ಸರಿಗಮಪ ಮೀರಿಸುವಂತಿದೆ ಕಲರ್ಸ್​ ಕನ್ನಡದ ಎದೆತುಂಬಿ ಹಾಡುವೆನು..!

ಜೀ ಕನ್ನಡದಲ್ಲಿ ಮೂಡಿಬರುವ ಸರಿಗಮಪ ಸಂಗೀತ ಕಾರ್ಯಕ್ರಮಕ್ಕೆ ಸಂಗೀತ ಪ್ರಿಯರು ಮಾರು ಹೋಗಿದ್ದರು. ಕಲರ್ಸ್​​ ಕನ್ನಡದಲ್ಲಿ ಎದೆತುಂಬಿ ಹಾಡುವೆನು ಕಾರ್ಯಕ್ರಮ ಆರತಂಭವಾಗಿದ್ದು, ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕಳೆದ 2 ಬಾರಿ ಸಂಗೀತ ಕಾರ್ಯಕ್ರಮ ನಡೆದಿದ್ದರೂ ಸರಿಗಮಪ ಕಾರ್ಯಕ್ರಮಕ್ಕೆ ಸಡ್ಡು ಹೊಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸಾಕಷ್ಟು ತಯಾರಿ ಮಾಡಿಕೊಂಡೇ ತೆರೆ ಮೇಲೆ ಬಂದಿರುವ ಎದೆತುಂಬಿ ಹಾಡುವೆನು ಕಾರ್ಯಕ್ರಮ ಆರಂಭದಲ್ಲೇ ತನ್ನ ಪರಾಕ್ರಮ ಮೆರೆಯುವಂತಿದೆ.

ವಿಭಿನ್ನ ಪ್ರತಿಭೆಗಳಿಗೆ ಎದೆತುಂಬಿ ಹಾಡುವೆನು ವೇದಿಕೆ..!

ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಕಲಿತವರಿಗೆ ಮಾತ್ರ ವೇದಿಕೆ ಅಲ್ಲ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗಿದೆ. ಸರಿಗಮಪ ಕಾರ್ಯಕ್ರಮದಲ್ಲೂ ಇದೇ ನಿಯಮವನ್ನು ಪಾಲಿಸಿ ಯಶಸ್ಸಿನ ಮೆಟ್ಟಿಲು ಏರಿತ್ತು. ಇದೀಗ ಇದೇ ನಿಯಮವನ್ನು ಎದೆತುಂಬಿ ಹಾಡುವೆನು ಕಾರ್ಯಕ್ರಮ ಕೂಡ ಅನ್ವಯಿಸಿಕೊಂಡಿರುವ ಕಾರಣ ವೀಕ್ಷಕರಿಗೆ ಶೇಕಡ 100 ರಷ್ಟು ಮನರಂಜನೆ ಸಿಗುವುದು ಖಚಿತವಾಗಿದೆ. ಸ್ಪರ್ಧೆಗೆ ಅಂತಿಮ ಆಯ್ಕೆ ಮಾಡುವ ವೇದಿಕೆಯಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಗಾಯಕರು, ಮುಂದಿನ ದಿನಗಳಲ್ಲಿ ರಸದೌತಣ ನೀಡುವುದು ಖಚಿತ.

ಇದನ್ನೂ ಓದಿ:

ಸಾವಿನ ಮನೆಯಲ್ಲಿ ಹಾಡುವ ಗಾಯಕನಿಗೆ ಶರಣು..!

