ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಶವಪತ್ತೆ.. ಕೊಲೆ ಆಗಿರೋ ಅನುಮಾನ..

ಕಳೆದ ಭಾನುವಾರ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಶವವಾಗಿ ಪತ್ತೆಯಾಗಿದ್ದಾರೆ. ದಾವಣಗೆರೆಯ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮಾತ್ರ ಕಳೆದ ನಾಲ್ಕು ದಿನಗಳಿಂದ ಅನ್ನ ಆಹಾರ ಬಿಟ್ಟು ಗೋಳಿಡುತ್ತಿದ್ದರು. ಆದರೆ ಸಾವು ಸಂಭವಿಸಿದ್ದು ಅಪಘಾತದಿಂದ ಎಂದು ಹೇಳಲಾಗ್ತಿದೆ, ಆದರೆ ಸಾವಿನ ಹಿಂದೆ ಹತ್ತಾರು ಅನುಮಾನಗಳು ಕಾಡುತ್ತಿದೆ. ಕಾರು ಅಪಘಾತ ಆಗಿದ್ರೆ, ಅಪಘಾತ ಆದ ಕಾರಿನಲ್ಲಿ ಶವ ಹಿಂದಕ್ಕೆ ಹೋಗಿ ಬಿದ್ದಿರೋದು ಯಾಕೆ..? ಕಾರಿನ ಮುಂಭಾಗದಲ್ಲಿ ಎರಡು ಏರ್​ಬ್ಯಾಗ್​ಗಳು​ ಓಪನ್​ ಆಗಿದೆ. ಅಂದಮೇಲೆ ಇಬ್ಬರು ಪ್ರಯಾಣಿಕರು ಇದ್ದಿರಬಹುದು. ಆದರೆ ಕಾರಿನ ಒಳಗೆ ಒಂದೇ ಒಂದು ಮೃತದೇಹ ಸಿಕ್ಕಿದ್ದು ಹೇಗೆ..?

ಕಾರು ಅಪಘಾತವಾಗಿ ಕೆಳಕ್ಕೆ ಬಿದ್ದ ಮೇಲೂ ಕಾರಿನ ಮುಂಭಾಗದ ಬಾನೆಟ್​ ಹಾಳಾಗಿಲ್ಲ. ಬಾನೆಟ್​​ ಚೆನ್ನಾಗಿದೆ, ಆದರೂ ಮುಂಭಾಗದ ಗ್ಲಾಸ್​ ಹೊಡೆದಿದೆ. ಹೀಗಿರುವಾಗ ಕಾರಿನ ಮುಂಭಾಗದ ಗ್ಲಾಸ್​ ಹೊಡೆದು ಯಾರಾದ್ರೂ ಹೊರಕ್ಕೆ ಬಂದಿದ್ದಾರಾ..? ಯಾರಾದರೂ ಕೊಲೆ ಮಾಡಿದ ಬಳಿಕ ಕಾರಿನಿಂದ ಹೊರಕ್ಕೆ ಬಂದಿದ್ದಾರಾ..? ಇನ್ನು ಟೋಲ್​ನಲ್ಲಿ ಬರುತ್ತಿರುವ ದೃಶ್ಯ ರೆಕಾರ್ಡ್​ ಆಗಿದೆ. ಆದರೆ ಅಷ್ಟೊಂದು ವೇಗವಾಗಿ ಬಂದು ಅಪಘಾತ ಆಗಿದೆ ಅನ್ನೋದಾದ್ರೆ ಕಾರು ಅಪಘಾತ ಆದ ಸ್ಥಳದ ಬಗ್ಗೆ ಪೊಲೀಸರಿಗೆ ಯಾಕೆ ಗೊತ್ತಾಗಲಿಲ್ಲ. ಓರ್ವ ಶಾಸಕನ ಸಹೋದರ ಪುತ್ರ ಕಾಣೆಯಾದ ಬಗ್ಗೆ ದೂರು ದಾಖಲಾದ್ರೂ ಪೊಲೀಸ್ರು ಈ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುವಲ್ಲಿ ವಿಫಲ ಆಗಿದ್ಯಾಕೆ..?

ತಂತ್ರಜ್ಞಾನ ಯುಗದಲ್ಲಿ ನಾಬವಿರುವಾಗ ಕೇವಲ ಗೂಗಲ್​ ಮ್ಯಾಪ್​ ಒಂದೇ ನಾವು ಸುತ್ತಾಡಿದ ಸ್ಥಳವನ್ನು ಬಹಿರಂಗ ಮಾಡುತ್ತದೆ. ಒಂದು ವೇಳೆ ಪೊಲೀಸ್ರು ಮೊಬೈಲ್​ ಒಂದನ್ನೇ ಟ್ರ್ಯಾಕ್​ ಮಾಡಿದ್ದರೂ ಒಂದೆರಡು ದಿನದಲ್ಲಿ ಶವವನ್ನು ಪತ್ತೆ ಮಾಡಬಹುದಿತ್ತು. ಆದರೆ ಪೊಲೀಸ್ರು ಬೇಕೆಂದೇ ತನಿಖೆಯನ್ನು ನಿಧಾನ ಮಾಡಿದ್ದಾರಾ..? ಇದು ಕೊಲೆಯಾಗಿರುವ ಸಾಧ್ಯತೆ ಇದೆಯಾ..? ಕೊಲೆ ಆಗಿದ್ದರೆ ಇದರ ಹಿಂದೆ ಇರುವ ಕೈಗಳು ಯಾವುವು ಅನ್ನೋದನ್ನು ಪೊಲೀಸ್ರು ಪತ್ತೆ ಮಾಡಲೇ ಬೇಕಿದೆ. ಒಂದಂತು ಸತ್ಯ. ಇದು ಸಾಮಾನ್ಯ ಸಾವು ಅಲ್ಲ. ಇಲ್ಲೀವರೆಗೂ ಕೇವಲ ರೇಣುಕಾಚಾರ್ಯ ಮಾತ್ರ ಕಾಣಿಸಿಕೊಂಡಿದ್ದು ತಂದೆ ತಾಯಿಗಳು ಈ ಬಗ್ಗೆ ಮಾತನಾಡಿಲ್ಲ. ಅದು ಕೂಡ ಅನುಮಾನ ಹುಟ್ಟಿಸುವಂತಿದೆ.

Related Posts

Don't Miss it !