ತಮ್ಮನ ಹೆಂಡ್ತಿಯಿಂದ ಡೌರಿ ಕೇಸ್​.. ಮಗನೊಂದಿಗೆ ನೇಣಿಗೆ ಶರಣಾದಳು ಅಕ್ಕ..!

ಮಂಡ್ಯದ ಜನ ಎಷ್ಟು ಕಟುವಾಗಿ ಮಾತನಾಡ್ತಾರೋ ಅಷ್ಟೇ ಭಾವನಾತ್ಮಕ ಜೀವಿಗಳು ಅನ್ನೋದನ್ನು ಈ ಪ್ರಕರಣ ಸಾರಿ ಸಾರಿ ಹೇಳುತ್ತಿದೆ. ತಮ್ಮನ ಪತ್ನಿ ವರದಕ್ಷಿಣೆ ಕೇಸ್​ ಹಾಕಿದ್ದಾಳೆ ಅನ್ನೋ ಕಾರಣಕ್ಕೆ ಅಕ್ಕ ಹಾಗು ಆಕೆಯ 13 ವರ್ಷದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊಸಗುಡ್ಡದಹಳ್ಳಿಯಲ್ಲಿ ನಡೆದಿದೆ. 48 ವರ್ಷದ ಲಕ್ಷ್ಮಮ್ಮ ಹಾಗು 13 ವರ್ಷದ ಮಗ ಮದನ್​ ಸಾವಿನಪ್ಪಿದ್ದಾರೆ. ಸಾವಿಗು ಮುನ್ನ ವೀಡಿಯೋ ಮಾಡಿರುವ ಲಕ್ಷ್ಮಮ್ಮ, ನನ್ನ ತಮ್ಮನನ್ನು ನಾನೇ ಹಾಳು ಮಾಡಿಬಿಟ್ಟೆ ಎಂದಿದ್ದಾರೆ. ಇನ್ನು ನನ್ನ ತಮ್ಮನಿಗಾಗಿ ನಾನು ಸಾಯುತ್ತಿದ್ದೇನೆ. ಆಕೆ ಹೇಳ್ತಿರೋದೆಲ್ಲ ಸುಳ್ಳು, ಯಾವುದೇ ಕಾರಣಕ್ಕೂ ತಮ್ಮನ ಹೆಂಡತಿ ಹಾಗು ಅವರ ಅಮ್ಮನ್ನ ಬಿಡಬೇಡಿ ಎಂದು ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಮೇಲಿನಿಂದ ಎಲ್ಲವನ್ನೂ ನೋಡುತ್ತಿರುತ್ತೇನೆ ಎಂದು ಅಮಾಯಕತೆ ಪ್ರದರ್ಶನ ಮಾಡಿದ್ದಾರೆ.

ಸಿದ್ದೇಗೌಡ

ಮಂಡ್ಯದ ಕೆರಗೋಡು ಮೂಲದ ಲಕ್ಷ್ಮಮ್ಮ ತನ್ನ ತಮ್ಮ ಸಿದ್ದೇಗೌಡನಿಗೆ ರಂಜಿಳಾ ಜೊತೆಗೆ ಮದುವೆ ಮಾಡಿದ್ದರು. ಸಿದ್ದೇಗೌಡ ಸ್ವಲ್ಪ ಮನೋ ವೈಕಲ್ಯದಿಂದ ಬಳಲುತ್ತಿದ್ದು, ತನ್ನ ತಮ್ಮನ ಕುಟುಂಬವನ್ನು ಲಕ್ಷ್ಮಮ್ಮನೇ ನೋಡಿಕೊಳ್ತಿದ್ರು. ಆದರೆ ತಮ್ಮನ ಪತ್ನಿ ರಂಜಿತಾ ಸಿದ್ದೇಗೌಡ ಹಾಗು 9 ಮಂದಿಯ ವಿರುದ್ಧ ವರದಕ್ಷಿಣೆ ಕೇಸ್​ ಕೊಟ್ಟಿದ್ದರಿಂದ ಸಿದ್ದೇಗೌಡನನ್ನು ಬಂಧಿಸಿದ್ದ ಪೊಲೀಸ್ರು ಜೈಲಿಗೆ ಕಳುಹಿಸಿದ್ದರು. ತಮ್ಮ ಸಿದ್ದೇಗೌಡನಿಗೆ ಮನೋ ವೈಕಲ್ಯತೆ ಎನ್ನುವ ಕಾರಣಕ್ಕೆ ಮಗನಂತೆಯೇ ನೋಡಿಕೊಂಡಿದ್ದ ಲಕ್ಷ್ಮಮ್ಮ, ತಮ್ಮನನ್ನು ಜೈಲಿಗೆ ಕಳುಹಿಸುವ ಪರಿಸ್ಥಿತಿ ಬಂದಿದ್ದಕ್ಕೆ ತೀವ್ರವಾಗಿ ನೊಂಡಿದ್ದರು. ರಂಜಿತಾಳ ಜೊತೆಗೆ ಮದುವೆ ಮಾಡಿದ್ದರಿಂದಲೇ ನನ್ನ ತಮ್ಮ ಜೈಲಿಗೆ ಹೋಗಬೇಕಾಯ್ತು ಎಂದು ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಂಜಿತಾ

