ಭಾರತೀಯರ ಇಷ್ಟೊಂದು ಸಂಭ್ರಮಕ್ಕೆ ಅರ್ಹವೇ ಬ್ರಿಟನ್​ ಪ್ರಧಾನಿ ಹುದ್ದೆ..?

ಬ್ರಿಟನ್​​ ಪ್ರಧಾನಿಯಾಗಿ ರಿಷಿ ಸುನಕ್​ ಆಯ್ಕೆ ಆಗಿದ್ದಾರೆ. ಭಾರತೀಯ ಮೂಲದ ರಿಷಿ ಸುನಕ್​ ಆಯ್ಕೆಯಾಗುತ್ತಿದ್ದ ಹಾಗೆ ಭಾರತೀಯ ಮೂಲದ ವ್ಯಕ್ತಿ ಬ್ರಿಟೀಷ್​ ಪ್ರಜೆಗಳ ಪ್ರಧಾನಿ ಎಂದು ಭಾರತೀಯರು ಹಿರಿಹಿರಿ ಹಿಗ್ಗಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಇನ್ಫೋಸಿಸ್​ ಸಂಸ್ಥಾಪಕರಾದ ನಾರಾಯಣಮೂರ್ತಿ ಹಾಗು ಸುಧಾ ನಾರಾಯಣ ಮೂರ್ತಿ ಅವರ ಅಳಿಯ ಅನ್ನೋ ಕಾರಣಕ್ಕೆ ಕರ್ನಾಟಕದ ಅಳಿಯ ಬ್ರಿಟೀಷ್​ ಪ್ರಧಾನಿ ಎಂದು ಹೆಮ್ಮೆಯ ವಿಚಾರಗಳು ಕಾಣಿಸಿಕೊಂಡವು. ಆದರೆ ಈ ಬ್ರಿಟನ್​ ಪ್ರಧಾನಿ ಹುದ್ದೆ, ಭಾರತೀಯರ ಸಂಭ್ರಮಕ್ಕೆ ಅರ್ಹವೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಬ್ರಿಟೀಷರು […]

ಮಾಜಿ ವಿಶ್ವಸುಂದರಿ ಜೊತೆ ಲಲಿತ್​ ಮೋದಿ ಮದುವೆ..! ಸ್ಪಷ್ಟನೆ ಏನು ಗೊತ್ತಾ..!?

ಮಾಜಿ ವಿಶ್ವ ಸುಂದರಿ ಹಾಗು ಬಾಲಿವುಡ್​ ನಟಿ ಸುಷ್ಮಿತಾ ಸೇನ್​ ಜೊತೆಗೆ ಐಪಿಎಲ್​ ಸಂಸ್ಥಾಪಕ ಲಲಿತ್​​ ಮೋದಿ ಮದುವೆ ಆಗ್ತಿದ್ದಾರೆ ಅನ್ನೋದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿ ಇದ್ದಂತಹ ವಿಚಾರ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಲು ಕಾರಣ ಲಲಿತ್​ ಮೋದಿ ಅವರು ಮಾಡಿದ್ದ ಟ್ವೀಟ್​ ಹಾಗೂ ಅದರಲ್ಲಿ ಹಾಕಿದ್ದ ಆತ್ಮೀಯ ಕ್ಷಣಗಳ ಫೋಟೋಗಳು. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಟ್ವೀಟ್​ ಒಂದನ್ನು ಮಾಡಿದ್ದ ಲಲಿತ್​ ಕುಮಾರ್​ ಮೋದಿ @LalitKModi ಈಗಷ್ಟೇ ಲಂಡನ್​ಗೆ ವಾಪಸ್​ ಆದೆವು. […]

ಸಮುದ್ರದ ಒಳಗೆ ಅವಿತು ಕುಳಿತ ಅಧ್ಯಕ್ಷ, ಪ್ರಧಾನಿ ಮನೆಗೆ ಬೆಂಕಿ, ಸಂಪೂರ್ಣ ಭಸ್ಮ..!!

