ಡ್ರಗ್ಸ್​ ಕೇಸ್​ನಲ್ಲಿ ಅನುಶ್ರೀ ರಕ್ಷಣೆ ಮಾಡಲಾಗ್ತಿದ್ಯಾ..? ಒತ್ತಡ ಹೇರಿದ ಮಾಜಿ ಸಿಎಂ ಆಡಿಯೋ ಯಾರದ್ದು..?

ಮಂಗಳೂರು ಡ್ರಗ್ಸ್​ ಪ್ರಕರಣದಲ್ಲಿ ಜಾರ್ಜ್​​ಶೀಟ್ ಸಲ್ಲಿಕೆ ಮಾಡಲಾಗಿದೆ. ಆದರೆ ಚಾರ್ಜ್​ಶೀಟ್​​​ನಲ್ಲಿ ಆ್ಯಂಕರ್​ ಅನುಶ್ರೀ ಹೆಸರಿಲ್ಲ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಇದೀಗ ಮಂಗಳೂರು ಪೊಲೀಸ್ ಕಮೀಷನರ್ ಮಾತನಾಡಿ ಸ್ಪಷ್ಟನೆ ನೀಡಿದ್ದು, ಅನುಶ್ರೀ ಆರೋಪಿ ಎಂದು ಉಲ್ಲೇಖ ಆಗಿಲ್ಲ. ಕಿಶೋರ್ ಹೇಳಿಕೆಯಲ್ಲಿ ಮಾತ್ರವೇ ಅನುಶ್ರೀ ಹೆಸರಿದೆ. ಮತ್ತೆ ಕಿಶೋರ್ ಅಮನ್ ವಿಚಾರಣೆ ನಡೆಸಲ್ಲ ಎಂದಿದ್ದಾರೆ. ಇನ್ನೂ ಅನುಶ್ರೀ ಮೇಲಿನ ಆರೋಪಕ್ಕೆ ಪೂರಕ ಸಾಕ್ಷ್ಯಗಳಿಲ್ಲ. 6 ಜನ ಆರೋಪಿಗಳ ಬಗ್ಗೆ ಅಂತಿಮ ವರದಿಯನ್ನು ಕೋರ್ಟ್​ಗೆ ಸಲ್ಲಿಸಿದ್ದೇವೆ. ಐದು ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಈಗ ಚಾರ್ಜ್​ಶೀಟ್​ ಸಲ್ಲಿಕೆಯಾಗಿದ್ದಲ್ಲ. ಒಂಭತ್ತು ತಿಂಗಳ‌ ಹಿಂದೆಯೇ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ. ಈಗ ಯಾಕೆ ಈ ವಿಚಾರ ಸುದ್ದಿಯಾಗುತ್ತಿದೆ ಎನ್ನುವುದು ಗೊತ್ತಿಲ್ಲ ಎಂದು ಮಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ.

ಪೊಲೀಸರ ಬಳಿಕ ನಾನು ಅನುಶ್ರೀ ಹೆಸರನ್ನೇ ಹೇಳಿಲ್ಲ..!
ಆ್ಯಂಕರ್​ ಅನುಶ್ರೀಗೂ ಡ್ರಗ್ಸ್ ಕೇಸ್‌ಗೂ ಸಂಬಂಧ ಇಲ್ಲ, ನಾನು ಅನುಶ್ರೀ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ ಎಂದು ಡ್ರಗ್ಸ್​ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆ ನೀಡಿದ್ದಾನೆ. ನಾವು ಯಾವುದೇ ಡ್ರಗ್ಸ್ ಪಾರ್ಟಿ ಮಾಡಿಲ್ಲ, ಅನುಶ್ರೀ ಜೊತೆ ಡ್ರಿಂಕ್ಸ್ ಹಾಗೂ ಡ್ರಗ್ಸ್ ಪಾರ್ಟಿ ಮಾಡಿಲ್ಲ. ನಾನು ಅನುಶ್ರೀಗೆ ಕೊರಿಯೋಗ್ರಾಫ್ ಮಾಡುತ್ತಿದ್ದೆ ಅಷ್ಟೆ. ಆ ಬಳಿಕ ಅನುಶ್ರೀ ಅವರ ಜೊತೆ ಸಂಪರ್ಕವೇ ಇಲ್ಲ. ನಾನು ಎರಡು ಬಾರಿ ಡ್ರಗ್ಸ್ ತೆಗೆದುಕೊಂಡಿದ್ದೇನೆ. ಈಗ ಪ್ರತಿ ತಿಂಗಳು ಕೋರ್ಟ್‌ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದಿದ್ದಾನೆ ಕಿಶೋರ್​ ಶೆಟ್ಟಿ.