ಮಂಡ್ಯದ ಅರಕೆರೆ ಹುಡಗಿಯನ್ನು ನನ್ನ ಬಾಮೈದನಗೆ ಮದುವೆ ಮಾಡಿಕೊಳ್ಳಲಾಗಿತ್ತು. ಆದ್ರೆ ಆ ಹುಡುಗಿ ನಮ್ಮನ್ನೂ ಕೇಸ್​ನಲ್ಲಿ ಸೇರಿಸಿ ತೊಂದರೆ ಕೊಟ್ಟಳು. ಸಿದ್ದೇಗೌಡನನ್ನು ಜೈಲಿಗೆ ಹಾಕಿಸಿದ್ಲು. ಅವನ ಆಸ್ತಿಗಾಗಿ ತೊಂದರೆ ಕೊಟ್ಟಳು. 9 ಜನರ ವಿರುದ್ಧ ಕೇಸ್​​ ಹಾಕಿ ಎಲ್ಲರಿಗೂ ಹೆದರಿಸ್ತಿದ್ದಾಳೆ ಅಂತ ನಾನು ಪೊಲೀಸರ ಬಳಿ ಮನವಿ ಮಾಡಿದ್ದೆ. ಅವಳು ನಮ್ಮ ಮೇಲೆ ಅಧಿಕಾರ ತೋರಿಸಿದ್ಲು. ನನ್ನ ಹೆಂಡ್ತಿಗೆ ಫೋನ್ ಮಾಡಿ ಟಾರ್ಚರ್ ಕೊಡ್ತಿದ್ಲು. ಇದೀಗ ನನ್ನ ಹೆಂಡ್ತಿ ಮಗ ಇಬ್ಬರೂ ಹೋದ್ರು. ಮಹಿಳೆಗೆ ಕಾನೂನು, ಕಾನೂನು ಅಂತಾರೆ. ನನ್ನ ಪತ್ನಿ ಈಗ ಸಾವನ್ನಪ್ಪಿದ್ದಾಳೆ ಅವಳಿಗೆ ನ್ಯಾಯ ಕೊಡೋರು ಯಾರು ಎಂದು ಮೃತ ಲಕ್ಷ್ಮಮ್ಮ ಪತಿ ಶಿವಲಿಂಗೇಗೌಡ ಕಣ್ಣೀರು ಹಾಕಿದ್ದಾರೆ.

ಲಕ್ಷ್ಮಮ್ಮ ಸಾವಿಗೂ ಮುನ್ನ ಮಾಡಿರೋ ವಿಡಿಯೋ ಪ್ರಕಾರ ರಂಜಿತಾಳನ್ನ ಸಿದ್ದೇಗೌಡನಿಗೆ ಮದ್ವೆ ಮಾಡಿಸಿ ತಪ್ಪು ಮಾಡಿದ್ದೇನೆ ಎಂದಿದ್ದಾರೆ. ಮದುವೆ ವೇಳೆ ರಂಜಿತಾ ಪೋಷಕರು 50 ಸಾವಿರ ರೂಪಾಯಿ ಹಣ ಮತ್ತು ಒಂದು ಚಿನ್ನದ ಸರ ಕೊಟ್ಟು ದೇವಸ್ಥಾನದಲ್ಲಿ ಮದುವೆ ಮಾಡಿಕೊಟ್ಟಿದ್ದು ಬಿಟ್ಟರೆ, ಬೇರೆ ಏನನ್ನೂ ಕೊಟ್ಟಿಲ್ಲ. ನಾವು ರಂಜಿತಾ ಕುಟುಂಬಸ್ಥರ ಬಳಿ ಏನನ್ನೂ ಕೇಳಿರಲಿಲ್ಲ. ಆದರೂ ಡೌರಿ ಕೇಸ್ ಹಾಕಿ, ತನ್ನ ಅಮಾಯಕ ತಮ್ಮನನ್ನ ಜೈಲಿಗಟ್ಟಿದ್ದಾರೆ ಎಂದು ದುಖಃ ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಾನು ಇಲ್ಲದೆ ಇರುವಾಗ ನೀನು ಹೇಗೆ ಇರುತ್ತೀಯಾ ಎಂದು ತಮ್ಮನ ಬಗ್ಗೆ ಯೋಚನೆಯನ್ನೂ ಮಾಡಿದ್ದಾರೆ. ಕಾನೂನು ಹೇಗೆ ಸಂಕಷ್ಟ ತಂದೊಡ್ಡುತ್ತಿದೆ ಎನ್ನುವುದನ್ನು ಪೊಲೀಸರು ಸೇರಿದಂತೆ ಸಂಬಂಧಿಸಿದವರಿಗೆ ಮನವರಿಕೆ ಆಗಬೇಕಿದೆ.

Related Posts

Don't Miss it !