ರೌಡಿಪೊಲೀಸ್‌.. ಕೊಲೆಯತ್ನ ಕೇಸ್‌ ಹಾಕದೆ ಸಪೋರ್ಟ್​

ಬೆಂಗಳೂರಿನಲ್ಲಿ ರೌಡಿಗಳ ಸಂಖ್ಯೆಗೇನು ಕಡಿಮೆ ಇಲ್ಲ. ಪ್ರತಿಯೊಂದು ಏರಿಯಾದಲ್ಲೂ ಮಚ್ಚು ಲಾಂಗ್‌ ಹಿಡಿದು ಹೊಡೆದಾಡುವ ಮತಿಹೀನ ಜನರು ಇದ್ದಾರೆ. ಆದರೆ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್‌ ಠಾಣೆ ASI ಶ್ರೀನಿವಾಸ್‌ ಕೂಡ ರೌಡಿಗಳ ರೀತಿಯಲ್ಲೇ ಮಚ್ಚು ಹಿಡಿದು ಗೂಂಡಾಗಿರಿ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಿಸಿಟಿವಿ ದೃಶ್ಯಗಳೂ ಇವೆ. ಹಲ್ಲೆಗೆ ಒಳಗಾಗಿರುವ ಜನರೂ ಕೂಡ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಪೊಲೀಸ್ರು ಮಾತ್ರ ಕೊಲೆ ಯತ್ನ ಕೇಸ್‌ ಹಾಕದೆ ಕೇಸ್‌ನಿಂದ ಬಚಾವ್‌ ಆಗುವಂತಹ ಕೇಸ್‌ […]

ಕೋಟಿ ಆಂಟಿಗೆ ಗಂಡಂದಿರ ಬದಲಾವಣೆ ಮಾಡೋದೆ ಕಯಾಲಿ..! ಅಮ್ಮನ ಕೊಂದ ಮಗಳು ಅಂದರ್..

ಕಳೆದ ಸೊಮವಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡಿ ಬರ್ತಿದ್ದ ಮಹಿಳೆ ಅರ್ಚನಾ ರೆಡ್ಡಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಮಾಡಿ ರಾಜಾರೋಶವಾಗಿ ತೆರಳಿದ್ದ ಹಂತಕರ ಕೈಗೆ ಖಾಕಿ ಕೋಳ ಹಾಕಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ಅದರಲ್ಲಿ ಅರ್ಚನಾ ರೆಡ್ಡಿ ಮಗಳು ಯುವಿಕಾ ರೆಡ್ಡಿ ಕೂಡ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದಳು ಎನ್ನುವುದನ್ನು ಪತ್ತೆ ಮಾಡಿರುವ ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು, ಅಮ್ಮನ ಕೊಂದ ಕಂದಮ್ಮನನ್ನು ಮುದ್ದೆ ಮುರಿಯಲು ಜೈಲಿಗೆ ಅಟ್ಟಿದ್ದಾರೆ. ಯುವಿಕಾ ರೆಡ್ಡಿ ಹಾಗೂ ಅರ್ಚನಾ ಮೂರನೇ ಗಂಡ […]

ಅಪ್ಪು ಸಿನಿಮಾ ಶೈಲಿಯಲ್ಲಿ ಮನೆಗೆ ಬಂದ ಹುಡುಗ.. ಕಳ್ಳನೆಂದು ಭಾವಿಸಿ ಕೊಂದೇ ಬಿಟ್ಟ ಮಾವ..!!

ದಿವಂಗರ ನಟ ಪುನೀತ್​ ರಾಜ್​ ಕುಮಾರ್​ ನಾಯಕ ನಟನಾಗಿ ಮಾಡಿದ ಚಿತ್ರ ಅಪ್ಪು. ಇಂದಿಗೂ ಎಂದೆಂದಿಗೂ ಭರಪೂರ ಮನರಂಜನೆ ನೀಡುವ ಅಪ್ಪು ಚಿತ್ರದಲ್ಲಿ ನಟ ಪುನೀತ್​ ರಾಜ್​ಕುಮಾರ್​, ತಾನು ಪ್ರೀತಿಸಿದ ಹುಡುಗಿ ಮನೆಗೆ ರಾತ್ರೋರಾತ್ರಿ ಎಂಟ್ರಿ ಕೊಟ್ಟಿದ್ದರು. ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಕೇಕ್​ ತಿನ್ನಿಸಿ ಬಂದಿದ್ದರು. ಮಧ್ಯರಾತ್ರಿ ಮಗಳು ಕೂಗಿದಾಗ ಒಮ್ಮೆ ಅಡಗಿ ಕುಳಿತು ಕಮಿಷನರ್​ ಆಗಿದ್ದ ಹುಡುಗಿಯ ತಂದೆಯ ವಕ್ರದೃಷ್ಟಿಯಿಂದ ಪಾರಾಗಿದ್ದರು. ಇದೆಲ್ಲಾ ಸಿನಿಮಾ ಮೂರು ಗಂಟೆಗಳ ಕಾಲ ನೋಡಿ, ಮನಸಾರೆ ನಕ್ಕು ಮನರಂಜನೆ […]

