ಪ್ರಧಾನಿ ಮೋದಿ ಹೆಸರು ಗೊತ್ತಿಲ್ಲದ್ದಕ್ಕೆ ಮದುವೆ ಕ್ಯಾನ್ಸಲ್.. ಇವನಿಗೆ ಬಂಪರ್​..!!

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಈ ರೀತಿಯ ಘಟನೆಯೊಂದು ನಡೆದಿದೆ. ಗಾಜಿಯಾಪುರದಲ್ಲಿ ಮದುವೆ ಆಗುವ ಸಮಯದಲ್ಲಿ ಮದುಮಗಳು ದೇಶದ ಪ್ರಧಾನಿ ಯಾರು..? ಎಂದು ಪ್ರಶ್ನೆ ಮಾಡಿದ್ದಾಳೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಹೇಳಲು ವಿಫಲ ಆಗಿದ್ದರಿಂದ ಆಕೆ ಮದುವೆ ಆಗುವುದಕ್ಕೆ ನಿರಾಕರಿಸಿದ್ದಾರೆ ಎಂದು ವರದಿ ಆಗಿದೆ. ಈ ವೇಳೆ ನರೇಂದ್ರ ಮೋದಿ ಹೆಸರನ್ನು ಹೇಳಿದ ಮದುವೆ ಗಂಡಿನ ಸಹೋದರನ ಜೊತೆಗೆ ಆಕೆ ಮದುವೆ ಆಗಿರುವ ಅಚ್ಚರಿಯ ಘಟನೆ ಕಳೆದ ಶನಿವಾರ ನಡೆದಿದೆ. ಸೈದ್ದಾಪುರ ಪೊಲೀಸ್​ ಠಾಣೆ ವ್ಯಾಪ್ತಿಯ […]

ಗುಜರಾತ್​ನಲ್ಲಿ ಬಿಜೆಪಿಗೆ ಕೇಡುಗಾಲ ಆರಂಭ.. 90 ಜನರನ್ನು ಬಲಿ ಪಡೆದ ತೂಗು ಸೇತುವೆ..!

ಗುಜರಾತ್​ನಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ಅಧಿಕಾರ ನಡೆಸಿರುವ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ಒದಗಿ ಬಂದಿದೆ. ಗುಜರಾತ್​ನ ಮೊರ್​ಬಿನಲ್ಲಿ ತೂಗು ಸೇತುವೆ ಕುಸಿದು ಬಿದ್ದಿದ್ರಿಂದ ಬರೋಬ್ಬರಿ 78 ಜನರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೆಲವೇ ದಿನಗಳ ಹಿಂದೆ ತೂಗು ಸೇತುವೆ ನವೀಕರಣ ಕಾರ್ಯ ಮುಗಿದಿತ್ತು. 5 ದಿನಗಳಿಂದ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸುಮಾರು 400 ಜನರು ನಿಂತಿದ್ದ ತೂಗು ಸೇತುವೆ ಕಳಚಿ ನದಿಗೆ ಬಿದ್ದಿದ್ರಿಂದ ಸುಮಾರು 200 ಜನರು ನಾಪತ್ತೆ ಆಗಿದ್ದಾರೆ. ಇನ್ನುಳಿದ 200 […]

ತಮಿಳಿನ ಪುಷ್ಪ ಸಿನಿಮಾ ಪ್ರೇರಣೆ, ಕರ್ನಾಟಕದಲ್ಲಿ ಗಾಂಜಾ ಪೆಡ್ಲರ್ಸ್ ಮಾಡಿದ್ದೇನು​..!

ಒಂದು ಸಿನಿಮಾ ಬಂದಾಗ ಅದರಿಂದ ಸಾಕಷ್ಟು ಜನರು ತನಗೆ ಬೇಕಾದ ರೀತಿಯಲ್ಲಿ ಪ್ರೇರಣೆ ಪಡೆಯುವುದನ್ನು ನೋಡಿದ್ದೇವೆ. ರವಿಚಂದ್ರನ್​ ಅಭಿನಯದ ದೃಶ್ಯಂ ಸಿನಿಮಾ ತೆರೆಗೆ ಬಂದಾಗಲೂ ಕೊಲೆ ಮಾಡಿ ತಪ್ಪಿಸಿಕೊಳ್ಳುವುದು ಹೇಗೆ ಎಂದು ಸಿನಿಮಾದಿಂದ ಪ್ರೇರಣೆಗೊಂಡು ಕೊಂದು ತಗಲಾಕಿಕೊಂಡಿದ್ದ ಘಟನೆ ಕಣ್ಣ ಮುಂದಿದೆ. ಅದೇ ರೀತಿ ಇದೀಗ ತಮಿಳು ಭಾಷೆಯಲ್ಲಿ ಅಲ್ಲು ಅರ್ಜುನ್​ ಹಾಗೂ ಕನ್ನಡದ ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಕನ್ನಡ ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಅದರಲ್ಲಿ ನಾಯಕ ನಟ […]

