‘ಹಿಂದಿ ದಿವಸ್’ ಆಚರಣೆಗೆ ಕರ್ನಾಟಕದ ಪ್ರತಿಕ್ರಿಯೆ ಹೇಗಿತ್ತು..?

ಭಾರತ ಹಲವು ಸಂಸ್ಕೃತಿಗಳ ಹೂರಣ. ಹಲವು ಭಾಷೆಗಳನ್ನಾಡುವ ಸಣ್ಣ ಸಣ್ಣ ಒಕ್ಕೂಟಗಳ ಗುಂಪು ಸೇರಿ ಭಾರತ ಎಂಬ ರಾಷ್ಟ್ರವಾಗಿದೆ. ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಸೆಪ್ಟೆಂಬರ್​ 14, 1949 ರಲ್ಲಿ ಸರ್ಕಾರದ ಆಡಳಿತ ಭಾಷೆಯನ್ನಾಗಿ ಕೇಂದ್ರ ಸರ್ಕಾರ ಹಿಂದಿಯನ್ನು ಒಪ್ಪಿಕೊಂಡಿತ್ತು. 1953ರ ಸೆಪ್ಟೆಂಬರ್​ 14 ರಂದು ಹಿಂದಿ ದಿವಸ್​ ಆಚರಣೆ ಶುರು ಮಾಡಿತ್ತು. ಇತ್ತೀಚಿಗೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರ ಹಿಂದಿ ಭಾಷೆಯಲ್ಲೇ ಅಧಿಸೂಚನೆಗಳನ್ನು ಹೊರಡಿಸಬೇಕು ಎಂದು ಸೂಚನೆ ನೀಡಿತ್ತು. ಆ ಬಳಿಕ ಹಿಂದಿ ಪ್ರಬಾವ ಇತರೆ ರಾಜ್ಯಗಳಲ್ಲೂ ಒತ್ತಾಯ ಪೂರ್ವಕವಾಗಿ ಹೆಚ್ಚಾಯ್ತು. ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎನ್ನುವ ಭಾವನೆ ದಕ್ಷಿಣ ಭಾರತದ ಜನರಲ್ಲಿ ಸೃಷ್ಟಿಯಾಯ್ತು. ಇದೇ ಕಾರಣಕ್ಕೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಹಿಂದಿ ದಿವಸ್​ ವಿರೋಧ ಮಾಡುತ್ತಿವೆ.

ಪೊಲೀಸ್​ ನೋಟಿಸ್ ನಡುವೆಯೂ ಪ್ರತಿಭಟನೆ..!

ಸೆಪ್ಟೆಂಬರ್​ 14 ರಂದು ಹಿಂದಿ ದಿವಸ ಆಚರಣೆ ವಿರೋಧ ಮಾಡುವ ಬಗ್ಗೆ ಕರ್ನಾಟಕ ರಕ್ಷಣ ವೇದಿಕೆ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದ ಸಂಸ್ಥೆಗಳ ಎದುರು ಪ್ರತಿಭಟನೆ ಮಾಡುವ ಕರೆ ನೀಡಿತ್ತು. ಆದರೆ ಹಿಂದಿ ದಿವಸ್ ವಿರೋಧಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡಬಾರದು ಎಂದು ಕನ್ನಡಪರ ಸಂಘಟನೆ ಹೋರಾಟಗಾರರಿಗೆ ಪೊಲೀಸರು ನೋಟಿಸ್ ನೀಡಿದ್ದರು. ವಂದೇ ಮಾತರಂ ಸೇವಾ ಸಂಸ್ಥೆ, ಸರ್ವ ಸಂಘಟನೆಗಳ ಒಕ್ಕೂಟ ಸೇರಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಿಗೆ ಪೊಲೀಸರು ನೋಟಿಸ್ ನೀಡಿದ್ದರು. ಕೇಂದ್ರ ಸರ್ಕಾರದ ಸಂಸ್ಥೆಗಳ ಬಳಿ ಪ್ರತಿಭಟಿಸಬಾರದು, ಸರ್ಕಾರಿ ಕಚೇರಿ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು. ಕಚೇರಿಯ ನಾಮಫಲಕಗಳಿಗೆ ಮಸಿ ಬಳಿಯಬಾರದು. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡಬಾರದು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದರು.

