ಹಸುಗಳಿಗೆ ಕಾಡುತ್ತಿದೆ ನಿಗೂಢ ಕಾಯಿಲೆ..! ಲಸಿಕೆ ಪೂರೈಸದೆ ರೈತರಿಗೆ ಸರ್ಕಾರದ ದೋಖಾ..!

ರಾಜ್ಯದಲ್ಲಿ ಪಶುಗಳ ಸಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ ಒಂದು ವಾರದಲ್ಲಿ ವಿಜಯನಗರ ಜಿಲ್ಲೆಯಲ್ಲಿ 15 ಕ್ಕೂ ಹೆಚ್ಚು ದನಕರುಗಳು ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿವೆ. ರಾಸುಗಳ ಸರಣಿ ಸಾವಿನಿಂದ ರೈತರು ಕಂಗಾಲಾಗಿದ್ದಾರೆ. ಹರಪನಹಳ್ಳಿ ತಾಲೂಕಿನ ಕಮ್ಮತ್ತಳ್ಳಿ, ಕಂಚಿಕೆರೆ, ಹೊಸಕೋಟೆ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಸಾವಿನ ಪ್ರಕರಣಗಳು ವರದಿಯಾಗಿವೆ. ಹಸುಗಳ ಸರಣಿ ಸಾವಿನಿಂದ ಕಂಗಾಲಾದ ರೈತರು, ಸರ್ಕಾರ ಪರಿಹಾರ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ನಿದ್ರೆಯಲ್ಲಿದ್ದಾರೆ ಪಶುಸಂಪನಾ ಇಲಾಖೆ ಸಚಿವ..!

ಜಮೀನುಗಳಲ್ಲಿ ಮೇಯಲು ಹೋದಾಗ ದನಕರುಗಳು ಕುಸಿದು ಬಿದ್ದು ಸಾವನ್ನಪ್ಪುತ್ತಿವೆ. ರಾಸುಗಳ ನಿರಂತರ ಸಾವಿನಿಂದ ರೈತರು ಕಂಗಾಲಾಗಿದ್ದರೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕನಿಷ್ಟ ಪಕ್ಷ ಪಶುಗಳು ಸಾವಿಗೆ ಕಾರಣ ಏನು ಎನ್ನುವುದನ್ನು ಪತ್ತೆ ಮಾಡುವುದಕ್ಕೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ ಎಂದು ರೈತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಕೂಡಲೇ ಪಶು ವೈದ್ಯರು ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಿ ಚಿಕಿತ್ಸಿ ನೀಡಬೇಕು. ದನಕರುಗಳ ಸಾವಿಗೆ ಕಾರಣ ಏನು ಎನ್ನುವುನ್ನು ಪತ್ತೆ ಮಾಡಬೇಕಿದೆ ಎಂದು ಒತ್ತಾಯ ಮಾಡಿದ್ದಾರೆ.

Read this also;

ಏಕಾಏಕಿ ಸಾವಿಗೆ ಚಪ್ಪೆ ಅಥವಾ ಅಂಥ್ರಾಕ್ಸ್​ ಕಾರಣ..!

ಹೊಲದಲ್ಲಿ ಮೇಯಲು ಹೋಗಿದ್ದಾಗ ರಾಸುಗಳು ಸಾವನ್ನಪ್ಪಿದರೆ ಅದು ಚಪ್ಪೆ ರೋಗ ಅಥವಾ ಆಂಥ್ರಾಕ್ಸ್​ ಸೋಂಕು ಇರಬಹುದು ಎಂದು ಪಶು ವೈದ್ಯರು ಅಂದಾಜಿಸಿದ್ದಾರೆ. ಮೂಗಲ್ಲಿ ರಕ್ತ ಸೂರುವುದು, ಮುಂಗಾಲು ಊತ ಬಂದು ಸಾವನ್ನಪ್ಪುತ್ತವೆ. ಮೇಯುವಾಗ ಮಣ್ಣಿನಲ್ಲಿ ಇರುವ ಬ್ಯಾಕ್ಟೀರಿಯಾಗಳು ಪ್ರಾಣಿಗಳ ದೇಹ ಸೇರಿ ನಾಲ್ಕೈದು ದಿನಗಳಲ್ಲಿ ರೋಗ ಬಾಧೆ ಹೆಚ್ಚಾಗುತ್ತದೆ. ಯಾವುದೇ ರೋಗ ಲಕ್ಷಣ ಕಾಣಿಸದೆ ಏಕಾಏಕಿ ಸಾವನ್ನಪ್ಪುತ್ತವೆ ಎನ್ನುತ್ತಾರೆ ಪಶು ವೈದ್ಯರು. ಆದರೆ ಸರ್ಕಾರ ಎಚ್ಚೆತ್ತುಕೊಂಡರೆ ರೈತ ಸಮುದಾಯವನ್ನು ಈ ಸಂಕಷ್ಟದಿಂದ ಪಾರು ಮಾಡಬಹುದು ಎನ್ನುವುದು ವೈದ್ಯರ ಸಲಹೆ.

