ಎಂ.ಜಿ​ ರೋಡಲ್ಲಿ ಬಿಗ್​ಬಾಸ್​ ಖ್ಯಾತಿಯ ದಿವ್ಯಾ ಸುರೇಶ್​ ರಂಪಾಟ..!

ಕೊರೊನಾದ ಸೋಂಕಿನ ರೂಪಾಂತರಿ ಓಮೈಕ್ರಾನ್​ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆ ತನಕ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಇನ್ನೂ ನೈಟ್​ ಕರ್ಫ್ಯೂ ವೇಳೆಯಲ್ಲಿ ಅಡ್ಡಾದಿಡ್ಡಿ ಸಂಚಾರ ಮಾಡಿದ್ರೆ NDMA ( National disaster management act) ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್​ ಕಮೀಷನರ್​ ಕಮಲ್​ ಪಂತ್​ ಈ ಮೊದಲೇ ಎಚ್ಚರಿಕೆ ನೀಡಿದ್ದರು. ಇಷ್ಟರ ನಡುವೆ ಬಿಗ್​ ಬಾಸ್​ ಖ್ಯಾತಿಯ ದಿವ್ಯಾ ಸುರೇಶ್​ ಮೊದಲ ದಿನವೇ ಪೊಲೀಸರ ಜೊತೆಗೆ ವಾಗ್ವಾದ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲದೆ ತನ್ನನ್ನು ಸೆರೆ ಹಿಡಿಯುತ್ತಿದ್ದ ಮಾಧ್ಯಮದ ಕ್ಯಾಮರಾ ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ವಿಲಾಸಿ ಜೀವನ ನಿಜ ಬಣ್ಣ ಕುಡಿದಾಗ ಬಯಲು..!

ಐಶಾರಾಮಿ ಬದುಕು ಕಟ್ಟಿಕೊಂಡವರು ಬೆಂಗಳೂರಿನ ಬ್ರಿಗೇಡ್​ ರೋಡ್​ ಹಾಗೂ ಎಂಜಿ ರಸ್ತೆಯಲ್ಲಿ ಸುತ್ತಾಡೋ ಕಯಾಲಿ ಅಂಟಿಸಿಕೊಂಡಿರುತ್ತಾರೆ. ಅದೇ ರೀತಿ ಬಿಗ್​ ಬಾಸ್​ನಲ್ಲಿ ತನ್ನದೇ ವೈಶಿಷ್ಟ್ಯದ ಮೂಲಕ ಗುರುತಿಸಿಕೊಂಡಿದ್ದ ದಿವ್ಯಾ ಸುರೇಶ್​, ಟಾಪ್ ಸ್ಪರ್ಧಿಗಳ ಜೊತೆಗೆ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದ್ದರು. ಆದರೆ ಐಶಾರಾಮಿ ಬದುಕಿನ ಕಯಾಲಿಗೆ ಬಿದ್ದು, ಕುಡಿದ ಮತ್ತಿನಲ್ಲಿ ಮಾಡಬಾರದ್ದನ್ನು ಮಾಡಿ ಆಗಬಾರದ್ದು ಆಗುವಂತೆ ಮಾಡಿದ್ದಾರೆ. 10 ಗಂಟೆ ಮೇಲೆ ಪೊಲೀಸರಿಗೆ ಎದುರಾದ ದಿವ್ಯಾ ಸುರೇಶ್​ರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈಗಾಗಲೇ ನೈಟ್​ ಕರ್ಫ್ಯೂ ಜಾರಿಯಾಗಿದೆ. ಇಷ್ಟರ ಒಳಗಾಗಿ ತಾವು ಮನೆಗೆ ಹೋಗಬೇಕಿತ್ತು. ಆದರೂ ಇಷ್ಟು ಸಮಯ ಇಲ್ಲೇನು ಮಾಡುತ್ತಿದ್ದೀರಿ ಎಂದಿದ್ದಾರೆ. ಕುಡಿದ ಮತ್ತಿನಲ್ಲಿ ಖಾಕಿ ಮೇಲೆ ಎಗರಾಡಿದ ಆರೋಪ ದಿವ್ಯಾ ಸುರೇಶ್​ ಮೇಲೆ ಬಂದಿದೆ. ಅಷ್ಟರಲ್ಲಿ ನೈಟ್​ ಕರ್ಫ್ಯೂ ವರದಿಗೆ ಹೋಗಿದ್ದ ಮಾಧ್ಯಮದವರ ಕ್ಯಾಮರಾ ದಿವ್ಯಾ ಸುರೇಶ್​ ಕಡೆಗೆ ತಿರುಗಿದೆ. ಆಗ ಆಕೆಯ ಕೋಪ ನೆತ್ತಿಗೇರಿದೆ.

