ಭಾರತ ಬದಲಾಗುತ್ತೆ ಎಂದಿದ್ದರು.. ಬೆಂಕಿ ಪೊಟ್ಟಣದ ದರವೂ ಬದಲಾಯ್ತು..!

ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರ ಹಿಡಿಯುವ ವೇಳೆ ಭಾರತ ಬದಲಾಗುತ್ತದೆ. ಹೊಸ ದಿಕ್ಕಿನಲ್ಲಿ ಭಾರತವನ್ನು ತೆಗೆದುಕೊಂಡು ಹೋಗ್ತೇವೆ ಎಂದಿದ್ದರು. ಆದರೆ ಈ ಪ್ರಮಾಣದಲ್ಲಿ ಬದಲಾವಣೆ ಆಗಲಿದೆ‌ ಎನ್ನುವುದನ್ನು ಭಾರತೀಯರಲ್ಲಿ ಯಾರೊಬ್ಬರೂ ಊಹಿಸಿರಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಬದಲಾವಣೆ ಕಾಣಿಸುತ್ತಿದೆ. ಭಾರತದಲ್ಲಿ ಬೆಂಕಿಪೊಟ್ಟಣದ ಬೆಲೆಯೂ ಬರೋಬ್ಬರಿ 14 ವರ್ಷಗಳ ನಂತರ ಬೆಲೆ ಏರಿಕೆ‌ ಕಂಡಿದೆ. 1 ರೂಪಾಯಿ ಇದ್ದ ಬೆಂಕಿ ಪೊಟ್ಟಣದ ಬೆಲೆ ಇನ್ಮುಂದೆ ಡಿಸೆಂಬರ್​ 1 ರಿಂದ ಎರಡು ರೂಪಾಯಿಗಳು. ಈಗಾಗಲೇ ಮ್ಯಾಚ್​ ಬಾಕ್ಸ್​ ಸಂಗ್ರಹ ಕೂಡ ಅಕ್ರಮವಾಗಿ ಎಗ್ಗಿಲ್ಲದೆ ಸಾಗಿದೆ ಎನ್ನುವುವ ಮಾಹಿತಿಗಳೂ ಬರುತ್ತಿವೆ. ದೇಶಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ತೇವೆ ಬೆಂಕಿಪೊಟ್ಟಣ ಎರಡು ರೂಪಾಯಿ‌ ಆಗಿದ್ದು ಏನು ಮಹಾ ಎನ್ನುವ ಆಲೋಚನೆ ನಿಮ್ಮದಾಗಿದ್ದರೆ ಧನ್ಯವಾದ.

‘ಅಚ್ಛೇದಿನ’ದ ಕನಸಲ್ಲಿ ಕಚ್ಚೆ ಕಳಚುವ ಭೀತಿ..!

ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಆಗಿ ಘೋಷಣೆ ಆದ ಬಳಿಕ ಚುನಾವಣಾ ಪ್ರಚಾರದಲ್ಲಿ ಅಬ್ಬರಿಸಿದ್ರು. ಕಾಂಗ್ರೆಸ್ ಸರ್ಕಾರ ಮಾಡಿದ್ದ ಹಗರಣಗಳನ್ನು ಜನರ ಮುಂದೆ ಬಿಚ್ಚಿಟ್ರು. ಯುಪಿಎ ಎರಡನೇ ಅವಧಿಯಲ್ಲಿ ನಡೆದಿದ್ದ ಟೆಲಿಕಾಂ ಹಗರಣ, ಕಾಮನ್‌ವೆಲ್ತ್ ಹಗರಣ ಸೇರಿದಂತೆ ಕಾಂಗ್ರೆಸ್ ಪಕ್ಷದ ಅವತಾರಗಳು ನರೇಂದ್ರ ಮೋದಿ ಭಾಷಣಕ್ಕೆ ಆಹಾರವಾಗಿದ್ದವು. ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದರೆ, ಇಡೀ ಜನಸ್ತೋಮವೇ ಉಘೇ ಎನ್ನುವಂತೆ ಭಾಸವಾಗ್ತಿತ್ತು. ನರೇಂದ್ರ ಮೋದಿ ಒಂದೊಂದೇ ಅಂಶಗಳ ಆಧಾರದ ಮೇಲೆ ಮನಮೋಹನ್ ಸಿಂಗ್ ಸರ್ಕಾರವನ್ನು ತೆಗಳುತ್ತಿದ್ದರೆ, ಮೋದಿ ಹೇಳಿದ್ದೆಲ್ಲವೂ ಸತ್ಯ ಸತ್ಯ ಎನಿಸುವಂತಿತ್ತು. ಆದ್ರೆ ನಾವು ಅಧಿಕಾರಕ್ಕೆ ಬಂದ ಬಳಿಕ ಭಷ್ಟರನ್ನು ಕಂಬಿ ಹಿಂದೆ ಸೇರಿಸುತ್ತೇವೆ ಎಂದಿದ್ದರು. ಅದ್ಯಾರೆಲ್ಲಾ ಜೈಲು ಸೇರಿದ್ದಾರೆ ಎನ್ನುವುದನ್ನು ಸಂಬಂಧಪಟ್ಟವರೇ ಹೇಳಬೇಕಿದೆ.

Read This;

ಪ್ರಧಾನಿ ಮೋದಿ ಬೇಸರ ಹುಟ್ಟಿಸಿದ್ದು ಯಾಕೆ..?

ಯುಪಿಎ ಸರ್ಕಾರದ ವಿರುದ್ಧ ಅಬ್ಬರಿಸಿದ್ದನ್ನು ನೋಡಿದ ಮತದಾರ ನರೇಂದ್ರ ಮೋದಿ ಅವರದ್ದು ವಿಭಿನ್ನ ಸರ್ಕಾರ ಎನ್ನುವ ನಿರೀಕ್ಷೆ ಮಾಡಿದ್ದರು. ಆದರೆ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಮೊದಲು ಮಾಡಿದ್ದ ಕೆಲಸ ಎಂದರೆ ವಿರೋಧ ಮಾಡಿಕೊಂಡೇ ಬಂದಿದ್ದ ಯುಪಿಎ ಅವಧಿಯ ಆಧಾರ್ ಜಾರಿ ಮಾಡಿದರು. ಆ ಬಳಿಕ ಮತ್ತೊಂದು ಯುಪಿಎ ಸರ್ಕಾರದ ಜಿಎಸ್‌ಟಿಯನ್ನು ಅಳವಡಿಸಿಕೊಂಡರು. ಇನ್ನೂ ಸ್ವಚ್ಛ ಭಾರತ್, ನೋಟ್ ಬ್ಯಾನ್ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡಿದರು. ಅದರಿಂದ ಜನರಿಗೇನು ಹೆಚ್ಚಿನ ಪ್ರಯೋಜನ ಆಗಲಿಲ್ಲ. ಇನ್ನು ಜನರ ಅನುಕೂಲಕ್ಕೆ ಬಂದಿದ್ದು ಎಂದರೆ ಕಿಸಾನ್ ಸಮ್ಮಾನ್ ಯೋಜನೆ, 2019ರ ಲೋಕಸಭಾ ಚುನಾವಣೆಗೂ ಮುನ್ನ ವಾರ್ಷಿಕ ರೈತರ ಅಕೌಂಟ್ ಹಣ ಹಾಕುವ ಯೋಜನೆಯನ್ನು ಆರು ತಿಂಗಳ ಹಿಂದಿನಿಂದ ಜಾರಿ ಮಾಡಿದರು. ಆದರೆ ಎಡಗೈಲಿ ಕೊಟ್ಟು, ಈಗ ಅಸಲು ಬಡ್ಡಿ ಸಮೇತ ವಾಪಸ್​ ಕಿತ್ತುಕೊಳ್ಳುತ್ತಿದ್ದಾರೆ. ಹೆಸರು ಬದಲಾವಣೆ ಮಾಡುವುದೇ ಅಭಿವೃದ್ಧಿ ಎನ್ನುವ ಅಜೆಂಡಾ ಪಾಲಿಸುತ್ತಿದ್ದಾರೆ. ಮಾಧ್ಯಮಗಳೂ ಕೂಡ ಕಾನೂನು ಕಡಿವಾಣದ ಭಯದಲ್ಲಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ

