ಹೊಸ ವರ್ಷಕ್ಕೂ ಮುನ್ನ ಶಾಕ್​ ಕೊಟ್ಟು, ಸಂಕ್ರಾಂತಿಗೂ ಮುನ್ನ ಶಾಕ್​ ಆದ್ರು..! ಅಸಲಿ ವರ್ಸಸ್​ ನಕಲಿ..

ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿತ್ತು. ಆದರೆ ಜನರು ರಾತ್ರಿ 10 ಗಂಟೆ ತನಕ ಹೊರಕ್ಕೆ ಹೋಗಿದ್ದವರು, ಆ ಬಳಿಕ ತಮ್ಮ ಮನೆಯಲ್ಲೇ ಆಪ್ತರ ಜೊತೆಗೆ ಹೊಸ ವರ್ಷಾಚರಣೆ ಮಾಡಿದ್ದರು. ಇದೇ ರೀತಿ ಹೊಸ ವರ್ಷ ಆಚರಣೆ ಮಾಡಲು ಸಿದ್ದವಾಗ್ತಿದ್ದ ಕುಟುಂಬಕ್ಕೆ ಪೊಲೀಸರಿಂ ಶಾಕ್​ ಎದುರಾಗಿತ್ತು. ನಾವು ಪೊಲೀಸರು ಎಂದು ಗನ್​ ತೋರಿಸಿ, ಸರ್ಚ್​ ವಾರೆಂಟ್​ ತೋರಿಸಿ ಮನೆಗೆ ಭೇಟಿ ನೀಡಿದ್ದ ತಂಡವೊಂದು, ಕಳ್ಳನನ್ನೂ ಜೊತೆಯಲ್ಲೇ ಕರೆದುಕೊಂಡು ಬಂದಿದ್ದರು. ಈತ ಕಳವು ಮಾಡಿದ್ದ ಹಣ, ಚಿನ್ನಾಭರಣವನ್ನು ನಿಮಗೆ ಕೊಟ್ಟಿದ್ದಾನೆ ಎನ್ನುವ ಮಾಹಿತಿ ಬಂದಿದೆ. ನಿಮ್ಮ ಮನೆಯ ಶೋಧ ನಡೆಸಬೇಕು ಎಂದೇಳಿದ ತಂಡ, ಇಡೀ ಮನೆಯನ್ನು ಜಾಲಾಡಿತ್ತು. ಆ ಬಳಿಕ ಮನೆಯಲ್ಲಿ ಸಿಕ್ಕ 500 ಗ್ರಾಂ ಚಿನ್ನಾಭರಣ ಹಾಗೂ 19 ಲಕ್ಷ ರೂಪಾಯಿ ನಗದು ಹಣವನ್ನು ತೆಗೆದುಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿತ್ತು. ಮನೆಯಿಂದ ಹೊರಡುವ ಮುನ್ನ ಟೀಂ ಕೊಟ್ಟ ಸುಳಿವು ತಿಪಟೂರು ಪೊಲೀಸ್​ ಠಾಣೆ.

ಹೊಸ ವರ್ಷದ ಶಾಕ್​ ಸಿಕ್ಕಿದ್ದು ಯಾರಿಗೆ..? ಎಲ್ಲಿ..?

