CET Result: 5 ವಿಭಾಗದಲ್ಲೂ ಮೊದಲ​ ಸ್ಥಾನ​ ಪಡೆದ ಮೇಘನ್ ಸ್ಟಡಿ ಪ್ಲ್ಯಾನ್ ಹೇಗಿತ್ತು..?

ರಾಜ್ಯ ಸರ್ಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance Test) ಯಲ್ಲಿ ಮೈಸೂರಿನ ವಿದ್ಯಾರ್ಥಿ ಮೇಘನ್​ H.K ಪ್ರಥಮ ಸ್ಥಾನ ಗಳಿಸಿದ್ದಾರೆ. ಅದರಲ್ಲೂ ಸಿಇಟಿಯ 5 ವಿಭಾಗಗಳಲ್ಲೂ ರಾಜ್ಯಕ್ಕೆ ಮೇಘನ್​ ಪ್ರಥಮ ಸ್ಥಾನ ಗಳಿಸಿದ್ದಾನೆ ಎನ್ನುವುದು ವಿಶೇಷ. ಇದರ ಜೊತೆಗೆ ಇತಿಹಾಸದಲ್ಲಿ ಯಾರೂ ಮಾಡದೆ ಇರುವ ದಾಖಲೆಯನ್ನು ಮೇಘನ್​ ಮಾಡಿದ್ದಾನೆ ಎನ್ನುವುದು ಪ್ರಮುಖ ವಿಚಾರ. CETಯ ಐದು ವಿಭಾಗಗಳಾದ ಎಂಜಿನಿಯರಿಂಗ್, ಫಾರ್ಮಸಿ, ವೆಟರ್ನರಿ, ಬಿಎಸ್​ಸಿ ಕೃಷಿ, ನ್ಯಾಚುರೋಪತಿ ವಿಭಾಗಳಲ್ಲಿ ಮೇಘನ್​ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗಿಂತಲೂ ಅತ್ಯಧಿಕ ಅಂಕ ಗಳಿಸುವ ಮೂಲಕ ಯಾರೂ ಮಾಡಲಾಗದ ಸಾಧನೆ ಮಾಡಿ ಸಾಧಕ ಎನಿಸಿದ್ದಾರೆ. ಆದರೆ ಈ ಯಾವುದೇ ವಿಭಾಗದಲ್ಲಿ ಮೇಘನ್ ಶಿಕ್ಷಣ ಮುಂದುವರಿಸುವುದಿಲ್ಲ ಎನ್ನುವುದು ಕೂಡ ನಿಜ.

ಒತ್ತಡ ನಿವಾರಣೆಯೇ ಓದಿನಲ್ಲಿ ಬಹುಮುಖ್ಯ..!

ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಅತಿ ಅಂಕ ಗಳಿಸಬೇಕು ಎನ್ನುವ ಉದ್ದೇಶದಿಂದ ಸಾಕಷ್ಟು ಶ್ರಮವಹಿಸಿ ಓದಿರುತ್ತಾರೆ. ಆದರೆ ಎಲ್ಲಾ ವಿದ್ಯಾರ್ಥಿಗಳೂ ಈ ರೀತಿಯ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಬಹುತೇಕ ವಿದ್ಯಾರ್ಥಿಗಳಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಗೊತ್ತಿದ್ದರೂ ಬರೆಯುವ ವೇಳೆಯಲ್ಲಿ ಮರೆತು ಹೋಗುತ್ತದೆ. ಅಥವಾ ಕಷ್ಟಪಟ್ಟು ಓದಬೇಕು ಎಂದು ಎಷ್ಟೇ ಪ್ರಯತ್ನ ಮಾಡಿದರೂ ಬೇರೆ ಬೇರೆ ಒತ್ತಡದಿಂದ ಓದುವುದು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವೊಂದು ಸಮಯದಲ್ಲಿ ಓದಿದ್ದು, ದೀರ್ಘಕಾಲ ಉಳಿಯುವುದಿಲ್ಲ. ಈ ಸಮಸ್ಯೆ ಪರಿಹಾರಕ್ಕಾಗಿ ಮೇಘನ್​ ಕಂಡುಕೊಂಡಿದ್ದು, ಪ್ರೀತಿ ಪಾತ್ರರೊಂದಿಗೆ ಹೆಚ್ಚಾಗಿ ಮಾತನಾಡುವುದು. ತಮ್ಮ ಎಲ್ಲಾ ವಿಚಾರಗಳನ್ನು ಬೇರೊಬ್ಬರ ಬಳಿ ಹಂಚಿಕೊಳ್ಳುವ ಮೂಲಕ ಒತ್ತಡವನ್ನು ನಿವಾರಿಸಿಕೊಳ್ಳಬಹುದು ಎನ್ನುವ ಸತ್ಯವನ್ನು ಮೇಘನ್​ ಅರಿತುಕೊಂಡಿದ್ದರು. ಅದನ್ನೇ ಪಾಲಿಸಿದರೂ ಕೂಡ.

Read this also;

ಮನಸ್ಸಿಟ್ಟು ಓದಲು ಸಂಗೀತ, ಕ್ರೀಡೆ ಸಹಕಾರಿ..!