ಗದಗದ ಮುಂಡರಗಿಯಿಂದ ಬಂದಿದ್ದ ಶೆಟ್ಟಪ್ಪ ಮಾದರ ಎಂಬುವ ಗಾಯಕ ಭಜನಾ ಕಾರ್ಯಕ್ರಮ ನಡೆಸಿಕೊಡುವ ತಂಡ ಕಟ್ಟಿಕೊಂಡಿದ್ದು, ಸಾವಿನ ಮನೆಯಲ್ಲಿ, ದೇವಸ್ಥಾನಗಳಲ್ಲಿ ಹಾಡುವ ವೃತ್ತಿ ಮಾಡುತ್ತಿದ್ದಾರೆ. ಶೆಟ್ಟಪ್ಪ ಮಾದರ ಹಾಡಿದ ಹಾಡಿಗೆ ಗಾಯಕರು ಮನಸೋತರು. ಅಂತಿಮವಾಗಿ ಇಡೀ ತಂಡದೊಂದಿಗೆ ಹಾಡಿದನ್ನು ಕಂಡ ಮ್ಯೂಸಿಷಿಯನ್​ ಇನ್ಸ್​​ಟ್ರುಮೆಂಟ್​ ಕೊಟ್ಟು ಗೌರವಿಸಿದರು. ಝೋಮ್ಯಾಟೋದಲ್ಲಿ ಡೆಲಿವರಿ ಬಾಯ್​ ಆಗಿರುವ ಯುವಕನ ಸ್ವರಕ್ಕೆ ಮೆಚ್ಚುಗೆ ಸಿಕ್ಕಿತು. ಇಬ್ಬರು ಪುಟಾಣಿಗಳು ಚಟ್​ಪಟ್​ ಅಂತ ಮಾತನಾಡಿ ಜಡ್ಜ್​ ಗಮನಸೆಳೆದ್ರು. ಅವರ ಸ್ವರಸರಸ್ವತಿಗೆ ಜಡ್ಜ್​ಗಳೇ ಶರಣಾಗಿದ್ದು ವಿಶೇಷವಾಗಿತ್ತು. S.P ಬಾಲಸುಬ್ರಹ್ಮಣ್ಯಂ ಪುತ್ರ ಚರಣ್​ ಭಾಗಿಯಾಗಿ ಎಸ್​ಪಿಬಿ ಅವರನ್ನೇ ನೆನಪು ಮಾಡಿಸುವಂತೆ ಹಾಡಿದ್ದು ಮನೋಜ್ಞವಾಗಿತ್ತು.

ಇದನ್ನೂ ಓದಿ;

ರಾಜೇಶ್​ ಕೃಷ್ಣರನ್ನು ಸೆಳೆದಿರುವ ಕಲರ್ಸ್ ಕನ್ನಡ..!

ಕನ್ನಡ ಕನ್ನಡದಲ್ಲಿ ಎದೆತುಂಬಿ ಹಾಡುವೆನು ಎಸ್​ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಟ್ಟ ಕಾರ್ಯಕ್ರಮ ಆಗಿತ್ತು. ಸಾಕಷ್ಟು ವರ್ಷಗಳ ಕಾಲ ನಡೆಸಿಕೊಟ್ಟ ಬಳಿಕ ಒಂದೆರಡು ಸೀಸೆನ್​ ಕನ್ನಡ ಕೋಗಿಲೆ ಮೂಲಕ ಪ್ರೇಕ್ಷಕರ ಮುಂದೆ ಬಂದಿತ್ತು. ಆದರೆ ಜನಮನ ಗೆಲ್ಲುವಲ್ಲಿ ಯಶಸ್ಸು ಸಾಧಿಸಿರಲಿಲ್ಲ. ಆದರೆ ಈ ಬಾರಿ ಎಸ್​.ಪಿ ಬಾಲಸುಬ್ರಹ್ಮಣ್ಯಂ ಅನುಪಸ್ಥಿತಿಯಲ್ಲಿ ಅವರ ಪ್ರತಿಮೆ ಇರಿಸಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರುವ ಎಲ್ಲಾ ಲಕ್ಷಗಳನ್ನು ಮೊದಲ ವಾರದಲ್ಲೇ ತೋರಿಸಿದೆ. ಒಟ್ಟು 30 ಗಾಯಕರು ಈಗಾಗಲೇ 12 ಗಾಯಕರು ಹಾಡಿದ್ದು, 8 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಇನ್ನುಳಿದ 4 ಜನರನ್ನು ವೇಯ್ಟಿಂಗ್​ ಲಿಸ್ಟ್​ನಲ್ಲಿ ಇಡಲಾಗಿದೆ. ಇನ್ನುಳಿದ 18 ಮಂದಿ ಮುಂದಿನ ವಾರ ಹಾಡಲಿದ್ದು ಅಂತಿಮ ಸ್ಪರ್ಧೆಗೆ ಬೇಕಾದಷ್ಟು ಗಾಯಕರ ಆಯ್ಕೆ ಮಾಡಲಿದ್ದಾರೆ. ಸರಿಗಮಪ ಟೀಂನಿಂದ ಗಾಯಕ ರಾಜೇಶ್​ ಕೃಷ್ಣನ್​ ಅವರನ್ನು ಕಸಿದುಕೊಂಡಿದ್ದಾರೆ. ಕಾರ್ಯಕ್ರಮ ಸರಿಗಮಪ ಮೀರಿಸುವ ಎಲ್ಲಾ ಸಾಧ್ಯತೆಗಳೂ ಇವೆ.

Related Posts

Don't Miss it !