ಏಳು ವರ್ಷಗಳ ಅಗಲಿಕೆ ಬಳಿಕ ಒಂದಾದ ‘ಕಲಿಯುಗದ ರಾಮ ಸೀತೆ..!’

ಗಂಡು – ಹೆಣ್ಣು ವಿವಾಹ ಎನ್ನುವ ಬಂಧನದಲ್ಲಿ ಬಂಧಿಯಾಗಿ ಮುಂದಿನ ಜೀವನವನ್ನು ಕಳೆಯುತ್ತಾರೆ. ಆ ಮದುವೆ ಎಂದು ಶಾಸ್ತ್ರೋಕ್ತ ಸಂಪ್ರದಾಯದಲ್ಲಿ ಸಪ್ತಪದಿ ಎನ್ನುವ ಧಾರ್ಮಿಕ ವಿಧಿಯೊಂದಿದೆ. ಈ ಸಪ್ತಪದಿ ಜೀವನ ಪೂರ್ತಿ ಹೆಜ್ಜೆ ಮೇಲೆ ಹೆಜ್ಜರಯಂತೆ ಸಾಗಲಿ ಎನ್ನುವುದು ಅದರ ಉದ್ದೇಶ. ಆದರೆ ಅದೆಷ್ಟೋ ಮದುವೆಗಳು ಸಪ್ತಪದಿ ಎನ್ನುವ ನೀತಿಯನ್ನು ಮರೆತು ತಪ್ಪು ದಾರಿ ತುಳಿಯುತ್ತಾರೆ. ಆದರೆ ಇಲ್ಲೊಂದು ಜೋಡಿ ಸಪ್ತಪದಿ ತುಳಿದ ಕೆಲವೇ ದಿನಗಳಲ್ಲಿ ವಿಧಿಯಾಟಕ್ಕೆ ಸಿಲುಕಿ ಸೀತಾರಾಮರಂತೆ ದೂರವಾಗಿದ್ದರು. ಆದರೆ 7 ವರ್ಷಗಳ ಬಳಿಕ […]

ಅವ್ವನ ಜೊತೆ ಟುವ್ವಿ ಟುವ್ವಿ, ಮಗಳ ಜೊತೆ ಲವ್ವಿ ಡವ್ವಿ..! ತಾಯಿ ಕೊರಳಿಗೆ ಪ್ರೇಮ ಪಾಶ..

ಬೆಂಗಳೂರು ನಗರ ಸೋಮವಾರ ರಾತ್ರಿ ಬೆಚ್ಚಿ ಬಿದ್ದಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡಿ ಬೆಂಗಳೂರಿನ ನಿವಾಸಕ್ಕೆ ವಾಪಸ್​ ಆಗ್ತಿದ್ದ ಮಹಿಳೆಯನ್ನು ಕಾರಿನಿಂದ ಹೊರಕ್ಕೆ ಎಳೆದು ದುಷ್ಕರ್ಮಿಗಳು ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದರು. ಮಂಗಳವಾರ ಮಹಿಳೆಯ ಕೊಲೆ ತನಿಖೆಗೆ ಖಾಕಿ ಪಡೆ ಇಳಿದಾಗ ಸಾಕಷ್ಟು ವಿಚಾರಗಳು ಬಯಲಾಗಿವೆ. ಜಿಗಣಿಯಲ್ಲಿ ಮತದಾನ ಮಾಡಿ ಸ್ನೇಹಿತೆಯ ಮನೆಯಲ್ಲಿ ಊಟ ಮುಗಿಸಿ ಬೆಳ್ಳಂದೂರಿನ ನಿವಾಸಕ್ಕೆ ವಾಪಸ್​ ಆಗ್ತಿದ್ದ ಅರ್ಚನಾ ರೆಡ್ಡಿ ಎಂಬುವರ ಕೊಲೆಯಾಗಿದೆ. ಈ ಕೊಲೆಯನ್ನು ಆಕೆಯ 2ನೇ ಗಂಡ […]

ಪ್ರೀತಿಸಿ ಮದುವೆ ಆಗಿದ್ದಕ್ಕೆ ಯುವಕನ ಮರ್ಮಾಂಗ ಕತ್ತರಿಸಿದ ಕುಟುಂಬ..!!

