ನಟ ದರ್ಶನ್​ ಆಸ್ತಿ ಫೋರ್ಜರಿ.. ನಕಲಿ ಮಹಿಳಾ ಬ್ಯಾಂಕ್​ ಮ್ಯಾನೇಜರ್ ಕರಾಮತ್ತು​..!?

ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನೋಡೋಕೆ ನೂರಾರು ಕಿಲೋ ಮೀಟರ್​ ದೂರದಿಂದ ಅಭಿಮಾನಿಗಳು ಬರುತ್ತಾರೆ. ದರ್ಶನ್​ ಕೂಡ ಅಭಿಮಾನಿಗಳನ್ನು ಮಾತನಾಡಿಸಿ ಫೋಟೋ ಕ್ಲಿಕ್ಕಿಸಲು ಅವಕಾಶ ಕೊಟ್ಟ ಕಳುಹಿಸುತ್ತಾರೆ. ಇದು ನಮಗೆಲ್ಲಾ ಗೊತ್ತಿರೋ ಸಂಗತಿ. ಆದ್ರೆ ಒಂದು ತಿಂಗಳ ಹಿಂದೆ ನಾನು ಕೆನರಾ ಬ್ಯಾಂಕ್​ ಮ್ಯಾನೇಜರ್​ ಎಂದು ಹೇಳಿಕೊಂಡು ಅರುಣಕುಮಾರಿ ಎಂಬ ಮಹಿಳೆ ನಟ ದರ್ಶನ್ ಬಳಿ​ಗೆ ಬಂದಿದ್ದರು. ಈ ಮಹಿಳೆ ನಟ ದರ್ಶನ್​ಗೆ ಮಕ್ಮಲ್​ ಟೋಪಿ ಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾಕೆ ಆ ರೀತಿ ಮಾಡಿದ್ರು ಎನ್ನುವುದು ಅಚ್ಚರಿಯ ವಿಚಾರವಾಗಿದೆ.

ದರ್ಶನ್​ ಸ್ನೇಹಿತರಿಂದ 25 ಕೋಟಿ ಸಾಲ..!

ನಟ ದರ್ಶನ್​ ಭೇಟಿ ಮಾಡಿದ್ದ ನಕಲಿ ಬ್ಯಾಂಕ್​ ಮ್ಯಾನೇಜರ್​​ ಅರುಣಕುಮಾರಿ, ಮೈಸೂರಿನ ನಿಮ್ಮ ಕೆಲವು ಸ್ನೇಹಿತರು ನಮ್ಮ ಬ್ಯಾಂಕ್​ನಲ್ಲಿ 25 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಹಾಕಿದ್ದು, ನಿಮ್ಮನ್ನು ಶ್ಯೂರಿಟಿ ಹಾಕಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಲು ಬಂದಿದ್ದೇನೆ ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ದರ್ಶನ್​ ಹಾಗೂ ಆಪ್ತರು ಪರಿಶೀಲನೆ ಮಾಡಿದಾಗ ಯಾರೊಬ್ಬರೂ ದರ್ಶನ್​ ಸ್ನೇಹಿತರು ಸಾಲಕ್ಕೆ ಅರ್ಜಿ ಹಾಕಿಲ್ಲ ಎನ್ನುವ ಮಾಹಿತಿ ತಿಳಿದಿತ್ತು. ಈ ಬಗ್ಗೆ ನಟ ದರ್ಶನ್​ ಸ್ನೇಹಿತರು ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇದೀಗ ನಕಲಿ ಬ್ಯಾಂಕ್​ ಮ್ಯಾನೇಜರ್​ ಅರುಣಕುಮಾರಿ ಸೇರಿ ಮೂವರನ್ನು ಅರೆಸ್ಟ್​ ಮಾಡಲಾಗಿದೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್​ಗೌಡ ಮೇಲೆ ಡೌಟ್​..!

ನಟ ದರ್ಶನ್ ಬಳಿ ತೆರಳಿದ್ದ ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಸೇರಿ ಮೂವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಲೋನ್ ವಿಚಾರವಾಗಿ ಮಾತನಾಡಲು ತೆರಳಿದ್ದ ಮಹಿಳೆ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಜೊತೆಯಲ್ಲೇ ಬಂದಿದ್ದರು ಎನ್ನಲಾಗಿದೆ. ಯಾರೂ ಅರ್ಜಿ ಹಾಕಿಲ್ಲ, ಇದು ಮೋಸದ ಜಾಲ ಎನ್ನುವುದು ತಿಳಿಯುತ್ತಿದ್ದ ಹಾಗೆ, ನಟ ದರ್ಶನ್ ಸ್ನೇಹಿತರು ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರನ್ನು ಕರೆಸಿಕೊಂಡಿದ್ದಾರೆ.

