ಬಿಟ್ ಕಾಯಿನ್ ದಂಧೆಯಲ್ಲಿ ಯಾರಿದ್ದಾರೆ..!? ಕುಮಾರಸ್ವಾಮಿ ಹೇಳಿದ್ದೇನು..!?

ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ವಿಚಾರವಾಗಿ ಸರ್ಕಾರ ಹಾಗೂ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್​ ನಡುವೆ ವಾಕ್ಸಮರ ಏರ್ಪಟ್ಟಿದೆ. ಆದರೆ ಯಾರೊಬ್ಬರು ಬಿಟ್ ಕಾಯಿನ್ ದಂಧೆ ಮಾಡ್ತಿರೋದು ಯಾರು..? ತನಿಖೆ ಯಾವ ಹಂತದಲ್ಲಿದೆ..? ಮುಚ್ಚಿಟ್ಟುರುವ ಅಂಶಗಳೇನು..? ಎನ್ನುವ ಅಸಲಿ ವಿಚಾರ ಬಿಟ್ಟುಕೊಡೋಕೆ ಸಿದ್ಧರಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಆರೋಪ ಪ್ರತ್ಯಾರೋಪವನ್ನು ತಾಳ್ಮೆಯಿಂದ ಗಮನಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಟ್ ಕಾಯಿನ್​ ದಂಧೆ ಬಗ್ಗೆ ಸಣ್ಣ ಎಳೆಯೊಂದನ್ನು ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಕಾಂಗ್ರೆಸ್, ಬಿಜೆಪಿ ಕಣ್ಣಾಮುಚ್ಚಾಲೆ ಆಟಕ್ಕೆ ಜೂಟ್ ಹೇಳಿದ್ದಾರೆ. ಅಮೆರಿಕದಲ್ಲಿ ನರೇಂದ್ರ ಮೋದಿ ಕಿವಿ ದಂಧೆ ಬಗ್ಗೆ ಮಾಹಿತಿ ಸಿಕ್ಕಿದ್ಯಂತೆ.

ಬಿಟ್ ಕಾಯಿನ್ ದಂಧೆ ಮುಖ್ಯಮಂತ್ರಿ ಬದಲಾಯಿಸುತ್ತಾ..?

ಕಾಂಗ್ರೆಸ್ ಪಕ್ಷ ಕೇವಲ ಬಿಟ್ ಕಾಯಿನ್ ದಂಧೆಯನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಹೇಳುತ್ತಲೇ ಸಾಗಿತ್ತು. ಆದರೆ, ಆ ಬಿಜೆಪಿ ನಾಯಕರ ಹೆಸರು ಹೇಳುವುದಕ್ಕೆ ಮುಂದಾಗಿರಲಿಲ್ಲ. ಇದೀಗ ಕಾಂಗ್ರೆಸ್​ ನಾಯಕ ಮಾಜಿ ಮಂತ್ರಿ ಪ್ರಿಯಾಂಕ್​ ಖರ್ಗೆ ಬಿಟ್​ ಕಾಯಿನ್​ ಕೇಸ್​ನಲ್ಲಿ ಮುಖ್ಯಮಂತ್ರಿಗಳ ತಲೆ ದಂಡ ಆಗುವುದು ಖಚಿತ. ಈ ಬಾರಿಯೂ ಮೂರು ಮಂದಿ ಮುಖ್ಯಮಂತ್ರಿಗಳಾಗುವುದು ನಿಶ್ಚಿತ ಎಂದಿದ್ದಾರೆ. ಬಿಜೆಪಿ ನಾಯಕರು ಹಾಗೂ ರಾಷ್ಟ್ರೀಯ ನಾಯಕರ ಪುತ್ರ ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಬರೀ ಬಾಯಿ ಮಾತಿನಲ್ಲಿ ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ ತನಿಖೆ ಮಾಡಿದ್ರೆ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Read this;

ಪ್ರಿಯಾಂಕ್​ ಖರ್ಗೆ ಹೇಳಿಕೆಯಿಂದ ಕಾಂಗ್ರೆಸ್​​ ದೂರ..! ಯಾಕೆ..?