ಮಾವುತನನ್ನು ಕೊಂದ ಅನೆಗೂ ಜೈಲು ಶಿಕ್ಷೆ..! ತಾಯಿ ಕೊಂದ ನಾಯಿಗೂ ಶಿಕ್ಷೆ..!

ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳಿಗೆ ಸರ್ಕಾರ ಕೆಲವೊಂದು ಶಿಕ್ಷೆಗಳನ್ನು ಗುರುತಿಸಿದ್ದು, ಭಾರತೀಯ ದಂಡ ಸಂಹಿತೆ ಪ್ರಕಾರ ನ್ಯಾಯಾಲಯ ಶಿಕ್ಷೆಯನ್ನು ವಿಧಿಸುತ್ತದೆ. ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಎಲ್ಲಾ ಅಪರಾಧಿ ಕೃತ್ಯಗಳಿಗೂ ಶಿಕ್ಷೆ ಕಟ್ಟಿಟ್ಟ ಬುತ್ತಿ. ಆದರೆ ಕಾಡುಪ್ರಾಣಿಗಳಿಗೂ ಶಿಕ್ಷೆ ನೀಡುವ ಮೂಲಕ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇ ಬೇಕು ಎನ್ನುವುದನ್ನು ಸಾಮಾಜಿಕ ನ್ಯಾಯದ ಮೂಲಕ ಇತ್ತೀಚಿನ ಕೆಲವು ಪ್ರಕರಣಗಳು ಸಾಕ್ಷಿಯಾಗಿವೆ. ಕಾಡಿನಿಂದ ಹಿಡಿದು ತರಬೇತಿ ನೀಡಿದ್ದ ಆನೆಯೊಂದು ಮಾವುತನನ್ನೇ ಕೊಂದಿದ್ದ ಪ್ರಕರಣದಲ್ಲಿ ಆನೆಯನ್ನು ಬಂಧನ ಮಾಡಲಾಗಿದೆ. ಇನ್ನು […]

ಬ್ಯಾಂಕ್​ ಉದ್ಯೋಗಿ ಕೊಂದಿದ್ದುಯಾಕೆ ? ಅಪಾರ್ಟ್​ಮೆಂಟ್​ ಸೆಕ್ಯುರಿಟಿ ಗಾರ್ಡ್ಸ್..?

ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್​ಗಳೇ ಕಳ್ಳತನ ಮಾಡುತ್ತಿರುವ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗ್ತಿರೋ ಪ್ರಕರಣಗಳು ಹೆಚ್ಚಾಗುತ್ತಿವೆ ಅನ್ನೋದು ಬೆಂಗಳೂರು ಪೊಲೀಸ್​ ಮೂಲಗಳ ಮಾಹಿತಿ. ಉತ್ತರ ಭಾರತ, ನೇಪಾಳ, ಬಾಂಗ್ಲಾ ಕಡೆಗಳಿಂದ ಉದ್ಯೋಗ ಹರಸಿ ಬರುವ ಅದೆಷ್ಟೋ ಕುಟುಂಬಗಳಿಗೆ ಬೆಂಗಳೂರು ಅನ್ನ ನೀರು ಕೊಡುವ ತಾಯಿ ಎನ್ನಬಹುದು. ಆದರೆ ಕೆಲಸ ಮಾಡುವ ಜೊತೆಗೆ ಕೊಲೆ ಸುಲಿಗೆ ಪ್ರಕರಣಗಳಲ್ಲಿ ಭಾಗಿ ಆಗುತ್ತಿರುವ ಪ್ರಕರಣಗಳು ದಿನದಿಂದ ಹೆಚ್ಚಾಗುತ್ತಲೇ ಇವೆ. ಜುಲೈ 5ರಂದು ಬೆಂಗಳೂರಿನಲ್ಲಿ ಬ್ಯಾಂಕ್​ ಉದ್ಯೋಗಿಯೊಬ್ಬರುನ್ನು ಕಬ್ಬಿಣದ ರಾಡ್​ನಿಂದ ಹೊಡೆದು ಕೊಲೆ ಮಾಡಲಾಗಿದೆ. ಇದಕ್ಕೆ […]

ದಕ್ಷಿಣ ಭಾರತದ ಮೇಲೆ ಬಿಜೆಪಿ ಕಣ್ಣು, ರಾಜ್ಯಸಭೆ ನಾಮನಿರ್ದೇಶದಲ್ಲಿ ಚತುರತೆ..!!

