BJP ನಾಯಕರು ಏನೇ ಹೇಳಿದ್ರೂ ಮುಖ್ಯಮಂತ್ರಿ ಬದಲಾಗ್ತಾರೆ, BSY ಸುಳಿವು..!!

B S Yeddyurappa The Public Spot Cm Change

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಅನ್ನೋದು ರಾಜ್ಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ರಂಗದ ಗುಸುಗುಸು. ಇದಕ್ಕೆಲ್ಲಾ ಉತ್ತರ ಕೊಡಬೇಕಾಗುತ್ತೆ ಅನ್ನೋ ಕಾರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊರೊನಾ ಸೋಂಕಿನ ನೆಪದಲ್ಲಿ ಮನೆ ಸೇರಿದ್ದಾರೆ ಎನ್ನುವುದು ರಾಜಕೀಯ ಚದುರಂಗದಾಟ ಬಲ್ಲವರ ಸೀಕ್ರೆಟ್​​ ಟಾಕ್​. ಇದ್ರ ನಡುವೆ ಬಿಜೆಪಿ ಲೀಡರ್​​ಶಿಪ್​ ಬದಲಾವಣೆಗೆ ಬ್ಯಾಕ್​ ಸ್ಟೇಜ್​​ನಲ್ಲಿ ವರ್ಕೌಟ್​ ನಡೀತಾ ಇದೆ. ಆದರೆ ಬಿಜೆಪಿ ನಾಯಕರು, ಶಾಸಕರು ಮಾತ್ರ ಮುಖ್ಯಮಂತ್ರಿ ಬದಲಾವಣೆ ಮಾತೇ ಇಲ್ಲ ಎನ್ನುವ ಮೂಲಕ ಗುಟ್ಟಾಗಿ ಗೇಮ್​ ಮಾಡುವ ಕೆಲಸ ಮಾಡ್ತಿದ್ದಾರೆ. ಈ ನಡುವೆ ಮೊದಲಿಗೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರ ಮಾಜಿ ಶಾಸಕ ಸುರೇಶ್​ಗೌಡರಿಗೆ ಕರೆ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​, ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.

ಶೆಟ್ಟರ್​ ಜೊತೆಗೆ ಬಿಎಸ್​ ಯಡಿಯೂರಪ್ಪ ಚರ್ಚೆ ಮಾಡಿದ್ದೇನು..?

ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಹಿಡಿತದಿಂದ ಬಿಜೆಪಿಯನ್ನು ಹೊರಕ್ಕೆ ತರುವ ಲೆಕ್ಕಾಚಾರದಲ್ಲಿರುವ ಬಿಜೆಪಿ ಹೈಕಮಾಂಡ್​, ಯಡಿಯೂರಪ್ಪನವರ ಆಯ್ಕೆಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುವ ಕೆಲಸ ಶುರುವಾಗಿದೆ. ಇದೇ ಕಾರಣಕ್ಕೆ ಅಮಿತ್​ ಷಾ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಬಸವರಾಜ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡ್ತೇವೆ. ನೀವೇ ಮುಂದೆ ನಿಂತು ಪಕ್ಷದ ಹಿತ ಕಾಪಾಡಬೇಕು ಎನ್ನುವ ಸಂದೇಶ ತಲುಪಿಸಿ ಹೊರಟಿದ್ದಾರೆ ಎನ್ನಲಾಗಿದೆ. ಇದೆ ಕಾರಣಕ್ಕೆ ಬಿ.ಎಸ್​ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಅವರನ್ನೇ ಮತ್ತೊಮ್ಮೆ ಸಿಎಂ ಗದ್ದುಗೆ ಮೇಲೆ ಕೂರಿಸುವ ಎಲ್ಲಾ ಪ್ರಯತ್ನ ಮಾಡಿದ್ದು, ಮಾತುಕತೆಯನ್ನೂ ನಡೆಸಿದ್ದಾರೆ. ಆ ಬಳಿಕ ಮಂತ್ರಾಲಯ ಪ್ರವಾಸ ಮಾಡಿರುವ ಯಡಿಯೂರಪ್ಪ ಮತ್ತೊಂದು ಹೊಸ ಬಾಂಬ್​ ಸಿಡಿಸಿದ್ದಾರೆ. ಇದು ಕೇಸರಿ ಪಾಳಯವನ್ನು ಅಚ್ಚರಿಯ ಕಣ್ಣು ಹೊರಳಿಸುವಂತೆ ಮಾಡಿದೆ.

ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್​ಗೆ ಸ್ಟ್ರಾಂಗ್​ ಸಂದೇಶ..!