Read this also;

ಅನುಶ್ರೀ ಬಚಾವ್​ ಹಿಂದೆ ಮಾಜಿ ಸಿಎಂ ಕೈವಾಡ..!


ಡ್ರಗ್ಸ್ ಕೇಸ್‌ನಲ್ಲಿ ಅನುಶ್ರೀ ಹೆಸರು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿರು ಪ್ರಶಾಂತ್ ಸಂಬರಗಿ, ಇದರ ಹಿಂದೆ ಮಾಜಿ ಸಿಎಂ ಒಬ್ಬರ ಕೈವಾಡ ಇದೆ ಎಂದು ಆರೋಪ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ದೂರವಾಣಿಯಲ್ಲಿ ಮಾತನಾಡಿರುವ ರೆಕಾರ್ಡ್ ನನ್ನ ಬಳಿ ಇದೆ. ಶೀಘ್ರವೇ ಅದನ್ನು ರಿಲೀಸ್ ಮಾಡುತ್ತೇನೆ ಎಂದಿದ್ದಾರೆ ಪ್ರಶಾಂತ್​ ಸಂಬರಗಿ. ಡ್ರಗ್ಸ್ ಕೇಸ್‌ನಲ್ಲಿ ಆ್ಯಂಕರ್​ ಅನುಶ್ರೀ ಹೆಸರನ್ನು ಸೇರಿಸಬೇಕು. ಅನುಶ್ರೀ ಡ್ರಗ್ ಸಪ್ಲೈಯರ್ ಆಗಿ ಕೆಲಸ ಮಾಡಿದ್ದಾರೆ ಎಂದು ಸಂಬರಗಿ ಆರೋಪ ಮಾಡಿದ್ದಾರೆ. ಪ್ರಕರಣದ ತನಿಖಾಧಿಕಾರಿ ಆಗಿದ್ದ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ನಾಯಕ್‌ ಎತ್ತಂಗಡಿ ಮಾಡಿದ್ದು ಯಾಕೆ..? ಡಿಸಿಪಿ ಗಾಂವ್ಕರ್ ಯಾಕೆ ಸರಿಯಾಗಿ ತನಿಖೆ ಮಾಡಲಿಲ್ಲ. ಇದರ ಹಿಂದೆ ಯಾರ ಒತ್ತಡ ಇದೆ ಎಂದು ಪ್ರಶ್ನಿಸಿದ್ದಾರೆ.

Read this also;

ಅನುಶ್ರೀಗೆ ತಪಾಸಣೆ ಮಾಡಿಸಿಲ್ಲ ಯಾಕೆ..?


ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಕರ್ನಾಟಕ ರಾಜ್ಯದ ಇತಿಹಾಸದ ದೊಡ್ಡ ದಂಧೆ ಇದು. ಈ ಹಿಂದೆ ಕೇಸಿನಲ್ಲಿ ತಾನಿಲ್ಲ ಎಂದು ನಿರಾಕರಿಸಿದವರ ಹೆಸರು ಇದೀಗ ಕೇಳಿಬರ್ತಿದೆ. ನಾನು ಡ್ರಗ್ ಜಾಲದ ಬಗ್ಗೆ ಧ್ವನಿ ಎತ್ತಿದಾಗ ಕೆಲವರು ನನ್ನ ಬೆನ್ನು ತಟ್ಟಿದ್ದಾರೆ. ಡ್ರಗ್ ವಿಚಾರ ಹೊರಬರ್ತಿದ್ದಂತೆ ಸಮಾಜಕ್ಕೆ ದೊಡ್ಡ ಮಟ್ಟದ ಮೆಸೇಜ್ ಹೋಗಿದೆ. ಡ್ರಗ್ ವಿರುದ್ಧ ಹೋರಾಟ ಇದು ಒನ್ ಡೇ ಮ್ಯಾಚಲ್ಲ, ದಿನನಿತ್ಯವೂ ಡ್ರಗ್ ವಿರುದ್ಧ ಹೋರಾಟ ಮಾಡ್ಬೇಕು. ಈ ಹಿಂದೆ ಪೊಲೀಸರು ಸ್ಟೇಟ್ಮೆಂಟ್​ಗೆ ಕೆಲವರನ್ನ ಕರೆಸಿದ್ದರು. ಆದರೆ ಮತ್ತೆ ಈಗಲೂ ಸಹ ಪಾರ್ಟಿ ನಡೀತಿದೆ. ಡ್ರಗ್ಸ್​ ಡಿಮಾಂಡ್ ಹಾಗೂ ಪಾರ್ಟಿ ಕೂಡ ಜಾಸ್ತಿಯಾಗಿದೆ. ಪೊಲೀಸರು ಹೇರ್ ಫಾಲಿಕಲ್ ಟೆಸ್ಟ್ ಕೆಲವರಿಗೆ ಮಾತ್ರ ಮಾಡಿಸಿದ್ದಾರೆ ಇನ್ನೂ ಕೆಲವರಿಗೆ ಹೇರ್ ಫಾಲಿಕಲ್ ಟೆಸ್ಟ್ ಮಾಡಿಸಿಲ್ಲ ಎಂದು ಆರೋಪಿಸಿದ್ದಾರೆ. ಈ ಕಾರಣದಿಂದ ಕೆಲ ರಾಜಕಾರಣಿಗಳು ಹಾಗೂ ಉದ್ಯಮಿಗಳ ಮಕ್ಕಳು ಈಗಲೂ ಪಾರ್ಟಿ ಮಾಡ್ತಿದ್ದಾರೆ. ಅನುಶ್ರೀಯವರ ಹೇರ್ ಫಾಲಿಕಲ್ ಟೆಸ್ಟ್ ಯಾಕೆ ಮಾಡಿಸಿಲ್ಲ. ಆರೋಪಿ ಕಿಶೋರ್ ನೀಡಿದ ಮಾಹಿತಿ ಮೇರೆಗೆ ಆಕೆಗೆ ಹೇರ್ ಫಾಲಿಕಲ್ ಟೆಸ್ಟ್ ಮಾಡಿಸಬಹುದಿತ್ತಲ್ಲವೇ..? ಎಂದು ಇಂದ್ರಜಿತ್​ ಲಂಕೇಶ್​ ಪ್ರಶ್ನಿಸಿದ್ದಾರೆ.

