ಕಾರಿನೊಳಗೆ ಸುಟ್ಟು ಭಸ್ಮ ಆಗಿದ್ದು ಯಾಕೆ..? ಭಗ್ನ ಪ್ರೇಮಿಯ ಕೃತ್ಯವೇ..?

ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ ಭೀಕರ ಘಟನೆಯೊಂದು ನಡೆದಿತ್ತು. ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಇಬ್ಬರು ಪ್ರೇಮಿಗಳು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದರು. 20 ವರ್ಷದ ಕಾಂಚನಾ ಹಾಗೂ 23 ವರ್ಷದ ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಬ್ಬರೂ ಪ್ರೇಮಿಗಳಾಗಿದ್ದು, ಮನೆಯಲ್ಲಿ ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ ಕಾಂಚಾನ ಕುಟುಂಬಸ್ಥರು ಪ್ರೇಮಿಗಳು ಎನ್ನುವುದನ್ನು ನಿರಾಕರಿಸಿದ್ದರು.

ಕಾಂಚನಾ ಕುಟುಂಬಸ್ಥರು ಹೇಳುವುದೇನು..?

ಕಾಂಚನಾ ನರ್ಸಿಂಗ್​ ಓದಿಕೊಂಡಿದ್ದು, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಾಂಟ್ರಾಕ್ಟ್​​ ಬೇಸಿಸ್​ನಲ್ಲಿ ಕೆಲಸ ಮಾಡುತ್ತಿದ್ದಳು. ನಾವು ಮಧ್ಯಾಹ್ನದ ವೇಳೆಗೆ ಕರೆ ಮಾಡಿದಾಗ ನಾನು ಇಂದು ಚಾಮರಾಜನಗರದಲ್ಲೇ ಉಳಿದುಕೊಳ್ತೇನೆ. ಡ್ಯೂಟಿ ಮುಗಿದಿದ್ದು, ರೂಮಿಗೆ ಬಂದಿದ್ದೇನೆ ಎಂದಿದ್ದಳು. ನಾಳೆ ಊರಿಗೆ ಬರುತ್ತೇನೆ ಎಂದಿದ್ದಳು ಎನ್ನುತ್ತಾರೆ. ಆದರೆ ಇನ್ನೂ ಶ್ರೀನಿವಾಸ್​ ನಮ್ಮ ಮಗಳನ್ನು ಪ್ರೀತಿಸುತ್ತೇನೆ ಎಂದು ಹಿಂದೆ ಹಿಂದೆ ಸುತ್ತಾಡುತ್ತಿದ್ದ. ಆದರೆ ನಮ್ಮ ಮಗಳು ಯಾರನ್ನೂ ಪ್ರೀತಿಸುತ್ತಿರಲಿಲ್ಲ ಎಂದಿದ್ದಾರೆ. ಆದರೆ ಹುಡುಗನ ಮನೆಯವರು ಹೇಳುವುದೇ ಬೇರೆ.

ಮೃತ ಯುವಕ ಶ್ರೀನಿವಾಸ್

ಇದನ್ನೂ ಓದಿ:

ಶ್ರೀನಿವಾಸ್​ ಮನೆಯವರದ್ದು ಕಣ್ಣೀರ ಕಥೆ..!

ಶ್ರೀನಿವಾಸ್​ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಾಂಚಳಾನ್ನು ಪ್ರೀತಿಸುತ್ತಿದ್ದೇನೆ ಎಂದಿದ್ದ. ಹಾಗಾಗಿ ಕಾಂಚನಾಳ ಕುಟುಂಬಸ್ಥರ ಬಳಿ ಮದುವೆ ಮಾಡಿಕೊಡುವಂತೆ ಕೇಳಿಕೊಂಡಿದ್ದೆವು. ಆದರೆ ಮಗಳನ್ನು ನಮ್ಮ ಮನೆಗೆ ಕೊಡಲು ನಿರಾಕರಿಸಿದ್ದರು. ನಾವು ಯಾವ ರೀತಿಯಲ್ಲೂ ಸಹಾಯ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದಿದ್ದಾರೆ. ಅಕ್ಕಪಕ್ಕದ ಮನೆಯವರೇ ಆಗಿದ್ದರೂ ಮದುವೆ ಮಾಡಲು ಒಪ್ಪಿಕೊಳ್ಳದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಇದೀಗ ಮಗಳು ಸತ್ತ ಬಳಿಕ ನಮ್ಮ ಮಗನೆ ಮೇಲೆ ಮಾತ್ರವೇ ಆರೋಪ ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕುತ್ತಾರೆ. ಇಬ್ಬರೂ ಸಹಪಾಠಿಗಳಾಗಿದ್ದರು, ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:

ಒನ್​ ಸೈಡ್​ ಲವ್​ ಅಲ್ಲ ಎನ್ನಲು ಇದೇ ಸಾಕ್ಷಿ..!

ಕಾಂಚನಾ ಶ್ರೀನಿವಾಸ್​ನನ್ನು ಲವ್​ ಮಾಡದಿದ್ದರೆ ಚಾಮರಾಜನಗರದಲ್ಲಿ ಇದ್ದೇನೆ. ಇವತ್ತು ಮನೆಗೆ ಬರಲ್ಲ ಎಂದು ತನ್ನ ಪೋಷಕರ ಬಳಿ ಸುಳ್ಳು ಹೇಳುತ್ತಿರಲಿಲ್ಲ. ಇನ್ನೂ ಶ್ರೀನಿವಾಸ್​ ಹಾಗೂ ಕಾಂಚನಾ ಕೊಳ್ಳೇಗಾಲ ತಾಲೂಕು ತೇರಂಬಳ್ಳಿ ಕೆರೆ ಸಮೀಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂದರೆ ಇಬ್ಬರೂ ಕುಟುಂಬಸ್ಥರ ಕಿರಿಕಿರಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಕಾರಿನೊಳಗೆ ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳೀಯರು ಕಾರು ಹೊತ್ತಿ ಉರಿಯುತ್ತಿದೆ ಎನ್ನುವ ಕಾರಣಕ್ಕೆ ಸುಟ್ಟು ಭಸ್ಮವಾದ ಬಳಿಕ ಹತ್ತಿರ ಹೋಗಿ ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಮಾಂಬಳ್ಳಿ ಪೊಲೀಸರು ಸಾವಿನ ತನಿಖೆ ನಡೆಸುತ್ತಿದ್ದಾರೆ.

Related Posts

Don't Miss it !