BIGBOSS: ಟಾಪ್​ 5 ಸ್ಪರ್ಧಿಗಳ ಒಂದೊಂದು ವಿಶೇಷ ಗುಣಗಳು ಏನು..!?

ಬಿಗ್​ಬಾಸ್​ ಕನ್ನಡ ಸೀಸನ್​ 8ರಲ್ಲಿ ಒಟ್ಟು ಬಿಗ್​ಬಾಸ್​ ಮನೆಯ ಒಳಕ್ಕೆ ಪ್ರವೇಶ ಪಡೆದಿದ್ದು 20 ಮಂದಿ. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಸ್ಪರ್ಧಿಗಳನ್ನು ಕಲರ್ಸ್​ ಕನ್ನಡ ಟೀಂ ಸೆಲೆಕ್ಟ್​ ಮಾಡಿತ್ತು. ಎಲ್ಲರಲ್ಲೂ ವಿಶೇಷ ಗುಣಗಳು ಇರುವ ಕಾರಣಕ್ಕೇ ಬಿಗ್​ಬಾಸ್​ ವೇದಿಕೆಯನ್ನು ಕಲ್ಪಿಸಲಾಗಿತ್ತು. ಅಂತಿಮ ವಾರಕ್ಕೆ ಬಿಗ್​ಬಾಸ್​ ಟೀಂ ಉಳಿಸಿಕೊಂಡಿದ್ದು ಕೇವಲ 5 ಸ್ಪರ್ಧಿಗಳನ್ನು ಮಾತ್ರ. ಇನ್ನುಳಿದ 15 ಮಂದಿ ಸ್ಪರ್ಧಾಳುಗಳು ಕಾಲಕ್ಕೆ ತಕ್ಕಂತೆ ಮನೆಯಿಂದ ಹೊರಕ್ಕೆ ಕಳುಹಿಸಿ ಕೊಡಲಾಯ್ತು. ಆದರೆ ಕೊನೆಯಲ್ಲಿ ಉಳಿದುಕೊಂಡ ಆ ಐದು ಮಂದಿಯಲ್ಲೂ ವಿಶೇಷ ಗುಣಗಳು ಕಾಣಿಸಿದವು. ಅದೂ ಕೂಡ ಮನೆಯಲ್ಲಿ ಕೊನೆಯ ತನಕ ಉಳಿದುಕೊಳ್ಳಲು ಕಾರಣ ಆಗಿರುತ್ತೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಬಿಗ್​ಬಾಸ್​ ವಿನ್ನರ್​ ಮಂಜು ಪಾವಗಡ..!

ಮಂಜು ಪಾವಗಡ ಇಡೀ ಮನೆಯನ್ನು ನಗಿಸುವ ಕಾರಣಕ್ಕಾಗಿಯೇ ಕಳುಹಿಸಿ ವಿಧೂಷಕನಂತೆ ಪ್ರೇಕ್ಷರನ್ನು ಹಿಡಿದು ನಿಲ್ಲಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಮಂಜು ಪಾವಗಡ ಮನೆಯಲ್ಲಿ ಒಂದು ದಿನ ಹೇಳುತ್ತಾರೆ. ನಾನು ಎಲ್ಲಿ ಇರುತ್ತೇನೆ ಅಲ್ಲಿ ಶೇಕಡ ನೂರರಷ್ಟು ಎಫರ್ಟ್​ ಹಾಕಲು ಇಷ್ಟಪಡ್ತೇನೆ. ಬಿಗ್​ಬಾಸ್​ ಮನೆಯಲ್ಲಿದ್ದುಕೊಂಡು ಊರಿನಲ್ಲಿರುವ ಮನೆಯ ಬಗ್ಗೆ ಚಿಂತೆ ಮಾಡುವುದಿಲ್ಲ. ಎಲ್ಲಿರುತ್ತೇನೋ ಅಲ್ಲಿ 100 ಪರ್ಸೆಂಟ್​ ಮಾಡುವುದು ಅಷ್ಟೇ ನನ್ನ ಕೆಲಸ ಎಂದಿದ್ದರು. ಅಂದರೆ ನಾನು ಕಣ್ಣ ಮುಂದಿರುವ ಗುರಿಯನ್ನು ಮಾತ್ರ ಮನಸಲ್ಲಿ ಇಟ್ಟುಕೊಳ್ಳ ಬಯಸುತ್ತೇನೆ ಎನ್ನುವುದು. ಇದೊಂದೇ ಗುಣ ಮಂಜು ಪಾವಗಡ ಫೈನಲ್​ಗೆ ಬಂದು ಟ್ರೋಫಿ ಎತ್ತಿ ಹಿಡಿಯುವಂತೆ ಮಾಡಿದೆ. ನಾವಿಲ್ಲಿ ಇರುತ್ತೇವೋ ಅಲ್ಲಿ ಉತ್ತಮವಾಗಿರಲು ಆದ್ಯತೆ ಕೊಡುವುದು ಸೂಕ್ತ.