Also Read;

ನೋಟ್​ ಬ್ಯಾನ್​ ಹಾಗೂ ಅವೈಜ್ಞಾನಿಕ ಜಿಎಸ್​ಟಿ..!

ದೇಶದ ಆರ್ಥಿಕತೆ ಸಮೃದ್ಧವಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತದ ಜಿಡಿಪಿ ಪಾತಾಳ ಸೇರಿ ಆಗಿದೆ. ಡಾಲರ್​​ ಎದುರು ಭಾರತದ ರೂಪಾಯಿ ಮೌಲ್ಯ ಗಣನೀಯವಾಗಿ ಕುಸಿದು ಹೋಗಿದೆ. ಪೆಟ್ರೋಲ್​, ಡೀಸೆಲ್​ ಬೆಲೆ ಗಗನ ಮುಟ್ಟಿದೆ. ಅಡುಗೆ ಅನಿಲ ಕೊಟ್ಟು ತಾಯಂದಿರ ಕಣ್ಣೀರು ಒರೆಸಿದ್ದೇನೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಸಬ್ಸಿಡಿಯನ್ನು ಮೂಲೆಗೆ ಎಸೆದು ಸಾವಿರದತ್ತ ದರ ಏರಿಕೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಏರಿಕೆ ಎನ್ನುತ್ತ ಕೇಂದ್ರ ಸರ್ಕಾರದ ತೆರಿಗೆ ಹೆಚ್ಚಳ ಮಾಡುತ್ತಿರುವುದು ಬಹಿರಂಗ ಆಗುತ್ತಿದೆ. ಇನ್ನು ಆರ್​ಬಿಐನಲ್ಲಿ ಆಪತ್ಕಾಲಕ್ಕೆ ಎಂದು ಇಟ್ಟಿದ್ದ ಮೀಸಲು ನಿಧಿಯ 1 ಲಕ್ಷದ 76 ಸಾವಿರದ 51 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಪಡೆದಿದ್ದು ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯಲಿದೆ. ಈಗಾಗಲೇ ಜಿಎಸ್​ಟಿ ಜಾರಿ ಮಾಡಿರುವ ರಾಷ್ಟ್ರಗಳಲ್ಲಿ ಏಕರೂಪದ ತೆರಿಗೆ ವಿಧಿಸುವ ಮೂಲಕ ಹೇಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಾರೆ ಎನ್ನುವುದನ್ನು ಮನಗಾಣದ ಪ್ರಧಾನಿ ನರೇಂದ್ರ ಮೋದಿ ಅಂಡ್​ ಟೀಂ ದೇಶ ಮುನ್ನಡೆಸುವಲ್ಲಿ ವಿಫಲವಾಗಿದ್ದಾರೆ ಎನ್ನುವುದನ್ನು ಆರ್​ಬಿಐ ಗೌವರನರ್ ಆಗಿದ್ದ ಊರ್ಜಿತ್​ ಪಟೇಲ್​ (ಸ್ವತಃ ಮೋದಿ ನೇಮಿಸಿದ್ದ ಊರ್ಜಿತ್ ಪಟೇಲ್​) ರಾಜೀನಾಮೆ ಹಾಗೂ ಆರ್ಥಿಕ ಸಲಹೆಗಾರರಾಗಿದ್ದ ಕೆ.ವಿ ಸುಬ್ರಹ್ಮಣಿಯನ್​ ರಾಜೀನಾಮೆ ಮೂಲಕ ಒಪ್ಪಿಕೊಂಡಂತಾಗಿದೆ.

Related Posts

Don't Miss it !