BJP ಶಾಸಕರ ಮೇಲೆ ಮಹಿಳೆ ದೂರು..! ಮಗು ಕೊಟ್ಟು ಕೈ ಕೊಟ್ಟ ಆರೋಪ..! ಅಸಲಿಯತ್ತು ಏನು..?

ಬಿಜೆಪಿ ನಾಯಕರಿಗೂ ಮಹಿಳೆಯರ ನಡುವಿನ ನಂಟಿಗೂ ಜನುಮ ಜನುಮದ ನಂಟು ಇದ್ದರೂ ಇರಬಹುದು. ಬಿಜೆಪಿ ಶಾಸಕರು, ನಾಯಕರ ಮೇಲೆ ಒಬ್ಬರಾದ ಮೇಲೆ ಒಬ್ಬರಂತೆ ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ಆದರೆ ಕೆಲವು ಪ್ರಕರಣಗಳು ರಾಜಿ ಪಂಚಾಯ್ತಿಯಲ್ಲಿ ಅಂತ್ಯ ಕಂಡರೆ, ಇನ್ನೂ ಕೆಲವು ಕೋರ್ಟ್​ ಕಟಕಟೆಯಲ್ಲಿ ಸಂಗ್ರಾಮ ನಡೆಸಿದ ಬಳಿಕ ಅಂತಿಮ ರೂಪ ಪಡೆಯುತ್ತವೆ. ಇದರಲ್ಲಿ ನಾಯಕರು ತಪ್ಪು ಮಾಡಿದ್ದಾರೋ..? ಅಥವಾ ನಾಯಕರ ಮಾನ ಹಾನಿ ಮಾಡುವ ಉದ್ದೇಶದಿಂದ ರಾಜಕೀಯ ಪ್ರೇರಿತವಾಗಿ ಈ ರೀತಿಯ ಆರೋಪ ಮಾಡಲಾಗುತ್ತದೋ ಎನ್ನುವ ಜಿಜ್ಞಾಸೆ ಸಾರ್ವಜನಿಕ ವಲಯದಲ್ಲಿ ಮೂಡುತ್ತದೆ. ಆದರೆ ಈ ಪ್ರಕರಣದಲ್ಲಿ ಕಲಬುರಗಿಯ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ಸ್ವತಃ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆ ಬಳಿಕ ಮಹಿಳೆ ಕೂಡ ಬೆಂಗಳೂರು ಪೊಲೀಸ್​ ಕಮಿಷನರ್​ ಕಚೇರಿಗೆ ದೂರು ನೀಡಿದ್ದು, ತನಿಖೆ ಆರಂಭವಾಗಿದೆ. ಈ ಬಗ್ಗೆ ಮಾತನಾಡಿರುವ ಪೊಲೀಸ್​ ಆಯುಕ್ತ ಕಮಲ್​ ಪಂಥ್, ವಿಧಾನಸೌಧ ಠಾಣೆಯಲ್ಲಿ ಕಂಪ್ಲೆಂಟ್ ರಿಜಿಸ್ಟರ್ ಆಗಿದೆ, ತನಿಖೆ‌ ನಡೆಯುತ್ತಿದೆ ಎಂದಷ್ಟೇ ಹೇಳಿದ್ದಾರೆ.

ಬಾಲ್ಯ ಸ್ನೇಹಿತೆ, 16 ವರ್ಷದವಳಿದ್ದಾಗಲೇ ಇತ್ತು ಸಂಬಂಧ..!