ಬಿಗ್​ಬಾಸ್​ ರನ್ನರ್​ ಅಪ್​ ಕೆ.ಪಿ ಅರವಿಂದ್​..!

ಕೆ.ಪಿ ಅರವಿಂದ್​ ಬಿಗ್​ಬಾಸ್​ ವಿನ್ನರ್​ಗೆ ಟಫ್ ಫೈಟ್​ ಕೊಟ್ಟ ಏಕೈಕ ಆಟಗಾರ. ಸಿನಿಮಾ ಕ್ಷೇತ್ರದಿಂದ ಬಾರದೆ ಇದ್ದರೂ ತನ್ನ ಕಠಿಣ ಪ್ರಯತ್ನದಿಂದ ಎಲ್ಲರ ಮನೆ ಮಾತಾಗಿದ್ದರು. ಬಿಗ್​ಬಾಸ್​ ಕಡೆಯಿಂದ ಯಾವುದೇ ಟಾಸ್ಕ್​ ಬಂದರೂ ಯೋಚನೆ ಮಾಡಿ ಯೋಜನೆ ಮಾಡಿ ಗೆಲ್ಲುವ ಆಟವಾಡ್ತಿದ್ರು. ಮನೆಯ ಉಳಿದ ಸ್ಪರ್ಧಿಗಳೂ ಸಹ ಅರವಿಂದ್​ ಆಟಕ್ಕೆ ಮನ್ನಣೆ ಕೊಡುತ್ತಿದ್ದರು. ಅರವಿಂದ್​ ರೀತಿಯಲ್ಲೇ ನಾವು ಆಟ ಆಡಬೇಕು ಎಂದು ಎಷ್ಟೋ ಮಂದಿ ಪ್ರೇರಿತರಾದ್ರು. ಕೆಲವೊಂದು ಅನಾವಶ್ಯಕ ಮಾತು, ಮೂಗಿನ ತುದಿಯ ಕೋಪ ಜನರಿಗೆ ಇಷ್ಟ ಆಗದಿದ್ದರೂ ಗೆಲ್ಲುವ ಛಲ ಲಕ್ಷಾಂತರ ಜನರ ಮನಸೂರೆಗೊಂಡಿತ್ತು. ಅದೊಂದೇ ಕಾರಣದಿಂದ ಬಿಗ್​ಬಾಸ್​ ಮನೆಯಲ್ಲಿ ಅರವಿಂದ್​ ಕೆ.ಪಿ ಎರಡನೆಯ ಸ್ಪರ್ಧಿಯಾಗಿ ಉಳಿದುಕೊಂಡರು.

ದಿವ್ಯಾ ಉರುಡುಗ ವಿಶೇಷ ಗುಣ..!

ಮೂರನೇ ಸ್ಥಾನ ಪಡೆದ ದಿವ್ಯಾ ಉರುಡುಗ ಕಾಯಕವೇ ಕೈಲಾಸ ಎಂದು ನಂಬಿಕೆ ಇಟ್ಟವರು. ಕೈಯಿಂದ ಆಗುತ್ತೋ ಬಿಡುತ್ತೋ ಆಟವಾಡಬೇಕು ಗೆಲ್ಲಬೇಕು ಎಂಬ ಅಚಲ ವಿಶ್ವಾಸದೊಂದಿಗೆ ಆಟವಾಡಿದ ಸ್ಪರ್ಧಿ. ಅಂತಿಮ ಘಟ್ಟಕ್ಕೆ ಬರುವಾಗ ಈ ವಿಚಾರ ಬಹಿರಂಗ ಮಾಡಿದ ದಿವ್ಯಾ ಉರುಡುಗ, ನಾನು ದೇವರ ಮೇಲೆ ಅಷ್ಟೊಂದು ನಂಬಿಕೆ ಇಡೋದಿಲ್ಲ. ನಾನು ಮಾಡುವ ಕೆಲಸದ ಮೇಲೆ ಮಾತ್ರ ನಾನು ನಂಬಿಕೆ ಇಟ್ಟು ಆಡುತ್ತೇನೆ. ಸೋಲುವುದು ಗೆಲ್ಲುವುದು ನಮ್ಮ ಕೈಯ್ಯಲ್ಲೇ ಇರುತ್ತದೆ. ನಮ್ಮ ತಂದೆ ತಾಯಿ ಇಬ್ಬರೂ ದೇವರಿಗೆ ಪೂಜೆ ಪುನಸ್ಕಾರ ಮಾಡುತ್ತಾರೆ. ಆದರೆ ನಾನು ಅಷ್ಟೊಂದು ದೈವಭಕ್ತಿ ಹೊಂದಿಲ್ಲ. ನನಗೆ ನಾನು ಮಾಡುವ ಕೆಲಸದ ಮೇಲೆ ಮಾತ್ರ ಭಕ್ತಿಯಿದೆ. ಶ್ರದ್ಧೆಯಿಂದ ಆಡುತ್ತೇನೆ ಗೆಲ್ಲುತ್ತೇನೆ ಎಂದಿದ್ದರು.ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನನ್ನು ಆರಾಧಿಸುವ ಕಾರಣಕ್ಕೆ ಇಷ್ಟು ದೂರ ಬಂದರು ಎಂದರೆ ತಪ್ಪಾಗಲಾರದು.

