ಕ್ಲಬ್​ನಲ್ಲಿ ಮೈಮರೆತು ಕುಣಿದು ಸತ್ತಿದ್ದು ಹೇಗೆ ಬಿಜೆಪಿ ನಾಯಕಿ..? ಸಾವಿನ ಸುತ್ತ ಇಲ್ಲಿದೆ ಅನುಮಾನ..

ವೈಲ್ಡ್​ ಕಾರ್ಡ್​ ಮೂಲಕ ಹಿಂದಿ ಬಿಗ್​ಬಾಸ್​ಗೆ ಎಂಟ್ರಿ ಪಡೆದಿದ್ದ ನಟಿ ಸೊನಾಲಿ ಪೋಗಟ್, ಬಿಜೆಪಿ ಮೂಲಕ ರಾಜಕೀಯಕ್ಕೂ ಪ್ರವೇಶ ಮಾಡಿದ್ದರು. ಹರ್ಯಾಣದ ಹಿಸ್ಸಾರ್​ ಮೂಲದ ನಟಿ ಸೊನಾಲಿ ಪೊಗಟ್​ ಕಳೆದ ವೀಕೆಂಡ್​ನಲ್ಲಿ ಗೋವಾಗೆ ಬಂದು ಸಾವನ್ನಪ್ಪಿದ್ದರು. ಮೊದಲಿಗೆ ಹೋಟೆಲ್​ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕುಟುಂಬಸ್ಥರು, ಹೃದಯಾಘಾತ ಅಲ್ಲ, ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆ ನಂತರ ಪೊಲೀಸರಿಗೆ ಸಿಕ್ಕಿದ್ದು ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಅಂದರೆ ತಪ್ಪಲ್ಲ. ಯಾಕಂದ್ರೆ ಕುಟುಂಬಸ್ಥರು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿಕೊಟ್ಟ ಬೆನ್ನಲ್ಲೇ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಗೋವಾ ಪೊಲೀಸರಿಗೆ ಹೃದಯಾಘಾತ ಅಲ್ಲ ಅನ್ನೋದನ್ನು ಪೋಸ್ಟ್​ ಮಾರ್ಟಂ ರಿಪೋರ್ಟ್​ ಸಾಬೀತು ಮಾಡಿತ್ತು. ಇದೀಗ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ.

ಸಾವಿಗೂ ಮುನ್ನ ನಡೆದಿದ್ದ ಮೋಜು ಮಸ್ತಿ ದೃಶ್ಯ ಬಹಿರಂಗ..!

ಕಳೆದ ಭಾನುವಾರ ಅಂದರೆ ಆಗಸ್ಟ್​ 22ರಂದು ಗೋವಾ ಕಡೆಗೆ ಹೊರಟಿದ್ದು ಸೋಮವಾರ ರಾತ್ರಿ ಗೋವಾದಲ್ಲೇ ತಂಗಿದ್ದರು. ಬಿಜೆಪಿ ನಾಯಕಿ ಸೊನಾಲಿ ಪೊಗಟ್ ಏಕಾಂಗಿಯಾಗಿ ಬಂದಿರಲಿಲ್ಲ​, ತನ್ನ ಕುಟುಂಬಸ್ಥರ ಜೊತೆಗೂ ಬಂದಿರಲಿಲ್ಲ. ಬದಲಿಗೆ ತನ್ನ ಆಪ್ತ ಸಹಾಯಕ ಸುಧೀರ್​ ಸಂಗ್ವಾನ್​ ಹಾಗು ಆತನ ಸ್ನೇಹಿತ ಸುಖ್ವಿಂದರ್​ ಸಿಂಗ್​ ಜೊತೆಗೆ ಬಂದಿದ್ದರು. ಸಾಯುವ ಕೆಲವೇ ಗಂಟೆಗಳ ಮುಂಚಿನ ವೀಡಿಯೋ ಬಿಡುಗಡೆ ಆಗಿದ್ದು, ಅಂಜುನಾ ಬೀಚ್​ನ ಕರ್ಲೀಸ್​​ ರೆಸ್ಟೋರೆಂಟ್​ನಲ್ಲಿ ನಡೆದ ಪಾರ್ಟಿಯಲ್ಲಿ ಮಸ್ತ್​ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ. ಕುಣಿದು ಕಪ್ಪಳಿಸಿರುವ ಬಿಜೆಪಿ ನಾಯಕಿ, ತಾನು ಸಿನಿಮಾ ನಟಿ ಎನ್ನುವುದನ್ನು ಸಾರಿ ಸಾರಿ ಹೇಳಿದಂತಿದೆ. ಆ ಬಳಿಕ ಮತ್ತೊಂದು ವೀಡಿಯೋದಲ್ಲಿ ಅರೆ ಬರೆ ಬಟ್ಟೆಯಲ್ಲಿ ಆಪ್ತ ಸಹಾಯಕರ ಸಹಾಯದಿಂದ ನಡೆಯಲಾಗದ ಸ್ಥಿತಿಯಲ್ಲಿ ಹೋಗಿರುವುದು ಗೊತ್ತಾಗಿದೆ. ಇನ್ನು ದೇಹದಲ್ಲಿ ಡ್ರಗ್ಸ್​ ಸೇರಿದೆ ಎನ್ನುವುದನ್ನು ಪೊಲೀಸ್ರು ಬಹಿರಂಗ ಮಾಡಿದ್ದಾರೆ.