ಸೇಡಂ ಬಿಜೆಪಿ ಶಾಸಕ ರಾಜ್​ಕುಮಾರ್​ ತೇಲ್ಕೂರ ವಿರುದ್ಧ ಆರೋಪ ಮಾಡಿರುವ ಸಂತ್ರಸ್ತ ಮಹಿಳೆ ನಾನು ಹಾಗೂ ಶಾಸಕ ರಾಜ್​ಕುಮಾರ್​​ ತೇಲ್ಕೂರ್​ ಬಾಲ್ಯ ಸ್ನೇಹಿತರು. ನಾನು 16 ವರ್ಷದವಳಿದ್ದಾಗಲೇ ನಮ್ಮಿಬ್ಬರ ನಡುವೆ ಸಂಬಂಧವಿತ್ತು. ನನ್ನ ಮಗ ಹುಟ್ಟಿರುವುದು ಕೂಡ ರಾಜ್​ಕುಮಾರ್​ ತೇಲ್ಕೂರ ಅವರಿಗೆ ಎಂದಿದ್ದಾರೆ. ಆದರೆ ಒಬ್ಬರು ಮಹಿಳೆ ನನ್ನ ಬಳಿ 2 ಕೋಟಿ ರುಪಾಯಿ ಹಣ ಕೊಡುವಂತೆ ಬ್ಲ್ಯಾಕ್​ ಮೇಲ್​ ಮಾಡುತ್ತಿದ್ದಾರೆ. ಎಂದು ವಿಧಾನಸೌಧ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಜಮೀನು ವ್ಯಾಜ್ಯದ ಇತ್ಯರ್ಥಕ್ಕಾಗಿ ಮಹಿಳೆ ‌ಪರಿಚಯ ಹಾಗೂ ಆಕೆಯ ಪತಿ ಪರಿಚಯ ಆಗಿದ್ದರು. ತಮ್ಮ ಬಳಿ ಸಹಾಯ ಕೇಳಿ ಬಂದಿದ್ದು, ಆ ಬಳಿಕ ಹಣಕ್ಕಾಗಿ ನನ್ನ ಮೇಲೆಯೇ ಮಹಿಳೆ ಪರಿಚಯದ ಬಗ್ಗೆ ಆರೋಪ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಸಕ ರಾಜ್‌ಕುಮಾರ್ ತೇಲ್ಕೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವೇಶ್ಯಾವಾಟಿಕೆಗೆ ಕಾಲೇಜು ಯುವತಿಯರು ಬಲಿ..? ಪೋಷಕರೇ ಇರಲಿ ಎಚ್ಚರ..

2018ರಲ್ಲೇ ಆರೋಪ ಮಾಡಿದ್ದ ಮಹಿಳೆ.. ಇದೀಗ ಮತ್ತೆ ಕಿಡಿ..

2018ರ ಫೆಬ್ರವರಿಯಲ್ಲೇ ಫೇಸ್​ಬುಕ್‌ನಲ್ಲಿ ಮಹಿಳೆ ಆರೋಪ ಮಾಡಿದ್ದರು. ಶಾಸಕ ರಾಜ್​ಕುಮಾರ್ ಮರ್ಯಾದೆಗೆ ಧಕ್ಕೆ, ಪ್ರಾಣ ಬೆದರಿಕೆ, ವಿಧಾನಸೌಧದಲ್ಲಿ ತೆಗೆಸಿಕೊಂಡಿರುವ ಫೊಟೋ ವೈರಲ್ ಮಾಡುವ ಬೆದರಿಕೆ ಒಡ್ಡಿದ್ದಾರೆ. ನಿರಂತರ ಬೆದರಿಕೆ ಹಿನ್ನೆಲೆ 2021ರ ಮಾರ್ಚ್​ನಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್​ನಲ್ಲಿ ಮಹಿಳೆ ಹಾಗೂ ಆಕೆಯ ಪತಿಯನ್ನು ಭೇಟಿಯಾಗಿದ್ದೆನು ಎಂದಿದ್ದಾರೆ. ಆದರೆ ಶಾಸಕರಿಂದಲೇ ನನಗೆ ಮಗುವಾಗಿದೆ. ಮಗುವನ್ನು ನೋಡಿಕೊಳ್ಳುವುದಾಗಿ ಶಾಸಕರು ಹೇಳಿದ್ದರು. ಆದರೆ ಈಗ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಮಹಿಳೆ ಆರೋಪ ಮಾಡಿದ್ದಾರೆ. ವಕೀಲ ಜಗದೀಶ್ ಜೊತೆಗೆ ತೆರಳಿ ದೂರು ದಾಖಲಿಸಿರುವ ಮಹಿಳೆ, ನನ್ನ ಜೊತೆ ಸಂಬಂಧ ಇಲ್ಲ ಎಂದು ಶಾಸಕರು ಅವರ ಮನೆ ದೇವರು ವೀರಭದ್ರನ ಹೆಸರಲ್ಲಿ ಆಣೆ ಮಾಡಲಿ, ನಾನೇ ಜೈಲು ಶಿಕ್ಷೆ ಅನುಭವಿಸುತ್ತೇನೆ ಎಂದು ಮಹಿಳೆ ಸವಾಲು ಹಾಕಿದ್ದಾರೆ. ಇನ್ನು ನಮ್ಮಿಬ್ಬರ ಸಂಬಂಧದ ಬಗ್ಗೆ ನನ್ನ ತಂದೆಗೆ ಗೊತ್ತಾದ ಬಳಿಕ ಬೇರೊಂದು ಹುಡುಗನನ್ನು ನೋಡಿ ಮದುವೆ ಮಾಡಿದ್ದರು. ನಾನು ಬೆಂಗಳೂರಿಗೆ ಬಂದ ಬಳಿಕವೂ ಶಾಸಕರು ನನ್ನೊಂದಿಗೆ ಸಂಬಂಧ ಮುಂದುವರಿಸಿದ್ದರು. ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ಗಂಡನಿಗೆ ವಿಷಯ ಹೇಳುವ ಬೆದರಿಕೆ ಹಾಕಿದ್ದರು ಎಂದು ಪ್ರೇಮ್​ ಕಹಾನಿಯನ್ನು ಬಹಿರಂಗ ಮಾಡಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಮಲಗಿದ್ದಾಗಲೇ ಹೆಣವಾದ ಐವರು..! ಖಾಕಿಗೆ ಸಿಕ್ಕಿಲ್ಲ ಸಣ್ಣ ಕುರುಹು..!

