ಸ್ವಂತ ಕಾರು ಮಾರಿ, ಕಳ್ಳತನಕ್ಕೆ ಇಳಿದ ರಾಜಕಾರಣಿ..! ಕಾರಣ ಏನು ಗೊತ್ತಾ..?

ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ವಿಭಿನ್ನ ಕಳ್ಳನನ್ನು ಅರೆಸ್ಟ್​ ಮಾಡಿದ್ದಾರೆ. ಬರೋಬ್ಬರಿ 3 ತಿಂಗಳ ಕಾಲ ಹುಡುಕಾಟ ನಡೆಸಿ ಕಾರು ಖದೀಮನನ್ನು ಬಂಧಿಸಿದ್ದಾರೆ. ಬಂಧಿಸಿದ ಬಳಿಕ ಆತ ನೀಡಿದ ಮಾಹಿತಿಯನ್ನು ಕಂಡು ಇಡೀ ಪೊಲೀಸರೇ ಕ್ಷಣ ಕಾಲ ಶಾಕ್ ಆಗಿದ್ದಾರೆ. ಯಾಕೆಂದರೆ ನಾನೊಬ್ಬ ರಾಜಕಾರಣಿ ಎನ್ನುವುದನ್ನು ಎಳೆಎಳೆಯಾಗಿ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ ವೆಂಕಟೇಶ. ಆದರೆ ಕಳವು ಮಾಡಲು ಬಂದಿದ್ದು ಯಾಕೆ..? ಎನ್ನುವ ಪ್ರಶ್ನೆ ವೆಂಕಟೇಶ್​ ಕೊಟ್ಟ ಉತ್ತರ ಪೊಲೀಸರಲ್ಲೇ ದಿಗಿಲು ಹುಟ್ಟಿಸಿತ್ತು.

ಗ್ರಾಮ ಪಂಚಾಯ್ತಿ ಎಲೆಕ್ಷನ್​ನಲ್ಲಿ ಸ್ಪರ್ಧೆ..!

ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯವನಾದ ವೆಂಕಟೇಶ್ ನಾಯ್ಕ್​, ಕಳೆದ ಬಾರಿ ನಡೆದ ತನ್ನ ಹೆಂಡತಿಯನ್ನ ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಲ್ಲಿಸಿದ್ದ. ಚುನಾವಣೆಯಲ್ಲಿ ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದ. ಚುನಾವಣೆಯಲ್ಲಿ ಹಣ ಅಂತಸ್ತು ಕಳೆದುಕೊಂಡ ವೆಂಕಟೇಶ್ ನಾಯ್ಕ್, ತನ್ನ ಬಳಿಯಿದ್ದ, ಬ್ರಿಝಾ ಕಾರನ್ನು ಮಾರಾಟ ಮಾಡಿ ಸಾಲಗಾರರಿಗೆ ಕೊಟ್ಟಿದ್ದ. ಆದರೆ ಊರಿನಲ್ಲಿ ತಾನು ಶ್ರೀಮಂತ ಎನ್ನುವ ಹಾಗೆ ಪೋಸು ಕೊಟ್ಟಿಕೊಂಡಿದ್ದ ವೆಂಕಟೇಶ್​, ಏನಾದರೂ ಮಾಡಿ ಆದರೂ ಸರಿ ನಾನು ಮತ್ತೆ ಅದೇ ರೀತಿಯ ಕಾರು ವಾಪಸ್​ ಪಡೆಯಬೇಕು ಅನ್ನೋ ಹಠಕ್ಕೆ ಬಿದ್ದಿದ್ದ. ಅದನ್ನು ಸಾಧಿಸಲು ಕಾರು ಕಳ್ಳನಾದ.

ಕಾರು ಖದೀಬೇಕು, ನನ್ನ ಕಾರಿನಂತೆಯೇ ಇರಬೇಕು..!

ವೆಂಕಟೇಶ್ ಕಾರನ್ನು ಖದಿಯಬೇಕು, ಅದೂ ಕೂಡ ನನ್ನ ಕಾರಿನಂತೆಯೇ ಇರಬೇಕು ಎನ್ನುವುದು ವೆಂಕಟೇಶನ ಮೂಲ ಮಂತ್ರವಾಗಿತ್ತು. ಇದಕ್ಕಾಗಿ ವೆಂಂಕಟೇಶ್​ ಆಯ್ಕೆ ಮಾಡಿಕೊಂಡಿದ್ದು, OLX ವೇದಿಕೆಯನ್ನು. ತನ್ನ ಕಾರಿನ ಬಣ್ಣದ ಕಾರನ್ನು ಮಾರಾಟಕ್ಕೆ ಇರುವುದು ಗೊತ್ತಾಗಿತ್ತು. ಕಾರು ಮಾರುವವರಿಗೆ ಕರೆ ಮಾಡಿದ ವೆಂಕಟೇಶ್​ ನಾಯ್ಕ್, ಕಾರನ್ನು ಟೆಸ್ಟ್​ ಡ್ರೈವ್​ ಮಾಡಬೇಕು ಎಂದು ಹೇಳಿ, ಕಾರನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ. ಕರೆ ಮಾಡುವ ಉದ್ದೇಶದಿಂದಲೇ ಮೊಬೈಲ್​ ಕಳವು ಮಾಡಿದ್ದ.

3 ತಿಂಗಳ ಬಳಿಕ ತಗಲಾಕಿಕೊಂಡ ರಾಜಕಾರಣಿ..!

ಕಳವು ಮಾಡಿದ್ದ ಮೊಬೈಲ್​ನಿಂದ ಜನವರಿ 30 ರಂದು ಕಾರಿನ ಮಾಲೀಕರಿಗೆ ಕರೆ ಮಾಡಿ ಮಾತನಾಡಿದ್ದ ವೆಂಕಟೇಶ್​ ನಾಯ್ಕ್​, ಟೆಸ್ಟ್​ ಡ್ರೈವ್ ಮಾಡಲು ಬಂದು ಕಾರನ್ನು ಕಳವು ಮಾಡಿ ಪರಾರಿಯಾಗಿದ್ದ. ದೂರು ದಾಖಲು ಮಾಡಿಕೊಂಡಿದ್ದ ಅಮೃತಹಳ್ಳಿ ಪೊಲೀಸರು ಬರೋಬ್ಬರಿ ಮೂರು ತಿಂಗಳ ಕಾಲ ಹುಡುಕಾಟ ನಡೆಸಿ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಮೊಬೈಲ್​ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಸ್ಟೇಟಸ್​ ಮೇನ್​ಟೈನ್​ ಮಾಡಲು ಹೋದ ವೆಂಕಟೇಶ್ ನಾಯ್ಕ್​, ಮಾಡಬಾರದ್ದನ್ನು ಮಾಡಿ ಜೈಲು ಪಾಲಾಗಿದ್ದಾನೆ ಎನ್ನುವುದೇ ವಿಶೇಷ.

Related Posts

Don't Miss it !