ಸಿಎಂ ನಿವಾಸ ನವೀಕರಣ ಹೆಸರಲ್ಲಿ ಸಾರ್ವಜನಿಕರ ಹಣ ದುಂದು ವೆಚ್ಚ ಸರೀನಾ..?

ಸಿಎಂ ಸರ್ಕಾರಿ ನಿವಾಸದ ನವೀಕರಣ ಮಾಡಲಾಗ್ತಿದೆ. ನವೀಕರಣದೊಂದಿಗೆ ಹೊಸ ಮನೆಯಾಗಿ ಪರಿವರ್ತನೆ ಮಾಡುವ ಕೆಲಸ ಭರದಿಂದ ಸಾಗಿದೆ. ತಾಜ್ ವೆಸ್ಟ್​ ಎಂಡ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ ನಂಬರ್ – 01ರ ನಿವಾಸ ಆಧುನಿಕರಣ ಕೆಲಸ ಭರದಿಂದ ಸಾಗಿದೆ. ಸರ್ಕಾರಿ ನಿವಾಸದ ನವೀಕರಣಕ್ಕೆ ಅನಗತ್ಯ ದುಂದು ವೆಚ್ಚ ಮಾಡಲಾಗ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುತ್ತೇವೆ ಎಂದು ಹೇಳಿಕೆ ನೀಡಿ ಇದೀಗ ತಮ್ಮ ಮನೆ ನವೀಕರಣಕ್ಕೆ ಮುಂದಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರ ಬೀಳುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ನೂತನ ಸರ್ಕಾರಿ ನಿವಾಸವನ್ನು ವಾಸ್ತು ಪ್ರಕಾರವೇ ನವೀಕರಣ ಮಾಡಲಾಗ್ತಿದೆ. ಸರ್ಕಾರಿ ನಿವಾಸ ನವೀಕರಣ ಹೆಸರಲ್ಲಿ ಸರ್ಕಾರಿ ಕಟ್ಟಡದ ಮನೆಯ ಕೆಲವು ಗೋಡೆಗಳನ್ನೇ ಅದಲು – ಬದಲು ಮಾಡಿದ್ದಾರೆ. ಜೊತೆಗೆ ಮನೆ ಮುಂಭಾಗ ಭರ್ಜರಿ ಕಾಮಗಾರಿ ನಡೆಯುತ್ತಿದ್ದು, ಭದ್ರತಾ ಸಿಬ್ಬಂದಿ ಉಳಿದುಕೊಳ್ಳಲು ನೂತನ ಶೆಡ್ ಕೂಡ ನಿರ್ಮಾಣ ಮಾಡಲಾಗ್ತಿದೆ. ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಖಾಸಗಿ ನಿವಾಸಕ್ಕೆ ಹೋಗುವ ರಸ್ತೆ ಕೂಡ ಹೊಸದಾಗಿ ಡಾಂಬರೀಕರಣ ಮಾಡಲಾಗ್ತಿದೆ.

ಸಿಎಂಗಾಗಿ ಮನೆ ನವೀಕರಣ

Read this also

ಕಾವೇರಿಯಲ್ಲಿ ಯಡಿಯೂರಪ್ಪ ವಾಸ

ಸಿಎಂ ನಿವಾಸ ನವೀಕರಣಕ್ಕೆ ಸಚಿವರ ಸಮರ್ಥನೆ..!

ಸರ್ಕಾರಿ ಕಟ್ಟಡ ನವೀಕರಣಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಸಚಿವ ಅಶ್ವಥ್ ನಾರಾಯಣ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸಿಎಂ ಸರ್ಕಾರಿ‌ ನಿವಾಸ ನವೀಕರಣವನ್ನು ಸಮರ್ಥನೆ ಮಾಡಿಕೊಂಡಿರುವ ಸಚಿವ ಅಶ್ವತ್ಥ ನಾರಾಯಣ, ನಮ್ಮ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಸರಳ ವ್ಯಕ್ತಿ,ಯಾಗಿದ್ದು, ಮಸರಳತೆ ಬಯಸುತ್ತಾರೆ. ಅವರು ಜೀರೋ ಟ್ರಾಫಿಕ್ ಕೂಡ ತೆಗೆದುಕೊಳ್ತಿಲ್ಲ. ಸರ್ಕಾರಿ ನಿವಾಸದಲ್ಲಿ ಭದ್ರತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಅಷ್ಟೆ. ಸಿಎಂ ನಿವಾಸಕ್ಕೆ ಬಹಳಷ್ಟು ಗಣ್ಯರು ಬರ್ತಾರೆ ಹೋಗ್ತಾರೆ. ಇವರ ಅನುಕೂಲತೆಗೆ ಏನೆಲ್ಲಾ ವ್ಯವಸ್ಥೆ ಬೇಕು ಅದನ್ನು ಮಾಡಲಾಗ್ತಿದೆ ಎಂದಿದ್ದಾರೆ. ಇನ್ನೂ ಕೇವಲ ಸಿಎಂ ಅವರಷ್ಟೇ ಈ ನಿವಾಸದಲ್ಲಿ ವಾಸ ಮಾಡಲ್ಲ. ರಾಜ್ಯದ ಮುಖ್ಯಮಂತ್ರಿಗಳ ನಿವಾಸ ಸೂಕ್ತವಾಗಿರುವ ಹಾಗೆ ನವೀಕರಿಸಲಾಗುತ್ತಿದೆ ಎಂದಿದ್ದಾರೆ.

