ಬಿ.ಎಸ್ ಯಡಿಯೂರಪ್ಪ ಕುರ್ಚಿ ಪತನ ಖಚಿತನಾ..!?

ಬಿಜೆಯಲ್ಲಿ ಸದ್ದಿಲ್ಲದೆ ಸುಂಟರಗಾಳಿ ಬೀಸುವ ಮುನ್ಸೂಚನೆ ಗೋಚರ ಆಗ್ತಿದೆ. ಸಿಎಂ ಸ್ಥಾನದಿಂದ ಕೆಳಗಿಳಿಸುವ ಮಾತುಗಳು ದಿನದಿಂದ ದಿನಕ್ಕೆ ಗಟ್ಟಿಯಾಗತೊಡಗಿವೆ. ಸಿನಿಮಾ ಲೋಕದ ಸಿಪಾಯಿ ಸಿ.ಪಿ ಯೋಗೇಶ್ವರ್ ಸಿಡಿದ ಬಳಿಕ ಎಲ್ಲಾ ನಾಯಕರು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ರೆ ಗಟ್ಟಿದನಿ ಹೊರಕ್ಕೆ ಕೇಳಿಸುತ್ತಿಲ್ಲ ಅಷ್ಟೆ. ಎಲ್ಲರೂ ಹೇಳುತ್ತಿರುವುದು ಒಂದೇ ಮಾತು ಅದು ಹೈಕಮಾಂಡ್‌ಗೆ ಬಿಟ್ಟದ್ದು, ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಆ ನಿರ್ಧಾರಕ್ಕೆ ನಾವು ಬದ್ಧ ಎನ್ನುತ್ತಿದ್ದಾರೆ. ಈ ನಡುವೆ ಸಿ.ಪಿ ಯೋಗೇಶ್ವರ್ ಹೇಳಿದಂತೆ ಮೂರು ಪಕ್ಷದ ಸರ್ಕಾರ ಎನ್ನುವ ಮಾತಿಗೆ ಹಿಂಬು ಕೊಟ್ಟಂತೆ ಕೆಲವು ಕಾಂಗ್ರೆಸ್ ನಾಯಕರು ಯಡಿಯೂರಪ್ಪ ಪರವಾಗಿಯೇ ಮಾತನಾಡುತ್ತಿದ್ದಾರೆ. ಇದೀಗ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿಸಿರುವ ಹೊಸ ಬಾಂಬ್ ನಾಯಕತ್ವ ಬದಲಾವಣೆಗೆ ಮುನ್ನುಡಿ ಬರೆದಂತೆ ಕಾಣ್ತಿದೆ.

ರೆಬೆಲ್ ಶಾಸಕ ಯತ್ನಾಳ್ ಹೇಳಿದ್ದೇನು..?

https://www.facebook.com/2042196362707169/posts/2845511912375606/

ಬಿಜೆಪಿ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಫೇಸ್‌ಬುಕ್‌ನಲಿ ಬರೆದುಕೊಂಡಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಯಡಿಯೂರಪ್ಪನವರ ಸ್ಥಾನ ಪತನ ಆಗುವÀ ಮುನ್ಸೂಚನೆ ಸಿಕ್ಕಿದೆ ಎಂದಿದ್ದಾರೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಅಪ್ಪನ ಸ್ಥಾನ ಹೋಗುವ ಮುನ್ಸೂಚನೆ ಸಿಕ್ಕಿದೆ, ಹೀಗಾಗಿಯೇ ಮಠಮಾನ್ಯಗಳಿಗೆ ಎಡತಾಕುತ್ತಿದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಲಿಂಗಾಯತರಿಗೆ ಅಪಮಾನ ಮಾಡಿದಂತೆ ಎಂದು ಮಠಾಧೀಶರ ಬಾಯಲ್ಲಿ ಹೇಳಿಸಲು ಹೊರಟಿದ್ದಾರೆ. ಮಠಾಧೀಶರ ಮೇಲೆ ಒತ್ತಡ ತರಲು ಮುಂದಾಗಿದ್ದಾರೆ. ಆದರೆ ಸ್ವಾಮೀಜಿಗಳು ಕಳಂಕಿತರನ್ನ ಬೆಂಬಲಿಸಿದರೆ ಬಸವತತ್ವಗಳಿಗೆ ವಿರುದ್ಧ ಆಗುತ್ತದೆ. ಯಡಿಯೂರಪ್ಪ ಕುಟುಂಬ ರಾಜ್ಯವನ್ನ ಹಗಲು ದರೋಡೆ ಮಾಡ್ತಿದೆ. ಇವರ ಕುಟುಂಬದಿAದ ರಾಜ್ಯವನ್ನ ಉಳಿಸಿ, ವಿಜಯೇಂದ್ರ ಅವರÀ ಅಮಿಷಕ್ಕೆ ಒಳಗಾಗಿ ಯಡಿಯೂರಪ್ಪ ಪರವಾಗಿ ಹೇಳಿಕೆ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