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಮೇಲೆ ಹಿಡಿತ ಸಾಧಿಸಲು ಬಿಜೆಪಿ ಸಾಕಷ್ಟು ವರ್ಷಗಳಿಂದ ಯತ್ನಿಸುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಒಪ್ಪಿಕೊಂಡ ಜನತೆ, ಉಳಿದ ಯಾವುದೇ ರಾಜ್ಯದ ಜನರು ಭಾರತೀಯ ಜನತಾ ಪಾರ್ಟಿಯನ್ನು ಒಪ್ಪಿಕೊಳ್ಳುತ್ತಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕವೂ ಸಾಕಷ್ಟು ಶ್ರಮ ಹಾಕಿದರೂ, ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯುವುದು ಕಷ್ಟ ಸಾಧ್ಯವಾಗಿದೆ. ಹಿಂದಿ ಭಾಷೆಯ ಎದುರು ಸೆಟೆದು ನಿಲ್ಲುತ್ತಿರುವ ದಕ್ಷಿಣ ಭಾರತದ ಜನರ ಮನಸೆಳೆಯುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಇದೀಗ ರಾಜ್ಯಸಭೆಗೆ […]

ರಾಜಸ್ಥಾನದಲ್ಲಿ ಕೊಲೆಯಾದ ಕನ್ಹಯ್ಯ ಲಾಲ್​ ಕುಟುಂಬಸ್ಥರ ಕೊನೆ ಆಸೆ ಏನು..?

ರಾಜ್ಯಸ್ಥಾನದಲ್ಲಿ 47 ವರ್ಷದ ಟೈಲರ್​ ಕನ್ಹಯ್ಯ ಲಾಲ್​ನನ್ನು ಕೊಲೆ ಮಾಡಿದ ಬಳಿಕ ಇಡೀ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ. ಕಾಂಗ್ರೆಸ್​ ಹಾಗು ಬಿಜೆಪಿ ನಾಯಕರು ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಬಿಜೆಪಿ ವಕ್ತಾರೆ ಆಗಿದ್ದ ನೂಪುರ್​ ಶರ್ಮಾ ಹೇಳಿಕೆ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದಕ್ಕೆ ಕುರ್ತಾಗೆ ಅಳತೆ ಕೊಡುವ ನೆಪದಲ್ಲಿ ಬಂದ ಇಬ್ಬರು ಮುಸಲ್ಮಾನ್​ ಸಮುದಾಯಕ್ಕೆ ಸೇರಿದ ಮೊಹಮದ್​ ರಿಯಾಜ್​ ಅಖ್ತಾರಿ ಹಾಗು ಗೌಸ್ ಮೊಹಮದ್ ಎಂಬುವರು ಕತ್ತು ಕೊಯ್ದು ಕೊಲೆ ಮಾಡಿದ್ದರು. ಅಂತಿಮ ಶವಯಾತ್ರೆ ಬಳಿಕ […]

ರಾಜಸ್ಥಾನದಲ್ಲಿ ಹಿಂದೂ ಸಮುದಾಯದ ವ್ಯಕ್ತಿ ಹತ್ಯೆಗೆ ನಿಖರ ಕಾರಣ ಏನು..!?

ರಾಜಸ್ಥಾನದ ಉದಯ್​ಪುರದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಕನ್ಹಯ್ಯ ಕುಮಾರ್​ ಎಂಬಾತನನ್ನು ಹಾಡಹಗಲೇ ಕೊಲೆ ಮಾಡಲಾಗಿದೆ. ಟೈಲರ್​ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿಯನ್ನು ಕುತ್ತಿಗೆ ಕತ್ತರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಬಟ್ಟೆ ಹೊಲಿಸುವ ನೆಪದಲ್ಲಿ ಅಂಗಡಿ ಒಳಕ್ಕೆ ಬಂದಿದ್ದ ಇಬ್ಬರು ವ್ಯಕ್ತಿಗಳು ಸಮಯ ನೋಡಿ ದಾಳಿ ಮಾಡಿ ಕುತ್ತಿಗೆಯನ್ನು ಕತ್ತರಿಸಿ ಅಟ್ಟಹಾಸ ಮೆರೆದಿದ್ದಾರೆ. ಗೌಸ್ ಮೊಹಮ್ಮದ್ ರಿಯಾಜ್​​, ಮೊಹಮ್ಮದ್​ ಅನ್ಸಾರಿ ಎಂಬ ಕಟುಕರು ಕೊಲೆ ಮಾಡಿ ಬೆದರಿಕೆಯನ್ನೂ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ನೂಪುರ್​ ಶರ್ಮಾರನ್ನು […]