ಡ್ರಗ್ಸ್​ ಒತ್ತಾಯ ಪೂರ್ವಕವಾಗಿ ಕುಡಿಸಿದ್ರಾ..? ಅಥವಾ ಕಟ್ಟು ಕಥೆನಾ..?

ಬಿಜೆಪಿ ನಾಯಕಿ ಸೊನಾಲಿ ಪೊಗಟ್​​ ಸಾವನ್ನಪ್ಪಿದ್ದಾರೆ. ಅದು ಆಕಸ್ಮಿಕವೋ ಅಥವಾ ಉದ್ದೇಶ ಪೂರ್ವಕವಾಗಿ ನಡೆದಿರುವ ಕೊಲೆಯೋ ಎನ್ನುವ ಬಗ್ಗೆ ಪೊಲೀಸರಲ್ಲೇ ಅನುಮಾನದ ಹುತ್ತ ಬೆಳೆದು ನಿಂತಿದೆ. ಆದರೆ ಸಾವಿಗೂ ಮುನ್ನ ಡ್ರಗ್ಸ್​ ತೆಗೆದುಕೊಂಡಿದ್ದಾರೆ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಒತ್ತಾಯ ಪೂರ್ವಕವಾಗಿ ಡ್ರಗ್ಸ್​ ಕೊಟ್ಟು ನಟಿ ಸೊನಾಲಿ ಪೊಗಟ್​ ಅವರನ್ನು ಸಾಯಿಸಿದ್ದಾರೆ ಎನ್ನುವ ಅನುಮಾನದಲ್ಲಿ ಆಪ್ತ ಸಹಾಯಕ ಹಾಗು ಆತನ ಸ್ನೇಹಿತನನ್ನು ಗೋವಾ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಗೋವಾದಲ್ಲಿ ಆಪ್ತರಿಬ್ಬರ ಜೊತೆಗೆ ಬಂದಿದ್ದು ಯಾಕೆ..? ಅವರ ಜೊತೆಗೆ ಮೋಜು ಮಸ್ತಿಯಲ್ಲಿ ತೊಡಗಿದ್ದು ಯಾಕೆ..? ಒತ್ತಾಯ ಪೂರ್ವಕವಾಗಿ ಆಕೆಯನ್ನು ಕರೆದುಕೊಂಡು ಬಂದಿದ್ದರೆ, ಕುಟುಂಬಸ್ಥರಿಗೆ ಈ ಬಗ್ಗೆ ತಿಳಿಸಿಲ್ಲ ಯಾಕೆ.. ಎನ್ನುವುದು ಖಾಕಿಪಡೆಗೂ ಬಿಡಿಸಲಾಗದ ಜೇಡರ ಬಲೆಯಂತೆ ಕಾಣಿಸುತ್ತಿದೆ.