ಕಲಬುರಗಿಯಲ್ಲಿ ಪ್ರಿಯಾಂಕ್​ ಖರ್ಗೆ ಹೇಳಿಕೆ ನೀಡುತ್ತಿದ್ದ ಹಾಗೆ ಒಂದೇ ಸಮನೆ ಸ್ಪಷ್ಟನೆ ಕೊಟ್ಟ ಕಾಂಗ್ರೆಸ್​ ನಾಯಕರು, ಪ್ರಿಯಾಂಕ್ ಖರ್ಗೆ ಹೇಳಿಕೆ ಪಕ್ಷದ ಹೇಳಿಕೆಯಲ್ಲ, ಅದು ಪ್ರಿಯಾಂಕ್​ ಖರ್ಗೆ ಅವರ ಸ್ವಂತ ಅಭಿಪ್ರಾಯ ಎನ್ನುವ ನಿಲುವು ವ್ಯಕ್ತಪಡಿಸಿದ್ರು. ಮೊದಲಿಒಗೆ ಗದಗದದಲ್ಲಿ ಡಾ ಜಿ ಪರಮೇಶ್ವರ್​, ಬೆಂಗಳೂರಿನಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ಕೂಡ ಪ್ರಿಯಾಂಕ್​ ಖರ್ಗೆ ಹೇಳಿಕೆಯಿಂದ ದೂರ ಉಳಿಯುವ ಪ್ರಯತ್ನ ಮಾಡಿದ್ರು. ಇನ್ನೂ ಪ್ರಿಯಾಂಕ ಖರ್ಗೆ ಹೇಳಿಕೆಗೆ ದೆಹಲಿಯಲ್ಲಿ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್​ ನಾಯಕರ ಹೆಸರಿದೆ ಅದನ್ನು ಮೊದಲು ನೋಡಿಕೊಳ್ಳಲಿ ಎನ್ನುವ ಮೂಲಕ ಬೆದರಿಸುವ ಕೆಲಸ ಮಾಡಿದ್ರು. ಆ ಬಳಿಕ ತಿರುಗಿ ಬಿದ್ದ ಡಿ.ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ, ತಾಕತ್​ ಇದ್ದರೆ ಬಿಟ್​ ಕಾಯಿನ್​ ಕೇಸ್​ನಲ್ಲಿ ಕಾಂಗ್ರೆಸ್​ ನಾಯಕರನ್ನು ಅರೆಸ್ಟ್​ ಮಾಡಲಿ ಎಂದು ಸವಾಲು ಹಾಕಿದ್ರು. ಸಿಎಂ ಹೇಳಿಕೆಯಲ್ಲಿ ಅನುಮಾನವೂ ಮೂಡುತ್ತಿದೆ ಎಂದು ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ರು.

ಬಿಟ್​ ಕಾಯಿನ್​ ದಂಧೆಕೋರನಿಗೆ ಜಾಮೀನು..!!

ಬಿಟ್​ ಕಾಯಿನ್​ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದ ಸಮಯದಲ್ಲೇ ಬಿಟ್​ ಕಾಯಿನ್​ ವ್ಯವಹಾರದಲ್ಲಿ ಪಂಟರ್​ ಆಗಿರುವ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣ ರಮೇಶ್​ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಗಲಾಟೆ ಕೇಸ್​ನಲ್ಲಿ ಜೈಲುಪಾಲಾಗಿದ್ದ ಶ್ರೀಕಿಯನ್ನು ಜೈಲಿನಿಂದ ಏಕಾಏಕಿ ಹೊರಕ್ಕೆ ಕಳುಹಿಸಿದ್ದ ಕಾರಣ ಎಲ್ಲಿಗೆ ಹೋಗೋದು..? ಏನು ಮಾಡೋದು..? ಹೇಗೆ ಹೋಗೋದು ಎನ್ನುವುದು ಗೊತ್ತಾಗದೆ ಮಾಧ್ಯಮಗಳ ಎದುರು ಸಿಕ್ಕಿಬಿದ್ದಿದ್ದರು. ಜಾಮೀನು ಕೊಟ್ಟವರು ಯಾರು..? ಎನ್ನುವ ಪ್ರಶ್ನೆಗೆ ನನಗೆ ಗೊತ್ತಿಲ್ಲ, ನಾನು ಲಾಯರ್​ ಕೂಡ ಬುಕ್​ ಮಾಡಿಲ್ಲ, ಜಾಮೀನು ಪಡೆಯಲು ಅರ್ಜಿಯನ್ನೂ ಹಾಕಿಲ್ಲ ಎಂದರು. ಇನ್ನೂ ಬಿಟ್​ ಕಾಯಿನ್​ ವ್ಯವಹಾರದ ಬಗ್ಗೆ ಹೇಳಿ ಎಂದಿದ್ದಕ್ಕೆ ಅದೆಲ್ಲಾ ಬೋಗಸ್ ಎಂದುಬಿಟ್ಟರು. ನಿಮ್ಮ ಖಾತೆಯಲ್ಲೇ 9.5 ಕೋಟಿ ಹಣ ಸೀಜ್​ ಮಾಡಿದ್ದಾರಲ್ಲ ಎಂದಾಗಲು, ಯಾವುದು ಇಲ್ಲ ಬೋಗಸ್​ ಎನ್ನುವ ಉತ್ತರ ಕೊಟ್ಟರು. ಒಂದಂತು ಅರ್ಥವಾಯ್ತು, ಶ್ರೀಕಿ ಬಂಧನದಲ್ಲಿ ಇರುವುದು ಬೇಡ ಎಂದು ಬಿಟ್​ ಕಾಯಿನ್​ ವ್ಯವಹಾರ ಮಾಡಿದವರೇ ಬಿಡುಗಡೆ ಮಾಡಿಸಿರಬಹುದು.