Read This;

ಸ್ಟಾರ್​ಗಳು ನೋಡುಗರ ಎದುರು ಜಾರಿ ಬೀಳೋದ್ಯಾಕೆ..?

ಸ್ಟಾರ್​ ಡಮ್​ ಬರ್ತಿದ್ದ ಹಾಗೆ ಜನರು ಆಕೆಯನ್ನು ನೋಡುವ ದೃಷ್ಟಿಕೋನ ಬೇರೆಯಾಗುತ್ತದೆ. ಆಕೆಯನ್ನು ಮಾತನಾಡಿಸುವ ಅಥವಾ ಪ್ರಶ್ನಿಸುವ ಜನರು ಸೃಷ್ಟಿಯಾಗ್ತಾರೆ. ಆದರೆ ಮಾಧ್ಯಮದವರು ಕ್ಯಾಮರಾ ಹಿಡಿಯುತ್ತಿದ್ದ ಹಾಗೆ ದಿವ್ಯಾ ಸುರೇಶ್​ ಕೋಪ ಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಕುಡಿದ ಮಾತ್ರಕ್ಕೆ ದಿವ್ಯಾ ಸುರೇಶ್​ ತಪ್ಪು ಮಾಡಿದ್ದಾರೆ ಎಂದೇ ಅರ್ಥವಲ್ಲ. ಮಾಧ್ಯಮದವರೂ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಕುಡಿದ ಮೇಲೆ ಮನೆಗೆ ಹೋಗುವುದು ತಡವಾಗಿದ್ದರೆ, ಪೊಲೀಸರು ಮೊದಲ ದಿನ ವಿನಾಯ್ತಿ ನೀಡುತ್ತಿದ್ದರು. ಬೇಗ ತೆರಳುವ ಉದ್ದೇಶದಿದ್ದ ಬಂದಿದ್ದೆವು, ತಡವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರವಹಿಸ್ತೇವೆ ಎನ್ನುವ ಮಾತುಗಳನ್ನು ಹೇಳಿದ್ದರೆ ಎಲ್ಲವೂ ಸುಖಾಂತ್ಯವಾಗ್ತಿತ್ತು. ಆದರೆ ಪರಿಸ್ಥಿತಿಯನ್ನು ನಿಬಾಯಿಸಲು ಬಾರದವರು ಈ ರೀತಿ ಎಲ್ಲವನ್ನೂ ಮೈ ಮೇಲೆ ಎಳೆದುಕೊಂಡು ವಿವಾದ ಸೃಷ್ಟಿಕೊಳ್ತಾರೆ. ಈಗ ಆಗಿದ್ದು ಆಗಿದೆ. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಎಚ್ಚರ ವಹಿಸ್ತೇನೆ ಎನ್ನುವ ಮೂಲಕ ಸ್ಪಷ್ಟೀಕರಣ ಕೊಟ್ಟು ಮುಂದೆ ಸಾಗಲಿದ್ದಾರೆ ಎನ್ನುವುದು The Public Spot ಆಶಯ.

Related Posts

Don't Miss it !