ಎಸಿಪಿ ಕಚೇರಿಗೆ ನಟ ದರ್ಶನ್​ ಆಗಮನ..!

ಮೈಸೂರಿನ ಹೆಬ್ಬಾಳ ಠಾಣೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದ ಬಳಿಕ NR ಎಸಿಪಿ ಕಚೇರಿಗೆ ಕರೆದುಕೊಂಡು ಬಂದಿದ್ದರು. ಜೊತೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ಗೌಡರನ್ನು ಕರೆಸಿದ್ದಾರೆ. ನಕಲಿ ಮ್ಯಾನೇಜರ್ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ವಿಚಾರಣೆ ವೇಳೆ ನಿರ್ಮಾಪಕ ಉಮಾಪತಿ ಹೇಳಿದ ಕಾರಣ ನಟ ದರ್ಶನ ಬಳಿ ಬಂದು ನಕಲಿ ಮ್ಯಾನೇಜರ್​ ರೀತಿ ನಟಿಸಿದೆ ಎಂದು ಮಹಿಳೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ನಿರ್ಮಾಪಕ ಉಮಾಪತಿ ಯಾವ ಕಾರಣಕ್ಕೆ ಹೀಗೆ ಮಾಡಿದರು ಅನ್ನೋ ಬಗ್ಗೆ ಖುದ್ದು ಡಿಸಿಪಿ ಪ್ರದೀಪ್ ಗುಂಠಿ ತನಿಖೆ ಮಾಡ್ತಿದ್ದಾರೆ. ಎಸಿಪಿ ಶಿವಶಂಕರ್ ಸಹ ಉಪಸ್ಥಿತಿ ಇದ್ದಾರೆ. ನಟ ದರ್ಶನ್​ ಕೂಡ ಎಸಿಪಿ ಕಚೇರಿಗೆ ಭೇಟಿ ನೀಡಿದ್ದಾರೆ ಪರಿಶೀಲನೆ ನಡೆಸಿದ್ದಾರೆ.

ನಟ ದರ್ಶನ್​ ಕೊಟ್ಟ ಸ್ಪಷ್ಟನೆ ಏನು..?

ನಟ ದರ್ಶನ್​ಗೆ​ ವಂಚನೆಗೆ ಯತ್ನ ಮಾಡಿದ ಬಗ್ಗೆ ಮೈಸೂರಿನಲ್ಲಿ ನಟ ದರ್ಶನ್​ ಮಾತನಾಡಿದ್ದಾರೆ. ಸಣ್ಣ ಘಟನೆ ನಡೆದಿತ್ತು ಅಷ್ಟೇ, ನನಗೆ ಯಾವುದೇ ಬ್ಲ್ಯಾಕ್​ಮೇಲ್ ಮಾಡಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಮಾಡಲಿ. ನನ್ನ ದಾಖಲೆ ಪೋರ್ಜರಿ ಆಗಿದ್ದಾರೆ ಎಂದಿದ್ದಾರೆ. ಘಟನೆ ಬಗ್ಗೆ ನನಗೂ ಹೆಚ್ಚಿನ ಮಾಹಿತಿಯಿಲ್ಲ. ಒಂದು ತಿಂಗಳ ಹಿಂದೆಯೇ ಘಟನೆ ನಡೆದಿದೆ. ಒಂದು ದಾಖಲೆ ಸಿಕ್ಕಿದೆ ಬನ್ನಿ ಎಂದ್ರು ಹಾಗಾಗಿ ಪೊಲೀಸರು ಹೇಳಿದ್ದಕ್ಕೆ ಠಾಣೆಗೆ ಬಂದಿದ್ದೇನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ನಂತರ ಎಲ್ಲವೂ ಬಯಲಾಗುತ್ತದೆ. ನನಗೇ ಮಿಲಿಯನ್​ ಡಾಲರ್ ಪ್ರಶ್ನೆಯಿದು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Related Posts

Don't Miss it !