ಇದು ನಿಮ್ಮದೇ ವೇದಿಕೆ.. ಒಳ್ಳೇದು ಕೆಟ್ಟದ್ದಕ್ಕೆ ನೀವೆ ಸಾಕ್ಷಿ ಅಷ್ಟೆ..

‘ದಿ ಪಬ್ಲಿಕ್​ ಸ್ಪಾಟ್​’ ಹೆಸರಿಗೆ ತಕ್ಕಂತೆ ಜನರಿಗಾಗಿ ಒಂದು ವಿಭಾಗ ಸೃಷ್ಟಿಸಿದೆ. ಅದುವೇ ನಿಮ್ಮದೇ ಸುದ್ದಿ. ದಿನಾಂಕ 02/08/2022 ರಂದು ರಾಜ್ಯಾದ್ಯಂತ ಮಳೆಯ ಪ್ರವಾಹ ಹೆಚ್ಚಾಗಿತ್ತು. ಅದರಲ್ಲೂ ಕರಾವಳಿ ತೀರ ಪ್ರದೇಶದ ಜನರ ಗೋಳು ಹೇಳ ತೀರದ್ದಾಗಿತ್ತು. ಈ ವೇಳೆ ಪ್ರೊ. ಆನಂದ ದೇವಾಡಿಗ ಅವರು, ಶಾಸಕರು ಸೇರಿದಂತೆ ಸರ್ಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ನೆರೆ ಪೀಡಿತ ಪ್ರದೇಶಕ್ಕೆ ಬಂದು ಜನರ ಸಮಸ್ಯೆ ಆಲಿಸಬೇಕಿದ್ದ ಶಾಸಕರು, ತಹಶೀಲ್ದಾರ್​, ಗ್ರಾಮ ಪಂಚಾಯ್ತಿ ಪಿಡಿಓ […]

Rain effect: ಸಿಎಂ ಸಾರ್ ಕೂಗಿ ಕರೆದರೂ ಯಾರೂ ರಕ್ಷಣೆಗೆ ಬರಲಿಲ್ಲ, ನಾವು ಮತಕ್ಕೆ ಮಾತ್ರ ಸೀಮಿತವೇ..?

ಭಟ್ಕಳ : ದಿನಾಂಕ 02/08/2022 ರಂದು ಸುರಿದ ಅತಿವೃಷ್ಠಿಯಿಂದಾಗಿ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಟದಹಿತ್ಲು ಎಂಬ ಊರಿನಲ್ಲಿ ನೆರೆಹಾವಳಿ ಸಂಭವಿಸಿರುತ್ತದೆ. ಕಂಟದಹಿತ್ತಲಿನ ಎಲ್ಲಾ ಮನೆಗಳಿಗೂ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿದ್ದು, ಎರಡು ಮನೆಗಳ ಗೋಡೆಗಳು ಕುಸಿದಿದೆ. ಎರಡು ಲಗೇಜ್ ರಿಕ್ಷಾ, ಒಂದು ಕಾರು, ಒಂದು ಆಟೋ ರಿಕ್ಷಾ, ಒಂದು 807 ಟೆಂಪೋ, ಹಾಗೂ ಎಂಟು ಬೈಕುಗಳು ನೀರು ಪಾಲಾಗಿದ್ದು, ಬೈಂದೂರಿನ ಸಂತೆಗೆ ತೆರಳಲು ಸಿದ್ಧವಾಗಿದ್ದ ನಾಗರಾಜ ದೇವಡಿಗರ ಹಾರ್ಡ್‌ವೇರ್ ವಸ್ತುಗಳನ್ನು ತುಂಬಿದ್ದ ಲಗೇಜ್ […]

ನಟ ನಿಖಿಲ್ ಕುಮಾರಸ್ವಾಮಿಗೆ ಅಭಿಮಾನಿ ಆಗಿ ಸಣ್ಣದೊಂದು Suggestion..!!