ಲಂಕೇಶ್ವರ ಎಂದೇ ಖ್ಯಾತಿ ಪಡೆದಿದ್ದ ರಾವಣ ಆಳಿದ ನಾಡು ಶ್ರೀಲಂಕಾ ಅಕ್ಷರಶಹಃ ರಣಾಂಗಣ ಆಗಿದೆ. ಸೀತೆಯನ್ನು ಮಾರುವೇಶದಲ್ಲಿ ರಾವಣ ಕರೆದುಕೊಂಡು ಹೋಗಿದ್ದಾಗ ಸೀತೆಯನ್ನು ಹುಡುಕುತ್ತಾ ತೆರಳಿದ್ದ ಹನುಮಂತನ ಬಾಲಕ್ಕೆ ರಾವಣನ ಸೇನೆ ಬೆಂಕಿ ಇಟ್ಟಿತ್ತು. ಅದೇ ಬೆಂಕಿಯಿಂದ ಇಡೀ ಲಂಕಾ ರಾಜ್ಯಕ್ಕೆ ಹನುಮಂತ ಬೆಂಕಿ ಇಟ್ಟು ಸಮುದ್ರದಲ್ಲಿ ಬಾಲದ ಬೆಂಕಿಯನ್ನು ತಣಿಸಿ ಭಾರತಕ್ಕೆ ವಾಪಸ್​ ಆಗಿದ್ದನು ಎನ್ನುವುದು ರಾಮಾಯಣದಿಂದ ತಿಳಿದುಬರುತ್ತದೆ. ಅದೇ ಲಂಕಾ ಈಗ ಧಗಧಗನ ಹೊತ್ತಿ ಉರಿಯುತ್ತಿದೆ. ತಾನು ಪಾಲಿಸಿಕೊಂಡು ಬಂದ ಹಣಕಾಸು ನೀತಿಯಿಂದ ದಿವಾಳಿ […]

ರಷ್ಯಾದ ಕದನ ವಿರಾಮ, ಯುದ್ಧ ಭೀಕರತೆ ಮುನ್ಸೂಚನೆ..! ಯುದ್ಧಕ್ಕೆ ಧುಮುಕಲಿದೆ ನ್ಯಾಟೋ..!!

ರಷ್ಯಾ – ಉಕ್ರೇನ್​​ ನಡುವಿನ ಯುದ್ಧದಲ್ಲಿ ತಾತ್ಕಾಲಿಕ ವಿರಾಮ ಘೋಷಣೆ ಆಗಿದೆ. ರಷ್ಯಾ ಕದನ ವಿಮಾನ ಘೋಷಣೆ ಮಾಡಿರುವುದು ಸಾಕಷ್ಟು ಕುತೂಹಲಗಳಿಗೂ ಕಾರಣವಾಗಿದೆ. ರಷ್ಯಾ ಸೇನೆ ಮುಂದಿನ ದಿನಗಳಲ್ಲಿ ಭೀಕರ ದಾಳಿ ನಡೆಸುವ ಉದ್ದೇಶದಿಂದಲೇ ತಾತ್ಕಾಲಿಕ ಬ್ರೇಕ್​ ತೆಗೆದುಕೊಂಡಿದ್ಯಾ..? ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗ್ತಿದೆ. ಈ ನಡುವೆ ರಷ್ಯಾ ಹಾಗೂ ಉಕ್ರೇನ್​ ಸರ್ಕಾರದ ನಡುವೆ ಮಾತಿನ ಸಮರ ಏರ್ಪಟ್ಟಿದ್ದು, ಕದನ ವಿರಾಮದ ಹಿಂದೆ ರಷ್ಯಾದ ಮಹಾತಂತ್ರ ಅಡಗಿರುವ ಎಲ್ಲಾ ಸಾಧ್ಯತೆಗಳೂ ಇದೆ, ಮುಂದಿನ ದಿನಗಳಲ್ಲಿ ಉಕ್ರೇನ್​ […]

ಭಾರತೀಯರನ್ನೇ ಸೆರೆ ಹಿಡಿದ ಉಕ್ರೇನ್ ಸೈನಿಕರು..! ಮಾನವ ಗುರಾಣಿ ರೀತಿ ಬಳಕೆ..!!

ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಲೇ ಇದೆ. ಮೂರನೇ ವಿಶ್ವಯುದ್ಧ ನಡೆದರೆ ಪರಮಾಣು ಬಾಂಬ್‌ನಿಂದಲೇ ನಡೆಯುತ್ತದೆ ಎನ್ನುವ ಮೂಲಕ ಇಡೀ ವಿಶ್ವಕ್ಕೆ ರಷ್ಯಾ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ. ಇನ್ನೂ ಉಕ್ರೇನ್ ಬೆಂಬಲಿಸುತ್ತಿರುವ ಯೂರೋಪಿಯನ್ ರಾಷ್ಟ್ರಗಳಿಗೂ ಎಚ್ಚರಿಕೆ ರವಾನಿಸಿರುವ ರಷ್ಯಾ, ಉಕ್ರೇನ್ ಬೆಂಬಲಕ್ಕೆ ನಿಂತವರು ನಮ್ಮ ದಾಳಿಯನ್ನು ಎದುರಿಸಬೇಕಾಗಬಹುದು. ನಾವು ನಿಮ್ಮ ಮೇಲೆ ದಾಳಿ ಮಾಡಲ್ಲ ಎಂದು ಹೇಳಲಾಗದು ಎನ್ನುವ ಮೂಲಕ ಶೀಘ್ರದಲ್ಲೇ ಯೂರೋಪಿಯನ್ ರಾಷ್ಟ್ರಗಳ ಕಡೆಗೂ ರಷ್ಯಾ ದಾಳಿ ವಿಸ್ತರಿಸಲಿದೆ ಎನ್ನುವ ಸುಳಿವು ನೀಡಿದೆ.‌ […]

ಉಕ್ರೇನ್‌ನಿಂದ ಭಾರತೀಯರನ್ನು ಕರೆತರಲು ತಡ ಆಗ್ತಿದೆ..!! ಕಾರಣ ಏನು..?

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ನಾಗರಿಕರು ತಮ್ಮ ಪ್ರಾಣ ಕಳೆದುಕೊಳ್ತಿದ್ದಾರೆ. ಉಕ್ರೇನ್‌ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ಯುದ್ಧ ಭೀಕರತೆಯನ್ನು ಎದುರಿಸಬೇಕಾಗಿದೆ. ಭಾರತ ಸರ್ಕಾರ ಎಲ್ಲರನ್ನೂ ವಾಪಸ್ ಕರೆತರಲಾಗುವುದು ಯಾವುದೇ ಭಯ ಬೇಡ ಎಂದು ವಿಶ್ವಾಸದ ಆಶ್ವಾಸನೆ ನೀಡುತ್ತಿದೆ. ಆದರೆ ದಿನವೊಂದಕ್ಕೆ ಕರೆತರಲು ಸಾಧ್ಯವಾಗುತ್ತಿರೋದು ಕೇವಲ ಒಂದು ಸಾವಿರ ಭಾರತೀಯರನ್ನು ಮಾತ್ರ. ಅದೂ ಕೂಡ ಯುದ್ಧ ನಡೆಯದೇ ಇರುವ ಪ್ರಾಂತ್ಯಗಳಿಂದ ಮಾತ್ರ. ಯುದ್ಧ ನಡೆಯುತ್ತಿರುವ ಪ್ರದೇಶಗಳಲ್ಲಿ ಸಿಲುಕಿದವರನ್ನು ಸರ್ಕಾರ ಅಥವಾ ಸರ್ಕಾರದ ಭಾಗವಾಗಿರುವ ರಾಯಭಾರಿ […]

ವಿಶ್ವದ ಸರ್ವನಾಶಕ್ಕೆ ಸಕಲ ತಯಾರಿ, ಅಣುಬಾಂಬ್ ದಾಳಿಗೆ ರಷ್ಯಾ ಸಿದ್ಧತೆ.. ವರ್ಲ್ಡ್ ವಾರ್ 3..