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ ವ್ಯಾಪ್ತಿಯ ಬೋವಿಪಾಳ್ಯದಲ್ಲಿ ವಾಸವಾಗಿರುವ ಸಿವಿಲ್​ ಎಂಜಿನಿಯರ್​ ಸಮಯ್​​ನಾಯ್ಕ್​​​ ಎಂಬುವರ ಮನೆಗೆ ಪೊಲೀಸರು ಎಂಟ್ರಿ ಕೊಟ್ಟು ಸಿಕ್ಕಿದ್ದೆಲ್ಲವನ್ನೂ ದೋಚಿ ಎಸ್ಕೇಪ್​ ಆಗಿದ್ದರು. ಕೊನೆಯಲ್ಲಿ ಸಮಯ್​​ ನಾಯ್ಕ್​ ಪುತ್ರ ಮಂಜುನಾಥ್​​ನನ್ನು ಕಾರಿನಲ್ಲಿ ಕೂರಿಸಿಕೊಂಡು 20 ಲಕ್ಷ ಹಣ ಕೊಟ್ಟರೆ ಕೇಸ್​​ ಹಾಕುವುದಿಲ್ಲ, ಬಿಟ್ಟು ಬಿಡುತ್ತೇವೆ ಎಂದು ಆಫರ್​ ನೀಡಿದ್ದರು. ಮಂಜುನಾಥ್​ ಒಪ್ಪಿದ್ದಾಗ ನಾವು ತಿಪಟೂರು ಠಾಣೆ ಪೊಲೀಸರು, ನೀವು ಅಲ್ಲಿಗೆ ಬನ್ನಿ ಎಂದು ಹೇಳಿ ಹೋಗಿದ್ದರು. ಸಮಯ್​ನಾಯ್ಕ್​ ಕೂಡ ಅವರು ಹೇಳಿದ್ದನ್ನು ನಂಬಿ ತಿಪಟೂರು ಠಾಣೆಗೆ ಭೇಟಿ ನೀಡಿದ್ದರು. ಅಲ್ಲಿ ಗೊತ್ತಾದ ಅಸಲಿ ಸತ್ಯವೆಂದರೆ, ಪೊಲೀಸರ ವೇಶದಲ್ಲಿ ಬಂದಿದ್ದ ತಂಡದಲ್ಲಿ ಯಾವುದೇ ಪೊಲೀಸರು ಇರಲಿಲ್ಲ. ಎಲ್ಲರೂ ನಕಲಿ ಪೊಲೀಸರು, ನಕಲಿ ಕಳ್ಳ ಎನ್ನುವ ವಿಚಾರ ಗೊತ್ತಾಗಿತ್ತು. ಪೊಲೀಸರ ಸೋಗಿನಲ್ಲಿ ಮನೆಗೆ ಬಂದು ಮಕ್ಮಲ್​ ಟೋಪಿ ಹಾಕಿದ್ದಾರೆ ಎನ್ನುವ ನಿಜಾಂಶ ಗೊತ್ತಾಗಿತ್ತು. ಅಲ್ಲಿಂದ ನೇರವಾಗಿ ಮಹಾಲಕ್ಷ್ಮೀ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದ ಸಮಯ್​​ನಾಯ್​​​​ಗೆ ಇದೀಗ ಅಚ್ಚರಿ ಎದುರಾಗಿದೆ. ಕಳವು ಮಾಡಿದ್ದ ನಕಲಿ ಪೊಲೀಸ್​ ಟೀಂನಲ್ಲಿ ತನ್ನ ಸಂಬಂಧಿಯೊಬ್ಬ ಇದ್ದನ್ನು ಎನ್ನುವ ವಿಚಾರ ಗೊತ್ತಾಗಿದೆ.

Read This:

ಸಿಸಿಟಿವಿ ದೃಶ್ಯ ಆಧರಿಸಿ ಖದೀಮರಿಗೆ ಖಾಕಿ ಬಲೆ..!

ದೂರು ದಾಖಲು ಮಾಡಿಕೊಂಡಿದ್ದ ಮಹಾಲಕ್ಷ್ಮೀ ಲೇಔಟ್​​ ಠಾಣೆ ಪೊಲೀಸರು, ಸಿಸಿಟಿವಿ ದೃಶ್ಯ ಆಧರಿಸಿ, ರೌಡಿ ಶೀಟರ್​ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಪೊಲೀಸರಂತೆಯೇ ಮನೆಗೆ ಎಂಟ್ರಿಕೊಟ್ಟು ಮೊಬೈಲ್​ ಕಿತ್ತುಕೊಂಡು, ಸರ್ಚ್​ ವಾರೆಂಟ್​ ತೋರಿಸಿ 2 ಗಂಟೆಗಳ ಕಾಲ ಹುಡುಕಾಡಿ ಕಳವು ಮಾಡಿದ್ದ 500 ಗ್ರಾಂ ಚಿನ್ನ ಹಾಗೂ 19 ಲಕ್ಷ ರೂಪಾಯಿ ಹಣವನ್ನೂ ಜಪ್ತಿ ಮಾಡಿದ್ದಾರೆ. ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಇರುವ ಮಾಹಿತಿ ಪಡೆದಿದ್ದ ಖತರ್ನಾಕ್​​ ಆಸಾಮಿಗಳು ಪೊಲೀಸರ ಹೆಸರಿನಲ್ಲಿ ದರೋಡೆ ಮಾಡಿದ್ದರು. ಆದರೆ ಈ ದರೋಡೆ ಮಾಡಲು ಮೊದಲು ಅಡಿಪಾಯ ಹಾಕಿಕೊಂಟ್ಟಿದ್ದು, ಮನೆ ಮಾಲೀಕರ ಸಂಬಂಧಿಯೇ ಆಗಿದ್ದಾನೆ ಎನ್ನುವ ವಿಚಾರ ತಿಳಿದು ಸಮಯ್​​ ನಾಯ್ಕ್​​ ಹಾಗೂ ಮಂಜುನಾಥ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Also Read;

