ಹೊಸ ಸಂಪ್ರದಾಯ ಹುಟ್ಟು ಹಾಕಿದ ನೂತನ ಕೇಂದ್ರ ಸಚಿವ ಖೂಬಾ..!

ಬಿಹಾರ, ಉತ್ತರ ಪ್ರದೇಶ ನೆನಪು ಮಾಡಿದ ಕರ್ನಾಟಕ..!

ಬೀಹಾರ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಮದುವೆ ಕಾರ್ಯಕ್ರಮ ಸೇರಿದಂತೆ ಸಂಭ್ರಮದ ಕಾರ್ಯಕ್ರಮಗಳಲ್ಲಿ ಬಂದೂಕಿನಿಂದ ಗುಂಡು ಹಾರಿಸುವುದು ಸಾಮಾನ್ಯ. ಸಂಪ್ರದಾಯದ ಹೆಸರಿನಲ್ಲಿ ಬಂದೂಕು ಹಿಡಿದು ತಮ್ಮ ಪರಾಕ್ರಮ ಪ್ರದರ್ಶನ ಮಾಡುತ್ತಾರೆ. ಅಲ್ಲಿನ ಪೊಲೀಸ್​ ವ್ಯವಸ್ಥೆ ಇದಕ್ಕೆ ಒಗ್ಗಿಕೊಂಡಂತೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಈ ರಾಜ್ಯಗಳಲ್ಲಿ ಕ್ರಿಮಿನಲ್​ ಅಪರಾಧಗಳು ಹೆಚ್ಚಾಗಿದ್ದು, ಕಂಡ ಕಂಡಲ್ಲಿ ಗುಂಡು ಹಾರಿಸಿ ಹತ್ಯೆ ಮಾಡುವುದೂ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದೇ ಸಂಸ್ಕೃತಿ ಕರ್ನಾಟಕಕ್ಕೂ ಕಾಲಿಟ್ಟಿದೆ. ನೂತನವಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಭಗವಂತ ಖೂಬ ಅವರ ಜನಾರ್ಶೀವಾದ ಕಾರ್ಯಕ್ರಮದಲ್ಲಿ ಬಂದೂಕಿನಿಂದ ಗುಂಡು ಹಾರಿಸಿ ಸ್ವಾಗತ ಕೋರಿದ್ದಾರೆ.

ಪೊಲೀಸರಿಂದ FIR, ನಾಲ್ವರ ಬಂಧನ..!

ಕೇಂದ್ರ ಸಚಿವರ ಕಾರ್ಯಕ್ರಮಕದಲ್ಲಿ ಪೊಲೀಸ್​ ಪಡೆಯೇ ಇತ್ತು. ಆದರೂ ಪೊಲೀಸರ ಎದುರೇ ಕಾನೂನು ಬಾಹಿರ ಕೃತ್ಯ ನಡೆದರೂ ತಡೆಯುವ ಕೆಲಸ ಮಾಡಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಯಾದಗಿರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವೇದಮೂರ್ತಿ ಸೂಚನೆ ಮೇರೆಗೆ ಎಫ್​ಐಆರ್​ ದಾಖಲು ಮಾಡಲಾಗಿದೆ. ಗ್ರಾಮೀಣ ಪಿಎಸ್​ಐ ಸುರೇಶ್​ ಕುಮಾರ್​ ಆರೋಪಿಗಳಾದ ಮೋನಪ್ಪ, ಶರಣಪ್ಪ, ನಿಂಗಪ್ಪ ಹಾಗೂ ದೇವೇಂದ್ರಪ್ಪ ಎಂಬುರನ್ನು ವಶಕ್ಕೆ ಪಡೆಯಲಾಗಿದೆ. ಯರಗೋಳ ಗ್ರಾಮಾಂತರ ಪೊಲೀಸರು ಬಂಧಿಸಿದ ಬಳಿಕ ನಾಲ್ವರು ಕಾರ್ಯಕರ್ತರು ಕಂಗಾಲಾಗಿದ್ದಾರೆ. ಬಾಬೂರಾವ್​ ಚಿಂಚನಸೂರ್​ ಸೂಚನೆ ಮೇರೆಗೆ ಈ ಕೆಲಸ ಮಾಡಿದ್ದೇವೆ ಎಂದು ಪೊಲೀಸರ ಎದುರು ಅವಲತ್ತುಕೊಂಡಿದ್ದಾರೆ.

ಬಂದೂಕುಧಾರಿಗಳು

ಮೊದಲು ಪಟಾಕಿ ಎಂದವರಿಂದ ಕೊನೆಗೆ ಸಮರ್ಥನೆ..!

