ನಟ ದರ್ಶನ್​ಗೆ ವಂಚನೆ ಮಾಡಲು ಯತ್ನಿಸಿದ್ದು ನಿರ್ಮಾಪಕ..!?

ನಟ ದರ್ಶನ್ ತೂಗುದೀಪ ಅವರ ಆಸ್ತಿ ಫೋರ್ಜರಿ ಮಾಡಿ 25 ಕೋಟಿ ಲೋನ್​ಗೆ ಯತ್ನಿಸಿದ್ದು ಯಾರು ಅನ್ನೋದು ಮೇಲ್ನೋಟಕ್ಕೆ ಎಲ್ಲವೂ ಸ್ಪಷ್ಟ ಆಗ್ತಿದೆ. ರಾಬರ್ಟ್​ ಚಿತ್ರದ ನಿರ್ಮಾಪಕ ಅರುಣಕುಮಾರಿ ಎಂಬ ಮಹಿಳೆಯನ್ನು ದರ್ಶನ್​ಗೆ ಪರಿಚಯ ಮಾಡಿಸಿದ್ದು, ಆ ಬಳಿಕ ದರ್ಶನ್​ ಮನೆಗೆ ಕರೆದುಕೊಂಡು ಬಂದಿದ್ದು ನಿರ್ಮಾಪಕ ಉಮಾಪತಿ ಎನ್ನುವುದನ್ನು ಸ್ವತಃ ನಟ ದರ್ಶನ್​ ಬಹಿರಂಗ ಮಾಡಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಾರಂಭದಿಂದ ಎಲ್ಲಾ ವಿಷಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ

ಉಮಾಪತಿ ಕರೆ ಮಾಡಿ 25 ಕೋಟಿ ಬಗ್ಗೆ ಹೇಳಿದ್ದು..!

ಕೊರೊನಾ ಲಾಕ್​ಡೌನ್​ ಆಗಿದ್ದ ಕಾರಣ ನಾನು ಮೈಸೂರಿನಲ್ಲಿದೆ. ಜೂನ್ 6ರಂದು ನನಗೆ ಉಮಾಪತಿ ಕರೆ ಮಾಡಿ, ಯಾವುದಾದರು 25 ಕೋಟಿ ಲೋನ್​ಗೆ ಶ್ಯೂರಿಟಿ ಹಾಕಿದ್ದೀರಾ..? ಎಂದು ಪ್ರಶ್ನಿಸಿದ್ರು. ಬಳಿಕ ಅರುಣಕುಮಾರಿ ಜೊತೆಗೆ ಕಾನ್​ಕಾಲ್​ ಹಾಕಿದ್ರು. ಆಕೆ ನನ್ನ ಸ್ನೇಹಿತರಾದ ಹರ್ಷ, ರಾಕೇಶ್ ಶರ್ಮಾ ಮೇಲೆ ಆರೋಪ ಮಾಡಿದ್ರು. ಜೂನ್ 13ಕ್ಕೆ ಉಮಾಪತಿಯನ್ನು ಕರೆದುಕೊಂಡು ಬರುತ್ತೇನೆ. ಫೋರ್ಜರಿ ಮಾಡಿರುವ ದಾಖಲೆಗಳನ್ನು ತರುತ್ತೇನೆ ಎಂದಿದ್ದರು. ಅದರಂತೆ ಜೂನ್​ 16ರಂದು ಅರುಣ ಕುಮಾರಿಯನ್ನು ಮನೆಗೆ ಕರೆದುಕೊಂಡು ಬಂದರು. ಸ್ನೇಹಿತರ ಹೆಸರು ಅವರ ಪತ್ನಿಯರ ಹೆಸರು ಎಲ್ಲವನ್ನೂ ಹೇಳಿದ ಬಳಿಕ ನಂಬಿಕೆ ಬರುವಂತಿತ್ತು. ಯಾವುದೇ ದಾಖಲೆ ಕೊಡಲಿಲ್ಲ ನನ್ನ ಆಧಾರ್​ ನಂಬರ್ ಮಾತ್ರ ಸರಿಯಾಗಿ​ ಹೇಳಿದ್ರು.