ಬ್ಯುಸಿನೆಸ್​ ಮಾಡಲು ಹಣ ಕೇಳಿದ್ದ ಸಂಬಂಧಿಕ..!

ಮಾಹಾಲಕ್ಷ್ಮೀ ಲೇಔಟ್​ ಪೊಲೀಸರು ಬಾಲಕೃಷ್ಣ, ರೋಹನ್​​, ಪುನೀತ್​, ಪೃಥ್ವಿ, ಚೇತನ್​ ಎಂಬುವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ಸಮಯ್​ ನಾಯ್ಕ್​ ಅವರ ಸಂಬಂಧಿಕನೇ ಆಗಿರುವ ರೋಹನ್​ ಬಿನ್​ ಗಣೇಶ್​​ ನಾಯ್ಕ್​, ಕೆಲವು ದಿನಗಳ ಹಿಂದೆ ಸಮಯ್​ನಾಯ್​ ಹಾಗೂ ಮಂಜುನಾಥ್​ ಬಳಿಕ ಹಣ ಕೊಡುವಂತೆ ಮನವಿ ಮಾಡಿದ್ದ. ಬ್ಯುಸಿನೆಸ್​ ಮಾಡಲು ಹಣದ ಅವಶ್ಯಕತೆ ಇದೆ ಎಂದು ಕೇಳಿಕೊಂಡಿದ್ದ. ಆದರೆ ರೋಹನ್​ಗೆ ಹಣ ನೀಡದ ಸಮಯ್​ ನಾಯ್​​, ನಮಗೆ ಹಣದ ಅವಶ್ಯಕತೆ ಇದೆ ಎಂದಿದ್ದರು. ಆದರೆ ಸಮಯ್​ನಾಯ್ಕ್​ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಇರುವುದು ​ಗೊತ್ತಿದ್ದ ಕಾರಣ, ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಬೇಕು ಎನ್ನುವ ಹಠಕ್ಕೆ ಬಿದ್ದು, ಸ್ನೇಹಿತರ ಜೊತೆಗೂಡಿ ಕಳವು ಮಾಡಲು ಪೊಲೀಸ್​ ರೇಡ್​ ಹೆಸರಿನಲ್ಲಿ ಪ್ಲ್ಯಾನ್​ ಮಾಡಿದ್ದ. ಆದರೆ ಇದೀಗ ಖಾಕಿಪಡೆ ಬಲೆಗೆ ಕೆಡವಿದ್ದು, ಎಲ್ಲರೂ ಜೈಲಿನತ್ತ ಹೊರಟಿದ್ದಾರೆ.

ಇದರಿಂದ ಗೊತ್ತಾಗಿದ್ದು..?

ಎಷ್ಟೇ ಆಪ್ತರು, ಸಂಬಂಧಿಕರಾದರೂ ಮನೆಯ ಗುಟ್ಟನ್ನು ಹೇಳಬಾರದು. ಸಮಯ ಸಂಧರ್ಭ ಬದಲಾದ ಹಾಗೆ ಆಪ್ತರೇ ದುಷ್ಮನ್​ ಆಗಬಹುದು – The Public Spot

Related Posts

Don't Miss it !