ರೈತರ ಒಗ್ಗಟ್ಟಿನ ಹೋರಾಟಕ್ಕೆ ಮಂಡಿಯೂರಿದ ಮೋದಿ ಸರ್ಕಾರ..! ಕಾರಣ ಇಲ್ಲಿದೆ..

ಕೇಂದ್ರ ಸರ್ಕಾರ ಜಾರಿ‌ ಮಾಡಲು ಮುಂದಾಗಿದ್ದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದೆ. ದೆಹಲಿ ಗಡಿಯಲ್ಲಿ 11 ತಿಂಗಳ ನಿರಂತರ ಹೋರಾಟ ಮಾಡಿದ್ದ ರೈತ ಸಮುದಾಯದ ಒಗ್ಗಟ್ಟಿನ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ. ಆದರೆ ಮಳೆ, ಚಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ರೈತ ವಿರೋಧಿ ಮಸೂದೆಗಳ ವಿರುದ್ಧ ಹೋರಾಟ‌ ನಡೆಸುತ್ತಿದ್ದ ಸುಮಾರು 700 ಮಂದಿ ರೈತರ ಪ್ರಾಣಾರ್ಪಣೆ ಮಾಡಿದ್ದಾರೆ ಎನ್ನುವುದು ದುಃಖಕರ ಸಂಗತಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ತಪ್ಪನ್ನು ಮೊದಲೇ ತಿಳಿದುಕೊಂಡಿದ್ದರೆ ವಯೋವೃದ್ಧ ಅನ್ನದಾತರ ಪ್ರಾಣ ಉಳಿಸಬಹುದಾಗಿತ್ತು. ಸ್ವಾತಂತ್ರ್ಯ ಭಾರತದಲ್ಲಿ 11 ತಿಂಗಳ ಹೋರಾಟ, 700 ರೈತರ ಬಲಿದಾನ ಇತಿಹಾಸವಾಗಿ‌ ಉಳಿಯುವಂತೆ ಮಾಡಿದೆ.

ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ರೈತರು..!

ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರವನ್ನು ಭಾರತೀಯ ಕಿಸಾನ್ ಮೋರ್ಚಾ ಸ್ವಾಗತ ಮಾಡಿದೆ. ಹೋರಾಟದಲ್ಲಿ ಮುಂಚೂಣಿ ನಾಯಕನಾಗಿ ಗುರುತಿಸಿಕೊಂಡಿದ್ದ ಟಿಕಾಯತ್, ಟ್ವೀಟ್ ಮಾಡಿದ್ದು ಕೇಂದ್ರದ ನಿರ್ಧಾರ ಸ್ವಾಗತ. ಆದರೆ ಲೋಕಸಭೆಯಲ್ಲಿ ವಾಪಸ್ ಆಗುವ ತನಕ ಹೋರಾಟ ಇರುತ್ತೆ ಎಂದಿದ್ದಾರೆ. ರೈತ ಹೋರಾಟಗಾರ ಕೋಡಿಹಳ್ಳಿ ಚಂದಕೆನಡಾ್ ಮಾತನಾಡಿ, ಇದು ರೈತರ ಗೆಲುವು, ರೈತರನ್ನು ಎದುರು ಹಾಕಿಕೊಂಡರೆ ಉಳಿಗಾಲವಿಲ್ಲ ಎನ್ನುವುದರ ಅರಿವು. ತಡವಾಗಿಯಾದರೂ ಈ ನಿರ್ಧಾರಕ್ಕೆ ಬಂದ ಪ್ರಧಾನಿ ಮೋದಿಗೆ ಧನ್ಯವಾದಗಳು. ರೈತರ ಈ ಹೋರಾಟ ದೇಶದ ಇತಿಹಾಸದಲ್ಲಿ ಮಾತ್ರವಲ್ಲ ಜಗತ್ತಿನ ಇತಿಹಾಸದಲ್ಲಿ ಉಳಿಯಲಿದೆ. ನಮ್ಮ ಹೋರಾಟ ಕೆನಡಾ ಪಾರ್ಲಿಮೆಂಟ್, ಬ್ರಿಟನ್ ಪಾರ್ಲಿಮೆಂಟ್‌ನಲ್ಲೂ ಪ್ರಸ್ತಾಪವಾಗಿತ್ತು. ಇಡೀ ಜಗತ್ತು ನಮ್ಮ ಹೋರಾಟದ ಬಗ್ಗೆ ಮಾತನಾಡಿತ್ತು. ಎಲ್ಲಾ ರಾಜಕೀಯ ಪಕ್ಷಗಳು ರೈತ ಶಕ್ತಿಯನ್ನು ಎದುರು ಹಾಕಿಕೊಂಡು ಸರ್ಕಾರ ನಡೆಸಲು ಆಗುವುದಿಲ್ಲ ಎನ್ನುವುದನ್ನು ಅರಿಯಬೇಕು ಎಂದಿದ್ದಾರೆ. ರೈತರಿಗೂ ದೇಶದ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿದೆ ಎಂಬುವುದಕ್ಕೆ ಇದು ಸೂಕ್ತ ನಿರ್ದಶನ ಎಂದಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇದು ದೇಶದ ರೈತರಿಗೆ ಸಿಕ್ಕ ಜಯ ಎಂದಿದ್ದಾರೆ. ಇನ್ನೂ ಇದುವರೆಗೆ 670ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆ ಹುತಾತ್ಮ ರೈತರಿಗೆ ಈ ಜಯ ಅರ್ಪಣೆ ಎಂದಿದ್ದಾರೆ.

