‘ದೆಹಲಿಗೆ ಬನ್ನಿ’ ಕಾಂಗ್ರೆಸ್​ ಶಾಸಕರನ್ನು ಸೆಳೆಯಲು ಸಜ್ಜಾಗಿದ್ಯಾ ತಂಡ..?

ಕಾಂಗ್ರೆಸ್​ ಶಾಸಕರನ್ನು ಸೆಳೆಯುವ ಕಸರತ್ತು ಆರಂಭ ಆಗಿದೆ. ಸಮಯ ಬಂದಾಗ ಈ ಬಗ್ಗೆ ಹೇಳ್ತೀನಿ ಅಂತಾ ಡಿಸಿಎಂ ಡಿ.ಕೆ ಶಿವಕುಮಾರ್​ ಹಿಂದೊಮ್ಮೆ ಹೇಳಿದ್ದರು. ಯಾರನ್ನು ಸಂಪರ್ಕ ಮಾಡ್ತಿದ್ದಾರೆ..? ಏನೇನು ಆಮೀಷ ಕೊಡ್ತಿದ್ದಾರೆ ಅನ್ನೋದು ನಮಗೆ ಗೊತ್ತಿದೆ. ಶಾಸಕರು ಸಿಎಂ ಸಿದ್ದರಾಮಯ್ಯ ಹಾಗು ನನ್ನ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದಿದ್ದರು. ಇದೀಗ ಕಾಂಗ್ರೆಸ್​ ಶಾಸಕರನ್ನು ಸೆಳೆಯುತ್ತಿರುವ ಬಗ್ಗೆ ಮಂಡ್ಯ ಕ್ಷೇತ್ರದ ಕಾಂಗ್ರೆಸ್​ ಶಾಸಕ ರವಿಕುಮಾರ್ ಗಣಿಗ ಹೊಸ ಬಾಂಬ್ ಸಿಡಿಸಿದ್ದಾರೆ.

ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರ ಕೆಡವಿದ್ದ ಟೀಂ ಆ್ಯಕ್ಟೀವ್..!

ದಾವಣಗೆರೆಯಲ್ಲಿ ಮಾತನಾಡಿರುವ ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಈ ಹಿಂದೆ ಯಾರು ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ರೋ ಅವರೇ ಮತ್ತೆ ಇದೀಗ ಕಾಂಗ್ರೆಸ್ ಶಾಸಕರನ್ನ ಸಂಪರ್ಕ ಮಾಡ್ತಿದ್ದಾರೆ. ಕೆಲವು ಶಾಸಕರ‌ನ್ನ ಭೇಟಿ ಮಾಡಿರೋ ವಿಡಿಯೋ ನಮ್ಮ ಬಳಿ ಇದೆ. ‘ದೆಹಲಿಗೆ ಬನ್ನಿ ವಿಶೇಷ ವಿಮಾನ ಇದೆ’ ದೆಹಲಿಯ ಅಮಿತ್ ಷಾ‌ ಅವರನ್ನು ಭೇಟಿ ಮಾಡಿಸ್ತಿನಿ ಅಂತ ಹೇಳ್ತಿದ್ದಾರೆ ಎಂದಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಪಿಎ ಆಗಿದ್ದ ಸಂತೋಷ್​ ಇದನ್ನು ಮಾಡ್ತಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಜೊತೆಗೆ ಅವನೊಬ್ಬ ಮೂರ್ಖ ಅಂತ ಮಂಡ್ಯ ಶಾಸಕ ರವಿಕುಮಾರ್ ಗಾಣಿಗ ಕಿಡಿಕಾರಿದ್ದಾರೆ.

ಸಿ.ಪಿ ಯೋಗೇಶ್ವರ್ ಕಡೆಗೂ ಗಣಿಗ ರವಿಕುಮಾರ್​ ಬೊಟ್ಟು..

ಮಾಜಿ ಸಿಎಂ ಯಡಿಯೂರಪ್ಪ ಪಿಎ ಆಗಿದ್ದ ಸಂತೋಷ್​ ಜೊತೆಗೆ ನಮ್ಮ ಭಾಗದಲ್ಲಿ ಒಬ್ಬರು ಇದ್ದಾರೆ. ಈ ಕಡೆ ಸಂತೋಷ ಇದ್ದಾರೆ ಎನ್ನುವ ಮೂಲಕ ಚನ್ನಪಟ್ಟಣ ಮಾಜಿ ಶಾಸಕ ಹಾಲಿ ಪರಿಷತ್​ ಸದಸ್ಯ ಸಿ.ಪಿ ಯೋಗೇಶ್ವರ್ ಕಡೆಗೆ ಬೊಟ್ಟು ಮಾಡಿದ್ದಾರೆ. ಕಾಂಗ್ರೆಸ್​ನ ಎಲ್ಲಾ ಶಾಸಕರನ್ನ ಸಂಪರ್ಕ ಮಾಡಿ ದೆಹಲಿ ಬರುವಂತೆ ಕರೆಯುತ್ತಿದ್ದಾರೆ. ಕಾಂಗ್ರೆಸ್​ ಶಾಸಕರು ಬಾರದಿದ್ದರು ಅವರು ಒತ್ತಾಯ ಮಾಡ್ತಿದ್ದಾರೆ. ನಮ್ಮವರು ಯಾರು ಹೋಗಲ್ಲ, ಪಕ್ಷಕ್ಕೆ ಕರಿಯಲು ಬಂದ ವಿಡಿಯೋ, ಆಡಿಯೋ ಇದೆ ಅವುಗಳನ್ನ ಸೂಕ್ತ ಸಮಯದಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡ್ತೇವೆ ಎಂದಿದ್ದಾರೆ.

Related Posts

Don't Miss it !