ನಾವು ಗುರಿ ಇಟ್ಟುಕೊಂಡು ಓದುವ ಸಮಯದಲ್ಲಿ ಕೆಲವೊಮ್ಮೆ ಬೇಸರ ಆಗುವುದು ಸಹಜ. ಆದರೂ ನಾವು ಓದುತ್ತಲೇ ಇದ್ದಾಗ ಓದಿದ್ದು ಕೂಡ ಮರೆತು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದೇ ಕಾರಣದಿಂದ ನಾನು ಸಂಗೀತ ಕೇಳುವುದು ಹಾಗೂ ಸಮಯ ಸಿಕ್ಕಾಗ ಆಟವಾಡುವುದನ್ನು ರೂಢಿಸಿಕೊಂಡಿದ್ದೆ. ಕ್ರಿಕೆಟ್​ ಪಂದ್ಯಾವಳಿಗಳು ನಡೆಯುವಾಗ ಟಿವಿಯಲ್ಲೂ ಕ್ರಿಕೆಟ್​ ನೋಡಿದ್ದೇನೆ ಎನ್ನುವ ಮೇಘನ್, ಗಿಟಾರ್​ ನುಡಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. 10ನೇ ತರಗತಿ ತನಕ ಗಿಟಾರ್​ ತರಗತಿಗೆ ಹೋಗುತ್ತಿದ್ದ ಮೇಘನ್, ಪಿಯುಸಿಗೆ ಬಂದ ಬಳಿಕ ತರಗತಿಗೆ ಹೋಗುವುದನ್ನು ನಿಲ್ಲಿಸಿ, ಬೇಸರ ಕಳೆಯಲು ಸಂಗೀತದ ಮೊರೆ ಹೋಗುತ್ತಿದ್ದರು. ಇದೂ ಕೂಡ ಶ್ರದ್ಧೆಯಿಂದ ಓದುವುದಕ್ಕೆ ಸಾಧ್ಯವಾಯಿತು. ಪ್ರಮಥಿ ಕಾಲೇಜಿನ ಆನ್​ಲೈನ್​ ತರಗತಿ, ಆಕಾಶ್​ ಇನ್ಸ್​ಟಿಟ್ಯೂಟ್​ನಲ್ಲಿ ನೀಟ್​ ತರಬೇತಿ, ಜೊತೆಗೆ 10 ರಿಂದ 12 ಗಂಟೆ ಕಾಲ ಟೈಂ ಟೇಬಲ್​ ಹಾಕಿಕೊಂಡು ಓದಿದ್ದಕ್ಕೆ ಫಲ ಸಿಕ್ಕಿದೆ ಎನ್ನುವ ಸಂತಸ ಇಡೀ ಕುಟುಂಬದ್ದಲ್ಲಿ ಮನೆ ಮಾಡಿದೆ.

Read this also;

ನೀಟ್​​ನಲ್ಲಿ ಯಾವ ಫಲಿತಾಂಶ ನಿರೀಕ್ಷೆ ಇದೆ..?

ಮೈಸೂರಿನ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ತಂದೆ ಪ್ರಿನ್ಸಿಪಾಲ್. ತಾಯಿ ನೃಪತುಂಗಾ ಕಾಲೇಜಿನಲ್ಲಿ ಪ್ರಿನ್ಸಿಪಾಲ್​. ಇವರಿಬ್ಬರ ಸಹಕಾರ ನನ್ನ ಫಲಿತಾಂಶದಲ್ಲಿ ಪ್ರತಿಫಲನ ಆಗಿದೆ ಎನ್ನುವ ಮೇಘನ್, ಎಂಬಿಬಿಎಸ್​ ಓದುವ ತಯಾರಿ ನಡೆಸಿದ್ದಾರೆ. ನೀಟ್​ ಪರೀಕ್ಷಾ ಫಲಿತಾಂಶಕ್ಕಾಗಿ ಕಾದು ಕುಳಿತಿರುವ ಮೇಘನ್, ಇಡೀ ದೇಶದಲ್ಲಿ ಟಾಪ್ 50 ಒಳಗೆ ಱಂಕ್​ ಬರುವ ವಿಶ್ವಾಸದಲ್ಲಿ ಇದ್ದಾರೆ. ಆ ಬಳಿಕ ಆಂಕಾಲಜಿ ವಿಭಾಗದಲ್ಲಿ ಕೆಲಸ ಮಾಡಬೇಕು. ತುಂಬಾ ಜನರಿಗೆ ಸಹಕಾರಿ ಆಗಬೇಕು ಎನ್ನುವ ಮಹತ್ವಕಾಂಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಐಎಎಸ್​, ಐಪಿಎಸ್​ನಂತಹ ಹುದ್ದೆಗಳಿಗೆ ಹೋಗುವ ಆಸಕ್ತಿ ಕಡಿಮೆ ಎನ್ನುತ್ತಾರೆ. ಆದರೆ ಹೆಚ್ಚಾಗಿ ಓದುವ ಮಕ್ಕಳು ಬೇರೆ ವಿಚಾರದ ಕಡೆಗೆ ಹೆಚ್ಚಾಗಿ ಗಮನ ಹರಿಸುವುದಿಲ್ಲ. ಆದರೆ ಮೇಘನ್​ ಎಲ್ಲಾ ಅತ್ಯುತ್ತಮ ವಿದ್ಯಾರ್ಥಿಗಳ ಸಾಲಲ್ಲಿ ವಿಭಿನ್ನವಾಗಿ ನಿಲ್ಲುವ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ.

Related Posts

Don't Miss it !