Read this:

ಕೇಂದ್ರದ ನಿರ್ಧಾರ ಸ್ವಾಗತ ಮಾಡಿದ ರಾಜಕಾರಣಿಗಳು..!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈತ ಹೋರಾಟಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ. ಇದೇ ವೇಳೆ ಈ ಹಿಂದೆ ಹೋರಾಟಕ್ಕೆ ಜಯ ಸಿಗುತ್ತೆ, ಕೇಂದ್ರೆ ಸರ್ಕಾರ ರೈತ ವಿರೋಧಿ ಕಾನೂನು ವಾಪಸ್ ಪಡೆಯುತ್ತೆ ಎಂದು ತಾವು ಹೇಳಿದ್ದ ಹೇಳಿಕೆಯನ್ನು ರೀ ಟ್ವೀಟ್ ಮಾಡುವ ಮೂಲಕ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಬಿಎಸ್‌ಪಿ ನಾಯಕಿ ಮಾಯಾವತಿ, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ಪಕ್ಷದ ರಾಜಕಾರಣಿಗಳು ಸ್ವಾಗತ ಮಾಡಿದ್ದಾರೆ. ಕೇಂದ್ರ ಸರ್ಕಾರ ರೈತ ಹೋರಾಟಕ್ಕೆ ಮಣಿದಿದೆ. ಆದರೆ ಇದೇ ಹೋರಾಟದಲ್ಲಿ ಸುಮಾರು 700 ಜನ ರೈತರ ಸಾವಿಗೆ ಕೇಂದ್ರ ಸರ್ಕಾರದ ಹಠಮಾರಿ ಧೋರಣೆ ಕಾರಣವಾಗಿದೆ. ಸಾವನ್ನಪ್ಪಿದ ರೈತರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎನ್ನುವುದು ಎಲ್ಲಾ ಪಕ್ಷಗಳ ಒಕ್ಕೋರಲ ಒತ್ತಾಯವಾಗಿದೆ.

Also Read:

ಕೃಷಿ ಕಾಯ್ದೆ ವಾಪಸ್ ಪಡೆದಿದ್ದು ಯಾಕೆ..? ಕಾರಣ ಏನಿದೆ..?