ನಟ ನಿಖಿಲ್ ಕುಮಾರಸ್ವಾಮಿ, ಅಪ್ಪ ಮಾಜಿ ಮುಖ್ಯಮಂತ್ರಿ, ತಾತ ಮಾಜಿ ಪ್ರಧಾನ ಮಂತ್ರಿ ಆಗಿದ್ದರೂ ತನ್ನದೇ ಏನಾದರೂ ಪ್ರತ್ಯೇಕ ಗುರುತು ಮಾಡಬೇಕು ಎಂದು ಹಂಬಲಿಸುತ್ತಿರುವ ಮನಸ್ಸು. ಆದರೆ ಯಶಸ್ಸು ಕಾಣದೆ ಇದ್ದರೂ ಹೊಸತನಕ್ಕೆ ತೆರೆದುಕೊಳ್ಳುವ ತುಡಿತ ನಿಮ್ಮಲ್ಲಿ ಕಡಿಮೆ ಆಗಿಲ್ಲ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ನಿಮ್ಮ ಸಿನಿಮಾ ರೈಡರ್ ಸಿನಿಮಾವನ್ನು ಕಾರಣಾಂತರದಿಂದ ನೋಡಲು ಆಗಿರಲಿಲ್ಲ. ಆದರೆ ನಿನ್ನೆಯಷ್ಟೇ ನಿಮ್ಮ ಸಿನಿಮಾವನ್ನು Zee5 ಕನ್ನಡದಲ್ಲಿ ನೋಡಿದೆ. ಕೂಡಲೇ ಈ ಪತ್ರ ಬರೆದೆ. ಯಶಸ್ಸು ಸಿಗದೆ ಇರಲು […]

ನಮ್ಮೂರ ರಸ್ತೆ ದೇವರಿಗೇ ಪ್ರೀತಿ..! ಜಸ್ಟ್ ಮಿಸ್ ಆಯ್ತು ಅನಾಹುತ..

ಮಂಡ್ಯ: ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯಲ್ಲಿ KSRTC ಬಸ್ ರಸ್ತೆಯಿಂದ ಜಾರಿ ನಿಂತಿರುವ ಘಟನೆ ನಡೆದಿದೆ. ಹೊನ್ನಾವರದ ಹಿರಿಕೆರೆ ಹಿಂಭಾಗದಲ್ಲಿ ರಸ್ತೆ ಕೆಸರಿನಿಂದ ತುಂಬಿದ್ದು, ಶ್ರವಣಬೆಳಗೊಳದಿಂದ ನಾಗಮಂಗಲಕ್ಕೆ ತೆರಳುತ್ತಿದ್ದ ಬಸ್ ಚಾಲಕನ ಜಾಣ್ಮೆಯಿಂದ ಪಲ್ಟಿಯಾಗುವುದು ತಪ್ಪಿದೆ. ವಿದ್ಯಾರ್ಥಿಗಳೂ ಸೇರಿ ಸುಮಾರು 30 ಮಂದಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಜರುಗಿದೆ. ಎದುರಾಗಿ ಬರುತ್ತಿದ್ದ ಕಾರಿಗೆ ರಸ್ತೆ ಬಿಡಲು ಪಕ್ಕಕ್ಕೆ ಸರಿದಾಗ ಹಿಂಬದಿಯ ಚಕ್ರಗಳು ಜಾರಿಕೊಂಡು ಹಳ್ಳಕ್ಕೆ ಹೋಗಿವೆ. ಕೂಡಲೇ ಬಸ್ ನಿಲ್ಲಿಸಿದ ಚಾಲಕ ಬಸ್ ಪಲ್ಟಿಯಾಗುವುದನ್ನು ತಡೆದಿದ್ದಾರೆ. ಮಂಡ್ಯ […]

ಮುಖ್ಯಮಂತ್ರಿಗಳೇ.. ಇದು ನಮ್ಮೂರ ರಸ್ತೆ, ನೀವೊಮ್ಮೆ ನೋಡಿ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗೇನಹಳ್ಳಿಯಿಂದ ಬರಗೇನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯಿದು. ಈ ರಸ್ತೆ ಸಂಪೂರ್ಣವಾಗಿ ಹಾಳಗಿದ್ದು, ರಸ್ತೆಯ ತುಂಬಾ ತಗ್ಗು-ಗುಂಡಿಗಳು ಇರುವುದರಿಂದ ವಾಹನ ಸವಾರರು ಸಂಚಾರ ಮಾಡಲು ಹರಸಾಹಸ ಪಡಬೇಕಾಗಿದೆ. ನಿತ್ಯ ಸಂಚಾರ ಮಾಡುವ ಜನರ ಗೋಳು ಹೇಳ ತೀರದು. ರಾಜ್ಯದಲ್ಲಿ ಬಿಜೆಪಿ ಪಕ್ಷ ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿ ಇದೆ. ನಮ್ಮ ಕ್ಷೇತ್ರದಲ್ಲೂ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗಿದ್ದರೂ ಅಭಿವೃದ್ಧಿ ಮರಿಚಿಕೆಯಾಗಿದೆ. ಇದಕ್ಕೆ ನೂತನ ಮುಖ್ಯಮಂತ್ರಿಯಾದ ನೀವಾದರೂ ಕಾಯಕಲ್ಪ ನೀಡಿ. ಈ ರಸ್ತೆಯು […]