ಬಂದೂಕಿನಿಂದ ಗುಂಡು ಹಾರಿಸಿದ ಬಗ್ಗೆ ಮಾತನಾಡಿದ ಬಾಬೂರಾವ್​ ಚಿಂಚನಸೂರು, ಅದು ಗುಂಡು ಅಲ್ಲ ಪಟಾಕಿ ಎಂದಿದ್ದರು. ಆ ಬಳಿಕ ನಮ್ಮ ಕೋಳಿ ಸಮಾಜದಲ್ಲಿ ಸಂಭ್ರಮಾಚರಣೆ ವೇಳೆ ಗುಂಡು ಹಾರಿಸುವುದು ಸಾಮಾನ್ಯ ಎಂದಿದ್ದಾರೆ. ಯಾದಗಿರಿಯಲ್ಲಿ ಮಾತನಾಡಿರ ಕೇಂದ್ರ ಸಚಿವ ಭಗವಂತ ಖೂಬಾ ಗಾಳಿಯಲ್ಲಿ ಹಾರಿಸಿದ್ದು ಗುಂಡಲ್ಲ ಪಟಾಕಿ ಮದ್ದು ಅಷ್ಟೇ. ಅದು ಬರೇ ಸೌಂಡ್ ಬರುತ್ತೆ, ಯಾರಿಗೂ ಹಾನಿಯಾಗಲ್ಲ. ಇದ್ದನ್ನ ಇಲ್ಲಿಗೆ ತೆರೆ ಎಳೆಯಬೇಕು ಎಂದು ಸಮಜಾಯಿಸಿ ನೀಡಿದ್ರು. ಹಳ್ಳಿಗಳಲ್ಲಿ ವಾಡಿಕೆಯಂತೆ ಪಟಾಕಿ ಮದ್ದುನ್ನು ಬಳಸಿ ಹಾರಿಸುವುದು ಸಾಮಾನ್ಯ. ಮಾಧ್ಯಮಗಳಲ್ಲಿ ಬರುತ್ತಿರುವುದು ಸುಳ್ಳು ಎಂದಿದ್ದಾರೆ. ಬಂಧನ ಮಾಡಿರುವ ವಿಚಾರ ನನಗೆ ತಿಳಿದಿಲ್ಲ ಎಂದಿದ್ದಾರೆ.

ಕೊರೊನಾ ರೂಲ್ಸ್ ಬ್ರೇಕ್

ಭಗವಂತ ಖೂಬ ವಿರುದ್ಧ ಕಾಂಗ್ರೆಸ್​ ಟೀಕಾಸ್ತ್ರ..!

ಕೇಂದ್ರ ಸಚಿವ ಭಗವಂತ್​ ಖೂಬಾ ಬಂದೂಕು ಶೋಕಿಯನ್ನು ಕಾಂಗ್ರೆಸ್​ ಕಟುವಾಗಿ ಟೀಕಿಸಿದೆ. ಬಿಜೆಪಿಯ ತಾಲಿಬಾನ್ ಸಂಸ್ಕೃತಿ ಅನಾವರಣಗೊಂಡಿದೆ. ಜನಾಶೀವರ್ವಾದ ಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿರುವ ಜೊತೆಗೆ ತಾಲಿಬಾನ್ ಉಗ್ರರಂತೆ ಬಂದೂಕಿನಿಂದ ಗುಂಡು ಹಾರಿಸಿ ತನ್ನ ಭಯೋತ್ಪಾದಕ ಮನಸ್ಥಿತಿ ನಿರೂಪಿಸಿದೆ ಎಂದಿದ್ದಾರೆ. ತಾಲಿಬಾನಿ ಉಗ್ರರಿಗೂ ಬಿಜೆಪಿಗೂ ಯಾವುದೇ ವ್ಯತ್ಯಾಸವಿಲ್ಲ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಬಿಜೆಪಿ ಉಗ್ರರನ್ನು ಬಂಧಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ಬಿಜೆಪಿ ನಾಯಕರು ಮಾತ್ರ ಬಂದೂಕು ಹಾರಿಸಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

ಸರ್ಕಾರದ ಆದೇಶ ಉಲ್ಲಂಘನೆ ಜೊತೆ ಕಾನೂನು ಉಲ್ಲಂಘನೆ..!

ಕೊರೊನಾ ಸೋಂಕು ಉಲ್ಭಣ ಆಗುತ್ತಿರುವ ಕಾರಣಕ್ಕೆ ಯಾವುದೇ ಸಭೆ ಸಮಾರಂಭ ಮಾಡಬಾರದು. ನೂರಾರು ಜನರನ್ನು ಸೇರಿಸಿ ಮದುವೆ ಕಾರ್ಯಕ್ರಮ ಮಾಡಬಾರದು. 20 ಜನರಿಗಿಂತ ಹೆಚ್ಚು ಜನರನ್ನು ಅಂತ್ಯಕ್ರಿಯೆಗೆ ಸೇರಿಸಬಾರದು ಎಂದು ಆದೇಶ ಮಾಡಲಾಗಿದೆ. ಆದರೆ ರಾಜ್ಯದಿಂದ ನೂತನವಾಗಿ ಸಚಿವರಾಗಿರುವ ನಾಲ್ವರು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ. ಸಾವಿರಾರು ಜನರನ್ನು ಸೇರಿಸಿ ಭಾಷಣ ಮಾಡುತ್ತಿದ್ದಾರೆ. ಕೊರೊನಾ ಮಾರ್ಗಸೂಚಿಯನ್ನು ಸ್ವತಃ ಸಚಿವರುಗಳೇ ಪಾಲನೆ ಮಾಡುತ್ತಿಲ್ಲ. ಜನರು ಗುಂಪುಗೂಡಿ ಕೊರೊನಾ ಹರಡಲು ಸಹಕಾರಿ ಆದಂತಿದೆ. ಇನ್ನೂ ಇಂತಹ ಕಾನೂನು ಬಾಹಿರ ಕೆಲಸವನ್ನೂ ಮಾಡಿ ಸಮರ್ಥನೆ ಮಾಡುತ್ತಿರುವುದು ಆಡಳಿತ ಅಹಂಕಾರದ ಪರಮಾವಧಿ ಎನ್ನಬಹುದು

Related Posts

Don't Miss it !