Big Boss: ಹೀರೋ ಆದ ಸಂಬರಗಿ, ಝೀರೋ ಆದ ಚಕ್ರವರ್ತಿ

ಬಿಗ್​ಬಾಸ್​ ಕನ್ನಡ ಕಳೆದ ವಾರ ಸಾಕಷ್ಟು ಮುಜುಗರಗಳಿಗೆ ಕಾರಣವಾಗಿತ್ತು. ಹೊಲಸು ಮಾತುಗಳು ನೋಡುಗರನ್ನು ಮುಜುಗರಕ್ಕೆ ಈಡುಮಾಡಿತ್ತು. ಇದಕ್ಕೆ ಪ್ರಮುಖ ಕಾರಣ ಸ್ಪರ್ಧಿಗಳು ಮನೆಯಿಂದ ಹೊರಕ್ಕೆ ಬಂದು ಮತ್ತೆ ಸೆಕೆಂಡ್​ ಇನ್ನಿಂಗ್ಸ್​ಗಾಗಿ ಮನೆ ಒಳಕ್ಕೆ ಹೋಗಿರುವುದು. ಇನ್ನೊಂದು ಕಾರಣ ಚಕ್ರವರ್ತಿ ಚಂದ್ರಚೂಡ್​ ಹಾಗೂ ಪ್ರಶಾಂತ್​ ಸಂಬರಗಿ ನಡುವೆ ಸಂಬಂಧ ಹದಗೆಟ್ಟಿದ್ದು ಆಗಿತ್ತು. ಚಕ್ರವರ್ತಿ ಚಂದ್ರಚೂಡ್​ ಹೇಳಿದ ಸುಳ್ಳನ್ನು ಪ್ರಶಾಂತ್​ ಸಂಬರಗಿ ಕ್ಷಣಮಾತ್ರದಲ್ಲಿ ಪತ್ತೆ ಮಾಡಿದ್ದು ಚಕ್ರವರ್ತಿಯನ್ನು ವ್ಯಾಘ್ರನನ್ನಾಗಿ ಮಾಡಿತ್ತು. ಆ ಬಳಿಕ ಪ್ರಶಾಂತ್​ ಸಂಬರಗಿ ಮಾಡಿದ್ದು ಎಲ್ಲವೂ ತಪ್ಪು ಎನ್ನುವ ಅಭಿಪ್ರಾಯ ಮೂಡಿಸುವಲ್ಲಿ ಚಕ್ರವರ್ತಿ ಪಾಲು ತುಸು ಹೆಚ್ಚಾಗಿಯೇ ಇತ್ತು.

ಸತ್ಯವನ್ನೇ ಹೇಳಿ ಕಳಪೆ ಆಗಿದ್ದ ಸಂಬರಗಿ..!

ನೋಟ್​ ಕಟರ್​ ವಿಚಾರವಾಗಿ ಅರವಿಂದ್​ ನರಿ ಬುದ್ಧಿಯಿಂದ ರಘುಗೆ ನಷ್ಟ ಆಗಿದ್ದನ್ನು ಪ್ರಶ್ನಿಸಿದ್ದು ಕಾನೂನು ಬದ್ಧವಾಗಿತ್ತು. ಇದಕ್ಕೆ ಇನ್ನೊಂದು ಕಾರಣ ಎಂದರೆ ಇದೇ ರೀತಿ ಪ್ರಶಾಂತ್​ ಸಂಬರಗಿ ಅದಲು ಬದಲು ಮಾಡಿದ್ದಾಗ ಇದೇ ದಿವ್ಯಾ ಉರುಡುಗ ಅವಕಾಶ ಕೊಟ್ಟಿರಲಿಲ್ಲ. ಇನ್ನೂ ಚಕ್ರವರ್ತಿ ಚಂದ್ರಚೂಡ್​ ಹೇಳಿದ್ದ ಮಾತನ್ನೇ ಪರೀಕ್ಷೆ ಮಾಡಿ ಸುಳ್ಳನ್ನು ಜನರ ಎದುರು ಬಯಲು ಮಾಡಿದ್ದರು. ಚಕ್ರವರ್ತಿ ಹೇಳಿದ್ದ ಮಾತು ಸಾರ್ವಜನಿಕರಿಗೆ ಗೊತ್ತಿತ್ತು. ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ದಿವ್ಯಾ ಉರುಡುಗ ಜೊತೆಗಿನ ವೈಮನಸ್ಸನ್ನು ಕ್ಷಮೆ ಕೇಳುವ ಮೂಲಕ ಮುಕ್ತಾಯ ಮಾಡಿದ ಮೇಲೂ ಅರವಿಂದ್,​ ದಿವ್ಯಾ ಉರುಡುಗ ಪರವಾಗಿ ಹಂಗಿಸಿದ್ದನ್ನು ಪ್ರಶ್ನಿಸಿದ್ದೂ ಸರಿಯಿತ್ತು. ಆದರೂ ಮನೆಯವರೆಲ್ಲಾ ಸೇರಿಕೊಂಡು ಕಳಪೆ ಎಂದು ಜೈಲಿಗೆ ಅಟ್ಟಿದ್ರು. ಆದ್ರೆ ಶನಿವಾರದ ವಾರದ ಕಥೆ ಕಿಚ್ಚ ಸುದೀಪನ ಜೊತೆ ಮತ್ತೆ ಹೀರೋ ಸ್ಥಾನಕ್ಕೆ ತಂದು ನಿಲ್ಲಿಸಿತು.

