ಬಿಟ್​ ಕಾಯಿನ್: ಮುಖ್ಯಮಂತ್ರಿ ಹೇಳಿದಂತೆ ಎಲ್ಲವೂ ಆಗ್ತಿದ್ಯಾ..? ಅನುಮಾನ ಏನು..?

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬಿಟ್​​ ಕಾಯಿನ್​ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಆರೋಪ. ಆದರೆ ಬಿಜೆಪಿ ನಾಯಕರು ಬಿಟ್​ ಕಾಯಿನ್​ ದಂಧೆಯನ್ನು ಮುಚ್ಚಿಡುವ ಯತ್ನ ಮಾಡ್ತಿದ್ದಾರಾ..? ಎನ್ನುವ ಅನುಮಾನ ಕಾಡುವುದಕ್ಕೆ ಶುರುವಾಗಿದೆ. ಆದರೆ ಬಿಟ್​ ಕಾಯಿನ್​ ದಂಧೆ ಬಗ್ಗೆ ಶನಿವಾರ ದಿನಪೂರ್ತಿ ಪೊಲೀಸ್​ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಸಿಎಂ ಬಸವರಾಜ್​ ಬೊಮ್ಮಾಯಿ ಸಂಜೆ ವೇಳೆಗೆ ಪೊಲೀಸರಿಂದ ಪ್ರತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅದರಲ್ಲಿ ಕೊಟ್ಟಿರುವ ಕಾರಣಗಳು ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ ಎಂದರೆ ಸುಳ್ಳಲ್ಲ. ರಾಜ್ಯ ಬಿಜೆಪಿ ಸರ್ಕಾರದ ಅಡಿಯಲ್ಲಿ ನಡೆದಿರುವ ಈ ಪ್ರಕರಣ ಕೇಂದ್ರ ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡುವ ಎಲ್ಲಾ ಸಾಧ್ಯತೆಗಳು ಇದೆ. ಇದನ್ನು ಮನಗಂಡಿರುವ ಪ್ರಧಾನಿ ಮೋದಿ ಕೂಡ ಆರ್​ಬಿಐ ಸೇರಿದಂತೆ ಹಣಕಾಸು ಇಲಾಖೆಯ ಪ್ರಮುಖರ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ.

‘ಬಿಟ್​’ಭೂತದ ಬಾಯಿಂದ ತಪ್ಪಿಸಿಕೊಳ್ಳುವ ಕಸರತ್ತು..!

ಬಿಟ್​ ಕಾಯಿನ್​ ವರ್ಗಾವಣೆಯಲ್ಲಿ ಸಿಎಂ ಹೆಸರು ಕೇಳಿಬಂದಿರುವುದು ನಾವಿಕನೇ ಭೂತದ ಬಾಯಿಯಲ್ಲಿ ಸಿಕ್ಕಂತಾಗಿದೆ. ಬಿಟ್​ ಭೂತದಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ನಡೆಸಿದ್ದಾರೆ. ಶನಿವಾರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಜೊತೆಗೆ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಸಂಜೆ ಬಳಿಕ ಮತ್ತೊಮ್ಮೆ ಕಮಲ್​ ಪಂತ್​ ಹಾಗೂ ಸಿಸಿಬಿ ಜಂಟಿ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್​ ಜೊತೆಗೆ ಚರ್ಚೆ ನಡೆಸಿದ ಬಳಿಕ ಪೊಲೀಸರಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ರು. ಅಥವಾ ಸಿಎಂ ಹೀಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿಸಿದ್ರಾ ಎನ್ನುವ ಅನುಮಾನ ದಟ್ಟವಾಗುವಂತೆ ಮಾಡಿದೆ. ಯಾಕೆಂದ್ರೆ ಪೊಲೀಸ್ರು ಮೊದಲು ಕೋರ್ಟ್​ಗೆ ಕೊಟ್ಟಿದ್ದ ಮಾಹಿತಿಯೇ ತಪ್ಪು ಎನ್ನುವಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಆಗಿದೆ.

Read This;

ಪೊಲೀಸರು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಏನಿದೆ..?

