂಗ್ರಹ ಹಾಗೂ ಸಾಗಾಟ ಮಾಡುವ ಗುತ್ತಿಗೆದಾರರು ಹಾಗೂ ವಾಹನ ಚಾಲಕರ ಮೇಲಿನ ಹಿಡಿತ ಕಳೆದುಕೊಂಡಿದೆ. ಈಗಾಗಲೇ ಕಳೆದ 2 ವರ್ಷಗಳಿಂದ ಬಿಬಿಎಂಪಿಯಲ್ಲಿ ಜನ ಪ್ರತಿನಿಧಿಗಳು ಇಲ್ಲದೆ ಅಧಿಕಾತಿಗಳು ಆಡಿದ್ದೇ ಆಟ ಎನ್ನವಂತಾಗಿದೆ. ಹೀಗಾಗಿ ಈ ದುರಂತಗಳು ನಡೆಯುತ್ತಿವೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿ ಎಂಜಿನಿಯರ್.

ಈ ವರ್ಷ ಬೆಂಗಳೂರಲ್ಲಿ ಇನ್ನಷ್ಟೂ ಸಾವು – ನೋವು ಕಟ್ಟಿಟ್ಟ ಬುತ್ತಿ..!!

ಬೆಂಗಳೂರು ಎಂದರೆ ಗುಂಡಿ ಬಿದ್ದ ರಸ್ತೆಗಳು, ಅವೈಜ್ಞಾನಿಕ ಹಂಪ್‌ಗಳು. ಮನಸೋ ಇಚ್ಛೆ ತಡೆದುದಂಡ ವಸೂಲಿ ಮಾಡುವ ಟ್ರಾಫಿಕ್ ಪೊಲೀಸರು. ಒಂದು ವೇಳೆ ಕಸದ ಲಾರಿಗಳನ್ನು ತಡೆದು Drunk and Drive ತಪಾಸಣೆ ಮಾಡಿದ್ರೆ ದಿನಕ್ಕೆ ಸಾವಿರಾರು ರೂಪಾಯಿ ದಂಡ ವಸೂಲಿ ಮಾಡಬಹುದು. ಜೊತೆಗೆ ಈ ರೀತಿಯ ಅಮಾಯಕರು ಬಲಿಯಾಗುವುದನ್ನು ಪೊಲೀಸರೇ ತಡೆಯಬಹುದು. ಆದರೆ ಬಿಬಿಎಂಪಿಗಾಗಿ ಕೆಲಸ ಮಾಡ್ತಾರೆ ಎನ್ನುವ ಕಾರಣಕ್ಕೆ ಪೊಲೀಸರು ತಪಾಸಣೆ ಮಾಡುವುದಿಲ್ಲ. ಹಾಗಾಗಿ ರಾಜಾರೋಷವಾಗಿ ದಿನಪೂರ್ತಿ ಕುಡಿದು ವಾಹನ ಚಾಲನೆ ಮಾಡ್ತಾರೆ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ. ಇನ್ನೂ ಈಗಾಗಲೇ ಬೆಂಗಳೂರಿನಲ್ಲಿ ಶುರುವಾಗಿರುವ ಮಳೆ ಅನಾಹುತಗಳನ್ನು ಸೃಷ್ಟಿಸಲು ಶುರು ಮಾಡಿದ್ದು, ಎಲ್ಲೆಲ್ಲಿ ಮರಗಳು ಉರುಳಿ ಬಿದ್ದು ಅದೆಷ್ಟು ಜನರ ಪ್ರಾಣವನ್ನು ಬಲಿ ಪಡೆಯುತ್ತವೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ. ಅಷ್ಟರೊಳಗಾಗಿ ಬಿಬಿಎಂಪಿ ಹಾಗು‌ ಸರ್ಕಾರ ಎಚ್ಚೆತ್ತುಕೊಂಡರೆ ಸಾವು ನೋವು ತಪ್ಪಿಸಬಹುದಾಗಿದೆ.

Related Posts

Don't Miss it !