ದಿವ್ಯಾ ಕೋಪ, ಹಲ್ಲು ಕಡಿಯುವುದು ಮಾಯ..?

ದಿವ್ಯಾ ಉರುಡುಗ ಶಮಂತ್​ ನೋಟನ್ನು ರಿಜೆಕ್ಟ್​ ಮಾಡುವಾಗ ಕೋಪತಾಪವನ್ನೇ ಪ್ರದರ್ಶನ ಮಾಡಿದ್ರು. ನಾನು ಕ್ಯಾಪ್ಟನ್​ ನಾನು ಹೇಳಿದ್ದೇ ನಡೀಬೇಕು ಎನ್ನುವುದನ್ನು ಸಾರಿ ಹೇಳಿದ್ರು. ಆದ್ರೆ ಅರವಿಂದ್​ ಕೀಯನ್ನು ಸ್ಟ್ರಾಟಜಿ ಮಾಡಲೆಂದೇ ಅಲ್ಲಿ ಇಟ್ಟು ಹೋಗಿದ್ದರೂ ಕೆಲವು ಕಾಲ ಗೊಂದಲ ಮೂಡಿಸುವ ನಾಟಕ ಮಾಡಿ ಗೆಲ್ಲುವಂತೆ ಮಾಡಿದ್ದು ಸುಳ್ಳಲ್ಲ. ಕಣ್ಣಿಗೆ ಬಟ್ಟೆ ಕಟ್ಟಿ ಬಿಟ್ಟಿದ್ದ ವೇಳೆಯಲ್ಲೂ ಪ್ರಶಾಂತ್​ ನಿಲುವು ಸರಿಯಾಗಿತ್ತು. ಕೇವಲ ಅರವಿಂದ್​ ಗೆಲ್ಲಿಸುವ ಉದ್ದೇಶ ಇತ್ತು. ಅದನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಮಾತ್ರ ಅರಿವಿಗೆ ಬಂದಿತ್ತು. ಇನ್ನೂ ಅರವಿಂದ್​ ದಿವ್ಯಾ ಉರುಡುಗ ವಿಚಾರದಲ್ಲಿ ಸಂಬರಗಿ ಜೊತೆ ಕಾದಾಟಕ್ಕೆ ಇಳಿದಿದ್ದು, ಆಕೆ ಅರವಿಂದ್​ ಗೆಳತಿ ಅನ್ನೋ ಕಾರಣಕ್ಕೆ ಹೊರತು ಸ್ಪರ್ಧಾಳು ರೀತಿ ನೋಡಿದ್ದಲ್ಲ.