ರೇಷ್ಮಕ್ಕನ ವಿಶೇಷತೆಯೇ ರೇಷ್ಮೆ..!

ಬಿಗ್​ಬಾಸ್​ ಮನೆಯ ಹಾಟ್​ ಫೇವರೆಟ್​ ಆಗಿದ್ದ ವೈಷ್ಣವಿ ಗೌಡ (ಸನ್ನಿಧಿ) ಮೊದ ಮೊದಲು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಇದ್ದರು. ಆದರೆ ಕೆಲವೇ ವಾರಗಳಲ್ಲಿ ತನ್ನ ವರಸೆ ಬದಲಿಸಿಕೊಂಡು ವೈಷ್ಣವಿಗೌಡ, ಅಂತಿಮ ಘಟ್ಟ ತಲುಪಿದ್ದಕ್ಕೆ ಪ್ರಮುಖ ಕಾರಣ ಆಕೆ ಎಲ್ಲರೊಂದಿಗೂ ನಡೆದುಕೊಳ್ತಿದ್ದ ರೀತಿನೀತಿ. ಕಾಮಿಡಿ ಮಾಡುವಾಗ ಕಾಮಿಡಿ, ಸೀರಿಯಸ್​ ಇರುವಾಗ ಸೀರಿಯಸ್​. ಏನಾದರೂ ಹೇಳಬೇಕು ಎನಿಸಿದರೆ ಬೆಣ್ಣೆ ಮೇಲಿನ ಕೂದಲು ತೆಗೆದ ಹಾಗೆ ಎಲ್ಲರೊಟ್ಟಿಗೂ ಉತ್ತಮ ಸ್ನೇಹ ಸಂಬಂಧದಿಂದ ನಡೆದುಕೊಂಡಿದ್ದು ಬಿಗ್​ಬಾಸ್​ ಮನೆಯಲ್ಲಿ ತುಂಬಾ ದೂರದವರೆಗೂ ಬರುವಂತೆ ಮಾಡಿತು ಎಂದರೆ ತಪ್ಪಾಗಲಾರದು. ಶತ್ರುಗಳನ್ನೇ ಸೃಷ್ಟಿಕೊಳ್ಳದ ವೈಷ್ಣವಿ ಗುಣ ಉತ್ತಮವಾದದ್ದು.

ಟಾಪ್​ 5ನೇ ಆಟಗಾರ ಸಂಬರಗಿ..!

ಪ್ರಶಾಂತ್​ ಸಂಬರಗಿ ಮನೆ ಮಂದಿ ಜೊತೆಗೆಲ್ಲಾ ಉತ್ತಮವಾಗಿಯೇ ಆಟ ಶುರು ಮಾಡಿದ್ದರು. ತನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಾ ಆಟವಾಡುವಾಗ ಚಕ್ರವರ್ತಿ ಚಂದ್ರಚೂಡ್ ಸ್ನೇಹ ಹಳ್ಳ ಹಿಡಿಯುವಂತೆ ಮಾಡಿತ್ತು. ಚಕ್ರವರ್ತಿ ಚಂದ್ರಚೂಡ್​ ಅವರ ಸ್ಟ್ರಾಟಜಿ ಆಗಿದ್ದರೂ ಆಗಿರಬಹುದು. ಆದರೆ ಸಂಬರಗಿ ಗಾಡಿ ಹಳ್ಳ ಗುಂಡಿಯಲ್ಲಿ ತಿಣುಗಾಡುತ್ತಾ ಸಾಗಿತ್ತು. ಅಷ್ಟರಲ್ಲಿ ಮನೆಯಿಂದ ಹೊರಬಂದ ಬಳಿಕ ಮತ್ತೆ ಒಳಕ್ಕೆ ಹೋಗುವಾಗ ಕೆಲವವೊಂದು ವಿಚಾರಗಳ ಬಗ್ಗೆ ಸ್ಪಷ್ಟತೆಯಿಂದ ಇರಲು ಶುರು ಮಾಡಿದ ಪ್ರಶಾಂತ್​ ಸಂಬರಗಿ ಯಾರು ಏನೇ ಹೇಳಲಿ ನಾನು ನನಗೆ ಅನ್ನಿಸಿದ್ದನ್ನು ಖಂಡಿತಾ ಹೇಳ್ತೇನೆ. ಅದು ಎಷ್ಟೇ ಕ್ಲೋಸ್​ ಫ್ರೆಂಡ್​ ಇದ್ದರೂ ನಾನೂ ನನ್ನ ತನವನ್ನು ಬಿಡಲಾರೆ ಎಂದು ಗಟ್ಟಿಯಾಗಿ ನಿಂತಿದ್ದು, ಟಾಪ್​ 5 ಒಳಗಿನ ಸ್ಪರ್ಧಿಯನ್ನಾಗಿ ಮಾಡಿದೆ ಎನ್ನಬಹುದು.

Related Posts

Don't Miss it !