ಬಿಜೆಪಿ ಸಂಸದನ ಸೆಕ್ಸ್​ ವಿಡಿಯೋ ವೈರಲ್..! ಪೊಲೀಸರಿಂದ ಇಬ್ಬರ ಬಂಧನ..

ಬಿಜೆಪಿ ನಾಯಕರಿಗೂ ಕಾಮ ಪುರಾಣದ ಸಿ.ಡಿಗಳಿಗೂ ಏನಾದರೂ ಅವಿನಾಭಾವ ಸಂಬಂಧ ಇದೆಯಾ..? ಎಂದು ಜನರೇ ಪ್ರಶ್ನೆ ಮಾಡಿಕೊಳ್ಳಬೇಕಾದ ಸಮಯ ಇದಾಗಿದೆ. ಗುಜರಾತ್​​ನ ಬಿಜೆಪಿ ಸಂಸದ ಪರ್​ಬಾತ್​ ಭಾಯ್​ ಪಟೇಲ್​ ಹೋಲುವ ರಾಸಲೀಲೆ ವೀಡಿಯೋ ಒಂದು ಸಾಕಷ್ಟು ವೈರಲ್​ ಆಗಿದೆ. ಮಂಚದ ಮೇಲೆ ಕುಳಿತಿರುವ ವ್ಯಕ್ತಿ ಮಹಿಳೆಯನ್ನು ತಬ್ಬಿಕೊಂಡು ಸಲುಗೆಯಲ್ಲಿ ವರ್ತಿಸಿದ್ದಾರೆ. ಈ ವಿಡಿಯೋ ವೈರಲ್​ ಮಾಡಿದ್ದಾರೆ ಎಂದು ಪೊಲೀಸ್​ ಠಾಣೆಗೆ ಸಂಸದ ಪುತ್ರ ಶೈಲೇಶ್​ ಪಟೇಲ್​ ದೂರು ನೀಡಿದ್ದಾರೆ. ದೂರನ್ನು ಆಧರಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ಇಬ್ಬರನ್ನು ಬಂಧನ ಮಾಡಿದ್ದಾರೆ.

ಗುಜರಾತ್​ನಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದ ಹಾಗೆ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿರುವ ಶೈಲೇಶ್​ ಪಟೇಲ್​, ನಮ್ಮ ತಂದೆ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ದೂರುದ್ದಾರೆ. ಸಂಸದರ ಪುತ್ರನ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸ್ಥಳೀಯ ಆಮ್​ ಆದ್ಮಿ ಪಾರ್ಟಿಯ ಮುಖಂಡ ಮಾಧಭಾಯ್​ ಪಡೇಲ್​ ಹಾಗೂ ಮತ್ತೋರ್ವ ಆರೋಪಿ ಮುಖೇಶ್​ ರಜಪೂತ್ ಎಂಬುವರನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್​ 389 ಅಡಿ ಸುಲಿಗೆ, ಮಾನಹಾನಿ ಪ್ರಕರಣದಲ್ಲಿ ಸೆಕ್ಷನ್​ 500 ಹಾಗೂ ಕ್ರಮಿನಲ್​ ಸಂಚು ರೂಪಿಸಿದ ಆಧಾರದ ಮೇಲೆ 120-ಬಿ ಮತ್ತು ಅಂತರ್ಜಾಲದ ಪ್ರಕಾರ ದೂರು ದಾಖಲು ಮಾಡಿಕೊಳ್ಳಲಾಗಿದೆ.