Also Read;

ಅಮೆರಿಕದಲ್ಲಿ ಬಯಲಾಯ್ತಂತೆ ಅಸಲಿ ಸುದ್ದಿ..!

ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗಷ್ಟೇ ಅಮೆರಿಕ ಪ್ರವಾಸ ಕೈಗೊಂಡಿದ್ದರು. ವಿಶ್ವಸಂಸ್ಥೆಯಲ್ಲಿ ನಡೆದ ಜಾಗತಿಕ ತಾಪಮಾನದ ವಿಚಾರದಲ್ಲಿ ಭಾಷಣ ಮಾಡಲು ತೆರಳಿದ್ದರು. ಈ ವೇಳೆ ಭಾರತದ ಹ್ಯಾಕರ್​ ಒಬ್ಬರು ಸರ್ವರ್​ ಹ್ಯಾಕ್​ ಮಾಡಿ ಹಣ ಲಪಟಾಯಿಸಿದ್ದ ಸುದ್ದಿ ಮೋದಿ ಕಿವಿಗೆ ಬಿದ್ದಿದೆ ಎನ್ನುವುದು ಗೊತ್ತಾಗಿದೆ. ಈ ರೀತಿ ಕಳವು ಮಾಡಿದ ಹಣವನ್ನು ಆಡಳಿತದಲ್ಲಿರುವ ಬಿಜೆಪಿ ನಾಯಕರೇ ಶ್ರೀಕಿಯಿಂದ ಖರೀದಿ ಮಾಡಿದ್ದಾರೆ ಎನ್ನುವುದು ಗುಮಾನಿ. ಈ ಬಗ್ಗೆ ತನಿಖೆ ಆದರೆ ಸಿಕ್ಕಿ ಬೀಳುವುದು ಶತಸಿದ್ಧ, ಇದೇ ಕಾರಣಕ್ಕೆ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಕಾಂಗ್ರೆಸ್​ ಮಾತ್ರ ಕೆಣಕುತ್ತಿದೆ. ಗಟ್ಟಿಯಾಗಿ ನಿಲ್ಲುವ ಕೆಲಸ ಮಾಡುತ್ತಿಲ್ಲ, ಹೆಸರನ್ನು ಮಾಧ್ಯಮಗಳ ಎದುರು ಹೇಳುವ ಮೂಲಕ ಇಕ್ಕಟ್ಟಿಗೆ ಸಿಲುಕಿಸುವ ಯತ್ನವನ್ನೂ ಮಾಡುತ್ತಿಲ್ಲ, ಸದಾ ಚರ್ಚೆಯಲ್ಲಿರುವಂತೆ ನೋಡಿಕೊಳ್ಳುವ ಯತ್ನ ಮಾಡಲಾಗ್ತಿದೆ. ಆದರೆ ಕುಮಾರಸ್ವಾಮಿ ಬಳಿ ಮಾಹಿತಿ ಇರುವಂತೆ ಕಾಣಿಸುತ್ತಿದ್ದು, ಹೊರಕ್ಕೆ ಬಿಡ್ತಾರಾ..? ಕಾದು ನೋಡ್ಬೇಕು.

Related Posts

Don't Miss it !