ಬಿಜೆಪಿ, ಕಾಂಗ್ರೆಸ್​​ ರಾಜಕಾರಣಿಗಳಿಗೆ ವರಮಹಾಲಕ್ಷ್ಮೀ ಹಬ್ಬದ ಬಂಪರ್​ ಗಿಫ್ಟ್​..!

ಕಾಂಗ್ರೆಸ್​ ನಾಯಕ, ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಹಾಗೂ ಬಿಜೆಪಿ ನಾಯಕ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್​ ರಿಲೀಫ್​ ಸಿಕ್ಕಿದೆ. ಧಾರವಾಡ ಬಿಜೆಪಿ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್​ ಗೌಡ ಕೊಲೆ ಪ್ರಕರಣದನಲ್ಲಿ ಜೈಲು ಸೇರಿದ್ದ ವಿನಯ್​ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಕಳೆದ ವಾರ ಕೊಲೆ ಕೇಸ್​ನಲ್ಲಿ ಸುಪ್ರೀಂಕೋರ್ಟ್​ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಸಾಕ್ಷ್ಯ ನಾಶ ಪ್ರಕರಣದಲ್ಲಿ ಜನಪ್ರತಿನಿಧಿ ಕೋರ್ಟ್​ನಲ್ಲಿ ಜಾಮೀನು ಸಿಗದಿದ್ದ ಕಾರಣಕ್ಕೆ ಜೈಲಿನಲ್ಲೇ ಕಾಲ ಕಳೆಯುವಂತಾಗಿತ್ತು. ಇದೀಗ ಸಾಕ್ಷ್ಯ ನಾಶ ಪ್ರಕರಣದಲ್ಲೂ ಜಾಮೀನು ಸಿಕ್ಕಿರುವ ಕಾರಣ ಜೈಲಿನಿಂದ ಬಿಡುಗಡೆ ಆಗುವ ಭಾಗ್ಯ ಸಿಕ್ಕಂತಾಗಿದೆ.

ನಾಳೆ ವಿನಯ್​ ಅಭಿಮಾಮಿಗಳಿಗೆ ಹಬ್ಬದೂಟ..!

ವಿನಯ್​ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಸಿಗುತ್ತಿದ್ದ ಹಾಗೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಹಿಂಡಲಗಾ ಜೈಲಿನ ಎದುರು ಬರುವಂತೆ ಅಭಿಮಾನಿಗಳ ಬಳಗಕ್ಕೆ ಸಂದೇಶ ರವಾನೆ ಮಾಡಲಾಗಿದೆ. ಈಗಾಗಲೇ ಸಂಭ್ರಮಾಚರಣೆ ಜೋರಾಗಿ ನಡೆದಿದ್ದು, ನಾಳೆ ಬೆಳಗ್ಗೆ ಬೆಳಗಾವಿ ಜೈಲಿನ ಎದುರು ಹುಬ್ಬಳ್ಳಿ ಧಾರವಾಡದಿಂದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದೆ. ಜೈಲಿನಿಂದ ಬಿಡುಗಡೆ ಆದ ಬಳಿಕ ಧಾರವಾಡಕ್ಕೆ ತೆರಳದಂತೆ ಕೋರ್ಟ್​ ಷರತ್ತು ವಿಧಿಸಿದೆ. ಇನ್ನೂ ಇಬ್ಬರು ವ್ಯಕ್ತಿಗಳ ಶ್ಯೂರಿಟಿ‌ ಬಾಂಡ್ ನೀಡಬೇಕು. ವಾರಕ್ಕೆ ಎರಡು ಬಾರಿ ಸಿಬಿಐ ಅಧಿಕಾರಿಗಳ ಎದುರು ಹಾಜರಾಗಿ ಸಹಿ ಮಾಡಬೇಕು ಎಂದು ಸೂಚನೆ ನೀಡಿದೆ. ಜೊತೆಗೆ ಬೇಲ್​ ಮೇಲೆ ಇದ್ದುಕೊಂಡು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ ಜಾಮೀನು ರದ್ದು ಮಾಡುವುದಾಗಿಯೂ ಕೋರ್ಟ್​ ಕಟ್ಟುನಿಟ್ಟಾಗಿ ತಿಳಿಸಿದೆ.

ಇದನ್ನೂ ಓದಿ

ವಿನಯ್​ ಕುಲಕರ್ಣಿ ಬಂಧನ ಆಗಿದ್ದು ಯಾಕೆ..?