Read this also

ಸಿಎಂ ಆದವರಿಗಾಗಿಯೇ ಮೀಸಲು ಕಾವೇರಿ..!

ರಾಜ್ಯದ ಮುಖ್ಯಮಂತ್ರಿ ಆದವರಿಗೆ ಸೂಕ್ತ ಸೌಲಭ್ಯ ಇರಬೇಕು ಎನ್ನುವ ಸಚಿವ ಅಶ್ವತ್ಥ ನಾರಾಯಣ ಅವರ ಮಾತನ್ನು ಅಕ್ಷರಶಃ ಎಲ್ಲರೂ ಒಪ್ಪಲೇ ಬೇಕು. ಅದು ದುಂದು ವೆಚ್ಚವಾದರೂ ಸರಿ. ಆ ಸ್ಥಾನದಲ್ಲಿ ಇದ್ದ ಮೇಲೆ ಸಾಕಷ್ಟು ಅವಶ್ಯಕತೆಗಳು ಇರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಿಎಂ ಆದವರ ವಾಸಕ್ಕೆಂದೇ ಈಗಾಗಲೆ ಕಾವೇರಿ ನಿವಾಸ ಇದೆ. ಸಿಎಂ ಆದವರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಕಾವೇರಿ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದೂ ಅಲ್ಲದೆ ಕಾವೇರಿ ನಿವಾಸ ಸಿಎಂ ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲೇ ಇರುವ ಕಾರಣ ಸಭೆ ನಡೆಸಲು ಯಾವುದೇ ರೀತಿಯ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಕಾವೇರಿ ಹಾಗೂ ಕೃಷ್ಣಾ ನಡುವೆ ಸಂಚಾರಕ್ಕೂ ವ್ಯವಸ್ಥೆ ಮಾಡಲಾಗಿದೆ. ಪರಿಸ್ಥಿತಿ ಹೀಗಿರುವಾಗ ಕಾವೇರಿ ನಿವಾಸಕ್ಕೆ ಸಿಎಂ ಹೋಗದಿರಲು ಕಾರಣವೇನು ಎನ್ನುವ ಪ್ರಶ್ನೆ ಉದ್ಬವ ಆಗಲಿದೆ.

ಕಾವೇರಿ ನಿವಾಸದಲ್ಲಿ ಇದ್ದಾರೆ ಮಾಜಿ ಮುಖ್ಯಮಂತ್ರಿ..!

ಸಿಎಂ ಆದವರಿಗಾಗಿಯೇ ಮೀಸಲಿರುವ ಕಾವೇರಿ ನಿವಾಸವನ್ನು DPR ಅಧಿಕಾರಿಗಳು ಸಚಿವ ಆರ್​ ಅಶೋಕ್​ ಅವರಿಗೆ ಹಂಚಿಕೆ ಮಾಡಿದ್ದಾರೆ. ಆರ್​ ಅಶೋಕ್​ ಸ್ವಂತ ಮನೆಯಲ್ಲೇ ಇರುವ ಕಾರಣ ಕಾವೇರಿ ನಿವಾಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಬಳಸುತ್ತಿದ್ದಾರೆ. ಯಡಿಯೂರಪ್ಪ ಜಾಗ ಖಾಲಿ ಮಾಡದೇ ಇರುವ ಕಾರಣಕ್ಕೆ ಅನಿವಾರ್ಯವಾಗಿ ಸಿಎಂ ಬಸವರಾಜ ಬೊಮ್ಮಾಯಿ ಬೇರೆ ನಿವಾಸಕ್ಕೆ ತೆರಳಿದ್ದಾರೆ. ಈಗ ಸಿಎಂ ನಿವಾಸಕ್ಕೆ ಸಕಲ ವ್ಯವಸ್ಥೆ ಇರಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕರ ಹಣದಲ್ಲಿ ದುಂದುವೆಚ್ಚ ಮಾಡಲಾಗ್ತಿದೆ. PWD ಇಲಾಖೆ ಅಧಿಕಾರಿಗಳು ಕೋಟಿ ಕೋಟಿ ವೆಚ್ಚ ಮಾಡ್ತಿದ್ದಾರೆ. ಈ ಹಿಂದೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ ಸುಧಾಕರ್​ ಕೂಡ ಮನೆ ನವೀಕರಣ ಮಾಡಿಸಿದ್ದರು. ಸಿಎಂ ಸ್ಥಾನದಲ್ಲಿ ಇರುವವರಿಗಾಗಿಯೇ ಕಾವೇರಿ ನಿವಾಸ ಇದ್ದ ಮೇಲೆ ಯಡಿಯೂರಪ್ಪನಿಗೆ ಬಿಟ್ಟು ಕೊಟ್ಟಿದ್ಯಾಕೆ..? ಈಗ ಮನೆ ನವೀಕರಣ ಮಾಡುತ್ತಿರುವುದು ಯಾಕೆ..? ಎನ್ನುವುದು ಪಬ್ಲಿಕ್​ ಪ್ರಶ್ನೆಯಾಗಿದೆ.

Related Posts

Don't Miss it !