ಸರ್ಕಾರಿ ಕೆಲಸ ಬೇಡ ಅಂತಾ ಹೆಂಡತಿ ಬಲಗೈ ಕತ್ತರಿಸಿದ ಕಿರಾತಕ..!

ಖಾಸಗಿ ನೌಕರಿಗೆ ಹೆಂಡತಿಯನ್ನು ಕಳಿಸೋದಿಲ್ಲ ಎನ್ನುವ ಕುಟುಂಬಸ್ಥರು ಅಲ್ಲಲ್ಲಿ ಸಿಗುವುದು ಸಹಜ. ಅಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವುದು ಕಷ್ಟ. ಹೆಂಡತಿ ಮನೆ ಹಾಗೂ ಕಂಪನಿಗಳಲ್ಲಿ ದುಡಿಯುವುದು ಸಂಕಷ್ಟಗಳನ್ನು ತಂದೊಡ್ಡುತ್ತದೆ. ಮಕ್ಕಳ ಹಾರೈಕೆ ಸರಿಯಾದ ರೀತಿಯಲ್ಲಿ ಆಗುವುದಿಲ್ಲ ಎನ್ನುವ ಕಾರಣಕ್ಕೆ ಹೆಂಡತಿಯನ್ನು ಕೆಲಸಕ್ಕೆ ಹೋಗಬೇಡ ಎನ್ನುವುದು ರೂಢಿ. ಇತ್ತೀಚಿಗೆ ಹೆಂಡತಿಯನ್ನು ಕೆಲಸಕ್ಕೆ ಕಳಿಸುವುದಿಲ್ಲ ಎನ್ನುವ ಕಾರಣಕ್ಕೆ ಮದುವೆ ಸಮಯದಲ್ಲೇ ಕೆಲಸಕ್ಕೆ ಹೋಗಲು ಬಿಡಬೇಕು ಎನ್ನುವ ನಿಯಮ ಹಾಕಿಕೊಂಡು ಮದುವೆ ಆಗುವ ಪ್ರಕರಣಗಳೂ ಇದೆ. ಆದರೆ ಸರ್ಕಾರಿ ಕೆಲಸ […]

ತ್ರಿಪುರದಲ್ಲಿ ಬಿಜೆಪಿ CM ದಿಢೀರ್ ಚೇಂಜ್​..! ರಾಜ್ಯದಲ್ಲೂ ಮಹತ್ವದ ಬೆಳವಣಿಗೆ..

ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಷಾ ಟೀಂ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಳಿಕ ಸಾಕಷ್ಟು ಬದಲಾವಣೆ ತರಲಾಗಿದೆ. ಸಾಕಷ್ಟು ಅಚ್ಚರಿಯ ರಾಜಕೀಯ ಬೆಳವಣಿಗೆ ಮಾಡೋದ್ರಲ್ಲೂ ಈ ಇಬ್ಬರು ನಾಯಕರು ನಿಸ್ಸೀಮರು ಎನ್ನುವುದನ್ನು ಯಾರೇ ಆಗಲಿ ಒಪ್ಪಿಕೊಳ್ಳಬೇಕು. ಯಾಕಂದ್ರೆ ಚುನಾವಣೆಗಳಲ್ಲಿ ಸೋಲುತ್ತೇವೆ ಎನ್ನುವುದು ಅರಿವಿಗೆ ಬಂದರೆ ಗೆಲ್ಲುವುದಕ್ಕೆ ಬೇಕಾದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಸಚಿವ ಸಂಪುಟವನ್ನೇ ಬರ್ಕಾಸ್ತ್ ಮಾಡಿ ಹೊಸ ಮುಖ್ಯಮಂತ್ರಿಯನ್ನೇ ಆಯ್ಕೆ ಮಾಡ್ತಾರೆ. ಸಾಕಷ್ಟು ರಾಜ್ಯಗಳಲ್ಲಿ ಈ ಯೋಜನೆ ಸಕ್ಸಸ್​ ಆದ ಬಳಿಕ ಇದೀಗ […]