ದೂರು ಕೊಟ್ಟು ಎಡವಟ್ಟು ಮಾಡಿಕೊಂಡಿದ್ದು ಶಾಸಕರಾ..?

ಶಾಸಕ ರಾಜ್‌ಕುಮಾರ್ ತೇಲ್ಕೂರ ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ. ಆದರೆ ಪೊಲೀಸರು ಮಹಿಳೆ ಮನೆಗೆ ಮಫ್ತಿಯಲ್ಲಿ ಹೋಗಿದ್ದು ಯಾಕೆ..?ಎನ್ನುವ ಪ್ರಶ್ನೆ ಎದುರಾಗಿದೆ. ಶಾಸಕರು 5ನೇ ತಾರೀಕು ದೂರು ನೀಡಿದ್ದು, 6ನೇ ತಾರೀಕು ಪೊಲೀಸರು ಮಹಿಳೆ ಮನೆಗೆ ಹೋಗಿ ಮಹಿಳೆಯನ್ನು ಕರೆತಂದು ದಿನಪೂರ್ತಿ ವಿಚಾರಣೆ ಮಾಡಿದ್ದಾರೆ. ಕಾಂಗ್ರೆಸ್​​ ಒತ್ತಡದಿಂದ ನಾನು ಈ ರೀತಿ ಆರೋಪ ಮಾಡಿದ್ದೇನೆ ಎಂದು ಬರೆದುಕೊಡುವಂತೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಮಗು ಶಾಸಕರಿಗೇ ಜನಿಸಿರುವುದು ಎಂದು ಮಹಿಳೆ ಆರೋಪ ಮಾಡಿರುವುದು ಶಾಸಕರ ಮೇಲೆ ಅನುಮಾನ ದಟ್ಟವಾಗುವಂತೆ ಮಾಡಿದೆ. ಒಂದು ವೇಳೆ ಶಾಸಕರು ಹಾಗೂ ಆ ಮಹಿಳೆ ಜೊತೆಗಿರುವ ಬಾಲಕನ ಡಿಎನ್‌ಎ ಟೆಸ್ಟ್ ಮಾಡಿದರೆ ಆ ಮಗುವಿನ ತಂದೆ ಯಾರೆಂದು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಿದೆ. ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿ, ನನ್ನ ಮಗನ ತಂದೆ ಶಾಸಕರ ರಾಜ್‌ಕುಮಾರ್ ತೇಲ್ಕೂರು ಆಗಿದ್ದು, ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ ಎಂದು ಕೋರ್ಟ್ ಮೊರೆ ಹೋಗಬಹುದಿತ್ತು. ಆದರೆ ಮಹಿಳೆಗೆ ದೂರು ಕೇಸ್ ಕೋರ್ಟ್​ ​ ಯಾವುದೂ ಬೇಕಿರಲಿಲ್ಲ, ಆದರೆ ಮಗುವಿನ ಜೀವನಕ್ಕೆ ಯಾವುದೇ ನೆಲೆ ಮಾಡಿಕೊಡದೆ ಇದ್ದಿದ್ದರಿಂದ ಇಷ್ಟೆಲ್ಲಾ ರಾಮಾಯಣ ಆಗಿದೆ. ಶಾಸಕರು ಯಾರದ್ದೋ ಮಾತು ಕೇಳಿಕೊಂಡು ದೂರು ಕೊಟ್ಟು ಕೆಡ್ಡದಲ್ಲಿ ಬಿದ್ದಿದ್ದಾರೆ ಎನ್ನುತ್ತಿವೆ BJP ಮೂಲಗಳು.

Related Posts

Don't Miss it !