ರಾಜ್ಯ ಪೊಲೀಸರಿಂದ ನೋಟಿಸ್

Read this also;

ಹಿಂದಿ ಹೇರಿಕೆ ವಿರೋಧಿಸಿ ಮನವಿ

ಪೊಲೀಸರ ನೋಟಿಸ್​ ನಡುವೆಯೂ ಕರವೇ ಕಾರ್ಯಕರ್ತರು ರಾಜ್ಯದ ನಾನಾ ಕಡೆ ಪ್ರತಿಭಟನೆ ನಡೆಸಿದ್ರು. ಬಾಗಲಕೋಟೆಯ ನವನಗರದ ಎಸ್​ಬಿಐ ಬ್ಯಾಂಕ್ ಶಾಖೆಯ ಬಳಿ ಪ್ರತಿಭಟನೆ ನಡೆಸಿ ಕನ್ನಡದಲ್ಲೇ ವ್ಯವಹರಿಸುವಂತೆ ಮ್ಯಾನೇಜರ್​ಗೆ ಮನವಿ‌‌ ಕೊಡಲಾಯ್ತು. ರಾಯಚೂರಲ್ಲಿ ಕರ್ನಾಟಕ ರಕ್ಷಣ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದ್ರು. ಹಿಂದಿ ನಾಮ ಫಲಕಗಳಿಗೆ ಮಸಿ ಬಳಿದು, ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ರು. ಧಾರವಾಡದಲ್ಲಿ ಹಿಂದಿ ದಿವಸ‌ ಅಚರಣೆ ವಿರೋಧಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾವಚಿತ್ರಕ್ಕೆ ಕಪ್ಪು ಮಸಿ ಎರಚಿ ಕಿಡಿ ಕಾರಿದ್ರು. ಹಿಂದಿ‌ ಪ್ರಚಾರ ಸಭಾ ಎದುರಿನ ಬ್ಯಾನರ್‌ನ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದ್ರು.

ದಾವಣಗೆರೆಯಲ್ಲಿ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಕೇವಲ ಹಿಂದಿ ದಿವಸ್ ಆಚರಣೆ ಮಾಡುವ ಮೂಲಕ ಪ್ರದೇಶಿಕ ಭಾಷೆಗಳನ್ನ ಮೂಲೆ ಗುಂಪು ಮಾಡಲಾಗುತ್ತಿದೆ. ಒಂದು ವೇಳೆ ಭಾಷಾ ಪ್ರೇಮ ತೋರುವುದಿದ್ದರೆ ಕನ್ನಡ ಸೇರಿ ಎಲ್ಲಾ ಭಾಷೆಗಳ ದಿನಾಚರಣೆ ಮಾಡುವಂತೆ ಪ್ರತಿಭಟನಕಾರರ ಆಗ್ರಹ ಮಾಡಿದ್ರು. ವಿಜಯನಗರದಲ್ಲಿ ಪ್ರತಿಯೊಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಗಿ ಪ್ರತ್ಯೇಕ ಮನವಿ ಕೊಡುವ ಮೂಲಕ ಒಂದು ವಾರದೊಳಗೆ ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತೆ ಗಡುವು ನೀಡಲಾಯ್ತು. ಬೆಳಗಾವಿಯಲ್ಲೂ ಹಿಂದಿ ದಿನಾಚರಣೆ ತೀವ್ರ ವಿರೋಧ ವ್ಯಕ್ತವಾಯ್ತು. ಡಿಸಿ ಕಚೇರಿ ಬಳಿಯ ಎಸ್​ಬಿಐ ಶಾಕೆ ಎದುರು ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶ ಹೊರ ಹಾಕಲಾಯ್ತು.