2016ರಲ್ಲಿ ಜಿಲ್ಲಾ ಪಂಚಾಯ್ತಿ ಚುನಾವಣೆ ಘೋಷಣೆ ಆಗಿತ್ತು. ಆದ್ರೆ ಜಿಲ್ಲಾ ಪಂಚಾಯ್ತು ಸದಸ್ಯನಾಗಿದ್ದ ಯೋಗೇಶ್ ಗೌಡ ಅವರಿಗೆ ಚುನಾವಣೆಗೆ ನಿಲ್ಲದಂತೆ ಒತ್ತಡ ಹೇರಲಾಗಿತ್ತು. ಆದರೆ ವಿನಯ್​ ಕುಲಕರ್ಣಿ ಒತ್ತಡಕ್ಕೆ ಸೊಪ್ಪು ಹಾಕದ ಕಾರಣ ತನ್ನ ಶಿಷ್ಯ ಮುತ್ತಗಿ ಜೊತೆಗೆ ಸೇರಿಕೊಂಡು ಯೋಗೇಶ್​ಗೌಡನ ಕೊಲೆಗೆ ಸಂಚು ರೂಪಿಸಲಾಗಿತ್ತು ಎನ್ನುವುದು ಆರೋಪ. 2016ರ ಜೂನ್ 15 ರಂದು ಜಿಮ್​ನಲ್ಲಿ ಕೊಲೆ ಮಾಡಲಾಗಿತ್ತು. ಬೆಂಗಳೂರಿನ ಹೋಟೆಲ್​ನಲ್ಲಿ ಉಳಿದುಕೊಂಡಿದ್ದ ವಿನಯ್​ ಕುಲಕರ್ಣಿ, ಹತ್ಯೆಗೂ 2 ದಿನ ಮುಂಚೆಯೇ ದೆಹಲಿಗೆ ತೆರಳಿದ್ದಂತೆ ದಾಖಲೆ ಸೃಷ್ಟಿಸಿದ್ದರು ಕೊಲೆ ಆದ 3 ದಿನಗಳ ತನಕ ದೆಹಲಿಯಲ್ಲೇ ಇದ್ದರೂ ಎನ್ನುವಂತೆ ದಾಖಲೆ ಸೃಷ್ಟಿಸಿದ್ದರು ಎನ್ನುವುದು ಸಿಬಿಐ ಮಾಡಿರುವ ಆರೋಪ. ಕಳೆದ 9 ತಿಂಗಳು ಕಾಲ ಜೈಲು ವಾಸ ಅನುಭವಿಸಿದ ಮಾಜಿ ಮಿನಿಸ್ಟರ್​ ವಿನಯ್​ ಕುಲಕರ್ಣಿ ಜೈಲಿನಿಂದ ಬಿಡುಗಡೆ ಆಗುತ್ತಿದ್ದಾರೆ.

ಇದನ್ನೂ ಓದಿ

ಜನಾರ್ದನ ರೆಡ್ಡಿಗೆ ಬಳ್ಳಾರಿ ಬಾಗಿಲು ತೆರೆದ ಕೋರ್ಟ್​

ಅಕ್ರಮ ಗಣಿಗಾರಿಕೆ ಕೇಸ್​ನಲ್ಲಿ ಜೈಲು ಶಿಕ್ಷೆ ಅನುಭವಿಸಿ ಸದ್ಯಕ್ಕೆ ಬೇಲ್​ ಮೇಲೆ ಹೊರಗಿರುವ ಜನಾರ್ದನ ರೆಡ್ಡಿಗೆ ಕೋರ್ಟ್​ ಮತ್ತೊಂದು ಗುಡ್​ ನ್ಯೂಸ್​ ಕೊಟ್ಟಿದೆ. 8 ವಾರಗಳ ಕಾಲ ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಅನಂತಪುರಂಗೆ ಭೇಟಿ ನೀಡಲು ಅವಕಾಶ ಕೊಡುವಂತೆ ಮನವಿ ಮಾಡಿದ್ದರು. ಜನಾರ್ದನ ರೆಡ್ಡಿ ಮನವಿಗೆ ಆಕ್ಷೇಪಣೆ ಸಲ್ಲಿಸಿದ ಸಿಬಿಐ ಪರ ವಕೀಲರು, ಸಾಕ್ಷಿ ನಾಶ ಮಾಡುವ ಭೀತಿ ವ್ಯಕ್ತಪಡಿಸಿದ್ದರು. ಆದರೆ ಆರೋಪಿಯೂ ಇಷ್ಟು ದಿನಗಳ ಕಾಲ ಜೈಲಿನಿಂದ ಹೊರಗಡೆ ಇದ್ದರೂ ಕೋರ್ಟ್​ ವಿಧಿಸಿರುವ ಯಾವುದೇ ಷರತ್ತನ್ನು ಉಲ್ಲಂಘನೆ ಮಾಡಿಲ್ಲ. ಹಾಗಾಗಿ ಈಗಲೂ ಕೋರ್ಟ್​ ಆದೇಶವನ್ನು ಮೀರುವುದಿಲ್ಲ ಎಂದು ಪ್ರತಿವಾದ ಮಂಡಿಸಿದ್ದರು. ಜನಾರ್ದನ ರೆಡ್ಡಿ ವಾದ ಮನ್ನಿಸಿದ ಸುಪ್ರೀಂಕೋರ್ಟ್​ 8 ವಾರಗಳ ಕಾಲ ಬಳ್ಳಾರಿಯಲ್ಲಿ ಇರಲು ಅನುಮತಿ ನೀಡಿದೆ.

Related Posts

Don't Miss it !