ಪೊಲೀಸ್​ ಆಯುಕ್ತರು ಹಾಗೂ ಸಿಸಿಬಿ ಜಂಟಿ ಆಯುಕ್ತ ಸಂದೀಪ್​ ಪಾಟೀಲ್​ ಜೊತೆಗೆ ಸಿಎಂ ಸಭೆ ನಡೆಸಿದ ಬಳಿಕ ಬಿಡುಗಡೆ ಆಗಿರುವ ಪತ್ರಿಕಾ ಪ್ರಕಟಣೆಯಲ್ಲಿ ಶ್ರೀಕಿ ಹ್ಯಾಕ್​ ಮಾಡಿಲ್ಲ, ಅದೆಲ್ಲಾ ಬೋಗಸ್​ ಎಂದಿದ್ದಾರೆ. ಬಿಟ್​ ಕಾಯಿನ್​ ಹ್ಯಾಕ್​ ಮಾಡಿದ್ದೇನೆ ಎಂದಿದ್ದ ಹ್ಯಾಕರ್​​ ಶ್ರೀಕಿ ತೋರಿಸಿದ ವ್ಯಾಲೆಟ್​ನಲ್ಲಿ 31.8 ಬಿಟ್​ ಕಾಯಿನ್​​ ಇದ್ದವು. ಆ ಕಾಯಿನ್​​ಗಳನ್ನು ಜಪ್ತಿ ಮಾಡುವ ಉದ್ದೇಶದಿಂದ ಪೊಲೀಸ್​ ಇಲಾಖೆ ಹೆಸರಲ್ಲಿ ಒಂದು ವ್ಯಾಲೆಟ್​ ಕ್ರಿಯೇಟ್​ ಮಾಡಿ, ಬಿಟ್​ ಕಾಯಿನ್​ ವರ್ಗಾಯಿಸಲು ಮುಂದಾಗಿದ್ದೆವು. ಅಷ್ಟರಲ್ಲಿ ಶ್ರೀಕಿ ತೋರಿಸಿದ ವ್ಯಾಲೆಟ್​ನಲ್ಲಿ ಬರೋಬ್ಬರಿ 186.811 ಬಿಟ್​ ಕಾಯಿನ್​ ಇದ್ದವು. ಆದರೆ ಶ್ರೀಕಿ ತೋರಿಸಿದ್ದು, ಯಾವುದೋ ಎಕ್ಸ್​ಚೇಂಜ್​ ವ್ಯಾಲೆಟ್​ ಎಂದು ಸೈಬರ್​ ತಜ್ಞರು ಹೇಳಿದ್ರು. ಹಾಗಾಗಿ ನಾವು ಬಿಟ್​ ಕಾಯಿನ್​ ಜಪ್ತಿ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಆದ್ರೆ ಸಚಿವ ಸುಧಾಕರ್​ ಮಾತನಾಡಿ ಪೊಲೀಸರ ವ್ಯಾಲೆಟ್​ ಕ್ರಿಯೇಟ್​ ಮಾಡಿದ್ದು ಸ್ವತಃ ಶ್ರೀಕಿ ಎಂದಿದ್ದಾರೆ. ಶ್ರೀಕಿ ಮೂಲಕವೇ ವ್ಯಾಲೆಟ್​ ಕ್ರಿಯೇಟ್​ ಮಾಡಿಸಲಾಯ್ತು ಎಂದಿದ್ದಾರೆ.

Also Read;

ಸಿಎಂ ಬರಬೇಕಿದ್ದ ಪ್ರೆಸ್​ಮೀಟ್​ಗೆ ಆರೋಗ್ಯ ಸಚಿವರು..!

ಪೊಲೀಸ್​ ಅಧಿಕಾರಿಗಳ ಜೊತೆಗೆ ಸಿಎಂ ಸಭೆ ನಡೆಸಿದ ಬಳಿಕ ಪ್ರೆಸ್​ನೋಟ್​ ಬಿಡುಗಡೆ ಆಯ್ತು. ಆದರೆ ಆ ಬಗ್ಗೆ ಏನಾದರೂ ಸ್ಪಷ್ಟನೆ ನೀಡುವುದು ಇದ್ದರೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಹೇಳಬೇಕಿತ್ತು. ಅಥವಾ ಪೊಲೀಸ್​ ಇಲಾಖೆಗೆ ಮುಖ್ಯಸ್ಥರಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ಕೊಡಬೇಕಿತ್ತು. ಅದನ್ನು ಬಿಟ್ಟು ಆರೋಗ್ಯ ಸಚಿವರು ಬಂದು ಪೊಲೀಸ್​ ಇಲಾಖೆಗೆ ಸಂಬಂಧಿಸದ ಪ್ರೆಸ್​ಮೀಟ್​ ಮಾಡಿದ್ದು, ಅನುಮಾನದ ಹುತ್ತ ಬೆಳೆಯುವುದಕ್ಕೆ ಅನುಕೂಲ ಮಾಡಿಕೊಟ್ಟಂತಾಯ್ತು. ಬಸವರಾಜ ಬೊಮ್ಮಾಯಿ ಹಗರಣ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೋ ಅಥವಾ ಬಸವರಾಜ ಬೊಮ್ಮಾಯಿ ಅವರನ್ನು ಇದರಲ್ಲಿ ಸಿಲುಕಿಸುವ ಯತ್ನ ನಡೆದಿದೆಯೋ ಎನ್ನುವುದು ಬೇರೆ ವಿಚಾರ. ಆದರೆ ಬಸವರಾಜ ಬೊಮ್ಮಾಯಿ ಅವರ ನೆರಳಿನಲ್ಲೇ ಬಿಟ್​ಕಾಯಿನ್​ ವ್ಯವಹಾರ ಹಾಗೂ ಶ್ರೀಕಿ ಬಗ್ಗೆ ಪೊಲೀಸರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಮೇಲೆ ಅನುಮಾನ ಮೂಡುವಂತೆ ಮಾಡಿರುವುದರಲ್ಲಿ ಯಾವುದೇ ಸಂಶಯವಿಲ್ಲ.

Related Posts

Don't Miss it !