ಪ್ರೀತಿಸಿ ಮದುವೆ ಆಗುವುದಕ್ಕೆ ಬಹುತೇಕ ಕುಟುಂಬಗಳು ವಿರೋಧ ಮಾಡುವುದು ಸರ್ವೇ ಸಾಮಾನ್ಯ. ಈ ರೀತಿ ಪ್ರೀತಿಸಿ ಮದುವೆ ಆಗುವುದನ್ನು ತಡೆಯಲು ಯುವತಿಯ ಕುಟುಂಬಸ್ಥರು ಸಾಕಷ್ಟು ಶತ ಪ್ರಯತ್ನ ಮಾಡುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ತಮ್ಮ ಮಗಳನ್ನು ಹತ್ಯೆ ಮಾಡಿ ಪ್ರೇಮ ವಿವಾಹವನ್ನೇ ತಡೆಯುತ್ತಾರೆ. ಇದನ್ನು ‘ಮರ್ಯಾದಾ ಹತ್ಯೆ’ ಎಂದು ಕರೆಯಲಾಗುತ್ತದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣವೊಂದು ನಡೆದಿದೆ. ಪ್ರೇಮ ವಿವಾಹಕ್ಕೆ ವಿರೋಧ ಮಾಡಿದ್ದ ಕುಟುಂಬಸ್ಥರು ತಮ್ಮ ಮಗಳಿಗೆ ಯಾವುದೇ ಸಮಸ್ಯೆ ಮಾಡಿಲ್ಲ. ಬದಲಿಗೆ ತಮ್ಮ ಮಗಳನ್ನು ಪ್ರೀತಿಸಿ […]

ನಾಲ್ಕೇ ವರ್ಷಕ್ಕೆ ಮುಪ್ಪಾದ ಪ್ರೀತಿ, ಜೋಡಿ ಹಕ್ಕಿಗಳ ವಿಚಿತ್ರ ಮರಣ..!

ಬೆಂಗಳೂರಿನ ಕೆ.ಆರ್​ ಪುರಂ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ದುರ್ಘಟನೆ ಇದು. ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ ವಿಧಿಯಾಟಕ್ಕೆ ಬಲಿಯಾಗಿದೆ. ಹೆಂಡತಿ ಆತ್ಮಹತ್ಯೆ ಮಾಡಿಕೊಂಡು ಬದುಕು ಕೊನೆ ಮಾಡಿಕೊಂಡಿದ್ದಾಳೆ. ಇನ್ನೂ ಪತ್ನಿ ಬರೆದಿದ್ದ ಕೋಪದ ಪತ್ರದ ಆಧಾರದಲ್ಲಿ ಬಂಧನವಾದ ಗಂಡ ಶಕ್ತಿವೇಲು, ಪೊಲೀಸರಿಂದ ತಪ್ಪಿಸಿಕೊಂಡು ಹೋಗುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳು ಕ್ಷಣಿಕ ಕೋಪದ ಕೈಗೆ ಬುದ್ಧಿ ಕೊಟ್ಟು ಸುಖ ಜೀವನವನ್ನು ನರಕ ಕೂಪಕ್ಕೆ ದೂಡಿಕೊಂಡಿದ್ದಾರೆ. ಇದೀಗ ಪೊಲೀಸರು ಮಾಡಿದ ಎಡವಟ್ಟು […]

ರಮೇಶ್ ಕುಮಾರ್ ಹೇಳಿಕೆ ಮತ್ತು ಕೇಸರಿ ರಾಜಕೀಯ ಕೆಸರು..!

