ಆಮ್​ ಆದ್ಮಿ ಪಾರ್ಟಿಯತ್ತ ಕರ್ನಾಟಕದ ಬಿಜೆಪಿ ಶಾಸಕ..!

ಆಮ್​ ಆದ್ಮಿ ಪಾರ್ಟಿ ಪತ್ರಿಕಾ ಪ್ರಕಟಣೆ ಕೌತುಕ..! - ಬಿಜೆಪಿ ಒಳ ಜಗಳ, ಆಮ್​ ಆದ್ಮಿಗೆ ಬಂಪರ್​..!

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ನೇತೃತ್ವದಲ್ಲಿ ಸ್ಥಾಪನೆಯಾದ ಆಮ್​ ಆದ್ಮಿ ಪಕ್ಷ ಇಂದು ತನ್ನ ಕೆಲಸಗಳಿಂದಲೇ ಹೆಚ್ಚು ಖ್ಯಾತಿ ಪಡೆದಿದೆ. ಎಲ್ಲಾ ರಾಜಕಾರಣಿಗಳ ಹಾಗೆ ಮನಸೋ ಇಚ್ಛೆ ಮಾತನಾಡದೆ ತಾನಾಯ್ತು ತನ್ನ ಕೆಲಸ ಆಯ್ತು ಎಂದು ಅಭಿವೃದ್ಧಿಗಾಗಿಯೇ ಕೆಲಸ ಮಾಡುತ್ತಿರುವ ಅರವಿಂದ ಕೇಜ್ರಿವಾಲ್​ ಅವರನ್ನು ದೇಶದಲ್ಲಿ ಭರವಸೆಯ ರಾಜಕಾರಣಿ ಎನ್ನಬಹುದು. ದೇಶದ ಎಲ್ಲಾ ಭಾಗಗಳಲ್ಲೂ ಆಮ್​ ಆದ್ಮಿ ಪಾರ್ಟಿ ಇದ್ದರೂ ದೆಹಲಿ ಹಾಗೂ ಪಂಜಾಬ್​ನಲ್ಲಿ ಮಾತ್ರವೇ ಜನರು ಆಮ್​ ಆದ್ಮಿ ಕೈ ಹಿಡಿದಿದ್ದಾರೆ. ಆದರೆ ಇದೀಗ ಕರ್ನಾಟಕ ರಾಜಕಾರಣದಲ್ಲೂ ಅಚ್ಚರಿಯ ಬೆಳವಣಿಗೆ ನಾಳೆ ನಡಯಲಿದೆ ಎನ್ನಲಾಗಿದೆ.

ಆಮ್​ ಆದ್ಮಿ ಪಾರ್ಟಿ ಪತ್ರಿಕಾ ಪ್ರಕಟಣೆ ಕೌತುಕ..!

ಆಮ್​ ಆದ್ಮಿ ಪಾರ್ಟಿ ಕರ್ನಾಟಕ ಘಟಕ ಪ್ರತಿಕಾ ಪ್ರಕಟಣೆ ಹೊರಡಿಸಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಜುಲೈ 9 ರಂದು ಮಧ್ಯಾಹ್ನ 12 ಗಂಟೆಗೆ ಬಿಜೆಪಿ ಶಾಸಕರು ಆಮ್​ ಆದ್ಮಿ ಪಾರ್ಟಿಗೆ ಸೇರ್ಪಡೆ ಆಗಲಿದ್ದಾರೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಬೆಂಗಳೂರಿನ ಪ್ರೆಸ್​ ಕ್ಲಬ್​ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಆಮ್​ ಆದ್ಮಿ ಪಾರ್ಟಿಯ ಕರ್ನಾಟಕ ಉಸ್ತುವಾರಿ ರೋಮಿ ಭಾಟಿ ಹಾಗೂ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಅವರು ಭಾಗಿಯಾಗಲಿದ್ದಾರೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಸಾಕಷ್ಟು ಗೌಪ್ಯತೆ ಕಾಯ್ದುಕೊಂಡಿದ್ದು ಬಿಜೆಪಿ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಒಳ ಜಗಳ, ಆಮ್​ ಆದ್ಮಿಗೆ ಬಂಪರ್​..!

ಬಿಜೆಪಿ ಪಕ್ಷದಲ್ಲಿ ನಡೆದಿರುವ ಆಂತರಿಕ ಒಳಜಗಳ, ಸ್ವಹಿತಾಸಕ್ತಿ ರಾಜಕಾರಣ, ಕುಟುಂಬದ ಭ್ರಷ್ಟಾಚಾರ, ಸಾಂವಿಧಾನಿಕ ಅಧಿಕಾರ ದುರ್ಬಳಕೆಯಿಂದ ಬೇಸತ್ತಿರುವ ಬಿಜೆಪಿ ಶಾಸಕರು ಆಮ್​ ಆದ್ಮಿ ಪಾರ್ಟಿ ಸೇರುತ್ತಿದ್ದಾರೆ ಎಂದು ಬಹಿರಂಗ ಮಾಡಿದ್ದಾರೆ. ಇದೊಂದ ಸಂತಸದಾಯ ವಿಚಾರ. ದೇಶದಲ್ಲಿ ಆಶಾಕಿರಣವಾಗಿರುವ ಆಮ್​ ಆದ್ಮಿಗೆ ಸೇರ್ಪಡೆ ಆಗ್ತಿದ್ದಾರೆ ಎಂದಿದ್ದಾರೆ. ಜುಲೈ 9 ರ ಮಧ್ಯಾಹ್ನ 12 ಗಂಟೆಗೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಇದೆ. ಅದಕ್ಕೂ ಮೊದಲು ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಒಂದು ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ ಬೇರೊಂದು ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದರೆ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಲಿದೆ.

Related Posts

Don't Miss it !