BJP ಲೀಡರ್​ ಮರ್ಡರ್​ ಮಿಸ್ಟರಿ..! ಮಾಧ್ಯಮದ ಎದುರು ಪತ್ನಿ ತಬ್ಬಿಬ್ಬು.. ಅಸಲಿ ಕಹಾನಿ ಏನು..?

ಅನಂತ ರಾಜು ಹಾಗೂ ಗೆಳತಿ ರೇಖಾ

ಮದುವೆ ಆದ ಬಳಿಕ ತನ್ನ ಗಂಡ ಶ್ರೀರಾಮ ಚಂದ್ರನ ಹಾಗೆ ಇರಬೇಕು ಎಂದು ಬಯಸುವುದು ಹೆಣ್ಣಿನ ಮೊದಲ ಗುಣ. ಆದರೆ ಬೆಂಗಳೂರಿನ ಬಿಜೆಪಿ ಮುಖಂಡ ಅನಂತ ರಾಜು ಇದಕ್ಕೆ ತದ್ವಿರುದ್ಧ. ಮನೆಯಲ್ಲಿ ಕಟ್ಟಿಕೊಂಡ ಹೆಂಡತಿ ಇದ್ದರೂ ಬೇರೊಂದು ಹೆಣ್ಣಿನ ಸಹವಾಸ ಮಾಡಿದ್ದ. ಒಂದಲ್ಲ ಎರಡಲ್ಲ ಆರು ಷರ್ಷಗಳ ಕಾಲ ಎರಡೂ ಕಡೆಯಲ್ಲೂ ಸಂಸಾರ ಮಾಡಿದ್ದ. ಕೊನೆಗೆ ಗುಪ್ತ್ ಗುಪ್ತ್ ಆಟಗಳು ಬಯಲಾದ ಮೇಲೆ ಸಾವನ್ನಪ್ಪಿದ್ದು, ಸತ್ತ ಬಳಿಕ ವಿಚಾರ ಜಟಾಪಟಿಗೆ ಸಾಕ್ಷಿಯಾಗಿದೆ. ತನ್ನ ಗಂಡನ ಸಾವಿಗೆ ಅನಂತ್ ರಾಜು ಸ್ನೇಹಿತೆ ರೇಖಾ ಕಾರಣ ಎಂದು ಪತ್ನಿ ಸುಮಾ ದೂರು ನೀಡಿದ್ರೆ, ನಾನು ಕಾರಣ ಅಲ್ಲ ಸುಮಾ ಗಂಡನನ್ನು ಗೃಹ ಬಂಧನದಲ್ಲಿ ಇಟ್ಟು ಚಿತ್ರಹಿಂಸೆ ನೀಡಿ ಸಾಯಿಸಿ, ಆತ್ಮಹತ್ಯೆ ಕಥೆ ಕಟ್ಟುತ್ತಿದ್ದಾರೆ ಎನ್ನುವುದು ಅನಂತ ರಾಜು ಗೆಳತಿ ರೇಖಾ ಆರೋಪ.

ಅನಂತ ರಾಜು ಹಾಗೂ ಪತ್ನಿ ಸುಮಾ

ತಾನೇ ಕೊಂದಿದ್ದರೆ ದೂರು ಕೊಟ್ಟಿದ್ಯಾಕೆ ಅನಂತ್ ರಾಜು ಪತ್ನಿ..!?

ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ‌ ಮುಖಂಡನಾಗಿ ಸಚಿವ ಎಸ್.ಟಿ ಸೋಮಶೇಖರ್ ಜೊತೆಗೆ ಗುರುತಿಸಿಕೊಂಡಿದ್ದ ಅನಂತ ರಾಜು, ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಸ್ಟ್ ಮಾರ್ಟಂ ಮಾಡಿ ಅಂತ್ಯಕ್ರಿಯೆ ಕೂಡ ಮಾಡಲಾಗಿತ್ತು. ಆದರೆ ಕೆಲವು ದಿನಗಳ ನಂತರ ಅನಂತ ರಾಜು ಬರೆದಿಟ್ಟಿದ್ದರು ಎನ್ನಲಾದ ಡೆತ್‌ನೋಟ್ ಸಿಕ್ಕಿದೆ. ಇದರಲ್ಲಿ ಅನಂತ ರಾಜು ಅಕ್ರಮ ಸಂಬಂಧ ಹೊಂದಿದ್ದ ರೇಖಾ ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಪತ್ನಿ ಸುಮಾ ದೂರು ನೀಡಿದ್ದರು. ಆ ಬಳಿಕ ರೇಖಾ ಬಂಧನವಾಗಿ ಜಾಮೀನು ಮೇಲೆ ಬಿಡುಗಡೆ ಆಗಿದ್ದಾರೆ. ಈಗ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಸ್ವತಃ ಪತ್ನಿ ಸುಮಾ ಗಂಡನನ್ನು ಸಾಯಿಸುವ ಬಗ್ಗೆ ಮಾತನಾಡಿದ್ದಾರೆ. ಇವನು ಸತ್ತ ಮೇಲೆ ನಿನ್ನನ್ನೂ ಜೈಲಿಗೆ ಕಳಿಸ್ತೇನೆ ಎಂದು ಮೊದಲೇ ಹೇಳಿದ್ದಾರೆ. ನಾನು ಅಕ್ರಮ ಸಂಬಂಧ ಇದ್ದಿದ್ದು ಸತ್ಯ. ಆದರೆ ಅನಂತ್ ರಾಜು ಸಾವಿಗೆ ಕಾರಣ ನಾನಲ್ಲ, ಅನಂತ್ ರಾಜು ಪತ್ನಿ ಸುಮಾ ಎನ್ನುವುದನ್ನು ಖಡಾಖಂಡಿತವಾಗಿ ರೇಖಾ ಹೇಳಿದ ಬಳಿಕ ಸುಮಾ ಓಡೋಡಿ ಬಂದು ಸುದ್ದಿಗೋಷ್ಟಿ‌ ಮಾಡಿದ್ದಾರೆ.

ನನ್ನ ಗಂಡನನ್ನು ನಾನು ಕೊಲೆ ಮಾಡಿಲ್ಲ ಎಂದ ಅನಂತ ರಾಜು ಪತ್ನಿ..!

ಅನಂತ್ ರಾಜು ಅಕ್ರಮ ಸಂಬಂಧ ಇರುವುದು ಕಳೆದ ಒಂದೂವರೆ ವರ್ಷಗಳ ಹಿಂದೆಯೇ ಬಹಿರಂಗ ಆಗಿತ್ತು. ಆಗಲೇ ಪೊಲೀಸ್ ಠಾಣೆಗೆ ಕರೆದು ಬುದ್ಧಿವಾದ ಹೇಳಲಾಗಿತ್ತು.‌ ರೇಖಾ ಇನ್ಮುಂದೆ ನಾನು ನಿಮ್ಮ ಸಂಸಾರದಲ್ಲಿ ಬರೋದಿಲ್ಲ ಎನ್ನುವ ಹೇಳಿಕೆಯನ್ನು ಬರೆದುಕೊಟ್ಟಿದ್ದರು ಎನ್ನುವುದು ಬಹಿರಂಗ ಆಗಿರುವ ವಿಚಾರ. ಇದನ್ನು ವಕೀಲರು ಕೂಡ ಹೇಳಿದ್ದು, ಕೋರ್ಟ್‌ನಲ್ಲಿ ಮಾನಹಾನಿ ದೃಶ್ಯ ಪ್ರಸಾರ ಮಾಡದಂತೆ ಸ್ಟೇ ತೆಗೆದುಕೊಳ್ಳುವಾಗ ಪೊಲೀಸ್ ಠಾಣೆಯ NCR ಕಾಪಿಯನ್ನು ಕೋರ್ಟ್‌ಗೆ ಕೊಟ್ಟಿದ್ದೇವೆ ಎಂದಿದ್ದಾರೆ. ಆದರೆ ಪತ್ನಿ ಸುಮಾ‌ ಮಾತ್ರ ನನಗೆ ಯಾವುದೇ ವಿಷಯ ಗೊತ್ತಿರಲಿಲ್ಲ. ಕೇವಲ ಇತ್ತೀಚಿಗೆ ಮಾಹಿತಿ ತಿಳಿತು, ಆಗ ಗಲಾಟೆ ಮಾಡಿದ್ದೆ ಅಷ್ಟೆ. ಕೊಲೆ ಮಾಡಿಲ್ಲ ಎಂದಿದ್ದಾರೆ. ಕೊಲೆಯಲ್ಲ ಎನ್ನುವುದಾದರೆ ನೇಣು ಬಿಗಿದುಕೊಂಡಿದ್ದ ಸೀರೆ ಸುಟ್ಟಿದ್ಯಾಕೆ..? ಆತ್ಮಹತ್ಯೆ ಪ್ರಕರಣ ದಾಖಲಾದಾಗ ಪೊಲೀಸರಿಗೆ ಹನಿಟ್ರ್ಯಾಪ್‌ ಬಗ್ಗೆ ಯಾಕೆ ಮಾಹಿತಿ ನೀಡಲಿಲ್ಲ ಎನ್ನುವ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ.