ರಷ್ಯಾ ಹಾಗೂ ಉಕ್ರೇನ್​ ನಡುವೆ ಶುರುವಾದ ಯುದ್ಧ ನಾಲ್ಕು ದಿನಗಳು ಮುಗಿಯುವ ಹೊತ್ತಿಗೆ ಅಣುಬಾಂಬ್​ ಯುದ್ಧ ನಡೆಯುವ ಸುಳಿವು ನೀಡಿದೆ. ಈ ಬಗ್ಗೆ ಅಧಿಕೃತ ಆದೇಶ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪರಮಾಣು ಬಾಂಬ್ ಘಟಕ ಯಾವುದೇ ಕ್ಷಣದಲ್ಲಿ ಸಿದ್ಧ ಇರಬೇಕು ಎಂದು ರಕ್ಷಣಾ ಪಡೆಗಳಿಗೆ ತಾಕೀತು ಮಾಡಿದ್ದಾರೆ. ಒಂದು ಕಡೆ ಉಕ್ರೇನ್ ಜೊತೆಗೆ ಸಂಧಾನದ ಪ್ರಸ್ತಾಪವನ್ನು ಇಟ್ಟಿರುವ ರಷ್ಯಾ, ಮತ್ತೊಂದು ಕಡೆಯಿಂದ ಅಣು ಬಾಂಬ್ ಸಿಡಿಸುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು ಇಡೀ ವಿಶ್ವವೇ ಆತಂಕದಲ್ಲಿ ನೋಡುವಂತೆ […]

ಉಕ್ರೇನಿಯನ್ನರ ದೇಶಪ್ರೇಮ ರಸ್ತೆ ರಸ್ತೆಯಲ್ಲೂ ಅಬ್ಬರ..! ರಷ್ಯಾಗೆ ಸಂಧಾನವೇ ಸಕ್ಸಸ್..!

ರಷ್ಯಾ – ಉಕ್ರೇನ್​ ನಡುವೆ ಯುದ್ಧ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ತಿದೆ. ಉಕ್ರೇನ್​ನ ಒಂದೊಂದೇ ನಗರಗಳು ರಷ್ಯಾ ಸೈನಿಕರ ಹಿಡಿತಕ್ಕೆ ಹೋಗುತ್ತಿವೆ. ರಷ್ಯಾ ಸೇನೆಯ ಯುದ್ಧ ಟ್ಯಾಂಕರ್​​ಗಳ ಅಬ್ಬರ ಉಕ್ರೇನ್​​ ರಸ್ತೆಗಳಲ್ಲಿ ಕಾಣಿಸುತ್ತಿದೆ. ಬಾಂಬ್​​ಗಳ ಸುರಿಮಳೆ ಆಗುತ್ತಿದೆ. ಉಕ್ರೇನ್​ ದೇಶಕ್ಕೆ ಲಗ್ಗೆ ಇಟ್ಟಿರುವ ರಷ್ಯಾ ಸೈನಿಕರ ಸ್ಥಿತಿ ಅಯೋಮಯವಾಗಿದೆ. ರಷ್ಯಾ ಸೈನಿಕರು ತಿನ್ನಲು ಆಹಾರ ಸಿಗದೆ ಉಕ್ರೇನ್​ ದೇಶದ ಸೂಪರ್​ ಮಾರ್ಕೆಟ್​​ಗಳಲ್ಲಿ ತಡಕಾಡುತ್ತಿರುವ ದೃಶ್ಯ ಸರ್ವೇ ಸಮಾನ್ಯವಾಗಿದೆ. ಉಕ್ರೇನ್​​ ದೇಶದ ಅಣು ವಿದ್ಯುತ್​​ ಸ್ಥಾವರಗಳನ್ನು ವಶಕ್ಕೆ ಪಡೆದಿರುವ […]

