ಕೇಂದ್ರ ಸಚಿವ DVSಗೂ ಶುರುವಾಯ್ತಾ CD ಭಯ..?

ಕೋರ್ಟ್​ನಿಂದ ಸ್ಟೇ ತಂದಿರುವ ಉದ್ದೇಶ ಏನು..?

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಮೇಶ್​ ಜಾರಕಿಹೊಳಿ ಅವರ ಸಿ.ಡಿ ಕೇಸ್​ ಭಾರೀ ಸದ್ದು ಮಾಡಿತ್ತು. ಮೊದಲಿಗೆ ವಿಡಿಯೋದಲ್ಲಿ ಇರುವುದು ನಾನಲ್ಲ ಎಂದಿದ್ದ ರಮೇಶ್​ ಜಾರಕಿಹೊಳಿ, ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದಿದ್ದರು. ಆ ಬಳಿಕ ವಿಡಿಯೋದಲ್ಲಿ ಇರುವುದು ನಾನೇ, ಅದು ಒಪ್ಪಿಗೆ ನಡೆದಿರುವ ಸೆಕ್ಸ್​. ಆದರೆ ವಿಡಿಯೋ ಮಾಡಿರುವುದು ನನಗೆ ಗೊತ್ತಿಲ್ಲ. ಅದು ಹನಿಟ್ರ್ಯಾಪ್​ಗಾಗಿ ಮಾಡಿರುವುದು ಎಂದು ಆರೋಪಿಸಿದ್ದರು. ಈಗಲೂ ಪ್ರಕರಣದಲ್ಲಿ ಇರುವ ರಮೇಶ್​ ಜಾರಕಿಹೊಳಿ ಸಚಿವಗಿರಿಗಾಗಿ ದೆಹಲಿ, ಮುಂಬೈ ಅಂತಾ ಅಲೆಯುತ್ತಿದ್ದಾರೆ. ಇವರ ಬೆನ್ನಲ್ಲೇ ಆಪರೇಷನ್​ ಕಮಲಕ್ಕೆ ಡಾ ಸುಧಾಕರ್​​ ಸೇರಿದ್ದಂತೆ 6 ಮಂದಿ ಬಿಜೆಪಿ ನಾಯಕರು ನಮ್ಮ ತೇಜೋವಧೆ ಮಾಡುವಂತಹ ಯಾವುದೇ ವಿಡಿಯೋ ಪ್ರಸಾರ ಮಾಡದಂತೆ ಸ್ಟೇ ತಂದಿದ್ದರು. ಇದೀಗ ಕೇಂದ್ರ ಸಚಿವರೂ ಸ್ಟೇ ತಂದಿದ್ದಾರೆ.

ಕೇಂದ್ರ ಸಚಿವ ಡಿ.ವಿ ಸದಾನಂದಗೌಡರಿಗೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದುಕೊಂಡಿದ್ದಾರೆ. ಇತ್ತಿಚೆಗೆ ಕೆಲ ಪತ್ರಿಕೆ, ಚಾನಲ್​ಗಳಲ್ಲಿ ತಮ್ಮ ವಿರುದ್ಧ ಸುಳ್ಳುಸುದ್ದಿ ಪ್ರಸಾರ ಆಗಿತ್ತು. ಕೇಂದ್ರ ಕ್ಯಾಬಿನೆಟ್ ಪುನರ್ ರಚನೆ ಸಂದರ್ಭದಲ್ಲಿ ಪ್ರಸಾರ ಆಗ್ತಿದೆ. ನಕಲಿ ಸಿಡಿ ಸೃಷ್ಟಿಸಿ ಸೊಷಿಯಲ್ ಹಾಗೂ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆ ಇದೆ. ಈ ಹಿಂದೆ ಬರಾಕ್ ಒಬಾಮಾ, ಕ್ವೀನ್ ಎಲಿಜಬೆತ್ ನಕಲಿ ವಿಡಿಯೋ ಮಾಡಲಾಗಿತ್ತು. ಅದೇ ತರಹ ವಿಡಿಯೋ ಪ್ರಸಾರ ಮಾಡಿದರೆ ತಮ್ಮ ಘನತೆಗೆ ಧಕ್ಕೆಯಾಗತ್ತೆ. ತಮ್ಮ ಚಾರಿತ್ರ್ಯ ವಧೆಯಾಗಲಿದೆ ಎಂದು ಮುಂಜಾಗೃತಾ ಅರ್ಜಿ ಸಲ್ಲಿಸಿದ್ದರು. ಅಂತಹ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಿಂದ ನಿರ್ಬಂಧ ವಿಧಿಸಿದೆ.

ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕ್ರೀಡಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್. ಟಿ ಸೋಮಶೇಖರ್, ಕೃಷಿ ಸಚಿವ ಬಿ. ಸಿ ಪಾಟೀಲ್ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಕೂಡ ಈ ಹಿಂದೆ ಬೆಂಗಳೂರಿನ ಸಿವಿಲ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ ಇದೇ ರೀತಿಯ ತಡೆಯಾಜ್ಞೆ ತಂದಿದ್ರು. ಆ ಸಮಯದಲ್ಲಿ ಇನ್ನೂ ಆರು ಮಂದಿಯ ಸಿ.ಡಿಗಳು ಇರುವ ಕಾರಣ ಈ ರೀತಿ ತಡೆಯಾಜ್ಞೆ ತಂದಿದ್ದಾರೆ ಎನ್ನುವ ಮಾತಿತ್ತು. ಈ ವೇಳೆ ಮಾತನಾಡಿದ್ದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಕೋರ್ಟ್​ ಹೋಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಮತ್ತಷ್ಟು ಗೋಜಲು ಸೃಷ್ಟಿಯಾಗುತ್ತದೆ ಎಂದಿದ್ದರು.

ಸಿ.ಡಿ ಭಯದ ಬಗ್ಗೆ ಸಚಿವರ ಸ್ಪಷ್ಟನೆ..!

ಮಾನಹಾನಿ ದೃಶ್ಯ ಪ್ರಸಾರ ಮಾಡದಂತೆ ಕೋರ್ಟ್​ನಿಂದ ತಡೆಯಾಜ್ಞೆ ತಂದಿರುವ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಚುನಾವಣೆ, ಸಂಪುಟ ರಚನೆ ಸಂದರ್ಭದಲ್ಲಿ ವಿರೋಧಿಗಳು ಈ ಮುಂಚೆಯೂ ನನ್ನ ವಯಕ್ತಿಕ ತೇಜೋವಧೆಗೆ ಪ್ರಯತ್ನಿಸಿದ್ದರು. ಮಾಧ್ಯಮ ಸ್ವಾತಂತ್ರ್ಯವನ್ನು ನಾನು ಸಂಪೂರ್ಣ ಗೌರವಿಸುತ್ತೇನೆ. ಆದರೆ ವಿರೋಧಿಗಳ ಸಂಚಿಗೆ ಬಲಿಯಾಗಿ ತಪ್ಪುಮಾಹಿತಿ ಪ್ರಸರಣದಲ್ಲಿ ತೊಡಗಬಾರದು. ಈ ಉದ್ದೇಶದಿಂದ ‌ನಿರ್ಬಂಧ ಆದೇಶ ತರಬೇಕಾಗಿ ಬಂತು. ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು ಎಂದು ಮಾಧ್ಯಮಗಳ ವಿರುದ್ದದ ನಿರ್ಬಂಧಕಾಜ್ಞೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

Related Posts

Don't Miss it !