ರಾಜಕಾರಣಿಗಳಿಗೆ ರೈತರ ಬಗ್ಗೆ ಕಾಳಜಿ ಇಷ್ಟೆನಾ..? ಒಬ್ಬರೂ ಈ ಬಗ್ಗೆ ಮಾತನಾಡ್ತಿಲ್ಲ ಯಾಕೆ..?

ರಾಜ್ಯ ಹಾಗೂ ದೇಶದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೂ ನಾವು ರೈತರ ಪರವಾಗಿ ಆಡಳಿತ ನಡೆಸುತ್ತೇವೆ. ರೈತರಿಗೆ ಅನ್ಯಾಯವಾಗಲು ಬಿಡೋದಿಲ್ಲ ಎನ್ನುತ್ತಾರೆ. ರೈತರಿಗಾಗಿ ಕೆಲವೊಂದು ತೋರಿಕೆ ಕೆಲಸ ಮಾಡ್ತಾರೆ. ಆದರೆ ರೈತರ ಮೇಲಿನ ದಬ್ಬಾಳಿಕೆಗಳೇ ಹೆಚ್ಚಾಗಿರುತ್ತವೆ. ಇಲ್ಲೊಂದು ಪ್ರಕರಣ ಬೆಳಕಿಗೆ ಬಂದು 30 ದಿನಗಳೇ ಕಳೆದು ಹೋಗುತ್ತಿವೆ. ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದರೂ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದ ಯಾರೊಬ್ಬ ನಾಯಕರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ರೈತರ ಹೆಸರಿನಲ್ಲಿ ಲೂಟಿ […]

ಹಸುಗಳಿಗೆ ಕಾಡುತ್ತಿದೆ ನಿಗೂಢ ಕಾಯಿಲೆ..! ಲಸಿಕೆ ಪೂರೈಸದೆ ರೈತರಿಗೆ ಸರ್ಕಾರದ ದೋಖಾ..!

ರಾಜ್ಯದಲ್ಲಿ ಪಶುಗಳ ಸಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ ಒಂದು ವಾರದಲ್ಲಿ ವಿಜಯನಗರ ಜಿಲ್ಲೆಯಲ್ಲಿ 15 ಕ್ಕೂ ಹೆಚ್ಚು ದನಕರುಗಳು ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿವೆ. ರಾಸುಗಳ ಸರಣಿ ಸಾವಿನಿಂದ ರೈತರು ಕಂಗಾಲಾಗಿದ್ದಾರೆ. ಹರಪನಹಳ್ಳಿ ತಾಲೂಕಿನ ಕಮ್ಮತ್ತಳ್ಳಿ, ಕಂಚಿಕೆರೆ, ಹೊಸಕೋಟೆ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಸಾವಿನ ಪ್ರಕರಣಗಳು ವರದಿಯಾಗಿವೆ. ಹಸುಗಳ ಸರಣಿ ಸಾವಿನಿಂದ ಕಂಗಾಲಾದ ರೈತರು, ಸರ್ಕಾರ ಪರಿಹಾರ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ. ನಿದ್ರೆಯಲ್ಲಿದ್ದಾರೆ ಪಶುಸಂಪನಾ ಇಲಾಖೆ ಸಚಿವ..! ಜಮೀನುಗಳಲ್ಲಿ ಮೇಯಲು ಹೋದಾಗ ದನಕರುಗಳು ಕುಸಿದು […]

ಮಾಜಿ ಮಿನಿಸ್ಟರ್​ ಕಿರಿಕ್ಕು​, ಸಿಕ್ಕಿಬಿದ್ದ ಶಾಸಕರಿಗೆ ರೈತರ ಘೇರಾವ್.!

​ಯಾದಗಿರಿ ಜಿಲ್ಲೆ ಶಹಾಪುರದ ಕೊಳ್ಳುರು ಗ್ರಾಮದ ರೈತರು ಶಾಸಕ ವೆಂಕಟರೆಡ್ಡಿ ಮುದ್ನಾಳಗೆ ಘೇರಾವ್ ಹಾಕಿದ್ದಾರೆ. ಕೃಷ್ಣಾ ನದಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಶಾಸಕರಿಗೆ ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರವಾಹದಿಂದ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ರೈತರು ಘೇರಾವ್ ಹಾಕಿದ್ದಾರೆ. ರೈತನ ಮೇಲೆ ಎಫ್​ಐಆರ್ ದಾಖಲಿಸಿದ್ದು ಯಾಕೆ ಎಂದು ರೈತರು ಪ್ರಶ್ನೆ ಮಾಡಿದ್ದಾರೆ. ರೈತನ ಮೇಲೆ ಎಫ್​ಐಆರ್ ಮಾಡಿಸಿದ್ದೀರಿ ಎಂದು ರೈತರು ಕೆಂಡಾಮಂಡಲರಾಗಿದ್ದಾರೆ. ರೈತನ ಮೇಲೆ ಕೇಸ್​ ಹಾಕಿಸಿದ್ದು ಯಾರು..? ಯಾಕೆ..? […]

ಕೊರೊನಾದಿಂದ ಸಾವು – ಸಹಕಾರ ಇಲಾಖೆ ಸಾಲ ಮನ್ನಾ..! ಇದಿಷ್ಟೇ ಗೊಂದಲ..

ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ರೈತರ ಸಾಲಮನ್ನಾ ಮಾಡುವ ಬಗ್ಗೆ ಸಹಕಾರ ಸಚಿವ ಎಸ್​.ಟಿ ಸೋಮಶೇಖರ್​ ಘೋಣೆ ಮಾಡಿದ್ದರು. ಈ ಬಗ್ಗೆ ಸಹಕಾರ ಇಲಾಖೆ ಅಧಿಕಾರಿಗಳು ದಾಖಲೆ ಸಿದ್ದಪಡಿಸಿರುವ ಕೆಲಸ ಮಾಡಿದ್ದಾರೆ. ಕಳೆದ ವಾರ ಡಿಸಿಸಿ ಹಾಗು ಅಪೆಕ್ಸ್ ಬ್ಯಾಂಕ್​ನಿಂದ ಕೊರೊನಾ ಸೋಂಕಿನಿಂದ ಮೃತಪಟ್ಟ ರೈತರ ಮಾಹಿತಿ ಕೇಳಿದ್ದ ಸಹಕಾರ ಇಲಾಖೆ ಕೊರೊನಾದಿಂದ ಮೃತರಾದ 10,187 ರೈತರ ಪಟ್ಟಿ ಸಿದ್ದಪಡಿಸಿದೆ. 79.47 ಕೋಟಿ ರೂಪಾಯಿ ಸಾಲ ಮಾಡುವ ಪಟ್ಟಿ ತಯಾರಾಗಿದೆ. ಬೆಳಗಾವಿಯಲ್ಲಿ ಅತಿ ಹೆಚ್ಚು ರೈತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. […]