ಸಿಸಿಬಿ ಪೊಲೀಸರೇ ಕಾನೂನು ಕಣ್ಣಿಗೆ ಮಣ್ಣು ಹಾಕಿದ್ರಾ..?

ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾದ ಕೆಲವರು ಈಗಲೂ ಪಾರ್ಟಿ ಮಾಡುತ್ತಿದ್ದಾರೆ. ಸಿಸಿಬಿ ಅಧಿಕಾರಿಗಳ ಎದುರು ಮತ್ತೆ ನಾನು ಮಾಹಿತಿ ನೀಡಬಲ್ಲೆ ಎಂದು ಇಂದ್ರಜಿತ್​ ಲಂಕೇಶ್​ ಹೇಳಿದ್ದಾರೆ. ಡ್ರಗ್ ಸೇವನೆ ಮಾಡಿದ್ದೇವೆ ಎಂದು ಓರ್ವ ಆರೋಪಿ ಹೇಳಿದ ಮೇಲೆ ಪೊಲೀಸರು ಎಲ್ಲರಿಗೂ ಪರೀಕ್ಷೆ ಮಾಡಿಸಬೇಕಿತ್ತು ಎನ್ನುವುದು ಸತ್ಯ. ಯಾಕೆ ಟೆಸ್ಟ್​ ಮಾಡಿಸಲಿಲ್ಲ ಎನ್ನುವುದನ್ನು ಕೋರ್ಟ್​ ವಿಚಾರಣೆ ವೇಳೆ ಎದುರಾಳಿ ವಕೀಲರು ತಕರಾರು ಹಾಕುವುದು ಸತ್ಯ. ಆಗ ಪೊಲೀಸರು ಯಾವ ಉತ್ತರ ನೀಡುತ್ತಾರೆ ಎನ್ನುವುದರ ಮೇಲೆ ಪೊಲೀಸರು ತಾರತಮ್ಯ ಮಾಡಿದ್ದಾರಾ..? ಯಾರನ್ನೋ ಪ್ರಕರಣದಿಂದ ಕೈಬಿಡುವ ಉದ್ದೇಶದಿಂದ ಟೆಸ್ಟ್​ ಮಾಡಿಸದೆ ಜಾಣನಡೆ ಇಟ್ಟಿದ್ದಾರಾ ಎನ್ನುವುದನ್ನು ಕೋರ್ಟ್​ ಪರಿಶೀಲಿಸಬೇಕಿದೆ . ಅಲ್ಲೀವರೆಗೂ ಮಾಧ್ಯಮಗಳಲ್ಲಿ ಏನೇ ಆರೋಪ ಮಾಡಿದರೂ ಅಪ್ರಯೋಜನ. ಮಾಜಿ ಸಿಎಂ ಒಬ್ಬರ ಆಡಿಯೋ ಇದೆ ಎಂದು ಹೇಳುತ್ತಾ ಬ್ಲ್ಯಾಕ್​ ಮೇಲ್​ ಮಾಡುವ ಬದಲು ಆಡಿಯೋ ರಿಲೀಸ್​ ಮಾಡಬಹುದಲ್ಲವೇ ಎನ್ನುವ ಪ್ರಶ್ನೆಯೂ ಇದೆ.

Related Posts

Don't Miss it !