ಕೇಂದ್ರದ ವಿರುದ್ಧ ಧಿಕ್ಕಾರ

Read this also;

ಗದಗದಲ್ಲಿ ಕೇಂದ್ರ ಸರ್ಕಾರದ ಹಿಂದಿ ದಿವಸ ಆಚರಣೆಗೆ ಕರವೇ ಕಾರ್ಯಕರ್ತರು ಕಿಡಿಕಾರಿದ್ರು. ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಯಾದಗಿರಿಯಲ್ಲಿ ಕೇಂದ್ರ ಸರಕಾರದ ಒತ್ತಾಯ ಪೂರ್ವಕ ಹಿಂದಿ ಹೇರಿಕೆ ಖಂಡಿಸಿ ಪ್ರತಿಭಟನೆ ಮಾಡಲಾಯ್ತು. ತಹಶಿಲ್ದಾರ ಕಚೇರಿ ಸಮೀಪದ SBI ಬ್ಯಾಂಕ್ eduru ಎದುರು ಪ್ರತಿಭಟಿಸಲಾಯ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲೂ ಹಿಂದಿ ದಿವಸ್ ಆಚರಣೆ ಖಂಡಿಸಿ ಕರವೇ ಪ್ರತಿಭಟನೆ ಮಾಡ್ತು. ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಇದೇ ರೀತಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಹಿಂದಿ ದಿವಸ್​ ಆಚರಣೆಗೆ ತೀವ್ರ ವಿರೋಧ ವ್ಯಕ್ತವಾಯ್ತು.

JDS ಭಾಷಾ ಪ್ರೇಮ

ಕಾಂಗ್ರೆಸ್​ ಸರ್ಕಾರವೇ ಹಿಂದಿ ದಿವಸ್​ ತಂದಿದ್ದು..!

ಭಾರತ ಒಕ್ಕೂಟ ಸರ್ಕಾರ ಸಂವಿಧಾನದ 343 ರಿಂದ 351ವರೆಗಿನ ಪರಿಚ್ಛೇದಗಳಿಗೆ ತಿದ್ದುಪಡಿ ತಂದು, ಹಿಂದಿ ಭಾಷೆಗೆ ನೀಡಲಾಗಿರುವ ವಿಶೇಷ ಅವಕಾಶಗಳನ್ನು ಕಿತ್ತುಹಾಕಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹ ಮಾಡಿದ್ರು. ಈ ಹಿಂದೆ ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್​ ಸರ್ಕಾರವೇ ಹಿಂದಿ ದಿವಸ್​ ಆಚರಣೆಗೆ ತಂದಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಹಿಂದಿ ಹೇರಿಕೆ ಆಗುತ್ತಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದಿ ಹೇರಿಕೆಯ ಪ್ರಮಾಣ ಹೆಚ್ಚಾಗಿದೆ. ಹಿಂದಿ ಹೇರಿಕೆ ಹಿಂದೆ ರಾಜಕೀಯ ಕಾರಣ ಬಿಟ್ಟರೆ ಬೇರೆ ಯಾವುದೇ ಅಜೆಂಡಾ ಕಾಂಗ್ರೆಸ್​ ಹಾಗೂ ಬಿಜೆಪಿಯಲ್ಲಿಲ್ಲ. ಎಲ್ಲಾ ಭಾಗದಲ್ಲೂ ಹಿಂದಿ ಮಾತನಾಡುವ ಜನರು ಸಿಕ್ಕರೆ ರಾಜಕಾರಣ ಮಾಡುವುದು ಸುಲಭ ಎನ್ನುವುದು ಹಾಗೂ ಬಹುತೇಕ ಭಾರತೀಯರು ಮಾತನಾಡುತ್ತಾರೆ ಎನ್ನುವುದು ಮತ್ತೊಂದು ಕಾರಣ. ಆದರೆ ಕಾಂಗ್ರೆಸ್​ ಬಿಜೆಪಿ ನಡುವೆ ಮೌನದ ನಡುವೆ ಜೆಡಿಎಸ್​ ಮಾತ್ರ ನನಗೆ ಪಕ್ಷಕ್ಕಿಂತಲೂ ಕನ್ನಡ ಭಾಷೆಯೇ ಮುಖ್ಯ ಎನ್ನುವುದನ್ನು ಕನ್ನಡ ಬಾವುಟವನ್ನು ಮೇಲ್ಭಾಗದಲ್ಲಿ ಹಾರಿಸುವ ಮೂಲಕ ಹಿಂದಿ ದಿವಸವನ್ನು ವಿರೋಧಿಸಿತು.

Related Posts

Don't Miss it !