ಕೊರೊನಾ ಬಗ್ಗೆ ಸರ್ಕಾರದ ತಯಾರಿ, ಆರೋಗ್ಯ ಸಚಿವರಿಗಿಲ್ವಾ ಕಾಳಜಿ..!?

ವಿಶ್ವವನ್ನು ಕೊರೊನಾ ವೈರಾಣು ಬೆಚ್ಚಿ ಬೀಳಿಸುತ್ತಿದೆ. ಒಮಿಕ್ರಾನ್ ಎಂಬುವ ಹೊಸ ಪ್ರಬೇಧದ ವೈರಸ್​ ವಿಶ್ವಕ್ಕೆ ಮತ್ತೆ ಶಾಕ್​ ಕೊಡುವುದಕ್ಕೆ ಶುರುವಾಗಿದೆ. ಸೌತ್ ಆಫ್ರಿಕಾದಲ್ಲಿ ಭಯಂಕರ ಕೊರೊನಾ ವೈರಾಣು ಪತ್ತೆಯಾಗಿರುವ ಬೆನ್ನಲ್ಲೇ ನೂರಾರು ಪ್ರವಾಸಿಗರು ಬೆಂಗಳೂರಿಗೆ ಬಂದಿಳಿದ್ದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಎಲ್ಲರ ಮೇಲೂ ಕಟ್ಟೆಚ್ಚರ ವಹಿಸುವುದಕ್ಕೆ ರಾಜ್ಯ ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದರ. ಅಷ್ಟೇ ಅಲ್ಲದೆ ಇನ್ಮುಂದೆ ಬೇರೆ ದೇಶಗಳಿಂದ ಆಗಮಿಸುವ ವಿದೇಶಿ ಜನರ ಮೇಲೆ ನಿಗಾವಹಿಸುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ಚರ್ಚೆ ನಡೆಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳಿಗೆ ಖಡಕ್ ಸೂಚನೆ..!

ಒಮಿಕ್ರಾನ್ ವೈರಾಣುವಿನ ಅಪಾಯ ಅರಿಯುತ್ತಿದ್ದ ಹಾಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದ್ರು. ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸ್ಪಷ್ಟ ಸಂದೇಶ ರವಾನಿಸಲಾಯ್ತು. ಪ್ರಧಾನಿ ನರೇಂದ್ರ ಮೋದಿ ಸೂಚನೆ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯಕ್ಕೆ ಹೊಸದೊಂದು ಮಾರ್ಗಸೂಚಿ ಪ್ರಕಟ ಮಾಡಿದ್ರು. ಆದರೆ ಕೊರೊನಾ ಸಮಸ್ಯೆಗಳು ಹಾಗೂ ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಆರೋಗ್ಯ ಸಚಿವರೇ ನಾಪತ್ತೆಯಾಗಿದ್ದು ಎದ್ದು ಕಾಣಿಸುತ್ತಿತ್ತು. ಆರೋಗ್ಯ ಮತ್ತು ವೈದ್ಯಕೀಯ ಸಚಿವರಾಗಿರುವ ಡಾ ಕೆ ಸುಧಾಕರ್, ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದರು.

ಭರ್ಜರಿ ಭೋಜನ

ಸರ್ಕಾರದ ಮಾರ್ಗಸೂಚಿಗೆ ವಿರುದ್ಧವಾಗಿ ಆರೋಗ್ಯ ಸಚಿವರು..!

ಶಾಲಾ ಕಾಲೇಜುಗಳಲ್ಲಿ ಕೊರೊನಾ ಸೋಂಕು ಉಲ್ಬಣ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ ಅದೇ ರಾಜಕಾರಣಿಗಳು ವಿಧಾನ ಪರಿಷತ್ ಚುನಾವಣೆಯಲ್ಲಿ ಗುಂಪು ಗುಂಪಾಗಿ ಪ್ರಚಾರ ಮಾಡುತ್ತಿದ್ದಾರೆ. ಸಮಾವೇಶ ನಡೆಸುತ್ತಿದ್ದಾರೆ. ಆರೋಗ್ಯ ಸಚಿವ ಡಾ ಸುಧಾಕರ್ ಕೂಡ ಇದರಿಂದ ಹೊರತಾಗಿರಲಿಲ್ಲ. ವರ್ತೂರು ಪ್ರಕಾಶ್ ಅವರ ನಿವಾರದಲ್ಲಿ ಭರ್ಜರಿ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಯಾವುದೇ ಮುಂಜಾಗ್ರತೆಯೂ ಕಾಣಿಸಲಿಲ್ಲ. ಎಲ್ಲಾ ಜಿಲ್ಲಾಧಿಕಾರಿಗಳೂ ಸಹ ವರ್ಚುವಲ್ ಮೂಲಕವ ಭಾಗಿಯಾಗಿದ್ದರು. ಅಂದರೆ ಆರೋಗ್ಯ ಸಚಿವರೂ ವರ್ಷುವಲ್ ಮೂಲಕ ಭಾಗಿಯಾಗುವ ಅವಕಾಶವಿತ್ತು. ಆದರೆ ಪರಿಷತ್ ಚುನಾವಣಾ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರ ಮಾಡುವುದೇ ದೊಡ್ಡದಾಗಿತ್ತು ಎನ್ನುವುದು ವಿಶೇಷ.

ಸರ್ಕಾರದ ಮಾರ್ಗಸೂಚಿ ರಾಜಕಾರಣಿಗಳಿಗೆ ಅನ್ವಯ ಇಲ್ಲ..!!

ಮಹಾರಾಷ್ಟ್ರ, ಕೇರಳ ಸೇರಿದಂತೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಮಾತ್ಗಸೂಚಿ ಬಿಡುಗಡೆ ಮಾಡಲಾಗಿದೆ. ಏರ್ಪೋರ್ಟ್ ಅಷ್ಟೆ ಅಲ್ಲದೆ ಕೇರಳದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಕಡ್ಡಾಯ ಕೊರೊನಾ ತಪಾಸಣೆ ಹಾಗೂ ಒಂದು ವಾರದ ಬಳಿಕ ಮತ್ತೊಮ್ಮೆ ತಪಾಸಣೆ ಮಾಡುವುದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ನರ್ಸಿಂಗ್ ಹಾಗೂ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಹೆಚ್ಚಳ ಮಾಡುವುದು, ರೆಸ್ಟೋರೆಂಟ್, ಹೋಟೆಲ್, ಮಾಲ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಜಿಮ್, ಸ್ವಿಮ್ಮಿಂಗ್ ಪೂಲ್‌ಗಳಲ್ಲಿ ಕೆಲಸ ಮಾಡುವ ಜನರಿಗೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡಿ ಮಾರ್ಗಸೂಚಿ ಹೊರಡಿಸಲಾಗಿದೆ. ಆದರೆ ವಿಧಾನ ಪರಿಷತ್ ಚುನಾವಣಾ ಪ್ರಚಾರದಲ್ಲಿ ಯಾವ ರೀತಿಯ ಮುಂಜಾಗ್ರತಾ ಕೈಗೊಳ್ತಾರೆ ಎನ್ನುವುದನ್ನು ಕಾದು ನೋಡ್ಬೇಕು.

Related Posts

Don't Miss it !