ಮೈಸೂರಿನ ಸ್ನೇಹಿತ ನಾಗುಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದೆ. ಅವರು ನೇರವಾಗಿ ರಾಕೇಶ್‌ಗೆ ಕಾನ್ಫರೆನ್ಸ್ ಕಾಲ್ ಹಾಕಿದ್ರು. ನಾನು ಯಾವುದೇ ಲೋನ್​ಗೆ ಅರ್ಜಿ ಹಾಕಿಲ್ಲ ಎಂದರು. ಆ ಬಳಿಕ ಹರ್ಷ ಬಳಿಯೂ ಕೇಳಿದೆವು. ಅವರು ಇಲ್ಲ ಎಂದರು. ಶರ್ಮಾ ಬ್ಯಾಂಕ್​ನಲ್ಲಿ ಕೆಲಸ ಮಾಡುವುದರಿಂದ ಅವರ ಬಳಿಯೂ ಕೇಳಿ ಖಚಿತ ಮಾಡಿಕೊಂಡೆವು. ಈ ನಡುವೆ ಅರುಣಾಕುಮಾರಿಗೆ ಧೀರಜ್ ಪ್ರಸಾದ್ ಹೆಸರನ್ನು ಹೇಳಿದ್ರು. ಅರುಣಕುಮಾರಿ ಮೈಸೂರು ತೋಟ ನೋಡಿ ಪರಿಶೀಲನೆ ಮಾಡಬೇಕು ಎಂದರು. ಆ ತೋಟ ನನ್ನ ಹೆಸರಲ್ಲಿ ಇಲ್ಲ ಎಂದೆ, ಆದರೂ ಪರಿಶೀಲನೆ ಮಾಡಬೇಕು ಎಂದರು. ಆಗ ತೋಟಕ್ಕೆ ಬಂದಾಗ ರಾಕೇಶ್, ಹರ್ಷಾ ಕೂಡ ತೋಟಕ್ಕೆ ಬಂದಿದ್ರು. ಆಗ ಆಕೆ ಶಾಕ್​ ಆಗಿದ್ದರು.

ದಾಖಳೆ ಕೊಡುವುದಕ್ಕೆ ಬ್ಯಾಂಕ್‌ಗೆ ಬಂದಿದ್ದರು ಎಂದು ಅರುಣಕುಮಾರಿ ಹೇಳಿದ ದಿನವೆಲ್ಲ ನಾವು ಸ್ನೇಹಿತರು ಜೊತೆಯಲ್ಲೇ ಇದ್ದೆವು. ಬ್ಯಾಂಕ್‌ಗೆ ಹೋದಾಗ ಆಕೆ ನಕಲಿ ಎಂಬುದು ಗೊತ್ತಾಯ್ತು. ತಕ್ಷಣ ನಿರ್ಮಾಪಕ ಉಮಾಪತಿಗೆ ಕಾಲ್ ಮಾಡಿ ಅರುಣಾಕುಮಾರಿಯನ್ನು ಕರೆಸುವಂತೆ ಹೇಳಿದೆವು. ನಾನು ಉಮಾಪತಿ ಮೇಲೆ ಬ್ಲೇಮ್ ಮಾಡುವುದಿಲ್ಲ. ಆದರೆ ಯಾರಾದರೂ ಸರಿ ನಾನು ಬಿಡುವ ಪ್ರಶ್ನೆಯೇ ಇಲ್ಲ. ಅದು ಹರ್ಷ ಆಗಲಿ ರಾಕೇಶ್ ಆಗಲಿ ಬಿಡುವುದಿಲ್ಲ. ಇದೇನು ಕಡಿಮೆ‌ ಮೊತ್ತವಲ್ಲ. ಹೀಗಾಗಿ ಇದು ಗೊತ್ತಾಗಲೇಬೇಕು ಎಂದಿದ್ದಾರೆ.

https://thepublicspot.com/2021/07/12/why-bjp-leaders-always-give-nonsense-statement/

ನಾವು ಪೊಲೀಸ್​ ಠಾಣೆಗೆ ದೂರು ಕೊಟ್ಟ ಮೇಲೆ ಅರುಣಾಕುಮಾರಿ ಕರೆ ಮಾಡಿ, ನೀವು ದೂರು ಕೊಟ್ಟಿದ್ದೀರ ಎಂದರು‌. ಆಗ ನಾನು ಬಂದು ಸತ್ಯ ಹೇಳುತ್ತೇನೆ ಎಂದರು. ಅರುಣಾಕುಮಾರಿ ನಮ್ಮ ಮನೆಗೆ ಮಗನ ಜತೆ ಬಂದಿದ್ದರು. ಉಮಾಪತಿ ನೀಡಿದ್ದ ದೂರಿನ ಪ್ರತಿ ನೋಡಿ ಅರುಣಕುಮಾರಿ ಶಾಕ್ ಆದಳು. ಇದೆಲ್ಲಾ ಮಾಡಿಸಿದ್ದು ಉಮಾಪತಿ ಎಂದು ಹೇಳಿದಳು. ಇದರಲ್ಲಿ ನನ್ನ ಸ್ನೇಹಿತರ ಪೈಕಿ ಯಾರ ತಪ್ಪು ಇಲ್ಲ. ತಪ್ಪು ಮಾಡಿದ್ದರೆ ಇವರು ಇಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ಏಪ್ರಿಲ್ 5 ರಿಂದ ಉಮಾಪತಿ ಹಾಗೂ ಅರುಣಾಕುಮಾರಿ ಚಾಟ್ ಮಾಡಿರುವ ದಾಖಲೆ‌ಸಿಕ್ಕಿದೆ ಎಂದು ತೋರಿಸಿದ್ದಾರೆ ನಟ ದರ್ಶನ್.

