B.Com ವಿದ್ಯಾರ್ಥಿಗೆ ಜೈಲಲ್ಲಿ ಸಿಕ್ಕಿದ್ದು ಮಹಾನ್​ ವಿದ್ಯೆ..! Youtube ನಲ್ಲಿ ಕಳ್ಳತನ ಶಿಕ್ಷಣ..

ಶಿಕ್ಷಣ ಎನ್ನುವುದು ತಪ್ಪು ದಾರಿಯಿಂದ ಸರಿ ದಾರಿಗೆ ಬರುವುದಕ್ಕೆ ಸಹಾಯ ಮಾಡುತ್ತದೆ ಎನ್ನುವುದು ಎಲ್ಲರ ನಂಬಿಕೆ. ಕೆಲವೊಮ್ಮೆ ಶಿಕ್ಷಣ ಹೈಟೆಕ್​ ಅಪರಾಧ ಪ್ರಕರಣಗಳಿಗೂ ಸಹಕಾರಿ ಆಗುತ್ತದೆ. ಅದರಿಂದ ಪೊಲೀಸರಿಗೂ ತಿಳಿಯದ ರೀತಿಯಲ್ಲಿ ಅಪರಾಧಗಳು ನಡೆಯುತ್ತವೆ ಎನ್ನುವುದನ್ನು ಬೆಂಗಳೂರು ಅಂಡರ್​ವರ್ಲ್ಡ್​ ಸಾಬೀತು ಮಾಡಿ ತೋರಿಸಿದೆ. ಅನೇಕ ವಿದ್ಯಾವಂತರು ಭೂಗತ ಲೋಕದ ಪಾತಕಿಗಳಾಗಿ ಮೆರದಿರುವ ಇತಿಹಾಸ ನಮ್ಮ ಮುಂದಿದೆ. ಆದರೆ ಇದೀಗ ಹೇಳಲು ಹೊರಟಿರುವ ವಿಚಾರ, ಬಿಕಾಂ ಪದವೀಧರ ಬೆಂಗಳೂರಿನಲ್ಲಿ ಕಾರು ಕಳ್ಳನಾದ ಅಸಲಿ ಕಥೆ. ಈತ ಆಂಧ್ರಪ್ರದೇಶ ಮೂಲಕದ ಅರುಣ್​. ಓದಿದ್ದು ಬಿಕಾಂ, ಸಣ್ಣ ಪುಟ್ಟ ಕೆಲಸ, ಕೈ ಬರ್ತಿದ್ದು. ಪುಡಿಗಾಸು ಸಂಬಳ. ಜೀವನದಲ್ಲಿ ಮೋಜು ಮಸ್ತಿ ಮಾಡುವುದಕ್ಕೆ ಶುರುಮಾಡಿದ ಅರುಣ್​, ವೃತ್ತಿಯನ್ನೇ ಬದಲಿಸಿಕೊಂಡಿದ್ದ.

ಕೊಲೆ, ದರೋಡೆ, ರಾಬರಿ ಕೇಸ್​ನಲ್ಲಿ ಜೈಲು, ಅಲ್ಲೇ ಪಾಠ..!

ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದು ಇಷ್ಟ ಇರಲಿಲ್ಲ, ಚೆನ್ನಾಗಿ ಹಣ ಮಾಡ್ಬೇಕು, ಜೀವನದಲ್ಲಿ ಮೋಜು ಮಸ್ತಿ ಮಾಡ್ಬೇಕು ಅನ್ನೋ ಹಠಕ್ಕೆ ಬಿದ್ದ ಅರುಣ್​, ಆಂಧ್ರ ಸೇರಿದಂತೆ ಸಾಕಷ್ಟು ಕಡೆ ದರೋಡೆ, ರಾಬರಿ, ಕೊಲೆ ಯತ್ನ ಸೇರಿದಂತೆ ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮದನಪಲ್ಲಿ ಪೊಲೀಸರು ಅರುಣ್​ನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು. ಆದರೆ ಜೈಲು ಅಪರಾಧಿಯನ್ನು ಸುಶಿಕ್ಷಿತನನ್ನನ್ನಾಗಿ ಬದಲಾವಣೆ ಮಾಡುವ ಬದಲು ಕದೀಮನನ್ನ ಮತ್ತಷ್ಟು ಕಳ್ಳತನ ಮಾಡಲು ಪ್ರೇರಣೆ ನೀಡಿತ್ತು. ತನ್ನ ಜೊತೆಯಲ್ಲಿದ್ದ ಸೆಲ್​ಮೇಟ್​​ ರಾಕೇಶ್​ ಎಂಬಾತ, ಕೊಲೆ ಸುಲಿಗೆ ಮಾಡಿದ್ರೆ ಜೈಲು ಶಿಕ್ಷೆ ಹೆಚ್ಚು, ನನ್ನ ರೀತಿ ಕಾರುಗಳನ್ನು ಕಳವು ಮಾಡು, ತಮಿಳುನಾಡಿನಲ್ಲಿ ಮಾರಾಟ ಮಾಡಿದರೆ ಸಾಕಷ್ಟು ಹಣ ಸಿಗುತ್ತೆ ಅನ್ನೋ ಐಡಿಯಾ ಕೊಟ್ಟಿದ್ನಂತೆ. ಆದ್ರೆ ಜೈಲಿಂದ ರಿಲೀಸ್​ ಆಗ್ತಿದ್ದ ಹಾಗೆ ತಯಾರಿ ಶುರುವಾಗಿತ್ತು.

ಯೂಟ್ಯೂಬ್​ನಲ್ಲಿ ಕೀ ಓಪನ್​ ಮಾಡೋ ತಂತ್ರಗಾರಿಕೆ..!