ತನ್ನ ತಾಯಿ ಸಾವಿಗೆ ನ್ಯಾಯ ಕೊಡಿಸಿ ಎಂದಿರುವ ಮಗಳು..!

ಸಹೋದರಿ ಮೇಲೆ ಅತ್ಯಾಚಾರ ಮಾಡಿದ್ದಾರೆ, ಕೊಲೆ ಮಾಡಿದ್ದಾರೆ ಎನ್ನುವುದು ಸೊನಾಲಿ ಪೊಗಟ್​ ಒಡಹುಟ್ಟಿದವರ ಆರೋಪ. ಆದರೆ ತನ್ನ ತಾಯಿ ಸಾವಿಗೆ ನ್ಯಾಯ ಕೊಡಿಸಿ ಎಂದು ವಯಸ್ಕ ಮಗಳು ಕಣ್ಣೀರು ಹಾಕುತ್ತಿದ್ದಾಳೆ. ಆದರೆ ಈ ಮೂವರು ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಒಂದೂವರೆ ನಿಮಿಷದ ವೀಡಿಯೋ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದೆ. ಆ ಪಾರ್ಟಿಯಲ್ಲಿ ಈ ಮೂವರೇ ಡ್ರಗ್ಸ್​ ಸೇವನೆ ಮಾಡಿದ್ದಾ..? ಅಥವಾ ಮಾದಕ ಲೋಕದ ಸ್ವರ್ಗದಲ್ಲಿ ಡ್ರಗ್ಸ್​ ಪಾರ್ಟಿಯೇ ಆಯೋಜನೆ ಆಗಿತ್ತಾ..? ಇನ್ನು ಎಲ್ಲರೂ ಡ್ರಗ್ಸ್​ ತೆಗೆದುಕೊಂಡು ಎಂಜಾಯ್​ ಮಾಡುವ ಉದ್ದೇಶದಿಂದಲೇ ಗೌಪ್ಯವಾಗಿ ಗೋವಾ ಟೂರ್​ ಮಾಡಿದ್ರಾ..? ಎನ್ನುವುದು ಅನುಮಾನದ ಮೂಟೆಯಲ್ಲಿದೆ. ಇನ್ನೂ ಅತ್ಯಾಚಾರ ಆಗಿರುವ ಬಗ್ಗೆ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ವೈದ್ಯರು ಅಥವಾ ಪೊಲೀಸ್​ ಇಲಾಖೆ ಖಚಿತಪಡಿಸಿಲ್ಲ. ಡ್ರಗ್ಸ್​ ಅನ್ನು ಮಿತಿ ಮೀರಿದ ಪ್ರಮಾಣದಲ್ಲಿ ದೇಹಕ್ಕೆ ತೆಗೆದುಕೊಂಡಿದ್ದರಿಂದ ರಕ್ತದೊತ್ತಡ ಅಥವಾ ಹೃದಯಾಘಾತ ಆಗಿರುವ ಸಾಧ್ಯತೆಯೂ ಇದೆ. ದೈಹಿಕ ಸಂಬಂಧ ನಡೆದಿದ್ದರೂ ಅದು ಅತ್ಯಾಚಾರ ಎನ್ನುವುದನ್ನು ವೀಡಿಯೋ ಅಲ್ಲಗಳೆಯುತ್ತಿದೆ. ಆದರೆ ಒತ್ತಾಯ ಪೂರ್ವಕವಾಗಿ ಮಾದಕ ವಸ್ತು ಕುಡಿಸಿದ್ದಾರೆ ಎನ್ನುವ ಪೊಲೀಸರ ಹೇಳಿಕೆಗಳು ಆಪ್ತರನ್ನು ಕೊಲೆಗಾರರನ್ನಾಗಿ ಮಾಡುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿದೆ.

ಸೊನಾಲಿ ಪೊಗಟ್ ಭರ್ಜರಿ ಡ್ಯಾನ್ಸ್

Related Posts

Don't Miss it !