ಉಮಾಪತಿ ಮೇಲೆ ಸಾಕಷ್ಟು ಅನುಮಾನ..!

ನಟ ದರ್ಶನ್​ಗೆ ವಂಚನೆ ಮಾಡುವ ಪ್ರಯತ್ನ ಮಾಡಿರುವ ಬಗ್ಗೆ ನಿರ್ಮಾಪಕ ಉಮಾಪತಿ ಮೇಲೆ ಹಲವು ಅನುಮಾನ ಕಾಣಿಸುತ್ತಿವೆ. ಇಡೀ ಪ್ರಕರಣದ ಸೂತ್ರಧಾರಿ ಉಮಾಪತಿ ಎನ್ನಲಾಗ್ತಿದೆ. ದರ್ಶನ್ ಸ್ನೇಹಿತರಿಗೆ ಆರೋಪಿ ಅರುಣಕುಮಾರಿ ಪರಿಚಯಿಸಿದ್ದು ಇದೇ ನಿರ್ಮಾಪಕ ಉಮಾಪತಿ. ಅರುಣಕುಮಾರಿ ಬರುವ ವಿಚಾರ ದರ್ಶನ್ ಸ್ನೇಹಿತರಿಗೆ ತಿಳಿಸಿದ್ದು ಇದೇ ನಿರ್ಮಾಪಕ. ಪ್ರಕರಣ ಬಯಲಾಗುವ ಭಯದಲ್ಲಿ ಆರಂಭದಲ್ಲೇ ಕಂಪ್ಲೆಂಟ್ ಕೊಟ್ಟು ತನ್ನದೇನು ತಪ್ಪಿಲ್ಲ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನಕಲಿ ಬ್ಯಾಂಕ್ ಮ್ಯಾನೇಜರ್ ಪರಿಚಯಿಸಿದ್ದ ನಿರ್ಮಾಪಕ ಉಮಾಪತಿ‌ ಈಗ ನಾನು ಪರಿಚಯ ಮಾಡಿಸಿಲ್ಲ ಎನ್ನುತ್ತಿದ್ದಾರೆ.

ನಂಬರ್​ ಚೇಂಜ್​ ಮಾಡಿದ್ದು ಯಾಕೆ..? ​

ನಿರ್ಮಾಪಕ ಉಮಾಪತಿ ಮೇಲೆ ಬಲವಾದ ಅನುಮಾನ ಬರುವುದಕ್ಕೆ ಮತ್ತೊಂದು ಕಾರಣ ಇದೆ. 15 ದಿನಗಳ ಹಿಂದೆ ಆರೋಪಿ ಅರುಣಕುಮಾರಿ ಪೋನ್ ನಂಬರ್ ಚೆಂಜ್ ಮಾಡಲಾಗಿದೆ. ಆರೋಪಿಯ ಪೋನ್ ನಂಬರ್ ಚೆಂಜ್‌ ಮಾಡಿರುವುದು ಅನುಮಾನ ಮೂಡಿಸುತ್ತಿದೆ. ಹರ್ಷ ಮಲೆಂಟಾಗೆ ಪೋನ್ ಮಾಡಿ ಮಾತುಕತೆ ನಡೆಸಿದ ನಾಲ್ಕೈದು ದಿನಗಳ ಬಳಿಕ ನಂಬರ್ ಚೇಂಜ್ ಮಾಡಲಾಗಿದೆ. ಅರುಣ್ ಕುಮಾರಿ ಹಾಗೂ ಉಮಾಪತಿ ನಡುವೆ ಸಾಕಷ್ಟು ಪೋನ್ ಸಂಭಾಷಣೆ ನಡೆದಿದ್ದು, ಇಬ್ಬರ ನಡುವಿನ ಸುದೀರ್ಘ ಮಾತುಕತೆ ಬಹಿರಂಗ ಆಗುವ ಎಲ್ಲಾ ಸಾಧ್ಯತೆಗಳಿವೆ. ಈಗ ಸದ್ಯಕ್ಕೆ 420 ಕೇಸ್​ ಹಾಕಿದ್ದು, ಮಹಿಳೆಯನ್ನು ಬಿಟ್ಟು ಕಳುಹಿಸಿದ್ದಾರೆ. ಪೊಲೀಸರು ಇನ್ನಷ್ಟು ಸ್ಪಷ್ಟತೆ ನೀಡುವ ಸಾಧ್ಯತೆಯಿದೆ. ಆದ್ರೆ ಇಲ್ಲೀವರೆಗೂ ಸಿಕ್ಕಿರೋ ಮಾಹಿತಿ ನಿರ್ಮಾಪಕರ ಕಡೆಗೆ ಬೊಟ್ಟು ಮಾಡುತ್ತಿದೆ.

Related Posts

Don't Miss it !