ದಿವ್ಯಾ ಉರುಡುಗ ಮಾಡಿದ ಒಂದೇ ಒಂದು ತಪ್ಪಿನಿಂದ ಇಡೀ ಮನೆ ತರಕಾರಿ ಕಳೆದುಕೊಂಡಾಗ ಯಾರೊಬ್ಬರೂ ಅವರ ವಿರುದ್ಧ ಮಾತನಾಡಲಿಲ್ಲ. ಅವರು ಒಮ್ಮೆ ಹೇಳಿದ್ದನ್ನು ಇನ್ನೊಂದು ಬಾರಿ ಬೇರೆ ರೀತಿಯಲ್ಲಿ ಜಿದ್ದು ಸಾಧಿಸುತ್ತಾರೆ ಅನ್ನೋ ಕಾರಣಕ್ಕೇ ಹೊರತು, ಗಮನಕ್ಕೆ ಬಾರದೆ ಅಲ್ಲ. ಚಕ್ರವರ್ತಿ ಚಂದ್ರಚೂಡ್ ಪ್ರಶಾಂತ್​ ಸಂಬರಗಿ ಹೊರಗಡೆ ಮಧ್ಯವರ್ತಿ, ಆತನ ಕಾರು ಕೂಡ ಅವನದಲ್ಲ ಎಂದು ವೈಯಕ್ತಿವಾಗಿ ಮಾತನಾಡಿದರೂ ಕೇಳಿಸಿಕೊಂಡಿದ್ದು, ಬೇರೆಯವರ ಬಗ್ಗೆ ಹಿಂದೆ ಮಾತನಾಡಿದ ಅರ್ಥವನ್ನೇ ಕೊಡುತ್ತದೆ. ಆದರೂ ನಾನು ಹಿಂದೆ ಎಲ್ಲಾ ಮಾತನಾಡುವುದಿಲ್ಲ, ಏನಾದರೂ ಇದ್ದರೆ ನೇರವಾಗಿ ಹೇಳ್ತೇನೆ ಎಂದು ಸಂಬರಗಿಗೆ ಬೆಣ್ಣೆ ಹಚ್ಚುವುದು ಗೆಲ್ಲುವುದಕ್ಕಾಗಿ ಮಾಡಿಕೊಂಡ ಸ್ಟ್ರಾಟಜಿ ಅಷ್ಟೆ. ರಾಜಾರಾಣಿ ಟಾಸ್ಕ್​ನಲ್ಲೂ ಯಾವುದೇ ಪ್ರಶ್ನೆ ಕೇಳಿದಾಗಲೂ ಕೇವಲ ಅರವಿಂದ್​ ಅಂತಾ ಉತ್ತರ ಕೊಟ್ಟಿದ್ದು ಕೂಡ ಗೇಮ್​ ಸ್ಟ್ರಾಟಜಿಯೇ ಆಗಿತ್ತು ಎನ್ನುವುದು ನೋಡುಗರಿಗೂ ಗೊತ್ತಾಯ್ತು.

ಅಗತ್ಯವಿಲ್ಲದ ಮಾತು ಅನಾಹುತಕ್ಕೆ ದಾರಿ..!

ಬಿಗ್​ಬಾಸ್​ ವಾರದ ಕಥೆ ಕಿಚ್ಚನ ಜೊತೆ ಆಗಿದ್ದೂ ಅಷ್ಟೇ. ಪ್ರಶಾಂತ್​ ಸಂಬರಗಿ ಕಳೆದ ಮೂರು ದಿನದ ವರ್ತನೆ ಬಗ್ಗೆ ಸುದೀಪ್​ ಕೇಳಿದ್ದರು. ಒಂದೆರಡು ಸ್ಪರ್ಧಿಗಳು ಅವರ ವರ್ತನೆ ಹೇಗಿತ್ತು. ಅದರ ಅವಶ್ಯಕತೆ ಇತ್ತಾ ಎನ್ನುವ ಬಗ್ಗೆ ಮಾತನಾಡಿದರು, ಬಹುತೇಕ ಮಂದಿ ಪ್ರಶಾಂತ್​ ಹೇಳುವ ಮಾತುಗಳು ಸರಿಯಾಗಿಯೇ ಇರುತ್ತವೆ. ಆದರೆ ವಾಯ್ಸ್​​ ರೈಸ್​ ಮಾಡುವ ಕಾರಣಕ್ಕೆ ಕೆಟ್ಟದಾಗಿ ಬಿಂಬಿತವಾಗುತ್ತವೆ ಎನ್ನುವುದನ್ನು ಒಪ್ಪಿಕೊಂಡರು. ಆದರೆ ಚಕ್ರವರ್ತಿ ಮಾತ್ರ ಒಂದು ಅಂಕದ ಪ್ರಶ್ನೆಗೆ 5 ಅಂಕದ ಉತ್ತರ ಬರೆದು ಸುದೀಪ್​ ಕೂಗೆ ಸಿಕ್ಕಿಬಿದ್ರು. ಕಿಚ್ಚ ಕೋಪ ನೆತ್ತಿಗೇರಿತ್ತು. ಇಡೀ ಎಪಿಸೋಡ್​ ಸುದೀಪ್​ ಬೈದಿದ್ದು, ಸ್ಪರ್ಧಿಗಳೆಲ್ಲಾ ಸಪ್ಪೆಮೋರೆ ಹಾಕಿಕೊಂಡು ಕುಂತಿದ್ದು ಅಷ್ಟೇ.

Related Posts

Don't Miss it !