ಅನಂತ ರಾಜು ಸಾವಿನ ಕೇಸ್‌ನಲ್ಲಿ ರಾಜಕೀಯ ನುಸುಳುತ್ತಿದ್ಯಾ..?

ಅನಂತ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರಾ..? ಅಥವಾ ಕೊಲೆ ಮಾಡಿ ಆತ್ಮಹತ್ಯೆ ಕಥೆ ಕಟ್ಟಿದ್ದಾರಾ..? ಎನ್ನುವ ಅನುಮಾನ ದಟ್ಟವಾಗಿದೆ. ಆದರೆ ಇಲ್ಲಿವರೆಗೂ ಸಿಕ್ಕಿರುವ ಮಾಹಿತಿಗಳು ಪತ್ನಿಯೇ ಕಿರುಕುಳ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿರಬಹುದು ಎನ್ನುವುದನ್ನು ಒತ್ತಿ ಹೇಳುತ್ತಿವೆ. ಆದರೂ ಅನಂತ್ ರಾಜು ಪತ್ನಿ ಸುಮಾರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿಲ್ಲ. ರೇಖಾಳನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರೂ ಕೋರ್ಟ್ ಜಾಮೀನು ನೀಡಿದೆ. ರೇಖಾ ಹೇಳುವಂತೆ ಇದರಲ್ಲಿ ರಾಜಕೀಯ ಬೇಡ, ಬಿಜೆಪಿ ಮುಖಂಡ ಸಾವನ್ನಪ್ಪಿರಬಹುದು, ಆದರೆ ಇದರಲ್ಲಿ ಯಾರನ್ನೋ ರಕ್ಷಣೆ ಮಾಡುವ ಕೆಲಸ ಮಾಡಬೇಡಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಒತ್ತಾಯ ಮಾಡಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಮೊದಲೇ ಡೆತ್‌ನೋಟ್ ಬರೆಸಿಟ್ಟುಕೊಂಡಿದ್ರಾ..? ಇಲ್ಲ ಎನ್ನುವುದಾದರೆ ಸಾಯುವ ಮೊದಲೇ ಆತ್ಮಹತ್ಯೆ ಬಗ್ಗೆ ಫೋನ್‌ನಲ್ಲಿ ಚರ್ಚಿಸಿದ್ದು ಹೇಗೆ..? ಎನ್ನುವುದು ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿರುವ ಅನುಮಾನ. ರೇಖಾ ಜೊತೆಗಿನ ಸಂಬಂಧ ಅಕ್ರಮವೋ ಸಕ್ರಮವೋ ಎನ್ನುವುದು ಮುಖ್ಯವಲ್ಲ. ಕೊಲೆ ಮಾಡಿದವರಿಗೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಚಿತ್ರಹಿಂಸೆ ನೀಡಿದವರಿಗೆ ಶಿಕ್ಷೆ ಆಗಬೇಕಾದ್ದದ್ದು ಅನಿವಾರ್ಯ. ಬೆಂಗಳೂರಿನ ಪೊಲೀಸರು ಈಗ ನ್ಯಾಯ ಕೊಡಿಸ್ತಾರಾ..? ಅಥವಾ ರಾಜಕೀಯ ಒತ್ತಡಕ್ಕೆ ಮಣಿತಾರಾ..? ಎನ್ನುವ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

Related Posts

Don't Miss it !