ಚುನಾವಣೆ ಗೆಲ್ಲಲು ಬಿಜೆಪಿ ಬಳಿ ಬ್ರಹ್ಮಾಸ್ತ್ರ.. ಹಳಿ ತಪ್ಪುತ್ತಾ ಕಾಂಗ್ರೆಸ್, ಜೆಡಿಎಸ್ ಲೆಕ್ಕ..!?

ಬಿಜೆಪಿ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸ್ತಾರೆ. ಈ ಬಾರಿ‌ ಬಿಜೆಪಿ ಸೋಲುವುದು ಖಚಿತ ಅಂತಾ ಜನರು ಮಾತನಾಡಿಕೊಳ್ತಾರೆ. ಆದರೆ ಮುಂದಿನ ಚುನಾವಣೆಯಲ್ಲಿ‌ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ಆ ಬಳಿಕ ವಿರೋಧ ಪಕ್ಷಗಳು ಯಥಾ ಪ್ರಕಾರ ಇವಿಎಂ ಮೆಷಿನ್ ಕಡೆಗೆ ಬೊಟ್ಟು ಮಾಡಿ ತೋರಿಸ್ತಾರೆ. ಆದರೆ ಬಿಜೆಪಿ ತಂತ್ರಗಾರಿಕೆ ಗೆಲುವು ಕಾಣುತ್ತದೆ. ಅದೇ ಬಿಜೆಪಿ ಉರುಳಿಸಿದ ದಾಳವನ್ನು ಅರ್ಥ ಮಾಡಿಕೊಳ್ಳದೆ ತಾನೇ ಉರುಳಿಗೆ ಸಿಲುಕಿಕೊಳ್ಳುತ್ತವೆ. ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ದಾಳ ಉರುಳಿಸಲು ಬಿಜೆಪಿ ಸಜ್ಜಾಗುತ್ತಿದೆ. ಭಾನುವಾರ ಮಾತನಾಡಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಈ ಬಗ್ಗೆ ಸುಳಿವು ನೀಡಿದ್ದಾರೆ.

ಚುನಾವಣಾ ಗೆಲುವಿಗಾಗಿ ಬದಲಾವಣೆ ಮಾಡ್ತೇವೆ..!!

ಮೈಸೂರಿನ ಪ್ರಮುಖರ ಸಭೆಯಲ್ಲಿ ಮಾತನಾಡಿದ ಬಿ.ಎಲ್ ಸಂತೋಷ್, ನಾಯಕತ್ವ ಬದಲಾವಣೆಯೇ ಬಿಜೆಪಿಗೆ ದೊಡ್ಡ ಶಕ್ತಿ, ಪಂಜಾಬ್, ಗುಜರಾತ್‌ನಲ್ಲಿ ಈ ಪ್ರಯೋಗ ಯಶಸ್ವಿ ಆಗಿದೆ. ಹಾಲಿ‌ ಶಾಸಕರು ಹಾಗೂ ಅವರ ಕುಟುಂಬಸ್ಥರನ್ನ ಹೊರಗಿಟ್ಟು ಚುನಾವಣೆ ಮಾಡುತ್ತೇವೆ ಎಂದಿದ್ದಾರೆ. ಹೊಸ ಮುಖಗಳ ಪರಿಚಯ ಮಾಡುತ್ತಿರುವುದೇ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಗಿದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೆ ಟಿಕೇಟ್ ನೀಡಲಿಲ್ಲ. ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿದ್ದವರನ್ನು ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಮತ್ತೆ ಅಧಿಕಾರಕ್ಕೆ ಏರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ ಎಂದಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಆಗುತ್ತಾ ಎನ್ನುವ ಪರಿಸ್ಥಿತಿ ಉದ್ಬವ..!!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮಾತಿನ ಸಾರಾಂಶ ಅದೇ ರೀತಿಯಲ್ಲಿದೆ. ಮಾರ್ಮಿಕ ಮಾತನಾಡಿರುವ ಸಂತೋಷ್, ಮುಂದಿನ ಚುನಾವಣಾ ಗೆಲುವಿಗಾಗಿ ಬದಲಾವಣೆ ಎಂದಿದ್ದಾರೆ. ಈ ಬಗ್ಗೆ ಅಮಿತ್ ಷಾ ರಾಜ್ಯ ಪ್ರವಾಸದ ವೇಳೆ ಅಂತಿಮ ಆಗಲಿದೆ ಎನ್ನಲಾಗ್ತಿದೆ. ರಾಜ್ಯ ವಿಧಾನಸಭಾ ಚುನಾವಣೆ 2023 ರಲ್ಲಿ ನಡೆಯಲಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಗುಜರಾತ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಮಾಡಿದ ತಂತ್ರಗಾರಿಕೆಯನ್ನೇ ಇಲ್ಲೂ ಮಾಡ್ತಾರಾ..? ಎನ್ನುವ ಶಂಕೆ ಶುರುವಾಗಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಂತೋಷ್ ಮಾತನಾಡಿಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ಹಾಲಿ ಶಾಸಕರನ್ನು ಬಿಟ್ಟು ಹೊಸ ಮುಖಗಳಿಗೆ ಟಿಕೆಟ್ ಕೊಟ್ಟು ಗೆಲ್ಲಿಸುವ ಬಗ್ಗೆ ಮಾತನಾಡಿದ್ದಾರೆ ಅಷ್ಟೆ ಎನ್ನುವ ಮಾತುಗಳೂ ಕೂಡ ಕೇಳಿ ಬಂದಿವೆ.