ರಮೇಶ್ ಕುಮಾರ್ ಹೇಳಿಕೆ ನೀಡಿದಾಗ ಇಡೀ ಸದನ ನಗೆಯ ಕಡಲಲ್ಲಿ ತೇಲಿತ್ತು. ಖಾಸಗಿ ಮಾಧ್ಯಮಗಳ ಕ್ಯಾಮೆರಾ ಸದನದ ಒಳಗೆ ಇಣುಕದ ಕಾರಣಕ್ಕೆ ಬೇರೆಲ್ಲರ ಹಾವಭಾವ ಸಂತೋಷದ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕಳೆದುಕೊಳ್ಳಬೇಕಾಯ್ತು. ಆದರೆ ಮಾಧ್ಯಮಗಳು ಪ್ರಶ್ನೆ ಮಾಡಿದ ಬಳಿಕ ಈ ವಿಚಾರದಲ್ಲಿ ಸಕ್ರೀಯರಾದ ಬಿಜೆಪಿ ನಾಯಕರು ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿಗಳ ಸುರಿಮಳೆ ಮಾಡಿದರು. ರಾಜ್ಯದಲ್ಲಿ ಮಾತ್ರವಲ್ಲ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಲೋಕಸಭೆಯಲ್ಲಿ ರಮೇಶ್ ಕುಮಾರ್ ಬಗ್ಗೆ ಪ್ರಸ್ತಾಪ ಮಾಡಿದರು. ರಾಜ್ಯಸಭಾ ಸದಸ್ಯೆ ಜಯಾ […]

ಸ್ಪೀಕರ್ ಮಾತಿಗೆ ಮಾಜಿ ಸ್ಪೀಕರ್ ಗಾಧೆ, ಅತ್ಯಾಚಾರವನ್ನು ಎಂಜಾಯ್ ಮಾಡಬೇಕಂತೆ..!!

ವಿಧಾನಸಭಾ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿದೆ. ಸದನದಲ್ಲಿ ನಡೆದಿರುವ ಚರ್ಚೆಯೊಂದು ಇದೀಗ ವಿವಾದದ ಸುಳಿಯೆಬ್ಬಿಸಿದೆ. ಹಾಲಿ ಸ್ಪೀಕರ್ ಹಾಗೂ ಮಾಜಿ ಸ್ಪೀಕರ್ ನಡುವೆ ನಡೆದಿರುವ ಮಾತಿನ ಸಂಭಾಷಣೆ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಅದರಲ್ಲೂ ಅತ್ಯಾಚಾರದ ಬಗ್ಗೆ ನಡೆದಿರುವುದು ಸಂಭಾಷಣೆ ಸದನವೇ ತಲೆ ತಗ್ಗಿಸುವಂತೆ ಮಾಡಿದೆ. ಜೊತೆಗೆ ವಿಧಾನಸಭಾ ಅಧಿವೇಷನದಲ್ಲಿ ಈ ರೀತಿಯ ಮಾತುಗಳು ಕೇಳಿದಾಗಲೂ ಯಾವೊಬ್ಬ ಸದಸ್ಯರು ವಿರೋಧ ಮಾಡದೆ ಇರುವುದು ಅಚ್ಚರಿಗೂ ಕಾರಣವಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತಿಗೆ ಕಾರಣ ಏನು..? ವಿಧಾನಸಭಾ […]

ಆನೇಕಲ್ ಜೋಡಿ ಕೊಲೆಗೆ ಮೂರು ಕಾರಣ..!! ಖಾಕಿ ಬಲೆಗೆ ಬಿದ್ದ ಮುತ್ತುರಾಜ..!!

ಆನೇಕಲ್‌ನ ಚಂದಾಪುರದ ರಾಮಯ್ಯ ಲೇಔಟ್‌ನಲ್ಲಿ ಶನಿವಾರ ರಾತ್ರಿ ಜೋಡಿ ಕೊಲೆ ನಡೆದಿತ್ತು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಒಬ್ಬ ಮಹಿಳೆಯ ಕೊಲೆ ವಿಚಾರ ಸಾರ್ವಜನಿಕರಲ್ಲಿ ಸಾಕಷ್ಟು ಭಯ ಸೃಷ್ಟಿಸಿತ್ತು. ಕೊಲೆ ನಡೆದ ಸ್ಥಳಕ್ಕೆ ಬಂದಿದ್ದ ಸೂರ್ಯನಗರ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಸಹಾಯದಿಂದ ಆರೋಪಿಗಳ ಬಗ್ಗೆ ಸುಳಿವು ಪತ್ತೆ ಮಾಡುವ ಪ್ರಯತ್ನ ಮಾಡಿದ್ದರು. ಬೆಂಗಳೂರು ಗ್ರಾಮಾಂತರ ( ASP ) ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾಧಿಕಾರಿ ಲಕ್ಷ್ಮೀ ಗಣೇಶ್ ಕೂಡ ಸ್ಥಳ ಪರಿಶೀಲನೆ ಮಾಡಿ […]