ಯಡಿಯೂರಪ್ಪ ಎಲ್ಲರನ್ನೂ ಓಲೈಸುತ್ತಿದ್ದಾರಾ..?

ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಅಧಿಕಾರಕ್ಕೆ ಬಂದ ದಿನದಿಂದಲೂ ಗೋಚರ ಆಗುತ್ತಿದೆ. ಆದರೆ ಬಿಜೆಪಿ ನಾಯಕರು ಜಾಣ್ಮೆಯಿಂದ ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಕೆಲಸಕ್ಕೆ ಸಾಥ್ ಕೊಟ್ಟಂತೆ ಕಾಣ್ತಿಲ್ಲ. ಪ್ರವಾಹ ಸೇರಿದಂತೆ ರಾಜ್ಯ ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ಬಿಜೆಪಿ ನಾಯಕರು ಸೂಕ್ತವಾಗಿ ಸ್ಪಂದಿಸಲಿಲ್ಲ. ದೆಹಲಿಗೆ ಹೋದಾಗಲೂ ಸರಿಯಾಗಿ ಭೇಟಿಯಾಗಿ ಮಾತನಾಡಲಿಲ್ಲ, ರಾಜ್ಯಕ್ಕೆ ಬಂದಾಗ ಸಿಎಂ ಜೊತೆಗೆ ಚರ್ಚೆ ಮಾಡಿದ್ದು ಅಷ್ಟಕಷ್ಟೆ. ಸ್ಥಳೀಯವಾಗಿ ತೆಗೆದುಕೊಂಡ ತೀರ್ಮಾನದಲ್ಲಿ ಹೈಕಮಾಂಡ್ ಮೂಗು ತೂರಿಸೆ, ಬದಲಿ ನಿರ್ಧಾರ ಮಾಡುವ ಮೂಲಕ ಅಡ್ಡಗಾಲು ಹಾಕುತ್ತಲೇ ಬಂದಿದ್ದಾಗಿದೆ. ಇದರಿಂದ ಬೇಸತ್ತ ಯಡಿಯೂರಪ್ಪ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಜೊತೆಗೆ ಉತ್ತಮ ಸಂಬAಧ ಹೊಂದುವ ಮೂಲಕ ಅಂತ್ಯಕಾಲದ ಆಡಳಿತ ಮುಗಿಸುವ ಕಾತುರದಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್ ಏನಾದರೂ ಅಧಿಕಾರದಿಂದ ಕೆಳಕ್ಕಿಳಿಸುವ ತೀರ್ಮಾನ ಮಾಡಿದ್ರೆ ಬಿ.ಎಸ್ ಯಡಿಯೂರಪ್ಪ ವರಸೆ ಶುರು ಮಾಡುತ್ತಾರೆ ಎನ್ನಲಾಗ್ತಿದೆ. ಅದೇ ಕಾರಣಕ್ಕಾಗಿ ಬಿಜೆಪಿ ನಾಯಕರು ನಾಜೂಕಿನಲ್ಲಿ ಅಧಿಕಾರ ಬಿಡಿಸುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.

ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ಸಾವಿರಾರು ಜನರ ಪರಿಶ್ರಮ, ತಪಸ್ಸಿನಿಂದ ಅಧಿಕಾರ ಹಿಡಿದಿದ್ದೇವೆ. ನಮ್ಮ ಆದ್ಯತೆ ಜನರ ಹಿತ ಕಾಯುವುದು. ನಮ್ಮ ಆಶಯಗಳಿಗೆ ವಿರುದ್ಧ ಹೋಗಬಾರದು ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದು ನೇರವಾಗಿ ಹೇಳಲಿಲ್ಲ. ಕೆ. ಎಸ್. ಈಶ್ವರಪ್ಪ ಮಾತ್ರ ದೆಹಲಿಗೆ ಹೋಗಿ ಯೋಗೇಶ್ವರ್ ಹೇಳಿಬಂದಿರುವುದು ಸರಿಯಿದೆ. ಮಾಧ್ಯಮಗಳ ಎದುರು ಮಾತನಾಡಬಾರದಿತ್ತು. ಹೈಕಮಾಂಡ್ ನಿರ್ಧಾರವೇ ನಮ್ಮ ನಿರ್ಧಾರ ಎಂದಿದ್ದಾರೆ. ಮುರುಗೇಶ್ ನಿರಾಣಿ ಕೂಡ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಇನ್ನೂ ಯಡಿಯೂರಪ್ಪ ವಿರೋಧಿ ಬಣ ಒಟ್ಟುಗೂಡುತ್ತಿದ್ದಂತೆ ಆಪ್ತಬಳಗವನ್ನು ಒಟ್ಟು ಮಾಡಿದ್ದ ಬಿ.ಎಸ್. ಯಡಿಯೂರಪ್ಪ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಂದು ವೇಳೆ ಹೈಕಮಾಂಡ್ ನಾಯಕರು ಅಧಿಕಾರ ಬಿಟ್ಟು ಇಳಿಯಲೇ ಬೇಕು ಎಂದರೆ ಏನೆಲ್ಲಾ ಮಾಡಬಹುದು ಅನ್ನೋ ಬಗ್ಗೆ ರಹಸ್ಯ ಮಾತುಕತೆ ನಡೆದಿದೆ ಎನ್ನಲಾಗಿದೆ.

`ಕೈ’ ನಾಯಕರು ಬಿಎಸ್‌ವೈ ಬೆಂಬಲಿಸ್ತಿರೋದ್ಯಾಕೆ..?

ಬಿಎಸ್ ಯಡಿಯೂರಪ್ಪ ಅವರನ್ನ ಕುರ್ಚಿಯಿಂದ ಕೆಳಕ್ಕೆ ಇಳಿಸ್ತಾರೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದ ಹಾಗೆ ಸಾಕಷ್ಟು ಕಾಂಗ್ರೆಸ್ ಶಾಸಕರು ಯಡಿಯೂರಪ್ಪ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಇದು ಕೊರೊನಾ ಸಮಯ ಇಂಥ ಸಮಯದಲ್ಲಿ ಮುಖ್ಯಮಂತ್ರಿ ಬದಲಾವಣೆ ತರವಲ್ಲ ಎನ್ನುವ ಮಾತನ್ನಾಡಿದ್ದಾರೆ. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಅವರನ್ನು ಕೆಳಗೀಳಿಸಲು ಸಾಧ್ಯವಿಲ್ಲ. ದೆಹಲಿಗೆ ಹೋಗಿ ದೂರು ಕೊಟ್ರೂ ಏನೂ ಆಗಲ್ಲ ಎಂದಿದ್ದಾರೆ. ಬಿಜೆಪಿ ಶಾಸಕ ಯತ್ನಾಳ್ ಹೇಳಿರುವ ಹಾಗೆ ಕುರ್ಚಿ ಬದಲಾವಣೆ ಕೆಲಸ ಶುರುವಾಗಿದ್ಯಾ ಅನ್ನೋದು ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ. ಆದರೂ ಸಿಎಂ ಹಾಗೂ ಪಕ್ಷಕ್ಕೆ ಡ್ಯಾಮೇಜ್ ಆಗುವಂತೆ ಹೇಳಿಕೆ ನೀಡಿದವರ ವಿರುದ್ಧ ಪಕ್ಷ ಯಾವುದೇ ಕ್ರಮ ತೆಗೆದುಕೊಳ್ಳದೆ ಇರೋದನ್ನ ನೋಡಿದ್ರೆ ಭಿನ್ನಮತೀಯರ ಹಿಂದೆ ಗಟ್ಟಿಯಾದ ವ್ಯಕ್ತಿತ್ವದ ಬೆಂಬಲ ಇದೇ ಅನ್ನೋದು ಕನ್ಫರ್ಮ್ ಅಲ್ವಾ..?

Related Posts

Don't Miss it !