3ನೇ ವಿಶ್ವಯುದ್ಧ ಘೋಷಣೆಗೆ ಕ್ಷಣಗಣನೆ ಆರಂಭ..! ಇಕ್ಕಟ್ಟಿಗೆ ಸಿಲುಕಿದ ಭಾರತ..!

ಉಕ್ರೇನ್​​ ಜೊತೆಗೆ ಸಂಧಾನ ಮಾತುಕತೆ ನಾವು ಸಿದ್ಧ ಎಂದು ಹೇಳಿಕೊಳ್ಳುತ್ತಲೇ ರಷ್ಯಾ , ಉಕ್ರೇನ್​ ದೇಶವನ್ನು ಸರ್ವನಾಶ ಮಾಡುವ ಕಡೆಗೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಉಕ್ರೇನ್​ ದೇಶವನ್ನು ಸಂಪೂರ್ಣವಾಗಿ ಸುತ್ತುವರಿದು ರಷ್ಯಾ ಆಕ್ರಮ ಮಾಡುತ್ತಿದ್ದು, ಬಲಾಢ್ಯ ಎದುರಾಳಿಯ ಆರ್ಭಟ ತಾಳಲಾರದೆ ಉಕ್ರೇನ್​ ಸಹಾಯಕ್ಕಾಗಿ ಕಂಡ ಕಂಡವರ ಬಳಿ ಅಂಗಲಾಚುತ್ತಿದೆ. ಸೋತು ಶರಣಾಗತಿ ಆದರೆ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಆಗುತ್ತದೆ. ರಷ್ಯಾ ಇಡೀ ದೇಶವನ್ನು ಲೂಟಿ ಮಾಡಲಿದೆ ಎನ್ನುವ ಭೀತಿ ಜೊತೆಗೆ ನಾಗರಿಕೆ ಸೇನೆಯನ್ನೂ ಯುದ್ಧಕ್ಕೆ ಅಣಿಮಾಡಿದೆ. ತನ್ನ […]

ರಷ್ಯಾ – ಉಕ್ರೇನ್​ ಯುದ್ಧ ನಿಲ್ಲೋದು ಯಾವಾಗ..? ಜನರ ರಕ್ಷಣೆಗೆ ಮೆಟ್ರೋ ಸುರಂಗ..!!

ರಷ್ಯಾ ಹಾಗೂ ಉಕ್ರೇನ್​​ ನಡುವೆ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯದ ರಷ್ಯಾ, ಉಕ್ರೇನ್ ಮೇಲೆ ಆರ್ಭಟ ಮುಂದುವರಿಸಿದೆ. ಇದೀಗ ಭಾರತ ಸೇರಿದಂತೆ ಇತರೆ ರಾಷ್ಟ್ರಗಳು ಯುದ್ಧದ ತೀವ್ರತೆ ನಿಲ್ಲಿಸುವಂತೆ ಮನವಿ ಮಾಡುತ್ತಿವೆ. ತಮ್ಮ ದೇಶದ ಪ್ರಜೆಗಳನ್ನು ಉಕ್ರೇನ್‌ನಿಂದ ವಾಪಸ್ ಕರೆತರುವುದಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿವೆ. ನೂರಾರು ಕನ್ನಡಿಗ ವಿದ್ಯಾರ್ಥಿಗಳೂ ಸೇರಿದಂತೆ ಭಾರತದ 20 ಸಾವಿರಕ್ಕೂ ಅಧಿಕ ಕನ್ನಡಿಗರು ಉಕ್ರೇನ್​ನ ಯುದ್ಧ ಭೀತಿಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ರಷ್ಯಾ […]