ಬಿ.ಎಸ್​ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಬಿಜೆಪಿ ವರ್ಚಸ್ಸು ಉತ್ತುಂಗದಲ್ಲಿ ಇತ್ತು ಎನ್ನುವುದನ್ನು ಕಾಂಗ್ರೆಸ್​ ಹಾಗು ಜೆಡಿಎಸ್​ ನಾಯಕರೂ ಕೂಡ ಒಪ್ಪಿಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ವಯೋಮಿತಿ ಕಾರಣ ಕೊಟ್ಟ ಬಿಜೆಪಿ ಹೈಕಮಾಂಡ್​ ರಾಜೀನಾಮೆ ಪಡೆಯುವಲ್ಲಿ ಯಶಸ್ಸು ಸಾಧಿಸಿತ್ತು. ಆದರೆ ಪಕ್ಷದ ಹಿಡಿತವನ್ನು ಅಷ್ಟು ಸುಲಭದಲ್ಲಿ ಬಿಟ್ಟುಕೊಡಲು ಒಲ್ಲದ ಯಡಿಯೂರಪ್ಪ, ತನ್ನ ಆಪ್ತನಾಗಿದ್ದ ಬಸವರಾಜ ಬೊಮ್ಮಾಯಿ ಪರ ಶಾಸಕರ ಒಲವು ಸೃಷ್ಟಿಸಿ ಹೈಕಮಾಂಡ್​ನನ್ನೇ ಇಕ್ಕಟ್ಟಿಗೆ ಸಿಲುಕಿಸಿ ಮುಖ್ಯಮಂತ್ರಿ ಮಾಡುವಲ್ಲಿ ಸಫಲರಾಗಿದ್ದರು. ಆದರೆ ಈ ಬಾರಿ ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ಸಿಗುವುದು ಕಷ್ಟ ಎನ್ನಲಾಗ್ತಿದೆ. ಇದೇ ಕಾರಣದಿಂದ ಬಿಎಸ್​ ಯಡಿಯೂರಪ್ಪ ಕೂಡ ಬಿಜೆಪಿ ಹೈಕಮಾಂಡ್​ಗೆ ಮುಟ್ಟಿನೋಡಿಕೊಳ್ಳುವಂತಹ ಕಠಿಣ ಸಂದೇಶ ರವಾನೆ ಮಾಡಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ಕಡೆಗಣಿಸಿ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಯಡಿಯೂರಪ್ಪ ನೇರವಾಗಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.

ನಾನು ಸಿಎಂ ಪೋಸ್ಟ್​​ ಬಿಟ್ಟುಕೊಟ್ಟರೂ ಜನ ಇಷ್ಟ ಪಡ್ತಾರೆ..!!

ಆಗಸ್ಟ್​ 18ರಂದು ಮುಖ್ಯಮಂತ್ರಿ ಬದಲಾವಣೆ ಆಗುತ್ತೆ ಎನ್ನುವುದು ಕೇಳಿ ಬರುತ್ತಿರುವ ಪಿಸು ಮಾತಿನ ಗಟ್ಟಿಧ್ವನಿ. ಆದರೆ ಬಿಜೆಪಿ ನಾಯಕರು ಮಾತ್ರ ಎಲ್ಲವೂ ಖಚಿತ ಆಗುವ ತನಕ ಗುಟ್ಟುಬಿಟ್ಟುಕೊಡುವ ಮಾತೇ ಇಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್​ ಮಾತ್ರ ಮೂರನೇ ಮುಖ್ಯಮಂತ್ರಿ ಬರಲಿದ್ದಾರೆ ಎಂದು ಡಂಗೂರ ಸಾರುವ ಕೆಲಸ ಮಾಡ್ತಿದೆ. ಈ ನಡುವೆ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಮಾತನಾಡಿರುವ ಮಾಜಿ ಸಿಎಂ ಯಡಿಯೂರಪ್ಪ, ಚುನಾವಣೆ ಹತ್ತಿರ ಇರುವ ಕಾರಣಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆ ಆಗ್ತಿದೆ. ಸಿಎಂ ಬದಲಾವಣೆ ಆಗುವುದಿಲ್ಲ ಎಂದಿದ್ದಾರೆ. ಇನ್ನು ನಾನು ಆಗಸ್ಟ್​ 21ರಿಂದ ರಾಜ್ಯ ಪ್ರವಾಸ ಮಾಡ್ತೇನೆ. ಜನರು ನಾನು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿದರೂ ಜನರು ನನ್ನನ್ನು ಇಷ್ಟ ಪಡುತ್ತಾರೆ ಎಂದಿರುವ ಮಾತು ಯಾರಿಗೆ ಹೇಳಿದ್ದು..? ಜನರಿಗೆ ಹೇಳಿದ ಮಾತೋ ಅಥವಾ ನನ್ನ ಮಾತನ್ನು ಕೇಳದೆ ಹೈಕಮಾಂಡ್​ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎನ್ನುವ ಸಂದೇಶ ರವಾನೆ ಮಾಡಿದ್ದಾರೋ ಎನ್ನುವ ದ್ವಂದ್ವ ಸೃಷ್ಟಿಯಾಗಿದೆ. ಒಟ್ಟಾರೆ, ಆಗಸ್ಟ್​ 18ರ ಕಡೆಗೆ ಜನರ ನೋಟ ನೆಡುವಂತಾಗಿದೆ.

Related Posts

Don't Miss it !