ಕೃಷಿ ಕಾಯ್ದೆ ಜಾರಿ ಬಗ್ಗೆ ರೈತರ ಜೊತೆಗೆ ಹಲವು ಸುತ್ತಿನ ಸಂಧಾನ ಸಭೆ ನಡೆಸಿದರೂ ರೈತರಿಗೆ ಸರ್ಕಾರದ ಮೇಲೆ ನಂಬಿಕೆ ಬರಲಿಲ್ಲ. ತಮ್ಮ ಹೋರಾಟದಿಂದ ಹಿಂದೆ ಸರಿಯಲಿಲ್ಲ. ಕೇಂದ್ರ ಸರ್ಕಾರ ಎಷ್ಟೇ ಕಠಿಣ ನಿಲುವು ಒಡ್ಡಿದರೂ ಅನ್ನದಾತರು ಮಾತ್ರ ಎಲ್ಲವನ್ನೂ ಸಹಿಸಿಕೊಂಡರು. ಇಷ್ಟೆಲ್ಲಾ ಆದ ಬಳಿಕ ಕೇಂದ್ರ ಸರ್ಕಾರ ರೈತರ ವಿರುದ್ಧ ನಿಲುವು ಕೈ ಬಿಟ್ಟಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಮುಂಬರುವ ಲೋಕಸಭಾ ಚುನಾವಣೆ ಗೆಲ್ಲುವುದು. ಮುಂದಿನ ವರ್ಷ ಸಪ್ತ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ಗೆಲುವು ಸಾಧಿಸಿದರೆ ಲೋಕಸಭಾ ಚುನಾವಣೆಗೆ ಅಡಿಪಾಯ ಆಗುತ್ತದೆ. ಒಂದು ವೇಳೆ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನಪ್ಪಿದರೆ ಮುಂದಿನ ಲೋಕಸಭಾ ಚುನಾವಣೆ ಮೇಲೆ ಹಿಡಿತ ತಪ್ಪಲಿದೆ ಎನ್ನುವ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಮಣಿದಿದೆ ಎನ್ನಲಾಗ್ತಿದೆ. ಇನ್ನು ಪಂಜಾಬ್‌ನಲ್ಲಿ ಕಾಂಗ್ರೆಸ್‌ನಿಂದ ಸಿಡಿದು ಹೊಸ ಪಕ್ಷ ಸ್ಥಾಪಿಸಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್, ರೈತರ ಸಮಸ್ಯೆ ಬಗೆಹರಿಸಿದರೆ ಮಾತ್ರ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಷರತ್ತು ವಿಧಿಸಿದ್ದರು. ಈ ಕಾರಣವೂ ನಿರ್ಧಾರದ ಹಿಂದಿದೆ. ಇನ್ನು ಇತ್ತೀಚಿಗೆ ಮುಕ್ತಾಯವಾದ ಉಪಚುನಾವಣೆಯಲ್ಲಿ ಬಿಜೆಪಿಗಿಂತಲೂ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆಲುವು ಸಾಧಿಸಿದ್ದು, ಬಿಜೆಪಿ ಸರ್ಕಾರದ ನಿರ್ಧಾರದ ಹಿಂದಿನ ಗುಟ್ಟು ಎನ್ನಲಾಗ್ತಿದೆ. ಆದರೆ ಬಿಜೆಪಿ‌ ನಾಯಕರು ಮಾತ್ರ ಸತ್ಯ ಒಪ್ಪಿಕೊಳ್ಳೋದಕ್ಕೆ ಸಿದ್ಧರಿಲ್ಲ. ಮೋದಿ ಏನೋ ಸಾಧಿಸಿದ್ದಾರೆ ಎನ್ನುವಂತೆ ಅಭಿನಂದನೆ ಸಲ್ಲಿಸ್ತಿದ್ದಾರೆ.

Related Posts

Don't Miss it !