ಕಾಂಗ್ರೆಸ್, ಜೆಡಿಎಸ್ ಮತ್ತೆ ಮುಗ್ಗರಿಸಿ ಬೀಳುತ್ವಾ..?

ರಾಜಕೀಯ ಪಕ್ಷಗಳಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ ಅಂದ್ರೆ ಒಂದು ಪಕ್ಷದಲ್ಲಿ ಟಿಕೆಟ್ ಕೈತಪ್ಪಿದ ಕೂಡಲೇ ಆ ವ್ಯಕ್ತಿಯನ್ನು ಸೆಳೆದು ಬೇರೆ ಪಕ್ಷದವರು ಟಿಕೆಟ್ ನೀಡುವುದು. ಆದರೆ ಬಿಜೆಪಿ ಭಿನ್ನ ಹಾದಿಯನ್ನು ಆಯ್ಕೆ ಮಾಡಿಕೊಂಡಿದೆ. ತನ್ನ ಪಕ್ಷದಲ್ಲಿ ಗೆಲುವು ಸಾಧಿಸಿ, ಈಗ ಮತ್ತೆ ಟಿಕೆಟ್ ಕೊಟ್ಟರೆ ಜನರ ವಿರೋಧದಿಂದ ಸೋಲುತ್ತಾರೆ ಎನ್ನುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡದೆ ಬೇರೊಬ್ಬರ ಮೂಲಕ ಕ್ಷೇತ್ರ ಉಳಿಸಿಕೊಳ್ಳುವ ತಂತ್ರಗಾರಿಕೆ ಮಾಡುತ್ತಿದೆ. ಬಿಜೆಪಿ ಟಿಕೆಟ್ ಕೊಟ್ಟಿಲ್ಲದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಅಥವಾ ಜೆಡಿಎಸ್ ಟಿಕೆಟ್ ಕೊಟ್ಟರೆ ಮತ್ತೆ ಸೋಲುವುದು ಖಚಿತ. ಜೊತೆಗೆ ತನ್ನ ಕಾರ್ಯಕರ್ತರ ವಿರೋಧವನ್ನು ಎದುರಿಸಬೇಕಾಗುತ್ತದೆ. ಇದೇ ರೀತಿ ಆದರೆ ಕರ್ನಾಟಕದಲ್ಲೂ ಕೇಸರಿ ರಣತಂತ್ರ ಫಲಿಸಲಿದೆ ಎನ್ನುತ್ತಾರೆ ತಜ್ಞರು.

Related Posts

Don't Miss it !