ಬೆಂಗಳೂರಿನಲ್ಲಿ ಕಾರು ಕಳವು ಮಾಡುವುದಕ್ಕೂ ಮೊದಲು ಯೂಟ್ಯೂಬ್​ನಲ್ಲಿ ವೀಡಿಯೋಗಳನ್ನು ನೋಡಿದ್ದ ಆರೋಪಿ ಅರುಣ್​, ಎಕ್ಸ್​ ಟೂಲ್​ ಆಟೋ ಡಯೋಗ್ನೆಸ್ಟಿಕ್​ ಟೂಲ್​ ಅನ್ನೋ ಕಂಪ್ಯೂಟರೈಸ್ಡ್​ ತಂತ್ರಜ್ಞಾನ ಇದ್ದರೆ ಕಾರಿನ ಕೀಯನ್ನು ಸರಳವಾಗಿ ಓಪನ್​ ಮಾಡಬಹುದು ಅನ್ನೋದನ್ನು ತಿಳಿದುಕೊಂಡನು. ಆ ವಸ್ತುವನ್ನು ಖರೀದಿ ಮಾಡಲು ಬೆಂಗಳೂರಿನ ಪ್ರಮುಖ ಮಾರ್ಕೆಟ್​ಗಳಲ್ಲಿ ಸುತ್ತಾಡಿ, ಕಳವು ಮಾಡಲು ಬೇಕಾದ ಸಲಕರಣೆಗಳನ್ನು ಖರೀದಿ ಮಾಡಿದ್ದ. ಆ ಬಳಿಕ ಹತ್ತಾರು ಕಾರುಗಳನ್ನು ಕಳವು ಮಾಡಿ ತಮಿಳುನಾಡಿನಲ್ಲಿ ಬೇಕಾಬಿಟ್ಟಿ ದರಕ್ಕೆ ಮಾರಾಟ ಕೂಡ ಮಾಡಿ ಎಂಜಾಯ್​ ಮಾಡ್ತಿದ್ದ. ದಾಖಲೆಗಳನ್ನು ಕೆಲವೇ ದಿನಗಳಲ್ಲಿ ಕೊಡುತ್ತೇನೆ ಎಂದು ಹೇಳಿ ಸಿಕ್ಕಷ್ಟು ದರಕ್ಕೆ ಕೊಟ್ಟು ಬರುತ್ತಿದ್ದ. ಆದರೆ ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನಲ್ಲಿ ಕಳವು ಮಾಡಿದ ಬಳಿಕ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ ಚಾಲಾಕಿ ಖದೀಮ.

ಇದನ್ನೂ ಓದಿ: ಹೈಕೋರ್ಟ್​ ಜಸ್ಟೀಸ್​ಗೆ ಬೆದರಿಕೆ ಬಂದಿದ್ದು ಹೇಗೆ..? ಅಸಲಿ ಕಹಾನಿ ಬಿಚ್ಚಿಟ್ಟ ನ್ಯಾಯಮೂರ್ತಿ​..!!

ಮಾರುತಿ ಕಾರ್​ ಮಾತ್ರ ಕಳ್ಳ ಅರುಣ್​ ಟಾರ್ಗೆಟ್​..!

ಕಾರ್​ ಚೋರ ಅರುಣ್​, ಕಳ್ಳತನ ಮಾಡುವುದನ್ನು ಕರಗತ ಮಾಡಿಕೊಂಡ ಬಳಿಕ ಹಣ ಬೇಕು ಎನಿಸಿದಾಗ ಕಾರು ಕಳವು ಮಾಡುವುದನ್ನು ಕಾಯಕ ಮಾಡಿಕೊಂಡ. ಮಾರುತಿ ಸಂಸ್ಥೆಯ ಕಾರುಗಳಿಗೆ ಸಾಕಷ್ಟು ಬೇಡಿಕೆ ಇದೆ. ಅಷ್ಟೇ ಅಲ್ಲದೆ ಮಧ್ಯಮ ವರ್ಗದ ಜನರು ಬಳಸುವ ಕಾರು ಮಾರುತಿ ಸಂಸ್ಥೆಯ ಕಾರುಗಳು ಆಗಿರುವ ಕಾರಣಕ್ಕೆ ಮಾರಾಟ ಮಾಡಲು ಜನರು ಸಿಗುತ್ತಾರೆ ಎನ್ನುವ ಕಾರಣಕ್ಕೆ ಮಾರುತಿ ಕಾರುಗಳನ್ನು ಕಳವು ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಕಾರಿನ ಗಾಜು ಹೊಡೆದು ಆ ಬಳಿಕ ಕಾರಿಗೆ ಹೈಪ್ಯಾಡ್​ ಕನೆಕ್ಟ್​ ಮಾಡಿ ಕಾರನ್ನು ಸ್ಟಾರ್ಟ್​ ಮಾಡಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡ್ತಿದ್ದ. ಇತ್ತೀಚಿಗೆ HSR ಲೇಔಟ್​ನಲ್ಲಿ ಕಾರಿನ ಕವರ್​ ತೆಗೆದು ಆ ಬಳಿಕ ಕಾರನ್ನು ಸ್ಟಾರ್ಟ್​ ಮಾಡಿಕೊಂಡು ಹೋಗುವಾಗ ಸಿಸಿಟಿಯಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದ್ದು. ಆರೋಪಿಯ ಜಾಡು ಹಿಡಿದ ಪೊಲೀಸರು ಆರೋಪಿ ಅರುಣ್​ನನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ 10 ಕಾರು ಹಾಗೂ 1 ಬೈಕ್​ ಕೂಡ ವಶಕ್ಕೆ ಪಡೆದಿದ್ದಾರೆ.

Related Posts

Don't Miss it !