ಪಶು ವೈದ್ಯರ ಕೊರತೆ, ಲಸಿಕೆ ಬಂದೇ ಇಲ್ಲ..!

ರಾಜ್ಯದಲ್ಲಿ ಸಾಕಷ್ಟು ಪ್ರಮಾಣದ ಪಶು ವೈದ್ಯರು ಇಲ್ಲ. ಜೊತೆಗೆ ಸರ್ಕಾರ ಪಶು ಆಸ್ಪತ್ರೆಗಳಿಗೆ ಪೂರೈಸಬೇಕಿದ್ದ ಲಸಿಕೆಯೂ ಬಂದಿಲ್ಲ. ರಾಷ್ಟ್ರೀಯ ಜಾನುವಾರು ರೋಗ ನಿರ್ಮೂಲಕ ಕಾರ್ಯಕ್ರಮದ ಮೂಲಕ ವರ್ಷಕ್ಕೆ ಎರಡು ಬಾರಿ ಲಸಿಕೆ ನೀಡಬೇಕು ಎನ್ನುವ ನಿಯಮ ಇದೆ. ಆದರೆ ಕಳೆದ ಮಾರ್ಚ್​ನಲ್ಲಿ ನೀಡಬೇಕಿದ್ದ ಲಸಿಕೆಯನ್ನು ಸರ್ಕಾರ ಇನ್ನೂ ಪೂರೈಸಿಲ್ಲ. ಲಸಿಕೆಯೇ ಆರಂಭ ಆಗಿಲ್ಲದ ಕಾರಣಕ್ಕೂ ರೋಗ ಬಾಧೆ ಹೆಚ್ಚಾಗಿರಬಹುದು ಎನ್ನುವುದು ಪಶು ವೈದ್ಯರ ಮಾಹಿತಿ. ಇನ್ನೂ 2009ರಲ್ಲಿ ಕೊರೊನಾ ರೀತಿಯಲ್ಲೇ ಚಿಕಿತ್ಸೆ ಇಲ್ಲದ ಕಾಯಿಲೆ ಒಂದು ಬಂದಿತ್ತು. ಕಾಲಲ್ಲಿ ಉಣ್ಣು, ಗೊರಸು, ಬಾಯಿಯಲ್ಲೂ ಉಣ್ಣು ಆಗಿ ಐದಾರು ನರಳಾಡಿ ಸಾವನ್ನಪ್ಪುತ್ತಿದ್ದವು. 2012ರಲ್ಲಿ ಲಸಿಕೆ ಬಂದಿತ್ತು. ಆ ಲಸಿಕೆ ಕೂಡ ಈ ವರ್ಷ ಪಶುಗಳಿಗೆ ಸಿಕ್ಕಿಲ್ಲ ಎನ್ನುವ ವಿಚಾರವನ್ನೂ ತಿಳಿಸಿದ್ದಾರೆ.

ಪಶುಸಂಗೋಪನಾ ಸಚಿವರೇ ಜಾಗೃತರಾಗಿ..!

ಕರ್ನಾಟಕ ರಾಜ್ಯ ವಿಧಾನಸಭಾ ಅಧಿವೇಶ ಶುರುವಾಗಿದೆ. ಕೊರೊನಾ, ಬೆಲೆ ಏರಿಕೆ, ದೆವಸ್ಥಾನ ತೆರವು ವಿಚಾರಗಳ ಬಗ್ಗೆ ಚರ್ಚೆ ಮಾಡಿ ಕೆಲವೊಂದಿಷ್ಟು ವಿಧೇಯಕಗಳನ್ನು ಪಾಸು ಮಾಡಿಕೊಳ್ಳುವ ಜೊತೆಗೆ ಪಶುಗಳಿಗೆ ಸರ್ಕಾರ ನೀಡಬೇಕಿದ್ದ ಲಸಿಕೆ ನೀಡಲಾಗಿದೆಯಾ..? ಪಶು ವೈದ್ಯರು ಇದ್ದಾರಾ..? ನೇಮಕಾತಿ ಯಾವಾಗ ಎನ್ನುವ ಬಗ್ಗೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿದೆ. ಗೋಹತ್ಯೆ ನಿಷೇಧ ಮಾಡಿ ಚಿಕಿತ್ಸೆ ನೀಡದೆ ರಾಸುಗಳ ಸಾವಿಗೆ ಕಾರಣವಾದರೆ ಗೋಹತ್ಯೆ ಪಾಪವೇ ಬರುತ್ತದೆ ಎನ್ನುವುದನ್ನು ಸರ್ಕಾರಕ್ಕೆ ವಿರೋಧ ಪಕ್ಷಗಳು ಮನವರಿಕೆ ಮಾಡಿಕೊಡಬೇಕಿದೆ. ರಾಜ್ಯ ಪಶು ಸಂಗೋಪನಾ ಸಚಿವರು ಗೋರಕ್ಷಣೆ ಎಂದು ಓಡಾಡುವುದನ್ನು ಬಿಟ್ಟು ರಾಸುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ.

Related Posts

Don't Miss it !