read this also

ಬನಸ್ಕಾಂತ ಕ್ಷೇತ್ರದಿಂದ ಬಿಜೆಪಿ ಆಗಿರುವ ಪರ್​ಬತ್​ ಭಾಯ್​ ಪಟೇಲ್​, ನನ್ನಂತೆ ಕಾಣುವ ವ್ಯಕ್ತಿಯನ್ನು ಬಳಸಿಕೊಂಡು ಸಿಡಿಯನ್ನು ತಿರುಚಲಾಗಿದೆ ಎಂದಿದ್ದಾರೆ. ಆದರೆ ಆ ವಿಡಿಯೋದಲ್ಲಿ ಇರುವುದು ನಾನಲ್ಲ. ನಾನು ಹೇಗೆ ನಡೆದುಕೊಳ್ತೇನೆ ಎನ್ನುವುದನ್ನು ಗುಜರಾತ್​ ಜನರು ಬಲ್ಲರು ಎಂದಿದ್ದಾರೆ. ಆದರೆ ಆರೋಪಿಗಳು ವಿಡಿಯೋದಲ್ಲಿ ಒಂದು ಫೋಟೋ ತೆಗೆದುಕೊಂಡು ಸಾಮಾಜಿಕ ತಾಲತಾಣದಲ್ಲಿ ಅಪ್​ಲೋಡ್​ ಮಾಡಲಾಗುವುದು ಎಂದು ಪ್ರೋಮೋ ಬಿಡುಗಡೆ ಮಾಡಿದ್ದರು. ಅಷ್ಟರಲ್ಲಿ ದೂರು ಸಲ್ಲಿಕೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ರಾಸಲೀಲೆ ರಹಸ್ಯ ಸಿ.ಡಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್​ಲೋಡ್​ ಆಗ್ತಿದ್ದ ಹಾಗೆ ದೂರು ದಾಖಲಾಗಿತ್ತು. ಇದೀಗ ವಿಚಾರಣೆಗೆ ನಡೆಸಿದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.ಈ ಬಗ್ಗೆ ಸಾಕಷ್ಟು ಬಾರಿ ಬೆದರಿಕೆ ಕರೆಗಳು ಬಂದಿದ್ದವು, ಆಗಸ್ಟ್​ 15 ರಂದು ವಿಡಿಯೋ ವೈರಲ್​ ಮಾಡುವುದಾಗಿಯೂ ತಿಳಿಸಿದ್ದರು ಎಂದು ಪರ್​ಬಾತ್​ ಭಾಯ್​ ಪಟೇಲ್​ ತಿಳಿಸಿದ್ದಾರೆ. ಸದ್ಯಕ್ಕೆ ಎಲ್​ಬಿಸಿ ವಿಚಾರಣೆಯ ಹೊತ್ತುಕೊಂಡಿದ್ದು, ವಿಡಿಯೋ ಮಾಡಿದ್ಯಾರು..? ಸಾಮಾಜಿಕ ಜಾಲತಾಣದಲ್ಲಿ ವೈರ​ಲ್ ವಿಡಿಯೋ ಹರಿಯಬಿಟ್ಟಿದ್ದು ಯಾರು ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

read this also

2016ರಿಂದಲೂ ನನ್ನನ್ನು ಬೆದರಿಸಿ ಹಣ ಕೀಳುವ ಪ್ರಯತ್ನ ನಡೀತು. ಅಂತಿಮವಾಗಿ ವಿಡಿಯೋ ರಿಲೀಸ್​ ಮಾಡುವಂತೆ ಸವಾಲು ಹಾಕಿದ್ದೆ. ಅದೇ ಕಾರಣದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ದೂರಿದ್ದಾರೆ. ಪೊಲೀಸರು ಎಫ್​ಎಸ್​ಎಲ್​ ವರದಿ ತರಿಸಿದ ಬಳಿಕ ವಿಡಿಯೋದಲ್ಲಿ ಇರುವುದು ಸಂಸದ ಪರ್​ಬಾತ್​ ಭಾಯ್​ ಪಟೇಲ್​  ಹೌದೋ ಅಲ್ಲವೋ ಎನ್ನುವ ಬಗ್ಗೆ ಖಾಕಿಪಡೆ ನಿರ್ಧಾರ ಪ್ರಕಟ ಮಾಡಲಿ.

Related Posts

Don't Miss it !